Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಗೆಳತಿಯ ಸಂಸಾರದಲ್ಲಿ ಮೂಗು ತೂರಿಸುವುದು ಸರಿಯೇ?
ಯಾವತ್ತಾದರೂ ಒಂದು ದಿನ ನಿಮ್ಮ ಸ್ನೇಹಿತೆಯ ಪತಿಯು ಅವಳಿಗೆ ಮೋಸ ಮಾಡುತ್ತಿದ್ದಾನೆಂದು ನಿಮಗೆ ಗೊತ್ತಾಗುತ್ತದೆ. ಆಗ ನೀವು ಏನು ಮಾಡುತ್ತೀರಾ? ಅದೊಂದು ಬಹಳ ಕ್ಲಿಷ್ಠ ಪರಿಸ್ಥಿತಿಯೇ ಸರಿ. ಒಂದು ಕಡೆ ಅವಳ ಪತಿಯು ಅವನ ಪತ್ನಿಗೆ ಮೋಸಮಾಡುವುದನ್ನು ಗೊತ್ತಾಗಿರುತ್ತದೆ ಮತ್ತು ಇನ್ನೊಂದು ಕಡೆ ಅವಳು ನೆಮ್ಮದಿಯಿಂದ ಮದುವೆಯ ಜೀವನ ನಡೆಸುತ್ತಿರುತ್ತಾಳೆ. ನೀವು ಅವಳಿಗೆ ಹೇಳಬೇಕೋ ಅಥವಾ ಇಲ್ಲವೋ?
ಅವಳ ಪತಿ ಅವಳಿಗೆ ಮೋಸಮಾಡುತ್ತಿದ್ದಾನೆಂದು ಹೇಗೆ ಹೇಳುವುದೆಂಬ ಮಾರ್ಗಗಳನ್ನು ಹುಡುಕುವುದು ಕಷ್ಟಕರವಾಗಬಲ್ಲುದು. ಈ ಕೆಲಸ ಬಹಳ ಸೂಕ್ಷ್ಮವಾಗಿರುತ್ತದೆ ಮತ್ತು ಅವಳ ಬಳಿ ಹೋಗಿ ಅವಳ ಪತಿಯು ಅವಳಿಗೆ ನಿಷ್ಠಾವಂತನಲ್ಲ ಎಂದು ತಿಳಿಸುವುದು ಅಷ್ಟು ಸುಲಭವಲ್ಲ.
ನಿಮ್ಮ ಸ್ನೇಹಿತೆಗೆ ತಿಳಿಸಿದಾಗ ಹೇಗೆ ಪ್ರತಿಕ್ರಿಯೆಸುತ್ತಾಳೋ ಗೊತ್ತಿಲ್ಲ. ಅವರ ಸಂಸಾರದಲ್ಲಿ ಮಕ್ಕಳಿರುವ ಪ್ರಮೇಯ ಇರಬಹುದು ಮತ್ತು ಹಾಗಿದ್ದಾಗ ತಂದೆ ತಾಯಿಯರ ನಡುವಣ ಬಿರುಕು ಬಿಟ್ಟಿದ್ದರೆ ಮಕ್ಕಳ ಮೇಲೆ ಪರಿಣಾಮ ಬೀಳಬಹುದು. ಅದೇ ಸಮಯದಲ್ಲಿ ನೀವು ನಿಮ್ಮ ಸ್ನೇಹಿತೆಗೆ ಅವಳ ಪತಿಯು ಮೋಸಮಾಡುತ್ತಿರುವುದು ಗೊತ್ತಿದ್ದು ನೀವು ಅವರಿಗೆ ನಿಜವನ್ನು ಹೇಳಿ ಅವರಿಗೆ ಒಂದು ಉಪಕಾರ ಮಾಡಬೇಕೆಂದು ಆಶಿಸುತ್ತೀರಿ. ಈ ದಿಕ್ಕಿನಲ್ಲಿ ನಾವು ಕೆಲವು ಸಲಹೆಗಳನ್ನು ಕೊಡುತ್ತಿದ್ದೀವಿಯಾದರೂ ಸಹ ಅದಕ್ಕೂ ಮುನ್ನ ನೀವು ಮೊದಲು ಇರುವ ಪರಿಸ್ಥಿತಿಯನ್ನು ಚೆನ್ನಾಗಿ ವಿಮರ್ಶಿಸುವ ಅಗತ್ಯವಿದೆ. ನಿಮ್ಮ ಗಂಡಂದಿರ ವಿಚಿತ್ರ ನಡವಳಿಕೆಯ ಬಗ್ಗೆ ಒಂದು ಕಣ್ಣಿಡಿ!

ಸ್ನೇಹಿತೆಯ ಪರಿಚಯ
ಅವರು ನಿಮಗೆ ಚೆನ್ನಾಗಿ ಪರಿಚಯವಿಲ್ಲದೆ ಮತ್ತು ಬಹಳ ಒಳ್ಳೆಯ ಸ್ನೇಹಿತರಾಗಿರದಿದ್ದರೆ ಮತ್ತೊಬ್ಬರ ವೈವಾಹಿಕ ಜೀವನದಲ್ಲಿ ಮಧ್ಯೆ ಪ್ರವೇಶಿಸಿ ವಾದಮಾಡಲು ಹೋಗಬೇಡಿ. ಕೇವಲ ಸ್ನೇಹಿತರಾಗಿದ್ದು ಮತ್ತು ನಿಕಟ ಸಂಬಂಧ ಇಲ್ಲದಿದ್ದಲ್ಲಿ ನಿಮ್ಮ ಸ್ನೇಹಕ್ಕೆ ಹೆಚ್ಚು ಹಾನಿಯಾಗಬಹುದು. ಅದಲ್ಲದೆ ಅವರು ನಿಮ್ಮನ್ನು ಶತ್ರುವಿನಂತೆಯೂ ಕಾಣಲು ಸಾಧ್ಯ.
ನೀವು ಅವರಿಗೆ ಹೇಳುವ ಮೊದಲು ಎಲ್ಲವನ್ನೂ ಖಚಿತಪಡಿಸಿಕೊಳ್ಳಿ
ನೀವು ನಿಮ್ಮ ಸ್ನೇಹಿತೆಗೆ ಅವಳ ಮೋಸಮಾಡುವ ಪತಿಯ ಬಗ್ಗೆ ಹೇಳುವ ಮೊದಲು ನೀವು ಏನು ಮತ್ತು ಹೇಗೆ ಹೇಳಬೇಕೆಂದುದನ್ನು ಚೆನ್ನಾಗಿ ಖಚಿತಪಡಿಸಿಕೊಳ್ಳಿ. ಮತ್ತೊಬ್ಬರಿಂದ ನಿಮಗೆ ನಿಮ್ಮ ಸ್ನೇಹಿತೆಯ ಪತಿಯ ಬಗ್ಗೆ ಗೊತ್ತಾಗಿದ್ದರೆ ಅಥವಾ ನೀವು ಸುಮ್ಮನೆ ಕಂಡಿದ್ದು ಮಾತ್ರವೇ ಸಾಲದು. ನಿಮಗೆ ನಿರ್ದಿಷ್ಟವಾಗಿ ಮತ್ತು ನಿಶ್ಚಿತವಾಗಿ ತಿಳಿದಿದ್ದರೆ ಮಾತ್ರ ನೀವು ಹೇಳಬೇಕೆಂದಿರುವುದನ್ನು ಮುಂದುವರಿಸಿ, ಇಲ್ಲದಿದ್ದರೆ ಆ ವಿಷಯನ್ನು ಅಷ್ಟಕ್ಕೇ ಬಿಟ್ಟುಬಿಡಿ
ನೀವು ಅವರಿಗೆ ಮಾರ್ಗದರ್ಶಿಯಾಗಲು ಯತ್ನಿಸಬೇಡಿ
ನೀವು ನಿಮ್ಮ ಸ್ನೇಹಿತೆಗೆ ಅವಳ ಮೋಸಮಾಡುವ ಪತಿಯ ಬಗ್ಗೆ ತಿಳಿಸಲು ನಿಶ್ಚಯಿಸಿದಾಗ ನೀವು ಅವರ ಬಗ್ಗೆ ಬಹಳ ಕಾಳಜಿ ಇಟ್ಟುಕೊಂಡಿರುವ ಸ್ನೇಹಿತೆಯಂತೆ ವರ್ತಿಸಿ. ನಿಮ್ಮ ಅಭಿಪ್ರಾಯದಲ್ಲಿ ಅವರಿಗೆ ಈ ವಿಷಯವನ್ನು ತಿಳಿಸಿದರೆ ಒಳ್ಳೆಯದೆಂಬ ಭಾವನೆಯಿಂದ ಅವರಿಗೆ ತಿಳಿಸಿದರೆಂಬ ಹಾಗೆ ನಡೆದುಕೊಳ್ಳಬೇಕು. ಹಾಗೆ ತಿಳಿಸಿದನಂತರ ಅವರು ಮುಂದೆ ಎನು ಮಾಡಬೇಕೆಂಬುದಕ್ಕೆ ಮಾರ್ಗದರ್ಶನ ನೀಡಲು ಪ್ರಯತ್ನಿಸಬೇಡಿ. ತಿಳಿಸಿದ ನಂತರ ಸುಮ್ಮನಿದ್ದು ಅವರು ತನ್ನ ಮುಂದಿನ ಹೆಜ್ಜೆಯನ್ನು ಅವರೇ ಸ್ವತಃ ನಿರ್ಧರಿಸಲಿ. ನಿಮ್ಮ ಸ್ನೇಹಿತೆಗೆ ಕೇವಲ ಬೆಂಬಲ ನೀಡುವ ಸ್ನೇಹಿತೆಯೆನ್ನುವ ಪ್ರಯತ್ನ ಮಾಡಿ.
ನಿಮ್ಮ ಸ್ನೇಹಿತೆಯ ಪತಿಯ ಬಗ್ಗೆ ಹಗುರವಾಗಿ ಮಾತನಾಡಬೇಡಿ
ನೀವು ಏನು ತಿಳಿಸಿದರೂ ಸಹ ಅವನು ಅವಳ ಪತಿಯ ಬಗ್ಗೆ ಹೇಳುತ್ತಿದ್ದೀರಿ ಎಂಬುದನ್ನು ಮರೆಯದಿರಿ. ನೀವು ತಿಳಿಸಿದ ವಿಷಯ ನಿಮ್ಮ ಸ್ನೇಹಿತೆಯ ಮನಸ್ಸು ಗೊಂದಲಮಯವಾಗಬಹುದಾದರೂ ಎಂಥಾ ಪತ್ನಿಯೂ ಸಹ ತಕ್ಷಣ ತನ್ನ ಪತಿಯನ್ನು ಸಮರ್ಥಿಸಿಕೊಳ್ಳುವ ಸ್ವಭಾವದಾಗಿರುತ್ತಾರೆ. ಆದ್ದರಿಂದ ಅವರ ಪತಿಯ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನಿಮ್ಮ ಭಾವನೆಗಳನ್ನು ತೋರಿಸಿಕೊಳ್ಳದೇ ತಟಸ್ಥವಾಗಿರಿ. ಅವರ ಪತಿಯ ಬಗ್ಗೆ ಹಗುರವಾಗಿ ಅಥವಾ ಕೀಳಾಗಿ ಮಾತನಾಡಲು ಪ್ರಯತ್ನಿಸಿದರೆ ನಿಮ್ಮ ಒಳ್ಳೆಯ ಉದ್ದಿಶ್ಯದ ಕಾರ್ಯದಲ್ಲಿ ನೀವೇ ಕೆಟ್ಟವರಾಗಿಬಿಡುವ ಹಾಗೆ ಕಂಡುಬಿಡುವ ಸಾಧ್ಯತೆ ಇದೆ.



Click it and Unblock the Notifications

