Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ನಡುವಯಸ್ಸಿನ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದೀರಾ?
ಮನುಷ್ಯ ಒಂದೊಂದು ಹಂತದಲ್ಲಿ ಒಂದೊಂದು ರೀತಿ ವರ್ತಿಸುತ್ತಾನೆ. ಈ ವಯಸ್ಸಿನಲ್ಲಿ ಪುರುಷರು ಹಾಗೂ ಮಹಿಳೆಯರು ಕೆಲವೊಂದು ಮಹತ್ವದ ಬದಲಾವಣೆಗೆ ಒಳಗಾಗುತ್ತಾರೆ. ಇದನ್ನೇ ಮಧ್ಯವಯಸ್ಸಿನ ಬಿಕ್ಕಟ್ಟು ಎನ್ನಲಾಗುತ್ತದೆ.
ಇದು ಮಹಿಳೆಯರಿಗೆ ಹಾಗೂ ಪುರುಷರಿಗೆ ಭಾವನಾತ್ಮಕವಾಗಿ ಅಸಹನೀಯ ಸಮಯ. ಕೆಲವರು ತಮ್ಮ ಭಾವನೆಗಳ ಅಗತ್ಯತೆಗೆ ತಕ್ಕಂತೆ ಜೀವನಶೈಲಿ ಬದಲಾಯಿಸಿಕೊಂಡು ಹೊಂದಿಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಇದು ಅತೀ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.
ಪತಿ ಅಥವಾ ಪತ್ನಿ ನಡುವಯಸ್ಸಿನ ಬಿಕ್ಕಟ್ಟು ಎದುರಿಸುತ್ತಿದ್ದರೆ ಅದು ಜೀವನದ ಅತ್ಯಂತ ನೋವಿನ ಸಮಯ. ನಿಮ್ಮ ಬಗ್ಗೆ ಆಕೆ/ಆತ ತೋರಿಸುತ್ತಿರುವ ನಡವಳಿಕೆ ನಿಮ್ಮನ್ನು ಆಘಾತಕ್ಕೀಡು ಮಾಡಬಹುದು. ಮಹಿಳೆಯರಲ್ಲಿ ಈ ವಯಸ್ಸಿನಲ್ಲಿ ಮುಟ್ಟು ನಿಲ್ಲುವ ಕಾರಣ ಕಠಿಣ ಸಮಸ್ಯೆ ಎದುರಿಸುತ್ತಾರೆ. ಪುರುಷರು ಈ ಸಮಯದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ. ಅಲ್ಲದೆ ಇಂತಹ ಸಮಯದಲ್ಲಿ ಪರಿಸ್ಥಿತಿ ತುಂಬಾ ಕಠಿಣವಾಗಿರುತ್ತದೆ. ಮಧ್ಯವಯಸ್ಸಿನಲ್ಲಿ ಮಹಿಳೆಯರು ಮಾಡುವ 11 ತಪ್ಪುಗಳು
ನಿಮ್ಮ ಪತಿ/ಪತ್ನಿಯಲ್ಲಿ ಕಾಣಿಸಿಕೊಳ್ಳುವ ನಡುವಯಸ್ಸಿನ ಬಿಕ್ಕಟ್ಟಿನ ಲಕ್ಷಣಗಳು ಯಾವುದು? ಇದರ ಬಗ್ಗೆ ತಿಳಿದುಕೊಂಡು ನಿಮ್ಮ ಜೀವನದಲ್ಲಿ ಅಗತ್ಯ ಬದಲಾಣೆಗಳನ್ನು ಮಾಡಿಕೊಳ್ಳಲು ತಯಾರಾಗಿ ಮತ್ತು ಇದರಿಂದ ಹೊರಬನ್ನಿ.

ಖಿನ್ನತೆಯ ಭಾವನೆ
ನಡುವಯಸ್ಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರಲ್ಲಿ ಖಿನ್ನತೆಯ ಭಾವನೆ ಕಾಡುತ್ತದೆ. ಖಿನ್ನತೆಯಿಂದ ಅವರ ಮನಸ್ಥಿತಿ ಬದಲಾಗುತ್ತದೆ ಮತ್ತು ಇದರಿಂದ ಪ್ರತಿಯೊಂದರಲ್ಲಿ ಅಶಿಸ್ತು ಕಾಣಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೇಸರ, ಶಕ್ತಿಯ ಕೊರತೆ, ತೂಕ ಹೆಚ್ಚುವುದು/ಕಡಿಮೆಯಾಗುವುದು ಮತ್ತು ನಿದ್ರಾಹೀನತೆ ಖಿನ್ನತೆಯ ಕೆಲವೊಂದು ಲಕ್ಷಣಗಳು.
ಹಠಾತ್ ನಿರ್ಧಾರ ತೆಗೆದುಕೊಳ್ಳುವುದು
ನಡುವಯಸ್ಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರು ಹಠಾತ್ ಆಗಿ ನಿರ್ಧಾರ ತೆಗೆದುಕೊಳ್ಳಬಹುದು. ಅವರು ಜೀವನದ ಅಮೂಲ್ಯ ವಿಷಯಗಳ ಬಗ್ಗೆ ಹಠಾತ್ ನಿರ್ಧಾರ ತೆಗೆದುಕೊಂಡು ಬಳಿಕ ಪರಿತಪಿಸಬಹುದು. ಅವರು ಕೆಲಸಕ್ಕೆ ರಾಜೀನಾಮೆ ನೀಡುವುದು, ಡೈವೋರ್ಸ್ ನೀಡುವುದು ಮತ್ತು ಮನೆ ಮಾರುವುದು ಇತ್ಯಾದಿ ಹಠಾತ್ ನಿರ್ಧಾರ ತೆಗೆದುಕೊಳ್ಳಬಹುದು.
ಶೈಲಿ ಬದಲಾಯಿಸುವುದು
ನಡುವಯಸ್ಸಿನ ಬಿಕ್ಕಟ್ಟಿಗೆ ಸಿಲುಕುವ ವ್ಯಕ್ತಿಯಲ್ಲಿ ಕಂಡುಬರುವ ಮತ್ತೊಂದು ಲಕ್ಷಣವೆಂದರೆ ಅದು ಶೈಲಿ ಬದಲಾಯಿಸುವುದು. ಫ್ಯಾಷನ್ ನಿಂದ ಯಾವಾಗಲೂ ವಿಮುಖವಾಗಿರುವ ಮತ್ತು ವರ್ಷಕ್ಕೊಮ್ಮೆ ಶಾಪಿಂಗ್ ಮಾಡುತ್ತಿರುವ ವ್ಯಕ್ತಿ ಹಠಾತ್ ಆಗಿ ಫ್ಯಾಷನ್ ಫ್ರೀಕ್ ಆಗುವುದು. ಆತ/ಆಕೆ ಕನ್ನಡಿ ಎದುರು ಗಂಟೆಗಟ್ಟಲೆ ಕಳೆಯಬಹುದು. ನಿಮ್ಮ ಸಂಗಾತಿಯಲ್ಲಿ ಈ ಲಕ್ಷಣ ಕಾಣಿಸುತ್ತಿದೆಯಾ? ಹಾಗಿದ್ದರೆ ಆಕೆ/ಆತ ನಡುವಯಸ್ಸಿನ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆಂದು ಅರ್ಥ ಮಾಡಿಕೊಳ್ಳಿ.
ನನಗೆ ಆಸಕ್ತಿಯಿಲ್ಲ!
ನಡುವಯಸ್ಸಿನ ಬಿಕ್ಕಟ್ಟಿನಲ್ಲಿ ಇದು ಅತ್ಯಂತ ಸಾಮಾನ್ಯ ಗುಣಲಕ್ಷಣ. ನಿರಾಸಕ್ತಿಯ ಭಾವನೆ ನಿಮ್ಮನ್ನು ಆವರಿಸುತ್ತದೆ ಮತ್ತು ಇದರಿಂದ ಖಿನ್ನತೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಕೆಲಸ ಬಿಡುತ್ತಾರೆ ಮತ್ತು ಹಿಂದಿನಂತೆ ಶಾಲೆಗೆ ಹೋಗಲು ಪ್ರಯತ್ನಿಸುತ್ತಾರೆ. ಅವರು ತಮ್ಮದೇ ನಂಬಿಕೆ ಮತ್ತು ನಿರ್ಧಾರಗಳನ್ನು ಪ್ರಶ್ನಿಸುತ್ತಾರೆ. ಇಂತಹ ಬದಲಾವಣೆ ನಿಮ್ಮ ಸಂಗಾತಿಯಲ್ಲಿ ಕಂಡುಬಂದರೆ ಆಗ ಆಕೆ/ಆತ ನಡುವಯಸ್ಸಿನ ಬಿಕ್ಕಟ್ಟಿಗೆ ಸಿಲುಕಿದ್ದಾರೆಂದು ಅರ್ಥಮಾಡಿಕೊಳ್ಳಿ.



Click it and Unblock the Notifications