Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಯಾವ ಪ್ರೇಮಿಯೂ ಹಾಕಿಸದ ಜಾಗದಲ್ಲಿ ಹುಡುಗಿ ಹೆಸರು ಟ್ಯೂಟೂ ಹಾಕಿಸಿದ..!
ಪ್ರೇಮಿಗಳು ತಮ್ಮ ಪ್ರೀತಿಯನ್ನು ತೋರ್ಪಡಿಸಬೇಕು ಅಂದ್ರೆ ಏನು ಬೇಕಾದರು ಮಾಡಲು ಸಿದ್ದರಿರುತ್ತಾರೆ. ಅದರಲ್ಲೂ ಹುಡುಗರು ಒಂದು ಹೆಜ್ಜೆ ಮುಂದಿರುತ್ತಾರೆ ಅಂದ್ರು ತಪ್ಪಾಗಲ್ಲ. ನೀವು ನೋಡಿರಬಹುದು ಹುಡುಗಿಯನ್ನು ಮೆಚ್ಚಿಸಲು ಹುಡುಗರು ಏನೆಲ್ಲಾ ಸಾಹಸ ಮಾಡುತ್ತಾರೆ ಅಂತ. ಅವರು ಮಾಡೋ ಒಂದೊಂದು ಸಾಹಸಗಳು ಕೆಲವೊಮ್ಮೆ ಯಾರು ಸಹ ನಂಬಲು ಸಾಧ್ಯವಿಲ್ಲದಂತಿರುತ್ತವೆ.
ಹುಡುಗರು ತಮ್ಮ ನೆಚ್ಚಿನ ಹುಡುಗಿಯ ಮೆಚ್ಚಿಸಲು ಯಾವ ಪ್ರೇಮಿಗಳು ಮಾಡಿರಬಾರದು ಅಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಅದರಲ್ಲೂ ಕೆಲವರು ಹುಡುಗಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದನ್ನು ನೋಡಿದ್ದೇವೆ. ಕೆಲವರು ಕೈ ಮೇಲೆ, ಎದೆಯ ಮೇಲೆ, ತೋಳಿನ ಮೇಲೆ ಅಷ್ಟೇ ಏಕೆ ಹಣೆಯ ಮೇಲೂ ಹಾಕಿಸಿರಬಹುದು. ಆದ್ರೆ ನೀವೆಂದಾದ್ರು ಹುಡುಗಿ ಹೆಸರನ್ನು ತುಟಿಯ ಒಳಗೆ ಹಾಕಿಸಿಕೊಂಡಿದ್ದು ನೋಡಿದ್ದೀರ.

ಹೌದು ಇಲ್ಲೊಬ್ಬ ಯುವಕ ತನ್ನ ಪ್ರೇಯಸಿಯ ಹೆಸರನ್ನು ಕೆಳ ತುಟಿಯ ಒಳಭಾಗದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಇದನ್ನು ಕಂಡ ನೆಟ್ಟಿಗರು ಅಕ್ಷರಶಃ ಶಾಕ್ ಆಗಿದ್ದಾರೆ. ಆತ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಯಾವ ಪ್ರೇಮಿಯೂ ಹಾಕಿಸದ ಜಾಗದಲ್ಲಿ ಹಚ್ಚೆ ಹಾಕಿಸಿದ್ದಾನೆ.
ಈ ವಿಡಿಯೋವನ್ನ ಟ್ಯಾಟೂ ಕಲಾವಿದ ಅಭಿಷೇಕ್ ಸಪ್ಕಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಟ್ಯಾಟೂ ಕಲಾವಿದನೊಬ್ಬ ಪ್ರೇಮಿಯ ಕೆಳತುಟಿಯಲ್ಲಿ 'ಅಮೃತ' ಎಂಬ ಹೆಸರನ್ನು ಹಚ್ಚೆ ಹಾಕಿಸಿರುವುದನ್ನು ನಾವು ಕಾಣಬಹುದು.
ಈ ವಿಡಿಯೋ ಇಂಟರ್‌ನೆಟ್‌ನಲ್ಲಿ 9 ಮಿಲಯನ್‌ಗೂ ಹೆಚ್ಚಿನ ವೀಕ್ಷಣೆ ಕಂಡಿದೆ. ಜೊತೆಗೆ ಈ ಪ್ರೇಮಿಯ ಕೆಲಸ ಕಂಡು ನೆಟ್ಟಿಗರು ಶಾಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈತನ ಕೆಲಸವನ್ನು ಹೊಗಳಿದರೆ ಮತ್ತೆ ಕೆಲವರು ಆತನ ಕೃತ್ಯ ಖಂಡಿಸಿದ್ದಾರೆ.
ವಿಡಿಯೋ ಕಂಡು ಕಾಮೆಂಟ್ ಮಾಡಿದ ಬಳಕೆದಾರರು, "ಒಂದು ವೇಳೆ ಹುಡುಗಿ ಕೈ ಕೊಟ್ಟರು ! ಅವನ ಹೆಂಡತಿಗೆ ಇದನ್ನು ಕಂಡುಹಿಡಿಯಲಾಗುವುದಿಲ್ಲ. ಬುದ್ಧಿವಂತ ನಡೆ" ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು "ಹಣವನ್ನು ವ್ಯರ್ಥ ಮಾಡಬೇಡಿ, ಮೊದಲು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿ" ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರೀತಿಸಿದ ಹುಡುಗಿಯ ಹೆಸರನ್ನು ಎಲ್ಲರಿಗೂ ಕಾಣುವಂತೆ ಹಾಕಿಸುವುದೇ ನಿಜವಾದ ಪ್ರೀತಿಯಾಗುತ್ತಿತ್ತು. ಆದ್ರೆ ಈತ ಗೌಪ್ಯವಾಗಿಡಲು ನಿರ್ಧರಿಸಿದ್ದಾನೆ ಎಂದರೆ ಇಲ್ಲೆನೋ ಸಮಸ್ಯೆಯಿದೆ ಎಂದು ಮತ್ತೊಬ್ಬರು ಅನುಮಾನಿಸಿದ್ದಾರೆ. ಜೊತೆಗೆ ಆತನಿಗೆ ಈ ಸ್ಥಳ ಹೊಳೆದಿದ್ದು ಹೇಗೆ ಎಂಬುದೇ ನನಗೆ ಅಚ್ಚರಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಹಣೆಯ ಮೇಲೆ ಗಂಡನ ಹೆಸರು ಹಾಕಿಸಿದ್ಲು ಪತ್ನಿ
ಇಂಗ್ಲೆಂಡ್‌ನ ಮಹಿಳೆಯೊಬ್ಬರು ತಮ್ಮ ಪತಿಯ ಮೇಲಿನ ಪ್ರೀತಿ ತೋರಿಸಲು ಆಕೆ ಗಂಡನ ಹೆಸರನ್ನು ಹಣೆಯ ಮೇಲೆ ಹಚ್ಚೆ ಹಾಕಿಸಿದ್ದಳು. ಮದುವೆಯ ವಾರ್ಷಿಕೋತ್ಸವದಂದು ಪತಿಗೆ ಉಡುಗೊರೆ ನೀಡಲೆಂದು ಆಕೆ ಈ ರೀತಿ ಮಾಡಿದ್ದಳು, ಆದರೆ ಇದರಿಂದ ಆಕೆ ನೋವು ತಾಳಲಾಗದೆ ಎರಡು ದಿನ ಆಸ್ಪತ್ರೆ ಸೇರಿದ್ದಳು.
ಅರೇಬಿಕ್ ಟ್ಯಾಟೂ ಯಡವಟ್ಟು
ಕೈಟ್ ಎಂಬ ಟ್ರಾವೆಲ್ ಟಿಕ್‌ಟಾಕರ್ ಒಬ್ಬರು ತನ್ನ ಕೈ ಮೇಲೆ ಅರೇಬಿಕ್ ಟ್ಯಾಟೂ ಹಾಕಿಸಿದ್ದರು. ಪ್ರಯಾಣ ನೆನಪಿರಲಿ ಎಂಬ ಕಾರಣಕ್ಕೆ ಆಕೆ ಮೊರಾಕೋದಲ್ಲಿ ಈ ಟ್ಯಾಟೂ ಹಾಕಿಸಿದ್ದಳಂತೆ. ಆದರೆ ಆ ಟ್ಯಾಟೂವನ್ನು ಗೂಗಲ್‌ನಲ್ಲಿ ಟ್ರಾನ್ಸ್‌ಲೇಟ್ ಮಾಡಿದಾಗ ಅದು 'ಮಯೋನಿಸ್' ಎಂದು ತೋರಿಸುತ್ತದೆ. ಖಾದ್ಯಗಳ ಸವಿಯಲು ಬಳಸುವ ಅದೇ ಮಯೋನಿಸ್ ಅನ್ನು ಟ್ಯಾಟೂ ಕಲಾವಿದ ಅರೇಬಿಕ್ ಭಾಷೆಯಲ್ಲಿ ಆಕೆಯ ಕೈ ಮೇಲೆ ಬರೆದಿದ್ದ. ಆದರೆ ಇದರ ಅರ್ಥವೇ ತಿಳಿದಿರಲಿಲ್ಲವಂತೆ.
ಹೀಗೆ ಪ್ರಚಂಚದಲ್ಲಿ ಚಿತ್ರ ವಿಚಿತ್ರವಾಗಿ ಟ್ಯಾಟೂ ಹಾಕಿಸಿಕೊಂಡಿರುವ ಸಾವಿರಾರು ಉದಾಹರಣೆಗಳನ್ನು ನಾವು ನೋಡಬಹುದಾಗಿದೆ.



Click it and Unblock the Notifications
