Latest Updates
-
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್
ನಿಮ್ಮ ಮುದ್ದಿನ ಪತ್ನಿಯನ್ನು ಪ್ರೀತಿಸಲು ಬಜೆಟ್ ನೋಡಬೇಡಿ!
ಕೆಲವೊಂದು ಸಲ ಸಾಮಾನ್ಯ ಪ್ರೀತಿಯಿಂದ ನಿಮ್ಮ ಸಂಗಾತಿಯನ್ನು ಖುಷಿಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಬ್ಯಾಂಕ್ ನಲ್ಲಿ ಕೂಡಿಟ್ಟ ಹಣವನ್ನು ಸ್ವಲ್ಪ ಖರ್ಚು ಮಾಡಬೇಕಾಗುತ್ತದೆ. ಮನೆಯ ಯಜಮಾನಿಯನ್ನು ಸಂತೋಷವಾಗಿರಿಸಲು ನೀವು ಅತಿಯಾದ ಪ್ರೀತಿ ತೋರಿಸುವುದು ತುಂಬಾ ಮುಖ್ಯ. ನಿಮ್ಮ ಅನುಪಸ್ಥಿತಿಯಲ್ಲಿ ಆಕೆ ಪ್ರತಿಯೊಂದರ ಜವಾಬ್ದಾರಿ ತೆಗೆದುಕೊಂಡು ಕೆಲಸದಿಂದ ಹಿಂತಿರುಗಿ ಬರುವಾಗ ಮನೆಯ ಭಾವನೆ ಮೂಡುವಂತೆ ಮಾಡುತ್ತಾಳೆ. ಮುದ್ದಿಸುವ ವಿಷಯ ತುಂಬಾ ಸಣ್ಣದೇ ಆಗಿರಬಹದುದು, ಪ್ರೀತಿ ಮತ್ತು ಪ್ಯಾಶನ್‌ನಿಂದ ಇದನ್ನು ದ್ವಿಗುಣಗೊಳಿಸಬಹುದು.
ವಜ್ರದ ನೆಕ್ಲೇಸ್ ಖರೀದಿಸಿ ನೀಡುವುದು ಒಂದು ಒಳ್ಳೆಯ ಯೋಜನೆ. ಆದರೆ ಇದಕ್ಕೆ ನಿಮ್ಮ ಕಿಸೆ ಕೂಡ ದಪ್ಪವಾಗಿರಬೇಕು. ನಿಮ್ಮ ಕಿಸೆ ಎಷ್ಟು ದಪ್ಪವಾಗಿದೆ ಎನ್ನುವುದರ ಮೇಲೆ ಪ್ರೀತಿ ಅವಲಂಬಿಸಿರುವುದಿಲ್ಲ. ಆಕೆ ತುಂಬಾ ಇಷ್ಟಪಡುವ ಸಿಹಿತಿಂಡಿ, ಚಾಕಲೇಟ್ ಅಥವಾ ಸಿನೆಮಾಗೆ ಕರೆದುಕೊಂಡು ಹೋದರೂ ಅಷ್ಟೇ ಪ್ರೀತಿ ತೋರಿಸಬಹುದು.
ನಿಮ್ಮ ಯೋಚನೆಗಳಲ್ಲಿ ಆಕೆ ಭಾಗವಾಗಿದ್ದಾಳೆಂದು ತಿಳಿಯಲು ಆಕೆಗೆ ಸಂತೋಷವಾಗುತ್ತದೆ. ಇದು ನೀವು ಯೋಚಿಸಿದಕ್ಕಿಂತ ಹೆಚ್ಚು ನಿಮ್ಮಿಬ್ಬರ ಸಂಬಂಧ ಬಲಪಡಿಸುತ್ತದೆ. ಹೀಗೆ ಮುದ್ದಾಡುವುದರಿಂದ ಜಗಳ ಮತ್ತು ಭಿನ್ನಾಭಿಪ್ರಾಯ ಪರಿಹರಿಸಬಹುದು.
ತನ್ನ ಗಂಡನ ಸಹಕಾರವಿಲ್ಲದೆ ಮಹಿಳೆಯರು ಏನೆಲ್ಲಾ ಮಾಡಬಹುದು?
ಆಕೆಯ ಹುಟ್ಟುಹಬ್ಬದ ದಿನ ಅಥವಾ ಮಹಿಳಾ ದಿನದಂದು ಉಡುಗೊರೆಗಳನ್ನು ನೀಡಬಹುದು. ಪ್ರತೀ ತಿಂಗಳು ನಿಮ್ಮ ಸಂಬಳದ ಒಂದು ಭಾಗವನ್ನು ತೆಗೆದಿಡಿ ಮತ್ತು ಯಾವಾಗಲೂ ಉಡುಗೊರೆ ನೀಡಬೇಕೆಂದು ನಿಮಗನಿಸಿದರೆ ಆಗ ಅದೇ ಬಜೆಟ್ ನಲ್ಲಿ ಉಡುಗೊರೆ ಖರೀದಿಸಿ. ಒಳಉಡುಪು ಖರೀದಿಸುವುದು ಈಗ ಗೌಪ್ಯವಾಗಿ ಉಳಿದಿಲ್ಲ. ಇಂದು ಹೆಚ್ಚಿನ ಮಳಿಗೆಗಳಲ್ಲಿ ಪುರುಷರ ಖರೀದಿಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಮುಂದಿನ ಸಲಕ್ಕೆ ಈ ರೀತಿ ಯೋಚಿಸುತ್ತಿದ್ದರೆ ಖರೀದಿಗೆ ಹಿಂಜರಿಯಬೇಕೆಂದಿಲ್ಲ.

ಹೂವು
ಗುಲಾಬಿಯ ಬುಕ್ಕೆ ಅಥವಾ ಆಕೆಯ ಮೆಚ್ಚಿನ ಬಣ್ಣ, ಇಷ್ಟದ ಹೂವನ್ನು ನೀಡಿದರೆ ಆಗ ಅದು ಅದ್ಭುತವಾಗಿ ಕೆಲಸ ಮಾಡುತ್ತದೆ. ಗುಲಾಬಿ ಮೂಲಕ ಪ್ರೀತಿ ವ್ಯಕ್ತಪಡಿಸಲು ನಿಮಗೆ 50 ರೂ.ಗಿಂತ ಕಡಿಮೆ ಖರ್ಚಾಗಬಹುದು.

ಕಾರ್ಡ್
ನಿಮ್ಮ ತಲೆಗೆ ಯಾವುದೇ ಯೋಚನೆ ಬರದಿದ್ದರೆ ಆಗ ಕೈಬರಹದಲ್ಲಿ ಕೆಲವೊಂದು ರೋಮ್ಯಾಂಟಿಕ್ ಶಬ್ದಗಳನ್ನು ಬರೆದ ಗ್ರೀಟಿಂಗ್ ಕಾರ್ಡ್ ಪ್ರಶಂಸೆಯ ಉಡುಗೊರೆಯಾಗಲಿದೆ.

ಚಾಕಲೇಟ್ಸ್
ಚಾಕಲೇಟ್ಸ್‌ನ ಒಂದು ಬಾಕ್ಸ್ ಯಾವತ್ತೂ ಒಳ್ಳೆಯರು. ಆಕೆಯ ಮುಖದಲ್ಲಿ ನೀವು ನೋಡಬಯಸುವ ನಗುವನ್ನು ಈ ಚಾಕಲೇಟ್ ಬಾಕ್ಸ್ ಮೂಡಿಸುತ್ತದೆ. 200 ರೂಪಾಯಿಗೆ ಹೃದಯದ ಆಕಾರದ ಚಾಕಲೇಟ್ ಬಾಕ್ಸ್ ಖರೀದಿಸಬಹುದು.

ಸಿನೆಮಾ
ಆಕೆಗೆ ತುಂಬಾ ಇಷ್ಟದ ಪಾತ್ರ ಅಥವಾ ನಟಿ-ನಟಿಯಿರುವ ಚಿತ್ರ ಬಿಡುಗಡೆಯಾಗಿದ್ದರೆ ಆಗ ಮರುಚಿಂತಿಸದೆ ಟಿಕೆಟ್ ಖರೀದಿಸಿ ಸಿನೆಮಾಗೆ ಕರೆದುಕೊಂಡು ಹೋಗಿ ಆಕೆಗೆ ಸರ್ಪ್ರೈಸ್ ನೀಡಿ. ಸಿನೆಮಾ ಕೆಟ್ಟದಾಗಿದ್ದರೂ ನೀವು ಅದನ್ನು ಕಡೆಗಣಿಸಬೇಕಾಗುತ್ತದೆ.

ಒಳಉಡುಪು
ಹೌದು! ಮಹಿಳೆಯರ ಒಳಉಡುಪನ್ನು ಖರೀದಿಸುವುದು ಆರಂಭದಲ್ಲಿ ತುಂಬಾ ಕಠಿಣ ಮತ್ತು ಶಾಪಿಂಗ್ ಮಾಡುವುದು ಮುಜುಗರ ಉಂಟು ಮಾಡಬಹುದು. ಮೊದಲ ಸಲ ನೀವು ಖರೀದಿ ಮಾಡಿದರೆ ಮತ್ತೆ ಹಿಂಜರಿಕೆ ಬರದು. ಇದು ಆಕೆಯನ್ನು ಮುದ್ದಿಸಲು ಒಳ್ಳೆಯ ವಿಧಾನ.

ಆಕೆಯ ಹೆತ್ತವರನ್ನು ಭೇಟಿಯಾಗುವುದು
ಪತ್ನಿಯ ಹೆತ್ತವರನ್ನು ಭೇಟಿಯಾಗಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಆಕೆಗೆ ಪ್ರೀತಿ ತೋರಿಸಲು ಸ್ವಲ್ಪ ಪೆಟ್ರೋಲ್ ಗೆ ಖರ್ಚು ಮಾಡಿ, ಪತ್ನಿಯ ಹೆತ್ತವರನ್ನು ಭೇಟಿಯಾಗಿ. ಆಕೆಯ ಬಗ್ಗೆ ಕಾಳಜಿ ವಹಿಸುತ್ತೀದ್ದೀರಿ ಮತ್ತು ಆಕೆಯನ್ನು ಆಕರ್ಷಿಸಲು ಇದು ತುಂಬಾ ನೆರವಾಗುತ್ತದೆ.

ಅಡುಗೆ
ನೀವು ಒಳ್ಳೆಯ ಅಡುಗೆ ಮಾಡುವವರು ಅಲ್ಲದಿರಬಹುದು. ಆದರೆ ಪತ್ನಿಗಾಗಿ ಅಡುಗೆ ಮಾಡುವುದರಿಂದ ಪತ್ನಿಯ ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ಸಂಪಾದಿಸಿ. ಇದು ಹೆಚ್ಚಿನ ಹಣ ಖರ್ಚು ಮಾಡದೆ ಆಕೆಯ ಬಗ್ಗೆ ನಿಮಗಿರುವ ಕಾಳಜಿ ಮತ್ತು ಪ್ರೀತಿ ತೋರಿಸುತ್ತದೆ.

ಸರ್ಪ್ರೈಸ್
ಮಹಿಳೆಯರು ಸರ್ಪ್ರೈಸ್ ಅನ್ನು ಇಷ್ಟಪಡುತ್ತಾರೆ. ನಿಮ್ಮ ಬಜೆಟ್ ನೊಳಗೆ ಆಕೆಗೆ ಸರ್ಪ್ರೈಸ್ ನೀಡಬಹುದು. ಚೆನ್ನಾಗಿ ಸಿಂಗರಿಸಿರುವ ಬೆಡ್ ಮತ್ತು ಕ್ಯಾಂಡಲ್ ಗಳನ್ನು ಹಚ್ಚಿ ಆಕೆಯನ್ನು ರೂಮ್ ಗೆ ಸ್ವಾಗತಿಸುವುದು ಆಕೆ ಮತ್ತೊಮ್ಮೆ ನಿಮ್ಮನ್ನು ಅತಿಯಾಗಿ ಪ್ರೀತಿಸುವಂತೆ ಮಾಡಬಹುದು.



Click it and Unblock the Notifications