Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ನಿಮ್ಮ ಗಂಡಂದಿರ ವಿಚಿತ್ರ ನಡವಳಿಕೆಯ ಬಗ್ಗೆ ಒಂದು ಕಣ್ಣಿಡಿ!
ಮೋಸ ಮಾಡುವ ಗಂಡಂದಿರು ಮಾಡುವ ತಪ್ಪುಗಳು ಯಾವುವು? ಅರೆ ಗಂಡಂದಿರು ಮೋಸ ಮಾಡುತ್ತಿರುವುದೇ ದೊಡ್ಡ ತಪ್ಪು ಎಂದು ಹೇಳಬಹುದಾದರು ಅದನ್ನು ವಿವರವಾಗಿ ಪರಿಶೀಲಿಸಿದಾಗ ಅವರು ಮಾಡುವ ಮತ್ತಷ್ಟು ತಪ್ಪುಗಳು ನಮಗೆ ಕಂಡು ಬರುತ್ತವೆ. ಏಕೆಂದರೆ ಸಂಬಂಧದಲ್ಲಿ ನಂಬಿಕೆಯೇ ಮುಖ್ಯ, ಅಂತಹ ನಂಬಿಕೆಯ ಬುನಾದಿಯನ್ನೆ ಅಲುಗಾಡಿಸುವಂತಹ ಮೋಸವನ್ನು ಇವರು ಮಾಡುತ್ತಿರುತ್ತಾರೆ.
ಹಾಗೆಂದು ಸತ್ಯವನ್ನು ಯಾವಾಗಲು ಹೇಳಲು ಸಹ ಆಗುವುದಿಲ್ಲ. ಕೆಲವೊಮ್ಮೆ ನಾವು ಸಹ ಸುಳ್ಳು ಹೇಳುತ್ತಿರುತ್ತೇವೆ. ಆದರೆ ಕೆಲವರು ಮಾತ್ರ ಸುಳ್ಳು ಹೇಳಲು ಕಾಯುತ್ತ ಇರುತ್ತಾರೆ. ಸುಳ್ಳು ಎನ್ನುವುದು ಅವರಿಗೆ ಉಸಿರಾಡಿದಷ್ಟೇ ಸುಲಭ. ಆದರೆ ಹೀಗೆ ಮಾಡುತ್ತ ಇದ್ದಲ್ಲಿ, ಒಂದಲ್ಲ ಒಂದು ದಿನ ಇದು ಹೆಂಡತಿಗೆ ಗೊತ್ತಾಗುತ್ತದೆ. ಆಗ ಅವರು ಹೆಂಡತಿಯ ತೀಕ್ಷ್ಣ ಪ್ರತಿಕ್ರಿಯೆಯನ್ನು ಎದುರಿಸಲೆ ಬೇಕಾಗುತ್ತದೆ. ಏಕೆಂದರೆ ಎಂತಹ ಅಪರಾಧಿಯು ಸಹ ಒಂದಲ್ಲ ಒಂದು ಸಣ್ಣ ಸುಳಿವನ್ನು ಬಿಟ್ಟುಬಿಟ್ಟಿರುತ್ತಾನೆ ಎಂದು ಹೇಳುತ್ತಾರೆ, ಅಪರಾಧ ಶಾಸ್ತ್ರ.

ಹಾಗೆಯೇ ದಾಂಪತ್ಯದಲ್ಲಿ ಸಹ ತಪ್ಪು ಮಾಡುವವರು, ಒಂದಲ್ಲ ಒಂದು ಸಣ್ಣ ಸುಳಿವನ್ನು ಬಿಟ್ಟಿರುತ್ತಾರೆ. ತಮ್ಮ ದಾಂಪತ್ಯದಿಂದ ಹೊರಗೆ ಯಾವುದಾದರು ಸಂಬಂಧಯವನ್ನು ಇರಿಸಿಕೊಂಡವರು ಒಂದಲ್ಲ ಒಂದು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳು ಅವರ ಸಂಗಾತಿಗೆ ಸುಳಿವನ್ನು ಒದಗಿಸುತ್ತದೆ. ಬನ್ನಿ ಅವು ಯಾವುವು ಎಂದು ನೋಡೋಣ: ಯುವತಿಯರು ಪರ್ಯಾಯ ಪ್ರಿಯಕರನನ್ನು ಬಯಸುತ್ತಾರೆಯೇ?
ಒಳ್ಳೆಯವರ ತರಹ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ
ಸಾಮಾನ್ಯವಾಗಿ ಸಂಬಂಧದಲ್ಲಿ ಒಳ್ಳೆಯವನು ಎಂದು ಕಾಣಿಸಿಕೊಳ್ಳಲು ಶತ ಪ್ರಯತ್ನಪಡುತ್ತಿರುತ್ತಾನೆ. ಒಂದೊಮ್ಮೆ ನಿಮ್ಮ ಗಂಡ ನಿಮ್ಮನ್ನು ಮೋಸ ಮಾಡುತ್ತಿದ್ದಲ್ಲಿ, ಆತ ಕನ್ನಡಿಯ ಮುಂದೆ ಅಲಂಕಾರಕ್ಕೆ ಹೆಚ್ಚು ಸಮಯ ಮೀಸಲಿಡುತ್ತಾನೆ. ಜೊತೆಗೆ ಹೊಸ ಹೊಸ ಹೇರ್ ಸ್ಟೈಲ್ ಪ್ರಯತ್ನಿಸುತ್ತಾನೆ ಮತ್ತು ಪರ್ಫ್ಯೂಮ್‌ಗಳನ್ನು ಸಹ ಹೆಚ್ಚಾಗಿ ಬಳಸುತ್ತಾನೆ. ಇದು ಗಂಡಂದಿರು ಹೆಚ್ಚಾಗಿ ಮಾಡುವ ತಪ್ಪುಗಳಲ್ಲಿ ಒಂದು.
ಹಿಸ್ಟರಿ ಡಿಲಿಟ್ ಮಾಡುತ್ತಾರೆ
ಮುನ್ನೆಚ್ಚರಿಕೆ ಕ್ರಮವಾಗಿ ತಪ್ಪು ಮಾಡುವವರು, ಕಂಪ್ಯೂಟರ್ ಕುಕೀಗಳನ್ನು ಮತ್ತು ಮೊಬೈಲ್‌ನ ಕಾಲ್, ಎಸ್‌ಎಂಎಸ್ ಹಿಸ್ಟರಿ ಅಥವಾ ಲಾಗ್ ಅಳಿಸಿ ಹಾಕುತ್ತಾರೆ. ಆದರೆ ಈ ನಡವಳಿಕೆಯಿಂದಲೆ ಅವರು ಸಿಕ್ಕಿ ಹಾಕಿಕೊಳ್ಳುತ್ತಾರೆ.
ಕ್ಷಮೆಗಳು
ಅವರು ಪ್ರತಿದಿನ ತಡವಾಗಿ ಬರುತ್ತಾರೆ ಮತ್ತು ಅದಕ್ಕಾಗಿ ಏನಾದರು ಸ್ಸಾರಿ ಕೇಳುತ್ತಾರೆ. ಅವರ ಬಳಿ ಕಾರಣಗಳ ಕಣಜವೇ ಇರುತ್ತದೆ. ಇಂತಹ ಕಾರಣಗಳಿಂದಲೆ ಅವರು ಸಿಕ್ಕಿಹಾಕಿಕೊಳ್ಳುತ್ತಾರೆ. ಇಂತಹ ಕಾರಣಗಳು ಹೆಂಡತಿಗೆ ಅನುಮಾನವನ್ನು ತರಿಸುತ್ತವೆ. ಯಾವಾಗ ಗಂಡ ಕಚೇರಿಯಲ್ಲು ಸಹ ಇಲ್ಲದೆ, ಮನೆಗೆ ತಡವಾಗಿ ಬರಲು ಆರಂಭಿಸುತ್ತಾನೋ, ಆಗ ಅವರಿಗೆ ಅನುಮಾನ ಶುರುವಾಗುತ್ತದೆ.
ಬಾತ್‌ರೂಮ್ ಕರೆಗಳು
ನಿಮಗೆ ಯಾರಾದರು ಕರೆ ಮಾಡಿದಾಗ ನೀವು ನಿಮ್ಮ ಹೆಂಡತಿಯ ಮುಂದೆ ಕರೆ ಸ್ವೀಕರಿಸುತ್ತಿದ್ದು, ಯಾರೋ!!!!!!!!! ಕರೆ ಮಾಡಿದ ತಕ್ಷಣ ಬಾತ್‌ರೂಮ್‌ಗೆ ಓಡಿ ಹೋದರೆ, ಆಗ ಅವರಿಗೆ ಅನುಮಾನ ಬಾರದಿರುತ್ತದೆಯೇ. ಇದು ಗಂಡಸರು ಮಾಡುವ ತಪ್ಪುಗಳಲ್ಲಿ ಒಂದು. ಹಾಗಾದರೆ ಗಂಡಸರು ಏಕೆ ಮೋಸ ಮಾಡುತ್ತಾರೆ? ಇದನ್ನು ವಿವರಿಸಲು ಸಂಬಂಧಗಳ ಬಗ್ಗೆ ಅಧ್ಯಯನ ಮಾಡಿರುವವರು ಸಹ ಕಷ್ಟಪಡುತ್ತಾರೆ. ಅವರ ಬಳಿಯು ಇದಕ್ಕೆ ಉತ್ತರವಿಲ್ಲ. ಸಂಬಂಧವು ಸುಖವಾಗಿದ್ದಾಗಲು ಸಹ ಮತ್ತೊಂದು ಕಡೆ ಹೋಗುವ ಇಂತಹ ಗಂಡಸರ ನಡವಳಿಕೆಯ ಚಿದಂಬರ ರಹಸ್ಯ ಇನ್ನು ಗೊತ್ತಾಗಬೇಕು.



Click it and Unblock the Notifications
