ಪತ್ನಿ ಐಷಾರಾಮಿ ಜೀವನ ಬಯಸಿದರೆ ಗಂಡನ ಪಾಡೇನು?

By Super

ವಿವಾಹಮಾಡಿಕೊಳ್ಳುವುದು ಒಂದು ಪವಿತ್ರವಾದ ಸಂಬಂಧ. ಅದು ಪರಸ್ಪರ ಪ್ರೀತಿ ಮತ್ತು ಅರ್ಥ ಪೂರ್ಣವುಳ್ಳದ್ದಾಗಿರಬೇಕು. ಆದಾಗ್ಯೂ ಇಂದಿನ ಪ್ರಪಂಚದಲ್ಲಿ ಎಷ್ಟು ಪ್ರಾಪಂಚಿಕ ವಸ್ತುಗಳ ಪ್ರಭಾವವಿದೆಯೆಂದರೆ ಪತಿ ಮತ್ತು ಪತ್ನಿಯರ ಸಂಬಂಧಗಳಲ್ಲಿ ಹಣವೇ ಬಹಳಷ್ಟು ಪ್ರಾಮುಖ್ಯತೆ ಪಡೆದುಬಿಟ್ಟಿದೆ. ಇಂದಿನ ದಿನಗಳಲ್ಲಿ ಅನೇಕ ದಂಪತಿಗಳಲ್ಲಿ, ಮನಸ್ತಾಪ ಮತ್ತು ಕಲಹಗಳಿಗೆ ಮೂಲಭೂತ ಕಾರಣ ಹಣವೇ ಆಗಿದೆ.

ನಾವು ಗಮನಿಸಿರುವ ಅನೇಕ ದಂಪತಿಗಳಲ್ಲಿ, ಅನೇಕ ಸಂಬಂಧಗಳಲ್ಲಿ ಸ್ತ್ರೀ ಸಂಗಾತಿಯು ಹಣದಬಗ್ಗೆಯೇ ಹೆಚ್ಚು ಗಮನ ಕೊಡುತ್ತಾರೆ ಮತ್ತು ಅಂತಹ ಪ್ರಾಪಂಚಿಕ ವಸ್ತುಗಳ ಮೋಹವಿರುವ ಪತ್ನಿಯು ಪತಿಗೆ ಸಾಧಾರಣ ಸಂಸಾರ ನಡೆಸಲು ಒಂದು ಸವಾಲೇ ಆಗಿದೆ. ಆದ್ದರಿಂದ ಇಂದು ಪತಿಯು ಪ್ರಾಪಂಚಿಕ ಪತ್ನಿಯನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಹೇಗೆ ನಿಭಾಯಿಸಬೇಕೆಂಬುದು ತಿಳಿದುಕೊಂಡಿರಬೇಕು. ಇಲ್ಲದಿದ್ದಲ್ಲಿ, ಅವನ ಜೀವನವು ಒಂದು ನರಕವಾಗಿಬಿಡುತ್ತದೆ. ಜೀವನ ನಡೆಸಲು ಹಣವು ಮುಖ್ಯವಾಗಿದ್ದರೂ, ಯಾರೂ ಇಲ್ಲದಿದ್ದರೆ ಅದನ್ನು ಅನುಭವಿಸಲು ಹೇಗೆ ಸಾಧ್ಯ?

ಜೀವನದುದ್ದಕ್ಕೂ ಏರಿಳಿತಗಳು ಇದ್ದೇ ಇರುತ್ತವೆ ಮತ್ತು ದಂಪತಿಗಳು ಆ ಏರಿಳಿತಗಳನ್ನು ಎದುರಿಸಿ ಹೇಗೆ ನಿಭಾಯಿಸಬೇಕೆಂಬುದನ್ನು ಕಲಿಯಬೇಕು. ಹಾಗೆ ಮಾಡಿದಾಗ ನೀವು ಪ್ರೀತಿ, ವಿಶ್ವಾಸ ಮತ್ತು ತಿಳುವಳಿಕೆಯ ಸಂಬಂಧಗಳನ್ನು ಬೆಳೆಸಬಹುದು. ಬಹಳ ಹಣವಿದ್ದು ನಿಮ್ಮ ಜೊತೆಗೆ ಬೆಂಬಲ ಕೊಡಲು ಯಾರೂ ಇಲ್ಲದಿದ್ದರೆ ಜೀವನ ತುಂಬಾ ಅಸುರಕ್ಷಿತ. ಓರ್ವ ಪತ್ನಿಯು ಕೆವಲ ತನ್ನ ಬಗ್ಗೆಯೇ ಆಲೋಚನೆಯನ್ನು ಮಾಡದೆ ತನ್ನ ಪತಿಗೆ ತಕ್ಕ ಒಳ್ಳೆಯ ಪತ್ನಿ ಎನಿಸಿಕೊಂಡು ಅವನಿಗೆ ಸಂಸಾರದ ಹಣಕಾಸುಗಳ ನಿರ್ವಹಣೆಮಾಡಲು ಬೆಂಬಲ ಕೊಡಬೇಕು. ನಿಮ್ಮ ಗಂಡಂದಿರ ವಿಚಿತ್ರ ನಡವಳಿಕೆಯ ಬಗ್ಗೆ ಒಂದು ಕಣ್ಣಿಡಿ!

How To Deal With Materialistic Wife

ಹೀಗೆ ಮಾಡಿದಾಗ ಪತಿ-ಪತ್ನಿ ಸಂಬಂಧಗಳನ್ನು ಕಾಪಾಡಿಕೊಳ್ಳಬಹುದು. ಪ್ರಾಪಂಚಿಕ ವಸ್ತುಗಳ ಮೋಹವಿರುವ ಪತ್ನಿಯನ್ನು ಹೇಗೆ ಎದುರಿಸಿ ನಿಭಾಯಿಸಿಕೊಳ್ಳಬಹುದೆಂಬ ಅರಿವು ಇರುವ ಪತಿ ಸಂಸಾರವನ್ನು ಕಾಪಾಡಿಕೊಳ್ಳಬಹುದು. ನಿಮ್ಮ ಪ್ರಾಪಂಚಿಕ ವಸ್ತುಗಳ ಮೋಹವಿರುವ ಪತ್ನಿಯನ್ನು ನಿಜವಾಗಿ ಪ್ರೀತಿಸುವುದಾದರೆ ಅಂತಹ ಪತ್ನಿಯಜೊತೆ ಹೇಗೆ ವ್ಯವಹರಿಸಬಹುದೆಂಬ ಮಾರ್ಗಗಳಿಗೆ ಈ ಲೇಖನ ನಿಮ್ಮ ಉಪಯೋಗಕ್ಕೆ ಬರಬಹುದು:

ಸಾಮಾಜಿಕ ಚಟುವಟಿಕೆಗಳು
ಪ್ರಾಪಂಚಿಕ ವಸ್ತುಗಳ ಮೋಹವಿರುವ ಪತ್ನಿಯರು ಸ್ವಾರ್ಥಿಗಳಾಗಿರುತ್ತಾರೆ ಮತ್ತು ಯಾವಾಗಲೂ ತಮ್ಮಲ್ಲಿ ಇಲ್ಲದೇ ಇರುವ ವಸ್ತುಗಳ ಬಗ್ಗೆ ಯೋಚಿಸಿತಿರುತ್ತಾರೆಯಾದ್ದರಿಂದ ಅವರು ವ್ಯಾಕುಲತೆಯಿಂದಿರುತ್ತಾರೆ. ವಸ್ತುಗಳ ಬಗ್ಗೆ ಅವರಿಗೆ ಎಂದೂ ಸಂತೋಷವಿರುವುದಿಲ್ಲ ಮತ್ತು ಇದು ಒಂದು ಪ್ರಮುಖ ಕೊರತೆಯಾಗಿರುತ್ತದೆ. ಅಂತಹ ಪ್ರಾಪಂಚಿಕ ಪತ್ನಿಯರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಲು ಉತ್ತೇಜಿಸುವುದು ಒಂದು ರೀತಿಯ ಉಪಾಯ.
ಹೀಗೆ ಮಾಡಿದಾಗ ಅವರ ಚಿತ್ತ ಬೇರೆಡೆಗೆ ತಿರುಗಿಸಿದ ಹಾಗೆ ಆಗುತ್ತದೆ ಮತ್ತು ಅವರು ತಮ್ಮ ಬಗ್ಗೆ ಆಲೋಚನೆಗಳನ್ನು ಬಿಟ್ಟು ಇತರ ಜನರ ಬಗ್ಗೆ ಹೆಚ್ಚು ಆಲೋಚನೆಗೆ ಪ್ರಾರಂಭವಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ಜನರಲ್ಲಿ ಸೇರಿದಾಗ ನಿಮ್ಮ ಪತ್ನಿಯು ಇತರ ಜನರು ಎಂಥೆಂಥಾ ತೊಂದರೆಗಳನ್ನು ಎದುರಿಸುತ್ತಿರುತ್ತಾರೆ ಮತ್ತು ಆ ಜನರು ಪ್ರೀತಿಗಳಿಸಲು ಹೇಗೆ ಹಾತೊರೆಯುತ್ತಾರೆ ಎಂಬುದು ಗೊತ್ತಾಗುತ್ತದೆ. ನಿಮ್ಮ ಪತ್ನಿಯು ಎಷ್ಟು ಜನರು ತಮ್ಮಲ್ಲಿ ತಮ್ಮ ಮೂಲಭೂತ ಬೇಡಿಕೆಗಳನ್ನು ಪೂರೈಸಲು ಹಣವಿಲ್ಲದಿದ್ದರೂ ಸಹ ಸಂತೋಷದಿಂದಿರುತ್ತಾರೆ ಎಂಬುದನ್ನು ಕಾಣುತ್ತಾರೆ. ಹೀಗೆ ಪ್ರಾಪಂಚಿಕ ವಸ್ತುಗಳ ಮೋಹವಿರುವ ಪತ್ನಿಯನ್ನು ಹತೋಟಿಗೆ ತರುವುದಕ್ಕೆ ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಹಣದ ಮುಂದೆ ಪ್ರೀತಿ, ವಿಶ್ವಾಸಕ್ಕೆ ಬೆಲೆಯೇ ಇಲ್ಲವೇ?

ಆರ್ಥಿಕ ಸಾಕ್ಷರತೆ ಶಿಕ್ಷಣ
ಪ್ರಾಪಂಚಿಕ ವಸ್ತುಗಳ ಮೋಹವಿರುವ ಪತ್ನಿಯನ್ನು ಹತೋಟಿಗೆ ತರಲು ಮತ್ತೊಂದು ಸಾಬೀತಾಗಿರುವ ಪರಿಹಾರವೆಂದರೆ ಅವರಿಗೆ ಆರ್ಥಿಕ ಸಾಕ್ಷರತೆ ಶಿಕ್ಷಣವನ್ನು ಒದಗಿಸುವುದು. ಇದರಿಂದ ನಿಮ್ಮ ಪತ್ನಿಗೆ ಒಂದು ಸಕಾರಾತ್ಮಕ ದೃಷ್ಟಿಕೋನ ಬಂದು ಹೇಗೆ ಉನ್ನತ ಜೀವನ ಶೈಲಿಯಿಂದ ಹಣವು ಹೆಚ್ಚಾಗಿ ಖರ್ಚಾಗುವುದು ಮತ್ತು ಹಾಗೆ ಮುಂದುವರೆಸಿದಾಗ ನೀವು ಖರ್ಚನ್ನು ನಿಭಾಯಿಸಲು ಸಾಲಮಾಡಬೇಕಾವುದೆಂದು ಮನವರಿಕೆಯಾಗುತ್ತದೆ.
ಆರ್ಥಿಕ ಸಾಕ್ಷರತೆ ಶಿಕ್ಷಣದಿಂದ ಪರಿಣಾಮಕಾರಿಯಾಗಿ ಪ್ರಾಪಂಚಿಕ ಜೀವನದ ಖರ್ಚನ್ನು ಕಡಿಮೆಗೊಳಿಸಿ ಹಣಕಾಸಿನ ಧನಾತ್ಮಕ ವರ್ತನೆಗಳನ್ನು ಹೆಚ್ಚಿಸಲು ಆಗುತ್ತದೆ. ಪರಿಣಾಮವಾಗಿ, ಇದು ನಿಮ್ಮ ಜೀವನದಲ್ಲಿ ಸಂತೋಷ ಸೃಷ್ಟಿಸುತ್ತದೆ ಮತ್ತು ನಿಮ್ಮ ಪತ್ನಿಯ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ.

ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು


ಈ ಪರಿಹಾರಗಳಲ್ಲಿ ಒಂದು ಸರಳ ಮಾರ್ಗ ನಿಮ್ಮ ಪತ್ನಿಗೆ ಯಾವಯಾವ ಕ್ಷೇತ್ರಗಳಲ್ಲಿ ಆಸಕ್ತಿಯಿದೆ ಎಂಬುದನ್ನು ಗುರುತಿಸಿ. ಉದಾಹರಣೆಗೆ ಅಡಿಗೆ, ಬೇಕರಿ ತಿಂಡಿ ಮಾಡುವುದು, ಕಲೆ ಮತ್ತು ಕರಕುಶಲ, ಚಿತ್ರಕಲೆ ಚಟುವಟಿಕೆಗಳು, ಇತ್ಯಾದಿ. ಒಮ್ಮೆ ಅವರು ಆಸಕ್ತಿಯಿರುವ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ, ಅವರಿಗೇ ಜೀವನವನ್ನು ಅತೃಪ್ತಿ ಮತ್ತು ಶೋಚನೀಯವನ್ನಾಗಿ ಮಾಡುವುದಕ್ಕಿಂತ ಜೀವನವು ಅರ್ಥಪೂರ್ಣ ಮತ್ತು ಸಂತೃಪ್ತಿಯಾಗಿ ಇರುವುದು ಎಂದು ಕ್ರಮೇಣ ಮನವರಿಕೆಯಾಗುತ್ತದೆ. ನಮಗೆಲ್ಲಾ ತಿಳಿದಿರುವಂತೆ, "ಜಡಮನಸ್ಸು ಒಂದು ದೆವ್ವದ ಕಾರ್ಯಾಗಾರವಿದ್ದಂತೆ", ನಿಮ್ಮ ಪ್ರಾಪಂಚಿಕ ಪತ್ನಿಯನ್ನು ಯಾವಾಗಲೂ ತೊಡಗಿಸಿಡುವುದು ಆಕೆಯನ್ನು ನಿಗ್ರಹಿಸಿವುದಕ್ಕಿಂತಾ ಉತ್ತಮ.

X
Desktop Bottom Promotion