Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
Kiss Day 2023 : ಮಧುರ ಚುಂಬನದಲ್ಲಿ ಅಡಗಿದೆ ದಾಂಪತ್ಯ ರಹಸ್ಯ
ಒಂದು ಬಿಸಿ ಅಪ್ಪುಯೊಂದಿಗೆ ನೀಡುವ ಸಿಹಿ ಮುತ್ತು ಸಾಕು, ಇಬ್ಬರ ನಡುವಿನ ಬಂಧ ಗಟ್ಟಿಯಾಗಿಸಲು. ಅಷ್ಟೊಂದು ಶಕ್ತಿ ಮುತ್ತಿಗಿದೆ. ಮುತ್ತು ಎಂದರೆ ಅದರಲ್ಲಿ ಬರೀ ರೊಮ್ಯಾನ್ಸ್ ಮಾತ್ರ ಇರುವುದಲ್ಲ, ಅದರಲ್ಲಿ ಅಕ್ಕರೆಯಿದೆ, ನಂಬಿಕೆಯಿದೆ.

ತುಂಬಾ ದುಃಖದಲ್ಲಿದ್ದಾಗ ಅಥವಾ ಹುಷಾರಿಲ್ಲದಿದ್ದಾಗ ಸಂಗಾತಿ ನಮ್ಮ ಹಣೆಗೆ ನೀಡುವ ಒಂದು ಚುಂಬನ ಸಾಕು ನಮ್ಮಲ್ಲಿ ಹೊಸ ಚೈತನ್ಯ ತುಂಬಲು. ಇನ್ನು ದಾಂಪತ್ಯ ಸುಖಕ್ಕೆ ಮೊದಲ ಹೆಜ್ಜೆಯೇ ಮುತ್ತು. ಗಂಡು-ಹೆಣ್ಣು ಪರಸ್ಪರ ತಬ್ಬಿಕೊಂಡು ಮುತ್ತಿಕ್ಕಿದ್ದಾಗ ಇಬ್ಬರ ದೇಹಗಳ ಬೆಸೆಯಬೇಕೆಂಬ ಹಂಬಲ ಹೆಚ್ಚುವುದು, ನಿಮ್ಮಿಬ್ಬರ ಬಂಧದಲ್ಲಿ ರೊಮ್ಯಾನ್ಸ್ ಹೆಚ್ಚಿಸುವುದೇ ಮತ್ತೇರಿಸುವ ಈ ಮುತ್ತು.
ದಾಂಪತ್ಯದಲ್ಲಿ ಈ ಕಾರಣಕ್ಕೆ ಪರಸ್ಪರ ಮುತ್ತಿಕ್ಕುವುದು ತುಂಬಾನೇ ಅವಶ್ಯಕವಾಗಿದೆ
ಇಬ್ಬರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ
ಕಿಸ್ ನಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ನಮ್ಮನ್ನು ಗಟ್ಟಿಯಾಗಿಸುತ್ತದೆ. ಇಬ್ಬರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುವಂತೆ ಮಾಡಿ ಲೈಂಗಿಕ ತೃಪ್ತಿ ಸಿಗುವಂತಾಗಲು ರೊಮ್ಯಾಂಟಿಕ್ ಕಿಸ್ ತುಂಬಾನೇ ಅವಶ್ಯಕ.
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಮುತ್ತಿಕ್ಕಿದ್ದಾಗ ಮನಸ್ಸಿಗೆ ತುಂಬಾನೇ ಖುಷಿಯಾಗುವುದು, ಆ ಕ್ಷಣ ಎಲ್ಲಾ ಮರೆತು ಮುತ್ತಿನ ಸುಖದಲ್ಲಿ ತೇಲಾಡುತ್ತೇವೆ, ಆದ್ದರಿಂದ ಮುತ್ತಿಗೆ ಮಾನಸಿಕ ಒತ್ತಡ ಕಡಿಮೆ ಮಾಡುವ ಸಾಮರ್ಥ್ಯ ಇದೆ ಎಂದು ಹೇಳಲಾಗುವುದು.
ನಂಬಿಕೆ ಹೆಚ್ಚಿಸುತ್ತದೆ
ಪ್ರತಿಬಾರಿ ಸಂಗಾತಿ ನೀಡುವ ಸಿಹಿ ಮುತ್ತು ಅವರು ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದಾರೆ ಎಂಬುವುದನ್ನು ಸಾರಿ ಹೇಳುತ್ತದೆ, ಆದ್ದರಿಂದ ಸಂಗಾತಿ ಮೇಲೆ ನಂಬಿಕೆ ಮತ್ತಷ್ಟು ಹೆಚ್ಚಾಗುವುದು.
ಕಿಸ್ ಎಂಬುವುದು ಖುಷಿ ಕೊಡುತ್ತದೆ
ಕೆನ್ನೆಗೆ ನೀಡುವ ಮುತ್ತು ಆತ್ಮೀಯತೆ ಹೆಚ್ಚಿಸಿದರೆ ತುಟಿಗೆ ನೀಡುವ ಕಿಸ್ ತುಂಬಾನೇ ಖುಷಿ ಕೊಡುತ್ತದೆ, ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ತುಟಿಗೆ ತುಟಿ ಒತ್ತಿದರೆ ಆ ಕ್ಷಣ ಇಬ್ಬರಿಗೂ ತುಂಬಾನೇ ಖುಷಿ ಕೊಡುತ್ತದೆ, ಒಬ್ಬರಿಗೊಬ್ಬರು ಬೇಕೆಂಬ ಆಸೆ ಮೂಡಿಸುತ್ತದೆ.



Click it and Unblock the Notifications

