Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪತಿಗೆ ನೀಡುವ ಗಿಫ್ಟ್ ರೊಮ್ಯಾಂಟಿಕ್ ಆಗಿದ್ದರೇನೇ ಚೆಂದ
ಗಂಡನಿಗೆ ಉಡುಗೊರೆ ನೀಡಬೇಕಾದ ಸನ್ನಿವೇಶಗಳು ಬಹಳಷ್ಟು ಭಾರೀ ಬರುತ್ತವೆ. ನಿಮಗೆ ಅವರು ಹಬ್ಬ-ಹರಿದಿನ- ಹುಟ್ಟಿದ ಹಬ್ಬ ಮುಂತಾದ ಸಂದರ್ಭಗಳಿಗೆ ಉಡುಗೊರೆಯನ್ನು ನೀಡುತ್ತಾರಲ್ಲವೇ. ಹಾಗೆ ಅವರಿಗು ಸಹ ನೀವು ಉಡುಗೊರೆ ನೀಡಬೇಕಾದುದು ಧರ್ಮ. ಅದಕ್ಕಾಗಿ ನೀವು ಸಹ ಕಾಯುತ್ತೀರಿ. ಅವರ ಹುಟ್ಟಿದ ಹಬ್ಬ, ನಿಮ್ಮ ವಿವಾಹ ವಾರ್ಷಿಕೊತ್ಸವ ಇತ್ಯಾದಿಗಳಲ್ಲದೆ, ಅವರು ಏನಾದರು ಸಾಧನೆ ಮಾಡಿದಾಗ, ನಿಮಗೆ ಖುಷಿಯಾದಾಗ ಒಂದು ಉಡುಗೊರೆಯನ್ನು ನೀಡಬಹುದು. ಉಡುಗೊರೆ ನೀಡಲು ಕಾರಣಗಳು ಬೇಕೆಂದೆನಿಲ್ಲ. ಯಾವಾಗ ಬೇಕಾದರು ಉಡುಗೊರೆ ನೀಡಬಹುದು.
ಆದರೆ ತನ್ನ ಮುದ್ದಿನ ಗಂಡಸರಿಗೆ ಯಾವ ಉಡುಗೊರೆಗಳು ಇಷ್ಟವಾಗುತ್ತವೆ ಎಂದು ಹೆಂಗಸರು ತಲೆ ಕೆಡಿಸಿಕೊಳ್ಳುತ್ತಾ ಇರುತ್ತಾರೆ. ನಿಮ್ಮ ಗಂಡನಿಗೆ ನೀವು ಯಾವ ಉಡುಗೊರೆಯನ್ನು ನೀಡಬಹುದು ಎಂದು ಯೋಚಿಸುತ್ತಿದ್ದೀರಾ? ಅವರಿಗೆ ಉಡುಗೊರೆಯನ್ನು ನೀಡುವುದು ಸುಲಭದ ಕೆಲಸ ಅಲ್ಲ. ಅದು ಹುಡುಕಿದವರಿಗೆ ಮಾತ್ರ ಗೊತ್ತು. ಸಾಮಾನ್ಯವಾಗಿ ಹೆಂಡತಿಯರು ತನ್ನ ಗಂಡನಿಗೆ ಉಡುಗೊರೆ ನೀಡುವಾಗ ಗ್ಯಾಡ್ಜೆಟ್‌ಗಳು, ಪ್ಲೇ ಸ್ಟೇಷನ್‌ಗಳು, ಮೊಬೈಲ್ ಫೋನ್‌ಗಳು ಇತ್ಯಾದಿಗಳನ್ನು ನೀಡುತ್ತಾರೆ. ಏಕೆಂದರೆ ಅವರಿಗೆ ಇದೇ ಉಡುಗೊರೆಗಳು ಮೊದಲಿಗೆ ನೆನಪಿಗೆ ಬರುತ್ತವೆ.

ಇಂದು ನಾವು ನಿಮ್ಮ ಗಂಡನಿಗೆ ಉಡುಗೊರೆಯಾಗಿ ನೀಡಲು ಕೆಲವೊಂದು ರೊಮ್ಯಾಂಟಿಕ್ ಆದ ಉಡುಗೊರೆಗಳನ್ನು ನಿಮಗಾಗಿ ಶಿಫಾರಸು ಮಾಡುತಿದ್ದೇವೆ. ಈ ಉಡುಗೊರೆಗಳನ್ನು ನಿಮ್ಮ ಗಂಡನಿಗೆ ನೀಡಿ ಅವರನ್ನು ಅಚ್ಚರಿಗೊಳಿಸಿ. ಈ ಸಣ್ಣ ಸಣ್ಣ ಉಡುಗೊರೆಗಳು ಖಂಡಿತವಾಗಿ ನಿಮ್ಮ ಮಧ್ಯೆ ಹೆಚ್ಚಿನ ಅನ್ಯೋನ್ಯತೆಯನ್ನು ತರುತ್ತವೆ. ಇವು ಅವರಿಗೆ ತಾವು ಹೆಂಡತಿಯ ಬಾಳಿನಲ್ಲಿ ವಿಶೇಷ ವ್ಯಕ್ತಿ ಎಂಬ ಅನಿಸಿಕೆಯನ್ನು ನೀಡುತ್ತದೆ. ಇಂತಹ ಕೆಲವೊಂದು ಟ್ರಿಕ್‌ಗಳ ಮೂಲಕ ನಿಮ್ಮ ಗಂಡನಿಗೆ ಒಂದು ವಿಭಿನ್ನ ಅನುಭವವನ್ನು ನೀಡಿ. ಇವು ನಿಮ್ಮ ದಾಂಪತ್ಯದಲ್ಲಿ ಸ್ವಲ್ಪ ವಿನೋದವನ್ನು ತುಂಬುತ್ತದೆ. ನೀವು ನೀಡುವ ಉಡುಗೊರೆಗೆ ಬೆಲೆ ಕಟ್ಟಲಾಗುವುದಿಲ್ಲ, ಆದರೆ ಅದು ನೀಡುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಹಾಗಾಗಿ ಅವರಿಗೆ ಉಡುಗೊರೆಗಳನ್ನು ನೀಡುವಾಗ ಸ್ವಲ್ಪ ಸೃಜನಶೀಲತೆಯನ್ನು ಬಳಸಿಕೊಳ್ಳಿ. ಬನ್ನಿ ಬರೀ ಪೀಠಿಕೆಯೆ ಆಗಿ ಬಿಟ್ಟಿತಲ್ಲವೇ, ಮೊದಲು ನಿಮ್ಮ ಗಂಡನಿಗೆ ಯಾವ ಉಡುಗೊರೆ ನೀಡಬೇಕೆಂಬುದನ್ನು ನೋಡೋಣ.
ಅನಿರೀಕ್ಷಿತ ಪತ್ರಗಳನ್ನು ನೀಡಿ
ನಿಮ್ಮವರು ನಿರೀಕ್ಷೆಯೇ ಮಾಡದೆ ಇರುವಾಗ ಅವರಿಗಾಗಿ ಸಣ್ಣ ಟಿಪ್ಪಣಿ ಇರುವ ಕಾಗದ ಅಥವಾ ಪತ್ರಗಳನ್ನು ಇರಿಸಿ. ಅವುಗಳನ್ನು ಅವರ ವಾಲೆಟ್, ಗ್ಲಾಸ್, ಲ್ಯಾಪ್‌ಟಾಪ್ ಇತ್ಯಾದಿಗಳ ಬಳಿ ಇರಿಸಿ. ಇದನ್ನು ಓದಿದ ತಕ್ಷಣ ಅವರಿಗೆ ಒಂದು ಸಣ್ಣ ಮಂದಹಾಸ ಬರುತ್ತದೆ. ಆಗ ನಿಮ್ಮ ಪ್ರೀತಿಯು ಮತ್ತೆ ತನ್ನ ಹಳಿಯಲ್ಲಿ ಮತ್ತಷ್ಟು ವೇಗವಾಗಿ ಸಾಗುತ್ತದೆ.
ಆತನ ಜೊತೆಗೆ ಒಂದು ಪಂದ್ಯ ಕಟ್ಟಿ
ಗಂಡಸರ ಜೊತೆಯಲ್ಲಿ ಹೆಂಗಸರು ಆಟ ಆಡುವುದನ್ನು ಗಂಡಸರು ಸದಾ ಇಷ್ಟಪಡುತ್ತಾರೆ. ಅವರ ಇಷ್ಟದ ಆಟವಾಡಿ, ಅವರು ಏಕಾಗ್ರತೆಯಿಂದ ಆಟವಾಡುವಾಗ ಲಲ್ಲೆಗರೆದು, ತುಂಟಾಟ ಮಾಡಿ ಅವರ ಏಕಾಗ್ರತೆ ಹಾಳು ಮಾಡಿ, ಪಂದ್ಯದಲ್ಲಿ ಸೋಲಿಸಿ. ಗಂಡಸರಿಗೆ ಇದು ಇಷ್ಟವಾಗುತ್ತದೆ! ಯಾರೇ ಗೆಲ್ಲಲಿ ಇಬ್ಬರೂ ಸೇರಿ ಪಾರ್ಟಿ ಮಾಡಿ.
ಸ್ಟ್ರಿಪ್ ಟೀಸ್ ಆಟವಾಡಿ
ಒಂದು ಅದ್ಭುತವಾದ ಶೃಂಗಾರಮಯ ಅಚ್ಚರಿಯನ್ನು ಗಂಡಸರು ಇಷ್ಟಪಡುತ್ತಾರೆ. ನಿಮ್ಮ ಗಂಡ ಮನೆಗೆ ಬರುವ ಹೊತ್ತಿಗೆ ಸರಿಯಾಗಿ ನಿಮ್ಮ ಬಟ್ಟೆಗಳ ಜಾಡು ಆತನನ್ನು ಸ್ವಾಗತಿಸಲಿ. ಕೆಲವೇ ಕೆಲವು ಕನಿಷ್ಠ ಉಡುಗೆಯಲ್ಲಿ ಅವನನ್ನು ಸ್ವಾಗತಿಸಿ, ಗಂಡಸಿಗೆ ಇದರಿಂದ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ಆತನು ಖಂಡಿತ ಈ ಉಡುಗೊರೆಯನ್ನು ಇಷ್ಟಪಡುತ್ತಾನೆ. ಇಲ್ಲವೇ ಒಂದು ಹಾಡಿಗೆ ನೃತ್ಯ ಮಾಡುತ್ತ ಅವನ ಮುಂದೆ ಸ್ಟ್ರಿಪ್ ಟೀಸ್ ಮಾಡಿ. ಇದು ಸಹ ಆತನಿಗೆ ಇಷ್ಟವಾಗುತ್ತದೆ.
ಒಂದು ನೆನಪಿನ ಜಾರ್ ಮಾಡಿ
ಒಂದು ಮಗ್ ತೆಗೆದುಕೊಂಡು, ಅದರಲ್ಲಿ ನೀವು ಇಬ್ಬರೂ ನೆನಪಿಸಿಕೊಳ್ಳುವಂತಹ ಪ್ರಸಂಗಗಳ ಕುರಿತು ಒಂದು ಸಾಲು ಬರೆದಿರುವ ಚೀಟಿಗಳನ್ನು ಹಾಕಿಡಿ. ಅದು ತಮಾಷೆಯಾಗಿರಬಹುದು, ಹನಿಮೂನ್ ಘಳಿಗೆಯಾಗಿರಬಹುದು. ಈ ವಾಕ್ಯಗಳು ನಿಮ್ಮನ್ನು ನೆನಪಿನ ದೋಣಿಯಲ್ಲಿ ತೇಲಿಸುತ್ತವೆ. ಈ ಉಡುಗೊರೆ ಎಂತಹ ಗಂಡನನ್ನು ಬೇಕಾದರು ಖುಷಿಗೊಳಿಸುತ್ತದೆ. ಇದರ ಕುರಿತಾಗಿ ನಿಮ್ಮಲ್ಲಿ ಹೆಚ್ಚಿನ ಮಾಹಿತಿಗಳು ಮತ್ತು ಸಲಹೆಗಳು ಇದ್ದಲ್ಲಿ ಅಭಿಪ್ರಾಯ ಅಂಕಣದಲ್ಲಿ ಬರೆಯಿರಿ.



Click it and Unblock the Notifications


