Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ವಿವಾಹಕ್ಕೆ ತಯಾರಾಗಿದ್ದೀರಿ ಎಂಬುದನ್ನು ಸೂಚಿಸುವ ಅಂಶಗಳಿವು!
ನೀವು ಮದುವೆಗೆ ಸಿದ್ಧರಾಗಿದ್ದೀರಾ? ಒಳ್ಳೆಯದು, ಒಂದು ವೇಳೆ ನೀವು ತುಂಬಾ ವರ್ಷಗಳಿಂದ ಒಂದು ಸಂಬಂಧದ ಭಾಗವಾಗಿದ್ದರೆ, ನಿಜವಾಗಿ ನೀವು ಮದುವೆಯ ಕುರಿತು ಆಲೋಚನೆ ಮಾಡಿರುತ್ತೀರಿ. ಆದರೆ ಯಾವಾಗ ಮಾಡಿಕೊಳ್ಳುವುದು ಎಂಬ ಗೊಂದಲ ಎಲ್ಲರಿಗು ಕಾಡಿರುತ್ತದೆ. ಬನ್ನಿ ಅದಕ್ಕೆ ಏಕೆ ತಲೆ ಕೆಡಿಸಿಕೊಳ್ಳುತ್ತೀರಿ. ಪ್ರತಿಯೊಂದಕ್ಕು ಕೆಲವೊಂದು ಶಕುನಗಳಿರುವಂತೆ, ಮದುವೆಯಾಗುವುದಕ್ಕು ಮೊದಲು ನೀವು ಮದುವೆಗೆ ಸಿದ್ಧರಾಗಿದ್ದೀರಿ ಎಂದು ಸೂಚಿಸುವ ಸೂಚನೆಗಳು ಕೆಲವೊಂದಿವೆ.
ನಮ್ಮಲ್ಲಿ ಬಹುತೇಕ ಜನ ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ತಿಣುಕಾಡುತ್ತಾರೆ. ಇದಕ್ಕೆ ಕಾರಣ ಅವರ ಸಂಬಂಧದ ಕುರಿತು ಅವರಿಗೆ ಇರುವ ಅಭದ್ರತೆಯೇ ಇದಕ್ಕೆ ಕಾರಣ. ಒಂದು ವೇಳೆ ನೀವು ಸ್ಥಿರವಾದ ಸಂಬಂಧದಲ್ಲಿದ್ದರು, ಮುಂದೆ ಏನು ಮಾಡಬೇಕು ಎಂಬುದರ ಕುರಿತು ನಿಮಗೆ ಖಾತ್ರಿ ಇರುವುದಿಲ್ಲ.
ಆದರೆ ಕೆಲವೊಂದು ಸೂಚನೆಗಳು ನೀವು ಅಪ್ರಜ್ಞಾಪೂರ್ವಕವಾಗಿ ನೀವು ಒಡನಾಡುವವರ ಜೊತೆಯಲ್ಲಿ ಮದುವೆಗೆ ತಯಾರಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ನೀವು ಈ ಸೂಚನೆಗಳನ್ನು ಗಮನಿಸಿದ್ದಾದಲ್ಲಿ, ನಿಮ್ಮ ಸಂಗಾತಿಯ ಜೊತೆಗೆ ಮದುವೆಯಾಗಲು ಚರ್ಚಿಸಿ. ನಿಮ್ಮ ಸಂಗಾತಿಗೂ ಸಹ ಇದೇ ಸೂಚನೆಗಳು ಕಂಡು ಬಂದಿದ್ದಲ್ಲಿ, ನೀವು ತುಂಬಾ ಅದೃಷ್ಟಶಾಲಿಗಳು ಎಂದೇ ಹೇಳಬಹುದು. ಬನ್ನಿ ಇನ್ನು ತಡ ಮಾಡದೆ ಆ ಸೂಚನೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ: ನೀವು ಮದುವೆಗೆ ತಯಾರಾಗಿದ್ದೀರಿ ಎನ್ನುವ ಸೂಚನೆಗಳು

ಆಕೆ ಅಥವಾ ಆತನ ಜೊತೆಗೆ ನೀವು ಸಂಪೂರ್ಣವಾಗಿ ಆರಾಮವಾಗಿರುತ್ತೀರಿ
ಒಂದು ವೇಳೆ ನೀವು ಒಬ್ಬರ ಜೊತೆ ಪ್ರೀತಿಯಲ್ಲಿ ಮುಳುಗಿದ್ದಲ್ಲಿ, ಅವರ ಜೊತೆಯಲ್ಲಿ ಕೆಲವೊಂದು ವಿಚಾರಗಳಲ್ಲಿ ಆರಾಮವಾಗಿರುತ್ತೀರಿ. ಕೆಲವರ ಜೊತೆಯಲ್ಲಿ ನೀವು ದೈಹಿಕವಾಗಿ ಆರಾಮವನ್ನು ಹೊಂದಿರಬಹುದು, ಇನ್ನು ಕೆಲವರ ಜೊತೆಯಲ್ಲಿ ಮಾನಸಿಕವಾಗಿ ಹಿತಕರವಾಗಿರಬಹುದು. ಆದರೆ ಒಬ್ಬ ವ್ಯಕ್ತಿಯ ಜೊತೆಗೆ ನೀವು ಸಂಪೂರ್ಣವಾಗಿ ಆರಾಮವಾಗಿದ್ದಾಗ, ಆಗ ಆ ವ್ಯಕ್ತಿಯ ಜೊತೆಗೆ ನೀವು ಮದುವೆಯಾಗಲು ಸಿದ್ಧರಾಗಿದ್ದೀರಿ ಎಂದರ್ಥ.
ಅವರನ್ನು ಬದಲಿಸಲು ನಿಮಗೆ ಇಷ್ಟವಿರುವುದಿಲ್ಲ/ ಅವರೊಂದಿಗೆ ಮದುವೆಗೆ ಸಿದ್ಧ?
ಯಾವಾಗ ನೀವು ಒಬ್ಬರನ್ನು ಒಪ್ಪಿಕೊಳ್ಳುವಿರೋ, ಆಗ ಸ್ವಾಭಾವಿಕವಾಗಿ ನೀವು ಅವರ ಓರೆಕೋರೆಗಳನ್ನು ಸಹ ಒಪ್ಪಿಕೊಳ್ಳುತ್ತೀರಿ. ಯಾವಾಗ ನಿಮ್ಮ ಹೃದಯವು ಒಬ್ಬರನ್ನು ಒಪ್ಪಿಕೊಳ್ಳುತ್ತದೆಯೋ ಮತ್ತು ಅವರನ್ನು ಬಿಟ್ಟುಕೊಡಬೇಕು ಎಂಬ ಭಾವನೆಯನ್ನು ನಿಮ್ಮ ಮನಸ್ಸು ನಿರಾಕರಿಸುತ್ತದೆಯೋ, ಆಗ ನೀವು ಆ ವ್ಯಕ್ತಿಯ ಜೊತೆಗೆ ಮದುವೆಗೆ ಸಿದ್ಧರಾಗಿದ್ದೀರಿ ಎಂದು ಅರ್ಥ.
ಅವರನ್ನು ಬದಲಿಸಲು ನಿಮಗೆ ಇಷ್ಟವಿರುವುದಿಲ್ಲ/ ಅವರೊಂದಿಗೆ ಮದುವೆಗೆ ಸಿದ್ಧ?
ನಾನು ಮದುವೆಗೆ ಸಿದ್ಧನಾಗಿದ್ದೇನೆಯೇ? ಆಲೋಚಿಸಿ, ಯಾವಾಗ ನೀವು ಒಬ್ಬರನ್ನು ಒಪ್ಪಿಕೊಳ್ಳುವಿರೋ, ಆಗ ಸ್ವಾಭಾವಿಕವಾಗಿ ನೀವು ಅವರ ಓರೆಕೋರೆಗಳನ್ನು ಸಹ ಒಪ್ಪಿಕೊಳ್ಳುತ್ತೀರಿ. ಯಾವಾಗ ನಿಮ್ಮ ಹೃದಯವು ಒಬ್ಬರನ್ನು ಒಪ್ಪಿಕೊಳ್ಳುತ್ತದೆಯೋ ಮತ್ತು ಅವರನ್ನು ಬಿಟ್ಟುಕೊಡಬೇಕು ಎಂಬ ಭಾವನೆಯನ್ನು ನಿಮ್ಮ ಮನಸ್ಸು ನಿರಾಕರಿಸುತ್ತದೆಯೋ, ಆಗ ನೀವು ಆ ವ್ಯಕ್ತಿಯ ಜೊತೆಗೆ ಮದುವೆಗೆ ಸಿದ್ಧರಾಗಿದ್ದೀರಿ ಎಂದು ಅರ್ಥ.
ನೀವು ನಿಮ್ಮ ಮದುವೆ ಸಮಾರಂಭದ ಕನಸು ಕಾಣಲು ಶುರು ಮಾಡಿರುತ್ತೀರಿ
ನೀವು ಮದುವೆಗೆ ಸಿದ್ಧರಾಗಿದ್ದೀರಾ? ಯಾವಾಗ ನೀವು ದಿನದ ಬಹುಕಾಲ ಸಮಯವನ್ನು ನೀವು ಇಷ್ಟಪಟ್ಟ ವ್ಯಕ್ತಿಯ ಜೊತೆಗೆ ನಡೆಯುವ ಮದುವೆಯ ಕುರಿತಾಗಿ ಕನಸು ಕಾಣಲು ಆರಂಭಿಸುತ್ತೀರೋ, ಆಗ ನೀವು ಅವರ ಜೊತೆಗೆ ಮದುವೆಯಾಗಲು ಸಂಪೂರ್ಣವಾಗಿ ಸಿದ್ಧರಾಗಿದ್ದೀರಿ ಎಂದರ್ಥ. ಈ ಕನಸಿನ ಜೊತೆಗೆ ನಿಮ್ಮ ವೈವಾಹಿಕ ಜೀವನದ ಕನಸನ್ನು ಸಹ ನೀವು ಕಾಣಲು ಆರಂಭಿಸುತ್ತೀರಿ.
ನೀವು ನಿಮ್ಮ ಮಕ್ಕಳಿಗಾಗಿ ಹಣವನ್ನು ಉಳಿತಾಯ ಮಾಡಲು ಆರಂಭಿಸುತ್ತೀರಿ
ಇದು ಸಾಮಾನ್ಯವಾಗಿ ಗಂಡಸರ ವಿಚಾರದಲ್ಲಿ ನಡೆಯುತ್ತದೆ. ಗಂಡಸರು ಮದುವೆಗೆ ಯಾವಾಗ ಸಿದ್ಧರಾಗುತ್ತಾರೋ? ಆಗ ಅವರು ಭವಿಷ್ಯದಲ್ಲಿ ತಮ್ಮ ಮಕ್ಕಳಿಗಾಗಿ ಸ್ವಲ್ಪ ಹಣವನ್ನು ಕೂಡಿಡಲು ಆರಂಭಿಸುತ್ತಾರೆ. ಕುಟುಂಬದ ಕುರಿತಾದ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿಸುವಲ್ಲಿ ಇದೊಂದು ಮಾನವನ ಸಹಜ ಗುಣವಾಗಿರುತ್ತದೆ. ಇದರ ಜೊತೆಗೆ ಇನ್ನೂ ಕೆಲವರು ಈ ಅವಧಿಯಲ್ಲಿ ತಮ್ಮ ವೆಚ್ಚಗಳನ್ನು ಕಡಿತಗೊಳಿಸುವ ಹಂತಕ್ಕು ಹೋಗುತ್ತಾರೆ.
ನೀವು ವಿಶ್ವವನ್ನು ಬೇರೆ ದೃಷ್ಟಿಯಿಂದ ನೋಡಲು ಆರಂಭಿಸುತ್ತೀರಿ
ನೀವು ಮದುವೆಗೆ ಸಿದ್ಧರಾಗಿದ್ದೀರಾ? ಒಂದು ವೇಳೆ ಪ್ರಪಂಚವು ನಿಮಗೆ ಏಕಾತಾನತೆಯನ್ನು ನೀಡಲಿಲ್ಲವಾದಲ್ಲಿ, ನೀವು ಮದುವೆಗೆ ಸಿದ್ಧರಾಗಿದ್ದೀರಿ ಎಂದೇ ಅರ್ಥ. ಏಕೆಂದರೆ ನೀವು ಒಬ್ಬರು ಆಲೋಚಿಸುವ ರೀತಿಗೆ ಬದಲಾಗಿ ದಂಪತಿಗಳ ರೀತಿ ಆಲೋಚಿಸಲು ಶುರು ಮಾಡುತ್ತೀರಾ. ತಾನೇ ತಾನಾಗಿ ನೀವು ಒಂದು ಸಂಬಂಧದಲ್ಲಿರುವ ವ್ಯಕ್ತಿಯ ರೀತಿ ಚಿಂತಿಸುತ್ತೀರಾ. ಈ ಸೂಚನೆಯು ನೀವು ಮದುವೆಗೆ ಸಿದ್ಧರಾಗಿದ್ದೀರಿ ಎಂದು ಸೂಚಿಸುತ್ತದೆ.



Click it and Unblock the Notifications




