Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮ್ಮ ಸಂಗಾತಿಗೆ ಹೇಳಲೇಬಾರದ 9 ವಿಷಯಗಳು!
ದೀರ್ಘ ಕಾಲದವರೆಗೆ ಮದುವೆಯಾದ ಜೋಡಿಗಳು ಸುಖವಾಗಿ ಸಾಂಸಾರ ನಡೆಸುತ್ತಿದ್ದರೂ ಕೆಲವೊಮ್ಮೆ ತಾವು ಏನನ್ನು ಮಾತನಾಡುತ್ತೇವೆ, ಏನು ಮಾಡುತ್ತೇವೆ ಎಂಬಿತ್ಯಾದಿ ವಿಷಯಗಳನ್ನು ಗಮನಿಸುವ ಅಗತ್ಯವಿದೆ. ಅದೇ ಸಮಯದಲ್ಲಿ, ತಮ್ಮ ಜೊತೆಗಿರುವ ಸಂಗಾತಿಯ ಬಗ್ಗೆಯೂ ಗಮನವಹಿಸುವುದು ಅತ್ಯಗತ್ಯ.
ಅಂದರೆ ನೀವು ಯಾರೊಂದಿಗಾದರೂ ಅತ್ಯಂತ ಆರಾಮದಾಯಕ ಜೀವನ ನಡೆಸುತ್ತಿದ್ದೀರಿ ಎಂದರೆ ಅದರ ಅರ್ಥ ನೀವು ನಿಮ್ಮ ಮಾತಿನ ಬಗ್ಗೆ ಗಮನವಹಿಸಬಾರದು ಎಂದು ಅರ್ಥವಲ್ಲ. ನಿಮ್ಮ ಪ್ರತಿ ಮಾತು ನಿಮ್ಮ ಸಂಗಾತಿಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ನಿಮಗೆ ಅರಿವಿರಬೇಕು. ಆದ್ದರಿಂದ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಯಾವ ವಿಚಾರವನ್ನು ಹೇಳಬಾರದು? ಅಂತಹ ವಿಷಯಗಳಾವವು? ಇಲ್ಲಿದೆ ಸೂಕ್ತ ವಿವರಣೆ.
ಪ್ರಥಮ ರಾತ್ರಿಗೆ ಸಿದ್ಧಗೊಳ್ಳಲು ಸಹಾಯಕ ಈ 10 ವಿಧಾನಗಳು!
ನೀನು ಯಾವಾಗಲೂ" ಅಥವಾ ನೀನು ಎಂದಿಗೂ ...
ಇದು ಎಷ್ಟು ಸತ್ಯ ಎಂಬುದನ್ನು ನೀವೇ ಯೋಚಿಸಿ. ನೀವು ಈ ಪದಗಳನ್ನು ಬಳಸಿ ಮಾತನಾಡಲು ಆರಂಭಿಸಿದರೆ ನಿಮ್ಮ ಸಂಗಾತಿ ಮಾತನಾಡದೇ ಸುಮ್ಮನಾಗಬಹುದು. ಅಥವಾ ಜಗಳವನ್ನಾರಂಭಿಸಬಹುದು. ಆದ್ದರಿಂದ ಸ್ವಲ್ಪ ಸಮಯದ ನಂತರ ನೀವು ಏನನ್ನು ಹೇಳ ಹೊರಟಿದ್ದೀರಿ ಅದರ ಪರಿಣಾಮವೇನು ಎಂಬುದರ ಬಗ್ಗೆ ಯೋಚಿಸಿ ನಂತರ ಮಾತನಾಡಿ.

ಬೇರೆ ಯಾರೋ ಆಕರ್ಷಕವಾಗಿದ್ದಾರೆ ಎಂಬ ಬಗ್ಗೆ
ಈ ವಿಷಯದ ಬಗ್ಗೆ ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಕೇಳುವುದು ಅಥವಾ ಸದಾ ಬೇರೆಯವರ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರಿ ಆಕರ್ಷಕವಾಗಿದ್ದಾರೆ ಎಂಬಂತಹ ಮಾತುಗಳು ನಿಮ್ಮ ನಡುವೆ ಬರದಿರುವುದೇ ಉತ್ತಮ. ಇದು ಖಂಡಿತವಾಗಿಯೂ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಡಬಹುದು.
ನಿಮ್ಮ ಸಂಗಾತಿಯನ್ನು ಇತರರೊಂದಿಗೆ ಹೋಲಿಕೆ ಮಾಡಬೇಡಿ
ನಿಮ್ಮ ಸಂಗಾತಿ ಕಿರಿಕಿರಿಯ ಭಾವನೆಯನ್ನು ಅನುಭವಿಸದಿರಲು ನೀವು ಮಾಡಬೇಕಾದ ಪ್ರಮುಖ ಕೆಲಸ, ಅವರನ್ನು ಇತರರೊಂದಿಗೆ ಹೋಲಿಕೆ ಮಾಡದೇ ಇರುವುದು!
ಬೇರೆಯವರೊಂದಿಗೆ ಸುತ್ತಾಡುವುದು
ನೀವು ಬೇರೆಯವರೊಂದಿಗೆ ಕೇವಲ ಒಂದು ಬಾರಿ ಸುತ್ತಾಡಿದ್ದರೂ ನಿಮ್ಮ ಸಂಗಾತಿಗೆ ವಿಷಯ ತಿಳಿದರೆ ನಿಮ್ಮ ಸಂಬಂಧದ ನಡುವೆ ಬಿರುಕು ಮೂಡಬಹುದು. ನೀವು ಈ ಕ್ಷಣದಲ್ಲಿ ಆಡಿದ ಮಾತು ಮುಂದಿನ ಕ್ಷಣಗಳಲ್ಲಿ ನಿಮಗೆ ತೊಂದರೆಯನ್ನುಂಟು ಮಾಡಬಹುದು. ಆದ್ದರಿಂದ ಇಂತಹ ವಿಷಯಗಳಲ್ಲಿ ಎಚ್ಚರವಿರಲಿ.
ನೀವು ಒಳ್ಳೆಯ ಹುಡುಗನ ಹುಡುಕಾಟದಲ್ಲಿ ಇದ್ದೀರಾ?
ನಿನ್ನನ್ನು ಮದುವೆಯಾಗಿ ತಪ್ಪು ಮಾಡಿದೆ
ಇಂತಹ ಗೊಂದಲಕಾರಿ ಮಾತುಗಳನ್ನಾಡುವುದಕ್ಕಿಂತ ಮೊದಲು ಒಂದು ಕ್ಷಣ ಯೋಚಿಸಿ. ನಿಮ್ಮ ಭಾವನೆಗಳ ಹಿಂದಿರುವ ಮನೋಭಾವವನ್ನು ಮೊದಲು ಅರಿತುಕೊಳ್ಳಿ. ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡುವ ಬದಲಿಗೆ ಹರಿಹಾಯ್ದು ಅನಗತ್ಯವಾಗಿ ಚರ್ಚಿಸಬೇಡಿ.
ಮಕ್ಕಳ ಮೇಲೆ ಪರಿಣಾಮ ಬೀರಬಹುದು
ಅಂತೆಯೇ ನೀವು " ನಾನು ನಿನ್ನನ್ನು ಯಾಕೆ ಮದುವೆಯಾದೆ ಎಂಬುದೇ ಅರ್ಥವಾಗುತ್ತಿಲ್ಲ" ಎಂದೂ ಹೇಳಬಹುದು. ಅದ್ರೆ ಬಬ್ಬರನ್ನೊಬ್ಬರು ದೂಷಿಸುವ ಹಳಿಯುವ ಮಾತುಗಳು ನಿಮ್ಮ ಮಕ್ಕಳ ಸಮಸ್ಯೆಗೆ ಮೂಲ ಕಾರಣವಾಗಿರುತ್ತದೆ ಎಂಬುದು ನಿಮಗೆ ನನಪಿರಲಿ.
ನೀನು ನಿನ್ನ ತಂದೆ ಅಥವಾ ತಾಯಿಯಂತೆ ..
ನಿಮ್ಮ ಮಾತಿನ ನಡುವೆ ನಿಮ್ಮ ಕುಟುಂಬದವರನ್ನು ಸೇರಿಸುವುದನ್ನು ಮೊದಲು ನಿಲ್ಲಿಸಿ. ನಿನ್ನ ಈ ಸ್ವಭಾವ ನಿಮ್ಮ ಕುಟುಂಬದವರೇ ಎಂದಾಗ ಅವರಿಗೆ ನೋವಾಗಬಹುದು. ಅದಕ್ಕಿಂತ ಹೆಚ್ಚಾಗಿ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ನಿನಗೆ ಗೊತ್ತೆ , ಇದು ಯಾವಾಗಲೂ ನಿನ್ನ/ ನಿನ್ನಿಂದಲೇ ಆರಂಭವಾದ ಸಮಸ್ಯೆ ..
ಈ ಮಾತನ್ನು ಯಾರು ತಾನೆ ಸಂಗಾತಿಯಿಂದ ಕೇಳಲು ಬಯಸುತ್ತಾರೆ? ನಮ್ಮ ಬಗ್ಗೆ ಸಮ್ಮ ಸಂಗಾತಿಯೇ ಇಂತಹ ಮಾತುಗಳನ್ನಾಡಿದರೆ ಪ್ರೀತಿ ತುಂಬಿದ ಸಂಸಾರದಲ್ಲಿ ಒಡಕು ಮೂಡುವುದು ಸಾಮಾನ್ಯ. ಆದ್ದರಿಂದ ಪ್ರೀತಿಗಿಂತ ಒಬ್ಬರನ್ನು ದೂರುವುದು ಮುಖ್ಯವಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.
ನೀನು ಮೊದಲಿನಿಂದಲೂ ನಟಿಸುತ್ತಲೇ ಬಂದಿದ್ದಿಯಾ..
ಒಂದು ವೇಳೆ ಇದು ನಿಜವಾಗಿದ್ದರೂ ಕೂಡ ಯಾವತ್ತೂ ಈ ಮಾತನ್ನು ನಿಮ್ಮ ಸಂಗಾತಿಗೆ ಮಾತ್ರ ಹೇಳಬೇಡಿ.



Click it and Unblock the Notifications
