ನೀವು ಪುರುಷರಿಂದ ಮರೆಮಾಚಬಹುದಾದ ವಿಷಯಗಳಿವು!

By Poornima Heggade

ಕೆಲವೊಮ್ಮೆ ನಿಮ್ಮನ್ನು ಅತಿಯಾಗಿ ಪ್ರೀತಿಸುವ ನಿಮ್ಮ ಹೆಂಡತಿ ನಿಮ್ಮಲ್ಲಿ ಕೆಲವು ರಹಸ್ಯಗಳನ್ನು ಹೇಳದಿರಬಹುದು ಎಂದರೆ ನಂಬುತ್ತೀರೆ? ನಿಮ್ಮ ಮೇಲೆ ಅವಳಿಗಿರುವ ಪ್ರೀತಿಯನ್ನು ಸಾಬೀತುಪಡಿಸಲು ನೂರು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ಆದರೆ ನೀವು ಚಾಲಾಕಿಗಳಾಗಿದ್ದರೆ ಆಕೆ ಹೇಳುವ ವಿಷಯಗಳಲ್ಲಿ ಕೆಲವೊಂದನ್ನು ರಹಸ್ಯವಾಗಿಡುತ್ತಾಳೆ ಎಂಬುದನ್ನು ತಿಳಿದುಕೊಳ್ಳಬಹುದು. ಅವರಲ್ಲಿರುವ ರಹಸ್ಯ ನಿಮಗೆ ನಿಜವಾಗಿಯೂ ಆಘಾತವನ್ನುಂಟುಮಾಡಬಹುದು. ಮಹಿಳೆ ಮನಸ್ಸು ಮತ್ತು ಹೃದಯ ಕೆಲವು ವಿಷಯಗಳನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಅಂಥವನ್ನು ಅವರು ನಿಮ್ಮಿಂದ ಮುಚ್ಚಿಡುತ್ತಾರೆ! ಹಲವು ವಿಷಯಗಳು ಅವಳ ಮನಸ್ಸಿನಲ್ಲಿಯೇ ಉಳಿದು ಹೋಗಿರುತ್ತವೆ. ಹಾಗಾದರೆ ಆಕೆ ಹೀಗೇಕೆ ಮಾಡುತ್ತಾಳೆ? ಯಾವುದಾದರೂ ವಿಷಯದ ಬಗ್ಗೆ ಅವಳಿಗಿರುವ ಭಯ ಕಾರಣವಿರಬಹುದೇ? ಅಲ್ಲ, ಅವಳು ವೈಯಕ್ತಿಕ ಜಾಗ/ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾಳಷ್ಟೇ!

ಮಹಿಳೆ ತನ್ನ ಎಲ್ಲಾ, ಪ್ರೀತಿ, ಕಾಳಜಿ ನೀಡುತ್ತಾಳೆ. ಆದರೆ ಆದರೆ ಕೆಲವು ವಿಷಯಗಳನ್ನು ಅವರು ಹೇಳಲು ಎಂದಿಗೂ ಇಷ್ಟಪಡುವುದಿಲ್ಲ. ನೀವು ನಿಜವಾಗಿಯೂ ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತೀರಾದರೆ ಆಕೆ ನಿಮ್ಮಿಂದ ಮುಚ್ಚಿಡಬಹುದಾದಂತಹ ವಿಷಯ ಗಳ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲಿ ನೀವು ವಾಸ್ತವವಾಗಿ ಪುರುಷರಿಂದ ಮರೆಮಾಡಬಹುದಾದ ಕೆಲವು ವಿಷಯಗಳ ಬಗ್ಗೆ ಮಾರ್ಗದರ್ಶನ ನಿಡಲಾಗಿದೆ.

Things you should hide from men

1.ಅಸುರಕ್ಷತೆಯ ಭಾವನೆ:
ಸಂಬಂಧಗಳಲ್ಲಿ ಅಸುರಕ್ಷತೆಯ ಭಾವನೆಯನ್ನು ಉಂಟುಮಾಡುವ ಕೆಲವು ವಿಷಯಗಳನ್ನು ಮರೆಮಾಚುವುದು ಉತ್ತಮ. ತನ್ನ ಹುಡುಗಿ ತನ್ನ ಬಳಿ ಬೇರೆಯವರ ಬಗ್ಗೆ ಮಾತನಾಡಿದಾಗ ಹುಡುಗ ಅಸುರಕ್ಷತೆಯ ಭಾವನೆಗೆ ಒಳಗಾಗುತ್ತಾನೆ. ಹುಡುಗರು ನಿಜವಾಗಿಯೂ ಏನಾದರೂ ತಿಳಿಯಲು ಬಯಸುತ್ತಾರೆ ಮತ್ತು ಆ ವಿಷಯ ಅವರಿಗಿಂತ ಉತ್ತಮವಾದದ್ದು ಎನ್ನುವುದನ್ನು ಕೇಳಲು ಅವರು ಇಷ್ಟಪಡುವುದಿಲ್ಲ. ಆದ್ದರಿಂದಲೇ ಮಹಿಳೆ ಕೆಲವು ವಿಷಯಗಳನ್ನು ಮರೆಮಾಡಲು ಅವರ ಮೇಲಿರುವ ಪ್ರೀತಿಯೇ ಕಾರಣ. ನಿಮ್ಮ ಸಂಬಂಧ ಹಾಗೇ ಉಳಿಯಲು, ಇದೇ ಪ್ರೀತಿಯನ್ನು ಮುಂದುವರಿಸಲು ಬಯಸುವಿರಾದರೆ ಇಂತಹ ವಿಷಯಗಳನ್ನು ನಿಮ್ಮ ಹುಡುಗ/ ಗಂಡನಿಂದ ದೂರ ಇರಿಸುವುದು ಒಂದು ಉತ್ತಮ ಸಂಬಂಧಕ್ಕೆ ಸಲಹೆ.

2.ಪ್ರಾಮುಖ್ಯತೆ:
ರಸಭರಿತವಾವಾಗಿ ಮಾತನಾಡುವ ಹುಡುಗಿ ನಿಮ್ಮ ಬಳಿ ಎಲ್ಲಾ ವಿಷಯಗಳನ್ನು ಹೇಳದೇ ಇರಬಹುದು. ಅವರು ಹೇಳದೇ ರಹಸ್ಯವಾಗಿಟ್ಟಿರುವ ವಿಷಯ ಮಹಿಳೆಯ ವಯಕ್ತಿಕ ವಿಷಯವೂ ಆಗಿರಬಹುದು. ಅದನ್ನು ತಿಳಿದುಕೊಳ್ಳಲು ಮತ್ತೆ ಮತ್ತೆ ಅವರನ್ನು ಕೇಳಿದರೆ ನಿಮಗೆ ಅವರು ನೀಡುವ ಪ್ರಾಮುಖ್ಯತೆ ಕಡಿಮೆಯಾಗಿ ಸದ್ಯದಲ್ಲೇ ನೀವೊಂದು ಆಘಾತವನ್ನು ಅನುಭವಿಸಬೇಕಾಗಬಹುದು ಎಚ್ಚರ!

3.ಸೌಂದರ್ಯ:
ಯಾವುದೇ ಮಹಿಳೆ ತನ್ನ ಪುರುಷನ ಕಣ್ಣಲ್ಲಿರುವ ಕಾಂತಿಯನ್ನು ಮುಖದಲ್ಲಿರುವ ಕಾಂತಿಯನ್ನು ನೋಡಲು ಬಯಸುತ್ತಾಳೆ. ಹಾಗೆಂದ ಮಾತ್ರಕ್ಕೆ ದಿನವೂ ಮುಖ್ದಲ್ಲಿ ಈ ಹೊಳಪನ್ನು ಹೊಂದುವುದು ಕಷ್ಟ. ಆದರೆ ಈ ಸಮಸ್ಯೆಯನ್ನು ನಿವಾರಿಸಲು ನೀವು ಒಂದು ಸಣ್ಣ ಮೇಕಪ್ ಕಿಟ್ ಜೊತೆಗೊಯ್ಯಿರಿ. ಕೆಲವು ವಿಷಯಗಳನ್ನು ನಿಮ್ಮಿಂದ ನಿಮ್ಮ ಹುಡುಗಿ ಕೆಲವು ವಿಷಯಗಳನ್ನು ಅಡಗಿಸಿರುವುದು ಖಂಡಿತವಾಗಿಯೂ ನಿಮಗೂ ಸಹಾಯವಾಗಬಹುದು! ನಿಮ್ಮ ಹುಡುಗಿ ಬೇರೆ ಹುಡುಗರ ಸೌಂದರ್ಯದ ಬಗ್ಗೆ ಮಾತನಾಡದಿರಲು ನೀವು ಅವರ ಇಚ್ಛೆಯನ್ನು ಅರ್ಥ ಮಾಡಿಕೊಳ್ಳುವುದೇ ಉತ್ತಮವಲ್ಲವೇ?

4.ಹಳೆಯ ಕಥೆಗಳ ಬಗ್ಗೆ ಮಾತುಗಳು ಬೇಡ:
ನಿಮ್ಮ ಪುರುಷನಿಗೆ ನಿಮ್ಮ ಹಳೆಯ ಪ್ರೀತಿಯ ಬಗ್ಗೆ ತಿಳಿಸುವುದು ಉತ್ತಮ. ಆದರೆ ಅವನ ಬಗ್ಗೆ ಮತ್ತೆ ಮತ್ತೆ ಮಾತನಾಡುವುದನ್ನು ನಿಲ್ಲಿಸಿ. ಕೆಲವು ಸಂದರ್ಭಗಳಲ್ಲಿ ನಿಮ್ಮ ಹಿಂದಿನ ಪ್ರೇಮಿ ನಿಮ್ಮ ಈಗಿನ ಹುಡುಗನಿಗಿಂತ ಉತ್ತಮ ಎನ್ನಿಸಬಹುದು ಅಥವಾ ಅವನು ನಿಮಗೆ ಇವನಿಗಿಂತ ಜಾಸ್ತಿ ಸಂತೋಷವನ್ನು ನೀಡುತ್ತಿದ್ದ ಎನ್ನಿಸಬಹುದು. ಆದ್ರೆ ನಿಮ್ಮ ಈಗಿನ ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಲು ಈ ವಿಷಯಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಈಗಿನ ಸಂಗಾತಿಗೆ ಹೇಳದಿರಿ! ನಿಮ್ಮ ಈಗಿನ ಸಂಗಾತಿ ವಿಶೇಷವಾದ ವ್ಯಕ್ತಿತ್ವ ಹೊಂದಿದ್ದಾನೆ ಆದ್ದರಿಂದ ಪ್ರೀತಿಸುತ್ತೇನೆ ಎಂಬುದನ್ನು ಬಲವಾಗಿಸಿ. ಹಾಗಾದರೆ ನಿಮ್ಮ ಸಂಬಂಧವೂ ಸುರಕ್ಷಿತವಾಗಿರುತ್ತದೆ.

5.ಪ್ರತಿಭಟನೆ ಬೇಡ:
ಪುರುಷರಿಂದ ವಿಷಯಗಳನ್ನು ಮುಚ್ಚಿಟ್ಟರೆ ವಾಸ್ತವವಾಗಿ ಅವರಿಗೆ ಆ ವಿಷಯದ ಬಗ್ಗೆ ಸಮಾಧಾನವಿರುವುದಿಲ್ಲ. ಹಾಗಿದ್ದರೆ ನೀವು ಪುರುಷರ ಯಾವುದೇ ವಿಷಯದ ಬಗ್ಗೆ ಹೆಚ್ಚು ಟೀಕೆ ಮಾಡಬೇಡಿ. ಅವರ ತಾಯಿಯ ಬಗ್ಗೆ ಅಥವಾ ಅವರ ಸಹೋದರಿಯರ ಸೌಂದರ್ಯದ ಬಗ್ಗೆ ನಕಾರಾತ್ಮಕವಾಗಿ ಏನನ್ನೂ ಹೇಳಬೇಡಿ. ಏಕೆಂದರೆ ನಿಮ್ಮ ವರ್ತನೆಯಿಂದ ಅವರು ನೊಂದುಕೊಳ್ಳಬಹುದು. ಮತ್ತು ಇದರಿಂದ ನಿಮ್ಮ ಸಂಬಂಧ ಹದಗೆಟ್ಟಿದ ಸ್ಥಿತಿ ತಲುಪಬಹುದು! ಆದುದರಿಂದ ನಿಮ್ಮ ಪುರುಷನೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡಿ. ನೀವು ನಿಮ್ಮ ಪುರುಷನಿಂದ ಮರೆಮಾಚುವ ವಿಷಯಗಳು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಹಾಯಕವಾಗಬೇಕೆ ಹೊರತು ಸಂಬಂಧವನ್ನು ಹಾಳುಗೆಡವಬಾರದು!

ಯಾವುದೇ ವಿಷಯಗಳನ್ನು ಮರೆಮಾಚಿದ್ದರೂ ಅವುಗಳಿಂದ ಮುಂದಾಗುವ ತೊಂದರೆ ಹಾಗೂ ಲಾಭಗಳ ಬಗ್ಗೆ ಮುಂಚಿತವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಿ. ಇದರಿಂದ ನಿಮ್ಮ ಸಂಬಂಧಗಳು ಉತ್ತಮವಾಗಿ ಸಾಗಲು ನೀವು ಮಾಡಲೇಬೇಕಾದ ಪ್ರಮುಖ ವಿಷಯ!

Story first published: Saturday, December 21, 2013, 20:04 [IST]
X
Desktop Bottom Promotion