Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಹೆಂಗಸರನ್ನು ಅರ್ಥ ಮಾಡಿಕೊಳ್ಳಲು 10 ಸಲಹೆಗಳು
ಹೆಂಗಸರನ್ನು ಅರ್ಥ ಮಾಡಿಕೊಳ್ಳಲು ಆಕೆಯನ್ನು ಸೃಷ್ಟಿಸಿದ ಬ್ರಹ್ಮನಿಂದಲೂ ಸಹ ಸಾಧ್ಯವಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ನೀವು ಎಷ್ಟು ವರ್ಷದಿಂದ ಆಕೆಯನ್ನು ನೋಡಿದ್ದೀರಿ, ನಿಮ್ಮ ಮತ್ತು ಆಕೆಯ ಸಂಬಂಧ ಎಷ್ಟು ಕಾಲದಿಂದ ಚಾಲ್ತಿಯಲ್ಲಿದೆ ಎಂಬುದು ಇಲ್ಲಿ ಮುಖ್ಯವಲ್ಲ. ಅದೇ ಎಷ್ಟೇ ಹಳೆಯದಾದರು ಆಕೆಯು ನಿಮಗೆ ಕೆಲವು ಅಂಶಗಳಲ್ಲಿ ನಿಗೂಢವಾಗಿಯೇ ಉಳಿಯುತ್ತಾಳೆ.
ಒಬ್ಬ ಹೆಂಗಸನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಿಮ್ಮ ಜೀವಿತಾವಧಿಯೇ ಬೇಕಾಗುವುದು. ಆಕೆಯನ್ನು ಅರ್ಥ ಮಾಡಿಕೊಳ್ಳಲು ಹಲವಾರು ಮಾರ್ಗಗಳು ಇವೆ. ಆಕೆಯೊಂದಿಗೆ ನಿಮ್ಮ ಸಂಬಂಧವನ್ನು ಉತ್ತಮವಾಗಿಟ್ಟುಕೊಳ್ಳಲು ಸಹ ಹಲವು ಮಾರ್ಗಗಳಿವೆ.
ನೀವು ಇಚ್ಛಿಸಿದ ಹೆಣ್ಣನ್ನು ಅರ್ಥಮಾಡಿಕೊಳ್ಳಲು ಮೊದಲು ಆಕೆಯೊಂದಿಗೆ ನೀವು ಹೆಚ್ಚು ಹೆಚ್ಚು ಸಂವಹನ ನಡೆಸಬೇಕು. ಹೆಣ್ಣಿನ ಜೊತೆಗೆ ಯಾವಾಗಲು ಕೊಡು ಮತ್ತು ಕೊಳ್ಳುವಿಕೆಯ ಭಾವವನ್ನು ಇಟ್ಟುಕೊಳ್ಳಬೇಕು. ಆಕೆಯನ್ನು ಅರ್ಥ ಮಾಡಿಕೊಳ್ಳಲು ಮೊದಲು ನೀವು ಆಕೆಯೊಂದಿಗೆ ನೇರವಂತಿಕೆಯಿಂದ ನಡೆದುಕೊಳ್ಳಿ. ಆಗಲೇ ಆಕೆಯು ನಿಮಗೆ ಅರ್ಥವಾಗಬಹುದು. ನೀವು ಆಕೆಯ ಕುರಿತಾದ ನಿಮ್ಮ ಪ್ರೀತಿ ಮತ್ತು ಬದ್ಧತೆಯನು ಆಕೆಯ ಮುಂದೆ ಪ್ರದರ್ಶಿಸಿದರೆ ಆಗ ಆಕೆಯು ನಿಮ್ಮನ್ನು ನಂಬಿ ತನ್ನ ನಿಜ ಸ್ವರೂಪವನ್ನು ತೋರ್ಪಡಿಸಬಹುದು.
ಪುರುಷರನ್ನು ಸೆಳೆಯಲು ಮಹಿಳೆಯರು ಏನೆಲ್ಲಾ ಮಾಡುತ್ತಾರೆ ಗೊತ್ತೇ?
ಆಕೆಯ ಮನಸ್ಸನ್ನು ಗೆಲ್ಲಲು ಮತ್ತು ಆಕೆಯನ್ನು ಅರ್ಥಮಾಡಿಕೊಳ್ಳಲು ನೀವು ಎಷ್ಟು ಬಾರಿ ಪ್ರಯತ್ನಿಸಿದಿರಿ ಮತ್ತು ಎಷ್ಟು ಬಾರಿ ಸೋತಿರಿ ಎಂಬುದು ಮುಖ್ಯವಲ್ಲ, ನಿಮಗೆ ಎಷ್ಟು ತಾಳ್ಮೆ ಇದೆಯೆಂಬುದೆ ಮುಖ್ಯ. ಹೆಣ್ಣನ್ನು ರಾತ್ರೋ ರಾತ್ರಿ ಅಥವಾ ಒಂದೇ ವರ್ಷದಲ್ಲಿ ಅರ್ಥಮಾಡಿಕೊಳ್ಳಲು ಅಸಾಧ್ಯ ಎಂಬುದನ್ನು ಅರಿಯಿರಿ.
ಒಂದು ಹೆಣ್ಣನ್ನು ಪರಿಚಯ ಮಾಡಿಕೊಂಡು ಒಂದು ದಶಕದ ನಂತರ ಏನಾದರು ಹೊಸ ವಿಚಾರ ಆಕೆಯ ಕುರಿತಾಗಿ ಅರಿತಾಗ ಅಚ್ಚರಿಗೊಳಗಾಗ ಬೇಡಿ. ಅವು ಸಹಜವಾಗಿ ನಡೆಯುತ್ತಿರುತ್ತವೆ. ಆದರೂ ಆಕೆಯ ಕುರಿತಾಗಿ ಕಾಳಜಿ ವ್ಯಕ್ತಪಡಿಸಿ, ಆಕೆಯನ್ನು ಮತ್ತಷ್ಟು ಪ್ರೀತಿಸಿ. ಆಕೆಯೊಂದಿಗೆ ಮುಕ್ತ ಮನಸ್ಸಿನಿಂದ ಬೆರೆಯಿರಿ. ಯಾವುದೇ ಕಾರಣಕ್ಕು ಆಕೆಯು ಮತ್ತೆ ಮುನಿಸಿಕೊಳ್ಳುವಂತಹ ಸನ್ನಿವೇಶವನ್ನು ಕಲ್ಪಿಸಬೇಡಿ.
ಹೆಣ್ಣನ್ನು ಅರ್ಥ ಮಾಡಿಕೊಳ್ಳಲು ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ ಓದಿಕೊಳ್ಳಿ;

ತಾಳ್ಮೆ
ನಿಮ್ಮಾಕೆಯನ್ನು ಅರ್ಥಮಾಡಿಕೊಳ್ಳಲು ಸಮಯಬೇಕು ಮಾರಾಯ್ರೆ. ಹೆಣ್ಣನ್ನು ಅರ್ಥ ಮಾಡಿಕೊಳ್ಳಲು ತಾಳ್ಮೆ ತುಂಬಾ ಮುಖ್ಯ. ಆಕೆಯನ್ನು ಅರ್ಥ ಮಾಡಿಕೊಳ್ಳಲು ದಿನಗಳನ್ನು , ವಾರಗಳನ್ನು ಮತ್ತು ತಿಂಗಳುಗಳನ್ನು ಲೆಕ್ಕ ಹಾಕಬೇಡಿ. ಬೀಜ ಬಿತ್ತಿ, ಬೆಳೆ ಯಾವಾಗ ಬರುತ್ತದೋ ಕಾಯಿರಿ, ಒಂದಲ್ಲ ಒಂದು ದಿನ ಬರುತ್ತೆ ಆ ಕಾಲ.

ಪ್ರೀತಿ
ನಿಮ್ಮಾಕೆಯನ್ನು ಅರ್ಥ ಮಾಡಿಕೊಳ್ಳಲು ಆಕೆಯನ್ನು ಹೆಚ್ಚು ಪ್ರೀತಿಸಿ. ಯಾರೇ ಆಗಲಿ ತಮ್ಮನ್ನು ಹೆಚ್ಚು ಪ್ರೀತಿಸಿದವರೊಂದಿಗೆ ತಮ್ಮ ಭಾವನೆಗಳನ್ನು ಹೆಚ್ಚು ಹಂಚಿಕೊಳ್ಳುತ್ತಾರೆ. ನೀವು ಆಕೆಯನ್ನು ತುಂಬು ಹೃದಯದಿಂದ ಪ್ರೀತಿಸಿದಾಗ ಆಕೆ ಸಹಜವಾಗಿ ನಿಮ್ಮೊಂದಿಗೆ ಮುಕ್ತವಾಗಿ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಾಳೆ.

ಮಮತೆ ಮತ್ತು ಅನುಬಂಧ
ನಿಮ್ಮಾಕೆಯ ಕುರಿತಾಗಿ ನಿಮಗೆ ಇರುವ ಪ್ರೀತಿ ಮತ್ತು ಕಾಳಜಿಯು ಆಕೆಯ ಮನದಲ್ಲಿ ನಿಮ್ಮ ಬಗ್ಗೆ ಒಂದು ರೀತಿಯ ಅನುಬಂಧವನ್ನುಂಟು ಮಾಡುತ್ತದೆ. ಆಗ ಆಕೆಯು ನಿರಾಯಾಸವಾಗಿ ನಿಮಗೆ ಅರ್ಥವಾಗುತ್ತಾಳೆ.

ಸಂವಹನ
ಹೆಂಗಸರಿಗೆ ಮಾತು ಎಂದರೆ ಇಷ್ಟ. ಹೆಣ್ಣನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆಕೆಯೊಂದಿಗೆ ಹೆಚ್ಚು ಮಾತನಾಡಬೇಕು. ಇದೇ ಆಕೆಯ ಗುಟ್ಟು, ಮಾತನಾಡಿ ಆಕೆಯ ಗುಟ್ಟುಗಳೆಲ್ಲ ರಟ್ಟಾಗುತ್ತ ಸಾಗುತ್ತವೆ!

ಮೊದಲ ನಡೆ ನಿಮ್ಮದಾಗಿರಲಿ.
ಹೆಣ್ಣು ಸಂಕೋಚ ಜೀವಿ. ಆಕೆಯನ್ನು ಅರ್ಥ ಮಾಡಿಕೊಳ್ಳಲು ಎಲ್ಲಾ ವಿಚಾರದಲ್ಲಿ ಮೊದಲ ನಡೆ ನಿಮ್ಮದೇ ಆಗಿರಲಿ. ಪ್ರೀತಿಯನ್ನು ವ್ಯಕ್ತಪಡಿಸಲು, ಜಗಳವಾಡಿದಾಗ ಕ್ಷಮೆ ಕೋರಲು ಎಲ್ಲದಕ್ಕು ಮೊದಲು ನೀವೇ ಸಿದ್ಧರಾಗಿರಬೇಕು ತಿಳಿಯಿತೇ? ಆಗಲೇ ಆಕೆ ನಿಮಗೆ ಆರ್ಥವಾಗುವುದು.

ವಿಭಿನ್ನತೆ
ಹೆಂಗಸರು ಒಬ್ಬರಿಂದ ಒಬ್ಬರಿಗೆ ವಿಭಿನ್ನತೆಯನ್ನು ಹೊಂದಿರುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಕೆಲವರು ತುಂಬಾ ಸಂಕೋಚ ಸ್ವಭಾವದವರಾಗಿದ್ದರೆ, ಇನ್ನು ಕೆಲವರು ತುಂಬಾ ವಿಶಾಲ ಮನೋಭಾವದವರಾಗಿರಬಹುದು. ಏನೇ ಇರಲಿ ಇಲ್ಲಿ ಪ್ರತಿಯೊಬ್ಬರು ವಿಭಿನ್ನ ಎಂಬುದನ್ನು ಮರೆಯಬೇಡಿ. ಆದರೆ ಎಚ್ಚರವಿರಲಿ ಆಕೆಯನ್ನು ಯಾವುದೇ ಕಾರಣಕ್ಕು ಇನ್ನೊಬ್ಬಾಕೆಯೊಂದಿಗೆ ಹೋಲಿಸಲು ಹೋಗಬೇಡಿ. ಆಕೆಯನ್ನು ಆಕೆಯಿರುವಂತೆಯೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಒಂದು ಪ್ರಶ್ನೆ ಕೇಳಿ
ಹೆಂಗಸರು ಮಾತನಾಡಲು ಹೆಚ್ಚು ಇಷ್ಟಪಡುತ್ತಾರೆ. ಆಕೆಯೊಂದಿಗೆ ಮಾತನಾಡಲು ಒಂದು ಪ್ರಶ್ನೆ ಕೇಳಿ ಸಾಕು, ಮಾತು ಅದಷ್ಟಕ್ಕೆ ಅದೇ ಮುಂದುವರಿಯುತ್ತದೆ. ಸಮಂಜಸತೆಯಿಂದ ಕೂಡಿದ ಪ್ರಶ್ನೆಗಳ ಮೂಲಕ ಆಕೆಯನ್ನು ಮಾತಿಗೆಳೆಯುವ ಪ್ರಯತ್ನ ಮಾಡಿ.

ಆಕೆಯ ಗತಕಾಲದ ಕುರಿತಾಗಿ ತಿಳಿಯಿರಿ
ಆಕೆಯನ್ನು ಅರ್ಥ ಮಾಡಿಕೊಳ್ಳಲು ಆಕೆಯ ಗತಕಾಲದ ಕುರಿತಾಗಿ ತಿಳಿಯಿರಿ. ಆಕೆಯ ಇತಿಹಾಸವು ಇಂದಿನ ವರ್ತಮಾನವನ್ನು ತಿಳಿಸುತ್ತದೆ. ಆಗಾಗಿ ಆಕೆಯ ಹಿಂದಿನ ಕಥೆಯನ್ನು ತಿಳಿಯಿರಿ.

ಒಟ್ಟಿಗೆ ಕಾಲ ಕಳೆಯಿರಿ
ಆಕೆಯೊಂದಿಗೆ ಕಾಲ ಕಳೆಯಲು ಸಮಯ ಹೊಂದಿಸಿಕೊಳ್ಳಿ. ಆಗ ಆಕೆಯು ನಿಮಗೆ ಸುಲಭವಾಗಿ ಹೆಚ್ಚು ಅರ್ಥವಾಗುತ್ತಾಳೆ. ಕಾಲ ಕಳೆಯುವಾಗ ಆಕೆಯ ಆಸೆ, ಅಭಿರುಚಿ, ಇಷ್ಟ ಮತ್ತು ಕಷ್ಟಗಳು ನಿಮಗೆ ಸುಮ್ಮನೆ ಮನದಟ್ಟಾಗುತ್ತವೆ.

ಬದ್ಧತೆ
ನಿಮ್ಮಾಕೆಯ ಬಗ್ಗೆ ನಿಮ್ಮ ಬದ್ಧತೆಯು ಪರಿಪೂರ್ಣವಾಗಿರಲಿ. ಹೆಂಗಸರು ಹೆಚ್ಚು ಭಾವನಾಜೀವಿಗಳು ಆಕೆಗೆ ಎಲ್ಲವನ್ನು ಹಂಚಿಕೊಳ್ಳುವುದು ಎಂದರೆ ಸಂತಸ. ಅದರಲ್ಲೂ ಸಂಬಂಧದ ವಿಚಾರದಲ್ಲಿ ತಮ್ಮ ಭಾವನೆಗಳನ್ನು ಮತ್ತು ಕಲ್ಪನೆಗಳನ್ನು ಸದಾ ಹಂಚಿಕೊಳ್ಳಲು ಹಾತೊರೆಯುತ್ತಾರೆ.ಆಗಾಗಿ ನೀವು ಆಕೆಯನ್ನು ಅರ್ಥಮಾಡಿಕೊಳ್ಳಲು ಮೊದಲು ಆಕೆಯ ಕುರಿತಾಗಿ ನಿಮ್ಮ ಬದ್ಧತೆಯನ್ನು ನಿರೂಪಿಸಿ.



Click it and Unblock the Notifications