Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಭಾರತೀಯರ ಯುವಕರ ಫೇವರೆಟ್ ಆಗಿದೆ ಈ ಸಿಚುವೇಷನ್ ರಿಲೇಷನ್‌ಶಿಪ್: ಬುನಾದಿಯೇ ಇಲ್ಲದ ಸಂಬಂಧವಿದು
ಸಿಚುವೇಷನ್‌ಶಿಪ್ ರಿಲೇಷನ್‌ಶಿಪ್ ಈ ವರ್ಷದಲ್ಲಿ ಅತ್ಯಂತ ಟ್ರೆಂಡ್‌ನಲ್ಲಿರುವ ರಿಲೇಷನ್‌ಶಿಪ್ ಆಗಿದೆ. ಈ ರಿಲೇಷನ್‌ಶಿಪ್ ವಿಶೇಷವೆಂದರೆ ಇದರಲ್ಲಿ ಯಾವುದೇ ಕಮಿಟ್‌ಮೆಂಟ್ ಇಲ್ಲ, ಇದರಲ್ಲಿ ನಮ್ಮ ಸಂಬಂಧ ಹೀಗೇ ಅಂತ ಹೇಳಲೂ ಸಾಧ್ಯವಿಲ್ಲ. ಈ ಸಂಬಂಧದಲ್ಲಿ ಯಾವುದೃ ಟ್ರ್ಯಾಪಿಂಗ್ ಇಲ್ಲ, ಎಮೋಷನ್‌ನಲ್ ಕನೆಕ್ಷನ್ ಇಲ್ಲ.

ಈ ಸಿಚುವೇಷನ್‌ಶಿಪ್ ರಿಲೇಷನ್‌ಶಿಪ್ ಒಂದು ಡೇಟಿಂಗ್‌ನಲ್ಲಿ ಮುಗಿಯಲೂಬಹುದು ಅಥವಾ ಸ್ವಲ್ಪ ಸಮಯ ಕಳೆದಂತೆ ಸಂಬಂಧ ಮತ್ತಷ್ಟು ಗಟ್ಟಿಯಾಗಲೂಬಹುದು, ಇತ್ತೀಚಿನ ದಿನಗಳಲ್ಲಿ ಸಿಂಗಲ್ ಆಗಿರುವವರು ಈ ಬಗೆಯ ರಿಲೇಷನ್‌ಶಿಪ್ ಇಷ್ಟಪಡುತ್ತಿದ್ದಾರೆ. ಇದಕ್ಕೆ ಮತ್ತೊಂದು ಕಾರಣ ಈ ಸಂಬಂಧ ತುಂಬಾ ಜೆನ್ಯೂಯನ್ ಆಗಿರುತ್ತೆ.
ಎಂಥ ಸಂಬಂಧವನ್ನು ಸಿಚುವೇಷನ್‌ಶಿಪ್ ಸಂಬಂಧ ಎಂದು ಕರೆಯಬಹುದು?
ನಿಮ್ಮ ಸಂಬಂಧದ ಬಗ್ಗೆ ಏನೆಂದು ಹೇಳಲು ಸಾಧ್ಯವಾಗದಿದ್ದರೆ: ನಿಮ್ಮಿಬ್ಬರ ನಡುವಿನ ಸಂಬಂಧಕ್ಕೆ ಏನೆಂದು ಒಂದು ಲೇಬಲ್ ಕೊಡಲು ಸಾಧ್ಯವಾಗುತ್ತಿಲ್ಲಎಂದಾದರೆ ನಿಮ್ಮದು ಸಿಚುವೇಷನ್‌ಶಿಪ್ ರಿಲೇಷನ್‌ಶಿಪ್ ಎಂದು ಹೇಳಬಹುದು. ಇಬ್ಬರು ಜೊತೆಯಾಗಿ ಸುತ್ತುತ್ತೀರಿ ಆದರೆ ಫ್ಯೂಚರ್ ಬಗ್ಗೆ ಏನೂ ಮಾತನಾಡುತ್ತಿಲ್ಲ ಎಂದಾದರೆ ನಿಮ್ಮದು ಸಿಚುವೇಷನ್‌ಶಿಪ್ ಎಂದು ಹೇಳಬಹುದು.
ಶಾರ್ಟ್ ಟೈಮ್ ಮೀಟಿಂಗ್ ಪ್ಲ್ಯಾನ್: ನಿಮ್ಮಿಬ್ಬರ ಭೇಟಿ ಒಂದು ದಿನಕ್ಕೆ ಅಥವಾ ಕೆಲವು ಗಂಟೆಗಷ್ಟೇ ಮೀಸಲಾಗಿದ್ದರೆ ಅದು ಸಿಚುವೇಷನ್‌ಶಿಪ್ ರಿಲೇಷನ್‌ಶಿಪ್ ಆಗಿದೆ.
ಕೆಲವೊಮ್ಮೆ ಆ ವ್ಯಕ್ತಿ ಬಗ್ಗೆ ಯಾವ ಸುದ್ದಿ ಇಲ್ಲದಿದ್ದರೆ: ನಾವು ಸಂಬಂಧದಲ್ಲಿ ಇರುವಾಗ ಪ್ರತಿದಿನ ಆ ವ್ಯಕ್ತಿ ಜೊತೆ ಮಾತನಾಡಲು, ಆಗಾಗ ಭೇಟಿ ಮಾಡಲು ಬಯಸುತ್ತೇವೆ. ಆದರೆ ಈ ಸಿಚುವೇಷನ್ ಸಂಬಂಧದಲ್ಲಿ ಇಬ್ಬರು ಚೆನ್ನಾಗಿ ಮಾತನಾಡುತ್ತಾರೆ, ನಂತರ ಕೆಲವು ದಿನಗಳವರೆಗೆ ಇಬ್ಬರು ಒಬ್ಬರನ್ನೊಬ್ಬರು ವಿಚಾರಿಸುವುದೂ ಇಲ್ಲ ಅಥವಾ ಒಬ್ಬ ವ್ಯಕ್ತಿಗೆ ಭೇಟಿಯಾಗಬೇಕೆಂಬ ಆಸಕ್ತಿ ಇರುತ್ತದೆ, ಆದರೆ ಮತ್ತೊಬ್ಬ ವ್ಯಕ್ತಿಗೆ ಆ ಬಗ್ಗೆ ಯಾವುದೇ ಆಸಕ್ತಿ ಇರಲ್ಲ, ಯಾವಾಗಾದರು ಒಮ್ಮೆ ತುಂಬಾ ಚೆನ್ನಾಗಿ ರೊಮ್ಯಾಂಟಿಕ್ ಆಗಿ ಮಾತನಾಡುತ್ತಾರೆ, ಆದರೆ ನಂತರ ಅವರ ಪತ್ತೆನೇ ಇರಲ್ಲ ಅಂತಾದರೆ ಅದು ಸಿಚುವೇಷನ್‌ಶಿಪ್ ರಿಲೇಷನ್‌ಶಿಪ್ ಆಗಿದೆ.
ಅವರ ಕುಟುಂಬಕ್ಕೆ ನಿಮ್ಮನ್ನು ಪರಿಚಯಿಸದೇ ಇದ್ದರೆ
ನಿಮ್ಮನ್ನು ಅವರ ಫ್ರೆಂಡ್ಸ್ ಹಾಗೂ ಕುಟುಂಬದವರಿಗೆ ಪರಿಚಯಿಸಲು ಹಿಂಜರಿಯುತ್ತಿದ್ದರೆ ಅಥವಾ ನಿಮ್ಮಿಬ್ಬರ ಸಂಬಂಧವನ್ನು ತುಂಬಾ ರಹಸ್ಯವಾಗಿಡಲು ಬಯಸುತ್ತಿದ್ದರೆ ಆ ಸಂಬಂಧ ಮುಂದುವರೆಯುವುದು ಡೌಟು...
ನಿಮ್ಮ ಸಂಬಂಧದ ಬಗ್ಗೆ ಗೊಂದಲವಿದ್ದರೆ
ನಿಮ್ಮ ಸಂಬಂಧದ ಬಗ್ಗೆ ನಿಮಗೇ ಸಾಕಷ್ಟು ಗೊಂದಲ ಅಂದರೆ ಈ ಸಂಬಂಧ ಮುಂದುವರೆಸುವುದೇ , ಬೇಡ್ವೆ ಎಂಬ ಕ್ಲಾರಿಟಿ ಇಲ್ಲದಿದ್ದರೆ ನಿಮ್ಮದು ಸಿಚುವೇಷನ್‌ಶಿಪ್ ರಿಲೇಷನ್‌ಶಿಪ್ ಎಂದು ಹೇಳಬಹುದು.



Click it and Unblock the Notifications

