Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಎಂಥ ಪುರುಷ ನ ಕಡೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ ಗೊತ್ತಾ? ಅವನ ಹಣವಲ್ಲ, ರೂಪವಂತೂ ಅಲ್ವೇ ಅಲ್ಲ...
ಮಹಿಳೆಗೆ ಪುರುಷ ಆಕರ್ಷಕವಾಗಿ ಕಾಣಲು ಅಥವಾ ಪುರುಷನಲ್ಲಿರುವ ಯಾವ ಅಂಶಗಳು ಮಹಿಳೆಯರನ್ನು ಆಕರ್ಷಿಸುತ್ತದೆ ಎಂಬುವುದಾಗಿ ಅನೇಕ ಪುರುಷರು ತಮ್ಮ ಗ್ಯಾಂಗ್ ಜೊತೆ ಚರ್ಚೆ ಮಾಡಿರುತ್ತೀರಿ. ಕೆಲವರು ಲುಕ್, ಇನ್ನು ಕೆಲವರು ಹಣ ಎಂದೆಲ್ಲಾ ಹೇಳಿರಬಹುದು ಅಲ್ವಾ? ಆದರೆ ಇದಕ್ಕೂ ಮೀರಿ ಪುರುಷರಲ್ಲಿರುವ ಕೆಲವೊಂದು ಅಂಶಗಳು ಅಥವಾ ಗುಣಗಳು ಮಹಿಳೆಯರನ್ನು ತುಂಬಾನೇ ಆಕರ್ಷಿಸುತ್ತದೆ ಎಂಬುವುದು ಗೊತ್ತೇ?
ಆ ಅಂಶಗಳು ಯಾವುದೆಪ್ಪಾ ಎಂಬ ಕುತೂಹಲವೇ ಹಾಗಾದರೆ ಈ ಲೇಖನ ಓದಿ:

ಅವರು ಅಪ್ರೋಚ್ ಮಾಡುವ ರೀತಿ
ಪುರುಷರು ಮಹಿಳೆಯರ ಜೊತೆ ಬಂದು ಮಾತನಾಡುವಾಗ ಅವರು ಮಾತನಾಡುವ ಧಾಟಿಯನ್ನು ಮಹಿಳೆಯರು ಗಮನಿಸುತ್ತಾರೆ, ಅದರಲ್ಲಿಯೇ ಅವರೆಂಥಾ ಜಂಟಲ್‌ಮ್ಯಾನ್ ಎಂಬುವುದನ್ನು ಅಳೆಯುತ್ತಾರೆ. ನಿಮ್ಮ ಲುಕ್‌ಗಿಂತ ನಿಮ್ಮ ಮಾತಿನ ಶೈಲಿಗೆ ಮೋಡಿಗೊಳಗಾಗುತ್ತಾರೆ. ನೀವೇ ಗಮನಿಸಿ ತುಂಬಾ ಚೆನ್ನಾಗಿ ಮಾತನಾಡುವವನ ಜೊತೆ ಮಹಿಳೆಯರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ.

ಸ್ವಗೌರವ
ಯಾವ ಪುರುಷ ಸ್ವಗೌರವಕ್ಕೆ ತುಂಬಾನೇ ಬೆಲೆ ನೀಡುತ್ತಾನೋ ಅಂಥ ಪುರುಷನೆಡೆಗೆ ಮಹಿಳೆ ಬೇಗನೆ ಆಕರ್ಷಿತಳಾಗುತ್ತಾಳೆ. ಅವಳ ದೃಷ್ಟಿಯಲ್ಲಿ ಅಂಥ ಪುರುಷ ತುಂಬಾ ಎತ್ತರದ ಸ್ಥಾನದಲ್ಲಿರುತ್ತಾನೆ.

ವಯಸ್ಸಾದ ಪುರುಷ
ಹುಡುಗಿಯರು ಮಧ್ಯವಯಸ್ಕರತ್ತ ಆಕರ್ಷಿತರಾಗುವುದನ್ನು ನೋಡುವಾಗ ಆಶ್ಚರ್ಯವಾಗಬಹುದು. ಆದರೆ ಹುಡುಗಿಯರು ವಯಸ್ಸಾದ ವ್ಯಕ್ತಿಯೆಡೆಗೆ ಆಕರ್ಷಿತರಾಗಲು ಪ್ರಮುಖ ಕಾರಣ ಅವರು ಆರ್ಥಿಕವಾಗಿ ಸೆಟಲ್ ಆಗಿರುತ್ತಾರೆ ಎಂಬ ಕಾರಣಕ್ಕೆ.

ತಮಾಷೆ ಮಾಡುವ ವ್ಯಕ್ತಿತ್ವದವರು
ಸ್ವಲ್ಪ ಹಾಸ್ಯ ಗುಣವಿರುವ ಪುರುಷನ ಕಡೆಗೆ ಮಹಿಳೆಯರು ಬೇಗನೆ ಆಕರ್ಷಿತರಾಗುತ್ತಾರೆ. ಹಾಸ್ಯ ಮಾಡುತ್ತಾ ತನ್ನ ಸುತ್ತಲಿರುವವರನ್ನು ನಗಿಸುವವ ಮಹಿಳೆ ಹಾಟ್ ಫೇವರೆಟ್, ನಿಮ್ಮ ಸ್ನೇಹಿತ ಆಗಿದ್ದು ಮಹಿಳೆಯರು ಅವನ ಹತರನೇ ಹೆಚ್ಚು ಮಾತನಾಡುತ್ತಾರೆ ಎಂದರೆ ನೀವು ಹೊಟ್ಟೆಕಿಚ್ಚು ಪಟ್ಟು ನೋ ಯೂಸ್. ಏಕೆಂದರೆ ಹಾಸ್ಯ ಮಾಡುವುದು ಅವರ ಸ್ವಭಾವ, ಆ ಸ್ವಭಾವೇ ಮಹಿಳೆಯರಿಗೆ ಇಷ್ಟವಾಗಿರುತ್ತೆ

ಸೂಕ್ಷ್ಮ ವಿಷಯಗಳಿಗೆ ಸ್ಪಂದಿಸುವವ
ತಮ್ಮ ಭಾವನೆಗಳು ಹಾಗೂ ಸೂಕ್ಷ್ಮ ವಿಷಯಗಳಿಗೆ ಸ್ಪಂದಿಸುವ ವ್ಯಕ್ತಿ ಮಹಿಳೆಯರಿಗೆ ತುಂಬಾನೇ ಇಷ್ಟವಾಗುತ್ತಾನೆ.

ತೆಳು ಗಡ್ಡದಾರಿ
ಕ್ಲೀನ್ ಶೇವ್‌ಗಿಂತ ಕುರುಚುಲು ಗಡ್ಡದವನೇ ಮಹಿಳೆಯರಿಗೆ ಇಷ್ಟವಾಗುವುದು. ತೆಳು ಗಡ್ಡ ಸ್ಟೈಲಿಷ್ ಹಾಗೂ ಹಾಟ್ ಲುಕ್ ನೀಡುವುದು.

ರಿಸ್ಕ್ ತೆಗೆದುಕೊಳ್ಳುವವ
ಜೀವನದಲ್ಲಿ ಕೆಲವೊಂದು ಪರಿಸ್ಥಿತಿಯಲ್ಲಿ ರಿಸ್ಕ್ ತೆಗೆದುಕೊಳ್ಳುವ ಗುಣದವ ಮಹಿಳೆಯರಿಗೆ ತುಂಬಾನೇ ಆಕರ್ಷಿತರಾಗುತ್ತಾರೆ. ಏನಾದರೂ ಮಾಡಲು ಹೆದರುವವ, ಹಿಂಜರಿಯುವವ ಮಹಿಳೆಯರನ್ನು ಸೆಳೆಯಲು ಸಾಧ್ಯವಿಲ್ಲ.



Click it and Unblock the Notifications