ಕೇದರನಾಥ ದೇವಾಲಯದಲ್ಲಿ ಲವ್ ಪ್ರಪೋಸ್‌ ವೀಡಿಯೋ ವೈರಲ್‌: ನೆಟ್ಟಿಗರ ಆಕ್ರೋಶ

ಫ್ಯಾಂಟಸಿ ಪ್ರಪೋಸ್‌ ತುಂಬಾ ಪ್ರೇಮಿಗಳ ದೊಡ್ಡ ಡ್ರೀಮ್ ಆಗಿರುತ್ತದೆ. ಫ್ಯಾಂಟಸಿ ಪ್ರಪೋಸ್ ಬಯಸುವುದು ತಪ್ಪಲ್ಲ ಆದರೆ ಅದಕ್ಕಾಗಿ ಆಯ್ಕೆ ಮಾಡುವ ಸ್ಥಳ ಸರಿಯಿಲ್ಲ ಎಂದರೆ ಜನರ ತೀವ್ರ ಟೀಕೆಗೆ ಒಳಗಾಗಿ ಖುಷಿ ಹಾಳಾಗುವಂತಾಗುವುದು, ಆದ್ದರಿಂದ ಈ ಕುರಿತು ತುಂಬಾನೇ ಎಚ್ಚರವಹಿಸಬೇಕಾಗುತ್ತದೆ, ಅದಕ್ಕೆ ಸಾಕ್ಷಿ ಈ ವೈರಲ್ ವೀಡಿಯೋ.

ಆಕೆ ಜನಪ್ರಿಯ ಯೂ ಟ್ಯೂಬರ್‌, ಹೆಸರು ವಿಶಾಖ, ಆಕೆ ಬೈಕ್‌ ರೈಡರ್‌, ಕೆಲವೊಂದು ಸ್ಥಳಗಳಿಗೆ ಬೈಕ್‌ ರೈಡ್‌ ಮಾಡಿ ಹೋಗುವ ವೀಡಿಯೋಗಳನ್ನು ಅಪ್‌ಲೋಡ್‌ ಮಾಡ್ತಾ ಇರುತ್ತಾರೆ, ತುಂಬಾ ಜನ ಫಾಲೋವರ್ಸ್‌ ಆಕೆಗಿದ್ದಾರೆ. ತನ್ನ ಪ್ರೇಮ ನಿವೇದನೆ ತುಂಬಾ ವಿಭಿನ್ನವಾಗಿ ಮಾಡಬೇಕೆಂದು ತುಂಬಾ ಸಮಯದಿಂದ ಪ್ಲ್ಯಾನ್‌ ಮಾಡಿದ್ದರು, ಅದಕ್ಕಾಗಿ ತಿಂಗಳಿನಿಂದ ಪ್ರಿಪರೇಷನ್ ಮಾಡಲಾಗಿತ್ತು.

 Love Proposal In Kedarnath Temple Goes Viral: Nettigen Condemmed This Act

ತನ್ನ ಬಾಯ್‌ ಫ್ರೆಂಡ್‌ಗೆ ಇಂಥದ್ದೇ ಜಾಗದಲ್ಲಿ ಮದುವೆ ಪ್ರಪೋಸ್‌ ಮಾಡಬೇಕು ಎಂದು ಬಯಸಿದ್ದರು. ಅವರು ಬಯಸಿದಂತೆ ಎಲ್ಲವೂ ಆಗಿದೆ, ಅವರ ಲವ್ ಪ್ರಪೋಸ್ ವೀಡಿಯೋ ತುಂಬಾನೇ ವೈರಲ್ ಆಗಿದೆ, ಆದರೆ ಜನರು ಅವರು ಲವ್ ಪ್ರಪೋಸ್‌ ಮಾಡಲು ಆಯ್ಕೆ ಮಾಡಿರುವ ಸ್ಥಳದ ಕಾರಣದಿಂದ ತುಂಬಾನೇ ಟೀಕೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಅವರು ಲವ್‌ ಪ್ರಪೋಸ್‌ ಮಾಡಿರುವುದು ಕೇದರನಾಥ ದೇವಾಲಯದಲ್ಲಿ!

ತುಂಬಾ ಪ್ಲ್ಯಾನ್ ಬಳಿಕ ಈ ದಿನ ಕನಸು ನನಸಾಗಿದೆ. (ಇದಕ್ಕಾಗಿ ಮ್ಯಾಚಿಂಗ್ ಬಟ್ಟೆ, ರಿಂಗ್‌ ಹಾಗೂ ಟ್ರಾವೆಲ್‌ ಪ್ಲ್ಯಾನ್) ಎಲ್ಲಾ ಮಾಡಿದ್ದೆ. ತಿಂಗಳ ಹಿಂದೆಯೇ ಪ್ಲ್ಯಾನ್ ಮಾಡಿದ್ದೆ , ಇದೀಗ ಮಂಡಿಯೂರಿ ನನ್ನವನ ಪ್ರಪೋಸ್ ಮಾಡುವ ಕ್ಷಣ, ಅದರಲ್ಲೂ ಸಮುದ್ರದಿಂದ 11,750 ಚದರ ಅಡಿ ಎತ್ತರವಿರುವ ಹಿಮಾಲಯ ಪರ್ವತದಲ್ಲಿರುವ ಕೇದರನಾಥ ದೇವಾಲಯದ ಮುಂದೆ ಪ್ರಪೋಸ್‌ ಮಾಡಿರುವ ಈ ಕ್ಷಣ ತುಂಬಾನೇ ಪವಿತ್ರ ಅನಿಸಿದೆ, ಬೋಲೇನಾಥನ ಅಶೀರ್ವಾದ ನಮ್ಮ ಮೇಲಿರಲಿ, ನಮ್ಮ ಖುಷಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ, ಈ ವೀಡಿಯೋವನ್ನು ಜೂನ್ 30, 2023ರಂದು ತೆಗೆಯಲಾಗಿದೆ ಎಂದು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಇವರು ಈ ರೀತಿ ಲವ್‌ ಪ್ರಪೋಸ್‌ ಮಾಡಿರುವುದು ಹಲವರಿಗೆ ಇಷ್ಟವಾಗಿಲ್ಲ, ಈ ಕುರಿತು ನೆಟ್ಟಿಗರು ತುಂಬಾನೇ ಕಮೆಂಟ್ ಮಾಡುತ್ತಿದ್ದಾರೆ. 'ಕೇದರನಾಥ ದೇವಾಲಯ ಎಂಬುವುದು ಭಕ್ತಿಯ ತಾಣ, ಇದು ಹನಿಮೂನ್‌ ಸ್ಪಾಟ್‌ ಅಲ್ಲ' ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ದೇವರ ಮುಂದೆ ಅವರ ಪವಿತ್ರ ಪ್ರೀತಿಯನ್ನು ನಿವೇದನೆ ಮಾಡಿಕೊಂಡಿದ್ದಾರೆ ಅದರಲ್ಲಿ ತಪ್ಪೇನು ಎಂದು ಕೂಡ ಹೇಳುತ್ತಿದ್ದಾರೆ. ಧಾರ್ಮಿಕ ಸ್ಥಳಗಳಿಗೆ ಹೋಗುವಾಗ ನಮ್ಮ ನಡವಳಿಕೆ ಕಡೆ ಗಮನ ಹರಿಸಿದರೆ ಒಳ್ಳೆಯದು, ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ ಹೌದು.

ಈ ಹಿಂದೆ ಚಂದನ್‌ಶೆಟ್ಟಿ ನಿವೇದಿತಾ ಗೌಡಗೆ ಮೈಸೂರು ದಸರಾ ಸಂದರ್ಭದಲ್ಲಿ ಪ್ರಪೋಸ್ ಮಾಡಿ ತೀವ್ರ ಟೀಕೆ ಎದುರಿಸಿದ್ದರು. ಫ್ಯಾಂಟಸಿ ಪ್ರಪೋಸ್‌ ನೋಡುವುದು , ಕೇಳುವುದು ಪ್ರತಿಯೊಬ್ಬರಿಗೆ ಇಷ್ಟವಾಗುವುದು, ಆದರೆ ಅಂತ ಪ್ರಪೋಸ್‌ಗೆ ಕೆಲವೊಂದು ಸ್ಥಳಗಳು ಸೂಕ್ತವಲ್ಲ ಎಂಬುವುದನ್ನು ಪ್ರೇಮಿಗಳು ಅರ್ಥಮಾಡಿಕೊಳ್ಳಬೇಕು. ಈಗಂತು ತಾವೇನೇ ಮಾಡಿದರೂ ಸೋಷಿಯಲ್‌ ಮೀಡಿಯಾದಲ್ಲಿ ಗಮನಸೆಳೆಯಬೇಕೆಂದು ಬಯಸುತ್ತಾರೆ, ಈ ಭರದಲ್ಲಿ ಎಡವಟ್ಟು ಆಗ್ತಾ ಇರುತ್ತದೆ.

ಧಾರ್ಮಿಕ ಸ್ಥಳ ಎಂದರೆ ಅದಕ್ಕೆ ಅದರದ್ದೇ ಆದ ಮಹತ್ವವಿರುತ್ತದೆ, ಅಲ್ಲಿ ಜನರು ಭಕ್ತಿಯಿಂದ ದೇವರನ್ನು ಬೇಡಿಕೊಳ್ಳಲು ಹೋಗಬೇಕು ಹೊರತು ಅಲ್ಲಿ ತಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ವೀಡಿಯೋ ಮಾಡಿ ಜಗತ್ತಿನ ಗಮನ ಸೆಳೆಯುವ ಪ್ರಯತ್ನ ಮಾಡಬಾರದು ಎಂಬುವುದು ಹಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು ತಿಳಿಸಿ...

English summary

Love Proposal In Kedarnath Temple Goes Viral: Nettigen Condemmed This Act

Viral Video: Love propose in Kedarnath Temple, people are opposing this type of act in sacred place, read on.
X
Desktop Bottom Promotion