ಬ್ರೇಕಪ್‌ ಆದರೂ ಅವರ ನೆನಪುಗಳು ಮಾಸಲ್ಲ, ಏಕೆ ಗೊತ್ತಾ?

ಲವ್ ಬ್ರೇಕ್ ಅಪ್ ಆದ ಮೇಲೆ ಅದರ ನೋವುಗಳು ಬೇಗ ಗುಣವಾಗುವುದಿಲ್ಲವೇಕೆ? ಮನಶಾಸ್ತ್ರ ಹೇಳುವುದೇನು?
ಪ್ರೀತಿ ಅನ್ನೋದು ನಂಬಿಕೆಯ ಮೇಲೆ ಹುಟ್ಟಿಕೊಳ್ಳುವ ಒಂದು ಸಂಬಂಧ. ಪ್ರೀತಿ ಯಾರ ಮೇಲೆ ಯಾವಾಗ ಹುಟ್ಟಿಕೊಳ್ಳುತ್ತದೆ ಎಂದು ಹೇಳಲು ಅಸಾಧ್ಯ. ಇದ್ದಕ್ಕಿದ್ದಂತೆ ಯಾರೋ ಇಷ್ಟವಾಗಿ ಬಿಡುತ್ತಾರೆ, ಬಹುವಾಗಿ ಆಕರ್ಷಿಸಿ ಬಿಡುತ್ತಾರೆ.

ಆದರೆ ಅನೇಕ ಪ್ರೀತಿಗಳು ಹುಟ್ಟಿದ ಕೊಂಚ ತಿಂಗಳಲ್ಲೇ ಸಾಯುತ್ತದೆ. ಇನ್ನು ಕೆಲವು ಪ್ರೀತಿಗಳು ದೀರ್ಘಕಾಲದವರೆಗೆ ಇದ್ದು ಅಂತ್ಯ ಕಾಣುತ್ತದೆ. ಪ್ರೀತಿಯಲ್ಲಿ ಬ್ರೇಕ್ ಅಪ್ ಆಗುವುದು ಸಹಜ, ಆದರೆ ಅದರ ನೋವು ಮಾತ್ರ ನಿಜಕ್ಕೂ ಹೇಳತೀರದ್ದು. ಆ ಹ್ಯಾಂಗೋವರ್​ನಿಂದ ಹೊರ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ.

ಹಾಗಾದರೆ ಪ್ರೀತಿಯಲ್ಲಿ ಬ್ರೇಕ್ ಅಪ್ ಆದ ಬಳಿಕ ಏಕೆ ತೀವ್ರ ನೋವು ಆಗುತ್ತದೆ? ಮತ್ತೆ ಮತ್ತೆ ಏಕೆ ನಮಗೆ ನಮ್ಮ ಸಂಗಾತಿಯ ನೆನಪಾಗುತ್ತದೆ? ಆ ನೋವು ಬೇಗ ಆರುವುದಿಲ್ಲ ಏಕೆ? ಈ ಬಗ್ಗೆ ಮನಶಾಸ್ತ್ರ ಏನು ಹೇಳುತ್ತದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

1. ಬ್ರೇಕಪ್ ಬಳಿಕ ನಿಮ್ಮ ಪ್ರೈಮರಿ ಸಪೋರ್ಟ್ ಕಳೆದುಕೊಳ್ಳುತ್ತೀರಿ!

1. ಬ್ರೇಕಪ್ ಬಳಿಕ ನಿಮ್ಮ ಪ್ರೈಮರಿ ಸಪೋರ್ಟ್ ಕಳೆದುಕೊಳ್ಳುತ್ತೀರಿ!

ಪ್ರೀತಿ ಅಂದರೆ ಭಾವನೆ ಎಂದರ್ಥ. ನಾವು ಪ್ರೀತಿಯಲ್ಲಿದ್ದಾಗ ನಮ್ಮ ಸಂಗಾತಿ ಜೊತೆ ಭಾವನೆ ಹಂಚಿಕೊಂಡಿರುತ್ತೇವೆ. ಯಾವಾಗ ಬ್ರೇಕ್ ಅಪ್ ಆಗುತ್ತದೋ ನಮ್ಮ ಭಾವನೆಯ ಕೊಂಡಿ ಕಳಚಿ ಬೀಳುತ್ತದೆ. ಮನಶಾಸ್ತ್ರಜ್ಞರು ಹೇಳುವ ಪ್ರಕಾರ, ಬ್ರೇಕ್ ಅಪ್ ಆದರೆ ನಾವು ನಮ್ಮ ಪ್ರೈಮರಿ ಸಪೋರ್ಟ್ ಕಳೆದುಕೊಳ್ಳುತ್ತೃವೆ. ಹೀಗಾಗಿ ಆ ನೋವು ನಮಗೆ ಎಂದಿಗೂ ಕಾಡುತ್ತದೆ ಎನ್ನುತ್ತಾರೆ. ಉದಾಹರಣೆಗೆ ನಾವು ನಮ್ಮ ಸಂಗಾತಿಯ ಜೊತೆ ತೀವ್ರ ತರದ ಪ್ರೇಮದಲ್ಲಿ ಇರುತ್ತೇವೆ. ಸಂಗಾತಿಯೊಂದಿಗೆ ವಾಸಿಸುತ್ತೀರಿ, ಏನೇ ಮಾಡಿದರು ಅವರ ಹತ್ತಿರ ಹೇಳುತ್ತೀರಿ. ಏನು ಮಾಡುವುದಿದ್ದರೂ ಅವರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೀರಿ.

ಖುಷಿ ಇರಲಿ, ನೋವು ಇರಲಿ, ಒಪಿನಿಯನ್ ಪಡೆದುಕೊಳ್ಳುವುದಾಗಲಿ ಎಲ್ಲವೂ ಮಾಡಿತ್ತೀರಿ. ಹೀಗಿದ್ದಾಗ ಆ ಪ್ರೀತಿ ಬ್ರೇಕ್ ಅಪ್ ಆದರೆ ತುಂಬಾ ನೋವು ಪಡುತ್ತೀರಿ. ಏಕೆಂದರೆ ಲವ್ ಬ್ರೇಕ್ ಅಪ್ ಬಳಿಕ ನಿಮ್ಮ ಖುಷಿ, ನಿಮ್ಮ ನೋವು ಹಂಚುತ್ತಿದ್ದ ವ್ಯಕ್ತಿ ನಿಮ್ಮ ಜೊತೆ ಇರುವುದಿಲ್ಲ. ಆ ವ್ಯಕ್ತಿ ಜೊತೆ ಹಂಚಿಕೊಂಡಂತೆ ಬೇರೆ ಯಾರ ಜೊತೆ ನಿಮಗೆ ಖುಷಿ-ನೋವು ಹಂಚಿಕೊಳ್ಳಲು ಆಗುವುದಿಲ್ಲ. ನಿಮ್ಮದು ಮೈಂಡ್ ಟು ಮೈಂಡ್ ಕನೆಕ್ಷನ್ ಇರುತ್ತದೆ.

ಹೀಗಾಗಿ ನಾವು ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾಗ ನಮ್ಮ ಪಾರ್ಟ್ನರ್ ಈಗ ಇಲ್ಲವೆಂದಾಗ ನಮಗೆ ಸಪೋರ್ಟ್ ಇಲ್ಲವೆಂದು ಅಂದುಕೊಳ್ಳುತ್ತೇವೆ. ಇದು ನಮ್ಮನ್ನು ಮತ್ತೆ ಮತ್ತೆ ಕುಗ್ಗಿಸುತ್ತದೆ. ಕೆಲವು ಬಾರಿ ಈ ಟೈಂ ನಲ್ಲಿ ನನ್ನ ಲವರ್ ಇರುತ್ತಿದ್ದರೆ ಒಳ್ಳೆಯದಿತ್ತು ಎಂದು ಅನೇಕರು ಬ್ರೇಕ್ ಅಪ್ ಬಳಿಕ ಅಂದುಕೊಂಡಿರುತ್ತಾರೆ ಅಥವಾ ಮದುವೆ ಬಳಿಕವೂ ಕೆಲವರು ಅಂದುಕೊಳ್ಳುತ್ತಾರೆ. ಆ ನನ್ನ ಲವರ್ ತುಂಬಾ ಕೇರ್ ಮಾಡುತ್ತಿದ್ದಳು ಎಂದು ಅಂದುಕೊಳ್ಳುತ್ತಾರೆ. ಹೀಗೆ ಕೆಲವೊಂದು ಘಟನೆಗಳು ಹಳೇ ಲವರ್ ಹಾಗೂ ಅವರ ಸಪೋರ್ಟ್ ಬಗ್ಗೆ ನೆನಪಿಸುತ್ತದೆ.

2. ಬ್ರೇಕ್ ಅಪ್ ಬಳಿಕ ನಿಮ್ಮ ಬಗ್ಗೆ ನಿಮಗೆ ಅನುಮಾನ!

2. ಬ್ರೇಕ್ ಅಪ್ ಬಳಿಕ ನಿಮ್ಮ ಬಗ್ಗೆ ನಿಮಗೆ ಅನುಮಾನ!

ಪ್ರೀತಿ ಎಂದರೆ ಆಗಲೇ ಹೇಳಿದ ಹಾಗೇ ಭಾವನೆಗಳ ಬಂಧ ಅದು. ಒಂದು ಬಾರಿ ಪ್ರೀತಿಗೆ ಧುಮುಕಿದರೆ ಇಬ್ಬರು ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಅವಳು ನನ್ನ ಜಗತ್ತು , ಅವನು ನನ್ನ ಜಗತ್ತು ಎಂದು ಅಂದುಕೊಂಡು ಬಾಳುತ್ತಾರೆ. ಖುಷಿ, ನೋವು ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ತಮ್ಮ ಚಲ, ತಮ್ಮ ಆಸೆ, ತಮ್ಮ ಭವಿಷ್ಯದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಆಗ ಇಬ್ಬರು ಒಂದು ಹೃದಯದಂತೆ ಬಾಳುತ್ತಿರುತ್ತಾರೆ. ಇದು ಏನಾಗುತ್ತದೆ ಅಂದರೆ ಅನೇಕ ವಿಚಾರಗಳು ಇಬ್ಬರ ಮೇಲೂ ಹೇರಿಕೆಯಾಗುತ್ತದೆ ಅಂದರೆ ಇಬ್ಬರ ಖುಷಿ, ಇಬ್ಬರ ನೋವು, ಇಬ್ಬರ ನಲಿವು, ಇಬ್ಬರ ಗುರಿ ಒಂದೇ ಆಗಿರುತ್ತದೆ.

ಇದು ಮನಶಾಸ್ತ್ರದಲ್ಲಿ ಹೇಳಬೇಕಾದರೆ ಮೈಂಡ್ ಮೂಲಕ ಇಬ್ಬರು ಒಂದೇ ಯೋಚನೆಯನ್ನು ಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಈ ಪ್ರೇಮದಲ್ಲಿ ಬಿರುಕು ಬಿದ್ದರೆ ಅಥವಾ ಈ ಪ್ರೇಮ ಅಂತ್ಯವಾದರೆ ನಿಜಕ್ಕೂ ಇಬ್ಬರು ದುಖಃಪಡುತ್ತಾರೆ. ತಾವು ಈ ಜಗತ್ತಿನಲ್ಲಿ ಒಬ್ಬಂಟಿ ಎಂದಾಗುತ್ತಾರೆ. ತಮ್ಮ ಬಗ್ಗೆ, ತಮ್ಮ ವ್ಯಕ್ತಿತ್ವದ ಬಗ್ಗೆ ತಮಗೆ ಅರಿವೇ ಇರುವುದಿಲ್ಲ. ತಮ್ಮ ಗುರಿ ಏನು? ತಾವು ಏನು ಮಾಡಬೇಕು ಎನ್ನುವುದು ತೋಚುವುದೇ ಇಲ್ಲ.

ಇದೇ ಕಾರಣಕ್ಕೆ ಅನೇಕ ಪ್ರೇಮಿಗಳು ಆತ್ಮಹತ್ಯೆ ಕೂಡ ಮಾಡುವುದುಂಟು. ಪ್ರೀತಿಯಿಂದಾಗಿ, ಪ್ರೀತಿಯಲ್ಲಿ ತೀವ್ರ ಬೆರೆತಿರುವುದರಿಂದಾಗಿ ತಮಗೆ ವಾಸ್ತವದ ಅರಿವು ಗೊತ್ತಿರುವುದಿಲ್ಲ. ತಾವು ಯಾರು ಎಂಬುವುದನ್ನು ಕೂಡ ಮರೆತಿರುತ್ತಾರೆ. ಇದು ಬ್ರೇಕ್ ಅಪ್ ಆದ ಬಳಿಕ ದೊಡ್ಡ ನೋವುಂಟು ಮಾಡುತ್ತದೆ. ಇದೇ ಕಾರಣಕ್ಕೆ ಬ್ರೇಕ್ ಅಪ್ ಆದ ಬಳಿಕ ಈ ನೋವನ್ನು ಬೇಗ ಗುಣ ಮಾಡಲು ಸಾಧ್ಯವಿಲ್ಲ.

3.ನಿಮ್ಮ ದೇಹದಲ್ಲಿ ಬದಲಾಗಿದೆ ಎಂದೆನಿಸುತ್ತದೆ!

3.ನಿಮ್ಮ ದೇಹದಲ್ಲಿ ಬದಲಾಗಿದೆ ಎಂದೆನಿಸುತ್ತದೆ!

ನೀವಿಗ ಒಬ್ಬ ವ್ಯಕ್ತಿಯನ್ನು ಟ್ರೂ ಆಗಿ ಡೇಟಿಂಗ್ ಮಾಡುತ್ತಿದ್ದೀರಿ ಎಂದು ಅಂದುಕೊಳ್ಳಿ. ಆಗ ನಿಮ್ಮ ದೇಹವು ಅವರಿಗೆ ಹೊಂದಿಕೊಳ್ಳುತ್ತದೆ. ನಿಮ್ಮ ಸಂಗಾತಿಯ ಪ್ರೆಸೆನ್ಸ್ ಗೆ ನಿಮ್ಮ ದೇಹ ಕಾಯುತ್ತಿರುತ್ತದೆ. ಅಲ್ಲದೇ ನಿಮ್ಮ ದೇಹ ಅವರ ಜೊತೆಗೂಡುತ್ತದೆ. ಅಲ್ಲದೇ ನಿಮ್ಮ ಸಂಪೂರ್ಣ ಜೈವಿಕ ಲಯವು ಅವರ ದೇಹದೊಂದಿಗೆ ಬದಲಾಗುತ್ತದೆ. ಇನ್ನು ನಿಮ್ಮ ದೇಹವೂ ಅವರ ದೇಹವೂ ಒಂದೇ ಎಂದು ಅನೇಕರಿಗೆ ಫೀಲ್ ಆಗುತ್ತದೆ.

ಉದಾಹರಣೆಗೆ ನಿಮಗೆ ನಿದ್ದೆ ಬರುತ್ತಿದೆ ಎಂದು ನಿಮ್ಮ ದೇಹವು ಹೇಳುತ್ತದೆ ಆಗ ನೀವು ನೇರವಾಗಿ ಹೋಗಿ ಮಲಗುತ್ತೀರಿ. ಇದೇ ರೀತಿ ನಿಮ್ಮ ಸಂಗಾತಿಯ ಶರೀರ, ಅದರ ಭಾಗಗಳನ್ನು ನಿಮ್ಮ ದೇಹ ಸುಲಭವಾಗಿ ಪತ್ತೆ ಹಚ್ಚುತ್ತದೆ. ಆ ದೇಹದೊಂದಿಗೆ ಬೆರೆತುಕೊಳ್ಳಲು ಬಯಸುತ್ತದೆ. ಹೀಗೆ ಅನೇಕ ವಿಚಾರಗಳಲ್ಲಿ ನಿಮ್ಮ ದೇಹ ನಿಮ್ಮ ಸಂಗಾತಿಯ ದೇಹಕ್ಕೆ ಒಗ್ಗಿಕೊಂಡಿರುತ್ತದೆ. ಇನ್ನು ಅದಕ್ಕೆ ಕಾರಣ ಕೂಡ ಇದೆ. ಯಾಕೆಂದರೆ ನೀವು ಪ್ರೇಮದಲ್ಲಿದ್ದಾಗ, ನೀವು ಆಲ್ ಮೋಸ್ಟ್ ಒಟ್ಟಿಗೆ ಇರುತ್ತೀರಿ. ಬೆಳಗ್ಗೆ ಬೆಡ್ ನಿಂದ ಏಳುವಾಗ ನಿಮ್ಮ ಸಂಗಾತಿ ಕಾಫಿ ತಂದುಕೊಡುತ್ತದೆ ಅದನ್ನು ಕುಡಿಯಲು ನಿಮ್ಮ ದೇಹ ತಯಾರಾಗುತ್ತದೆ.

ಇನ್ನು ನೀವು ಏನಾದರೂ ತಯಾರಿಸುವಾಗ ನಿಮ್ಮ ಸಂಗಾತಿಗೂ ತಯಾರಿಸುತ್ತೀರಿ. ನಿಮ್ಮ ಸಂಗಾತಿ ಬೆಡ್ ನಲ್ಲಿ ಮಲಗಿದ್ದಾಗ ಅವರ ಹತ್ತಿರ ಹೋಗಿ ಸಹಜವಾಗಿ ಮಲಗುತ್ತೀರಿ. ಈ ಎಲ್ಲಾ ಘಟನೆಗಳು ನಿಮ್ಮ ದೇಹಕ್ಕೆ ಫೆಮಿಲಿಯರ್ ಆಗಿರುತ್ತದೆ. ಎರಡು ದೇಹಗಳು ಇಬ್ಬರನ್ನು ಅರ್ಥಮಾಡಿಕೊಂಡಿರುತ್ತದೆ. ಇನ್ನು ಬ್ರೇಕ್ ಅಪ್ ಆದಾಗ ಸಹಜವಾಗೇ ಇದೆಲ್ಲ ನಿಮ್ಮ ದೇಹಕ್ಕೆ ಹರ್ಟ್ ಮಾಡುತ್ತದೆ. ಅಂದರೆ ಅವಾಗ ನಿಮ್ಮ ಸಂಗಾತಿ ಕಾಫಿ ಕೊಡುತ್ತಿದ್ದರೆ ಈಗ ನೀವು ಕಾಫಿ ಮಾಡಬೇಕು. ಇದು ದೇಹವನ್ನು ಕಟ್ಟಿ ಹಾಕಿದಂತಹ ಅನುಭವ ನೀಡುತ್ತದೆ. ನಿಮ್ಮ ದೇಹವೂ ಬ್ರೇಕ್ ಅಪ್ ಬಳಿಕ ಮಲಗಲು ಹಿಂದೇಟು ಹಾಕುತ್ತದೆ ಯಾಕೆಂದರೆ ನಿಮ್ಮ ಪಕ್ಕ ನಿಮ್ಮ ಸಂಗಾತಿ ಇಲ್ಲ ಎಂದು ದೇಹ ಹೇಳುತ್ತದೆ. ಇನ್ನು ಎಲ್ಲಾ ಕೆಲಸದಲ್ಲಿ ನಿಮ್ಮ ಸಂಗಾತಿ ನಿಮಗೆ ಸಹಾಯ ಮಾಡುತ್ತಿದ್ದರೆ, ಈ ವೇಳೆ ನಿಮಗೆ ಯಾವುದೇ ಸಹಾಯವಿಲ್ಲದಾಗ ಮತ್ತೆ ನಿಮ್ಮ ದೇಹ ನಿಮ್ಮ ಹಳೆಯ ಸಂಗಾತಿಯನ್ನು ನೆನಪು ಮಾಡಿಸುತ್ತದೆ.

ಹೀಗೆ ದೇಹಕ್ಕೂ ಮನಸ್ಸಿಗೂ ಕನೆಕ್ಷನ್ ಇರುವುದರಿಂದ ದೇಹವೂ ನಿಮ್ಮನ್ನು ನಿಮ್ಮ ಸಂಗಾತಿಯನ್ನು ಮರೆಯಲು ಬಿಡುವುದಿಲ್ಲ. ಆ ನೋವನ್ನು ಹಾಗೇ ಉಳಿಸುತ್ತದೆ.

4. ಭವಿಷ್ಯದ ಚಿಂತೆ ಕಾಡುತ್ತದೆ!

4. ಭವಿಷ್ಯದ ಚಿಂತೆ ಕಾಡುತ್ತದೆ!

ನೀವು ಸಿರೀಯಸ್ ರಿಲೇಶನ್ ಶಿಪ್ ನಲ್ಲಿದ್ದರೆ ಇಲ್ಲಿ ಇಬ್ಬರ ಯೋಚನೆ, ಇಬ್ಬರ ಗುರಿ ಒಂದೇ ಆಗಿರುತ್ತದೆ. ನೀನು ಬೇರೆ ಅಲ್ಲ ನಾನು ಬೇರೆ ಅಲ್ಲ ಎಂದು ಇಬ್ಬರು ಇರುತ್ತಾರೆ. ಹೀಗಾಗಿ ಬ್ರೇಕ್ ಅಪ್ ಆದರೆ ಅಂತಹ ಅನೇಕ ಸಮಸ್ಯೆಗಳು ನಿಮಗೆ ಕಾಡುತ್ತದೆ. ಉದಾಹರಣೆ ನಿಮ್ಮ ಪ್ರೇಮ ಪಿಯುಸಿಯಿಂದ ಆರಂಭವಾಗುತ್ತದೆ ಅಂದುಕೊಳ್ಳಿ. ನೀವು ತೀವ್ರವಾಗಿ ಪ್ರೀತಿಯಲ್ಲಿ ಜಾರಿರುತ್ತೀರಿ.

ನೀವು ನಂತರ ಒಟ್ಟಿಗೆ ಡಿಗ್ರಿ ಮಾಡಿ ಬೆಂಗಳೂರಂತ ಸಿಟಿಯಲ್ಲಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುವ ಫ್ಲ್ಯಾನ್ ನಲ್ಲಿ ಇರುತ್ತೀರಿ ಎಂದುಕೊಳ್ಳೋಣಾ. ಆದರೆ ಡಿಗ್ರಿಯ ಕೊನೆ ಹಂತದಲ್ಲಿ ನಿಮ್ಮ ಪ್ರೀತಿ ಮುರಿದುಬೀಳುತ್ತದೆ. ಈ ವೇಳೆ ನೀವು ನಿಜಕ್ಕೂ ಒಬ್ಬಂಟಿಯಾಗಿ ಹೋಗುತ್ತೀರಿ. ಮುಂದೆ ಏನು ಮಾಡಬೇಕು ಅನ್ನೋದು ದೋಚದಾಗುತ್ತೀರಿ. ನೀವು ಯೋಚಿಸಿದ ಭವಿಷ್ಯವೊಂದು ಇದೀಗ ನಡೆಯುತ್ತಿರುವ ಒಂದು ಎಂದು ನಿಮ್ಮ ಕಣ್ಣ ಮುಂದೆ ಬರುತ್ತದೆ.

ಇದು ನಿಮ್ಮಲ್ಲಿ ಒತ್ತಡ, ನೋವು ತರುತ್ತದೆ. ಆದರೂ ನೀವು ಭವಿಷ್ಯದ ದೃಷ್ಟಿಯಿಂದ ಮುಂದಿನ ಹೆಜ್ಜೆ ಇಡಲು ಮುಂದಾಗುತ್ತೀರಿ ಅದು ನಿಮಗೆ ತೀವ್ರ ಕಷ್ಟವನ್ನು ತಂದಿಡುತ್ತದೆ. ಈ ವೇಳೆ ಪದೇ ಪದೇ ನಿಮ್ಮ ಹಳೆಯ ಪ್ರೇಮ ಹಾಗೂ ಅದರ ನೋವನ್ನು ನೆನಪಿಸುತ್ತದೆ.

5. ನೆನಪುಗಳು ಮತ್ತೆ ನೋವು ತರುತ್ತದೆ!

5. ನೆನಪುಗಳು ಮತ್ತೆ ನೋವು ತರುತ್ತದೆ!

ಪ್ರೀತಿ ಎಂದರೆ ಭಾವನೆ. ಅದು ಹೃದಯ ಹಾಗೂ ಮೈಂಡ್ ನಡುವೆ ಮೂಡಿಸುವ ಕನೆಕ್ಷನ್. ಹೀಗೆ ನೀವು ಟ್ರೂ ಆಗಿ ಲವ್ ಮಾಡಿದ್ದರೆ ನಿಮಗೆ ನಿಮ್ಮ ಹಳೆ ಸಂಗಾತಿ ಹಾಗೂ ಅದರ ನೋವು ತೀವ್ರವಾಗಿ ಕಾಡುತ್ತದೆ. ಅದ್ಯಾಕೆ ಅಂದರೆ ನಿಮ್ಮ ಮತ್ತು ಅವರ ನಡುವೆ ನಡೆದ ಅನೇಕ ನೆನಪುಗಳು ನಿಮಗೆ ಮತ್ತೆ ರಿಕ್ರಿಯೇಟ್ ಆಗುತ್ತದೆ. ಉದಾಹರಣೆಗೆ ನೀವು ನಿಮ್ಮ ಸಂಗಾತಿ ಜೊತೆಗೆ ಒಂದು ಸುಂದರ ಸ್ಥಳಕ್ಕೆ ಹೋಗಿರುತ್ತೀರಿ ಎಂದುಕೊಳ್ಳಿ. ಅದು ನೀವು ಕಳೆದ ಬೆಸ್ಟ್ ಸಮಯ ಆಗಿರುತ್ತದೆ.

ಹೀಗಾಗಿ ಇದನ್ನು ಮೈಂಡ್ ಹಾಗೂ ಹೃದಯ ಕ್ಯಾಪ್ಚರ್ ಮಾಡಿರುತ್ತದೆ. ನೀವು ಬ್ರೇಕ್ ಅಪ್ ಆದ ಬಳಿಕ ಮತ್ತೆ ಆ ಸ್ಥಳಕ್ಕೆ ಹೋದಾಗ ಮೈಂಡ್ ಹಾಗೂ ಹೃದಯ ಮತ್ತೆ ನಿಮಗೆ ಈ ಜಾಗ್, ನಿಮ್ಮ ಪ್ರೀತಿಯ ಬಗ್ಗೆ ರಿಮೈಂಡ್ ಮಾಡುತ್ತದೆ. ಹೀಗಾಗಿ ನಿಮ್ಮ ಹಳೆ ನೆನಪುಗಳನ್ನು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ನೋವುಗಳು ಬೇಗ ಮಾಸಿ ಹೋಗುವುದಿಲ್ಲ. ಸಂತಸದ ಕ್ಷಣಗಳು ಶಾಶ್ವತವಾಗಿರುತ್ತದೆ. ಅದಕ್ಕೆ ಮನಶಾಸ್ತ್ರ ಕೂಡ ಕಾರಣ.

English summary

Why It is Difficult to Heal After a Breakup ;Psychology Explains in kannada

Why It is Difficult to Heal After a Breakup ;Psychology Explains in kannada, Read on...
X
Desktop Bottom Promotion