Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಖಾಸುಮ್ಮನೆ ಗಂಡನ ಪ್ರೀತಿಯ ಮೇಲೆ ಸಂಶಯ ಪಡಬೇಡಿ!
ಯಾವುದೇ ಸಂಶಯ ಬೇಡ ಒಳ್ಳೆಯ ಗಂಡಂದಿರು ಸಹ ಭೂಮಿಯ ಮೇಲೆ ಇರುತ್ತಾರೆ. ಅವರಿಗೂ ಸಹ ಪ್ರೀತಿ ಮತ್ತು ಕಾಳಜಿ ಎಂಬುದು ಇರುತ್ತದೆ. ಅವರು ಸಹ ತನ್ನ ಹೆಂಡತಿಯ ಕುರಿತಾಗಿ ಪ್ರೀತಿಯನ್ನು ಮತ್ತು ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ಕಾಳಜಿ ತೋರುವ ಗಂಡನು ಹೆಂಡತಿಯ ಆಸ್ತಿ ಎಂದು ಹೇಳಬಹುದು.
ಸಾಮಾನ್ಯವಾಗಿ ಹೆಂಡತಿಯಿಂದ ಗಂಡ ಕೆಲಸ ಮಾಡಿಸಿಕೊಳ್ಳುತ್ತಾ ಇರುತ್ತಾನೆ. ಆದರೆ ಸಭ್ಯ ಪುರುಷನು ತನ್ನ ಹೆಂಡತಿಗು ಸಹ ಸಹಾಯ ಮಾಡುತ್ತಾನೆ. ಇದನ್ನು ಕೊಡು ತೆಗೆದುಕೊಳ್ಳುವಿಕೆ ಎಂದು ಹೇಳಬಹುದು.
ಆದರೆ ಇಂತಹ ಗಂಡಸರನ್ನು ಸಹ ಉದಾಸೀನ ಮಾಡಲಾಗುತ್ತದೆ. ಬಹುತೇಕ ಹೆಂಗಸರು ಸಾಮಾನ್ಯವಾಗಿ ಡ್ಯಾಷಿಂಗ್ ಮತ್ತು ಡೈನಾಮಿಕ್ ಆಗಿ ವರ್ತಿಸುವ ಹೀರೋಗಳಂತಹ ಗಂಡಸರತ್ತ ಆಕರ್ಷಿತರಾಗುತ್ತಾರೆ. ಆದರೆ ಇವರು ಒಳ್ಳೆಯ ಗಂಡನಾಗಬಹುದು ಅಥವಾ ಆಗದೆಯೂ ಇರಬಹುದು. ಆದರೆ ಯಾವುದೇ ಕಾರಣಕ್ಕು ನಿಮ್ಮ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಗಂಡಸರನ್ನು ಮಾತ್ರ ನೀವು ಎಂದಿಗು ಆಯ್ಕೆ ಮಾಡಿಕೊಳ್ಳಲು ಹೋಗಬೇಡಿ. ಕಾಳಜಿ ತೋರುವ ಗಂಡಂದಿರು ಹೀಗಿರುತ್ತಾರೆ ಎಂಬುದನ್ನು ನೋಡೋಣ.. ಅಯ್ಯೋ ದೇವರೆ ನನಗೆ ಎಂತಹ ಗಂಡ ಸಿಕ್ಕಿ ಬಿಟ್ಟ!

ಯಾವಾಗಲು ಸಹಾಯ ಮಾಡಲು ಪ್ರಯತ್ನಿಸುತ್ತಾನೆ
ಕಾಳಜಿ ತೋರುವ ಗಂಡನ ಮೊದಲ ಲಕ್ಷಣವೇ ಇದು. ಈತ ಯಾವಾಗಲು ಕಾಳಜಿ ತೋರಲು ಪ್ರಯತ್ನಿಸುತ್ತಾನೆ. ಈತನು ಹೆಂಡತಿಯ ಅಗತ್ಯಗಳನ್ನು ಚೆನ್ನಾಗಿ ತಿಳಿದಿರುತ್ತಾನೆ. ಸಣ್ಣದಾದರು ಪರವಾಗಿಲ್ಲ. ಈತ ಹೆಂಡತಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಾನೆ.
ಯಾವಾಗ ನೀವು ಕಾಯಿಲೆ ಬೀಳುತ್ತೀರೋ...
ಯಾವಾಗ ನೀವು ಕಾಯಿಲೆ ಬೀಳುತ್ತೀರೋ, ಆಗ ಗಮನಿಸಿ. ಆತ ತನ್ನ ಕಚೇರಿಗೆ ರಜೆಯನ್ನು ಹಾಕಿ ನಿಮ್ಮನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತಾನೆ. ನಿಮಗಾಗಿ ಅಡುಗೆಯನ್ನು ಮಾಡಿಕೊಡುತ್ತಾನೆ. ಪಕ್ಕದಲ್ಲಿದ್ದುಕೊಂಡು ನೀವು ಗುಣಮುಖರಾಗುವವರೆಗೆ ಚೆನ್ನಾಗಿ ಆರೈಕೆ ಮಾಡುತ್ತಾನೆ. ನೀವು ಬೇಗ ಗುಣಮುಖರಾಗಲು ಬೇಕಾದ ಎಲ್ಲವನ್ನು ಮಾಡುತ್ತಾನೆ. ಆತ್ಮವಿಶ್ವಾಸವನ್ನು ಸಹ ತುಂಬುತ್ತಾನೆ. ಗಂಡನ ಪ್ರೀತಿ ಇತ್ತೀಚೆಗೆ ಮರೀಚಿಕೆಯಾಗುತ್ತಿದೆಯೇ?
ನಿಮಗೆ ನಿಮ್ಮತನಕ್ಕೆ ಬೆಲೆ ಕೊಡುತ್ತಾನೆ
ಕಾಳಜಿವಹಿಸುವ ಗಂಡನು ತನ್ನ ಹೆಂಡತಿಗೆ ಉಸಿರು ಕಟ್ಟಿಸುವಂತಹ ಸನ್ನಿವೇಶವನ್ನು ಉಂಟು ಮಾಡುವುದಿಲ್ಲ. ಆಕೆಗು ತನ್ನದೇ ಆದ ಖಾಸಗಿ ಜೀವನ ಇದೆ ಎಂದು ಆತನಿಗೆ ತಿಳಿದಿರುತ್ತದೆ. ಅದಕ್ಕೆ ಅವನು ತೊಂದರೆಯುಂಟು ಮಾಡುವುದಿಲ್ಲ. ಹೆಂಡತಿಗೆ ಅಗತ್ಯವಾದ ಸ್ವಾತಂತ್ರ್ಯವನ್ನು ಈತ ನೀಡುತ್ತಾನೆ.
ನಿಮ್ಮನ್ನು ಸದಾ ಸಂತೋಷವಾಗಿಡುತ್ತಾನೆ
ಸಂಬಂಧದ ಉದ್ದೇಶವೇ ಸಂತೋಷವಾಗಿಡುವುದು. ತಾನು ಸಂತೋಷವಾಗಿರಲು ನಿಮ್ಮಿಂದ ಹಲವಾರು ಅಂಶಗಳನ್ನು ಬಯಸುವ ಗಂಡಂದಿರು ಎಲ್ಲಾ ಕಡೆ ದೊರೆಯುತ್ತಾರೆ. ಆದರೆ ನಿಮ್ಮ ಗಂಡ ನಿಮ್ಮನ್ನು ಸದಾ ಸಂತೋಷವಾಗಿಡಲು ಒಂದಲ್ಲ ಒಂದು ಕೆಲಸ ಮಾಡಿದರೆ, ಆಗ ನೋಡಿ ನಿಮ್ಮ ಮುಖದಲ್ಲಿ ಒಂದು ಮಂದಹಾಸ ಬರುತ್ತದೆ. ಏಕೆಂದರೆ ಇದು ಒಬ್ಬ ರೊಮ್ಯಾಂಟಿಕ್ ಗಂಡನ ಲಕ್ಷಣ. ಅಂತಹವನ ಮನಸ್ಸಿಗೆ ಎಂದಿಗೂ ಬೇಸರವುಂಟಾಗದಂತೆ ನೋಡಿಕೊಳ್ಳಿ.



Click it and Unblock the Notifications

