Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನನಗೂ ಒಂದು ಲವ್ವರ್ ಬೇಕೆಂದಿನಿಸುತ್ತಿದೆಯೇ? ನಿಜವಾದ ಪ್ರೀತಿಯನ್ನು ತಿಳಿಯುವುದು ಹೇಗೆ?
ಸಿಂಗಲ್ ಆಗಿರುವವರಿಗೆ ನನಗೊಂದು ಲೈಫ್ ಪಾರ್ಟನರ್ ಯಾವಾಗಪ್ಪಾ ಸಿಗುವುದು, ನನ್ನವನು/ನನ್ನವಳು ಎಲ್ಲಿ ಇದ್ದಾರೋ ಏನೋ? ಎಂದು ಆವಾಗ-ಆವಾಗ ಅನಿಸುತ್ತಿರುತ್ತದೆ. ಲವ್ ಎಂಬುವುದು ಒಂಥರಾ ವಿಸೇಷ-ವಿಚಿತ್ರವಾದ ಅನುಭವ. ಯಾರಾದರೂ ಜೋಡಿ ಸಿಂಗಲ್ ಆಗಿರುವವರ ಮುಂದೆ ಕೈ ಕೈ ಹಿಡಿದು ನಗು-ನಗುತ್ತಾ ಹೋಗುತ್ತಿರುವುದನ್ನು ನೋಡುವಾಗ ನನಗೂ ಒಂದು ಲವ್ವರ್ ಇರಬೇಕೆಂದು ಅನಿಸುತ್ತೆ ಎಂದು ಸಿಂಗಲ್ ಆಗಿರುವ ಅನೇಕರು ಹೇಳುತ್ತಾರೆ.
ಹಾಗಂತ ಧಾವಂತಕ್ಕೆ ಬಿದ್ದು ಲವ್ ಮಾಡುವುದು ಸರಿಯಲ್ಲ, ಹೀಗೆ ಅರ್ಜೆಂಟ್ ಮಾಡಿದರೆ ನಮ್ಮ ಬದುಕಿನಲ್ಲಿ ತಪ್ಪಾದ ವ್ಯಕ್ತಿಯನ್ನು ಆಯ್ಕೆ ಮಾಡಿ ಬಿಡುತ್ತೇವೆ, ನಂತರ ಪಶ್ಚಾತಾಪ ಪಡಬೇಕಾಗುತ್ತದೆ. ಆದ್ದರಿಂದ ಪ್ರೀತಿಯಲ್ಲಿ ಬೀಳುವವಾಗ ಎಲ್ಲರೂ ಪ್ರೀತಿ ಮಾಡುತ್ತಿದ್ದಾರೆ ಎಂದು ಮಾಡುವುದಲ್ಲ, ನಮಗಾಗಿಯೇ ಇರುವವರನ್ನು ಆಯ್ಕೆ ಮಾಡಬೇಕು.
ಆ ವ್ಯಕ್ತಿ ನಮಗಾಗಿಯೇ ಇರುವುದು ಎಂದು ತಿಳಿಯುವುದು ಹೇಗೆ, ನಮಗೆ ಆ ವ್ಯಕ್ತಿ ಮೇಲೆ ಇರುವುದು ಲವ್ ಅಥವಾ ಅಫೆಕ್ಷನ್ ಎಂಬುವುದನ್ನು ನಾವು ನಮ್ಮದೇ ನಡವಳಿಕೆಯಿಂದ ಗುರುತಿಸಬಹುದು.

ನಾವು ಆ ವ್ಯಕ್ತಿಯನ್ನು ತುಂಬಾನೇ ಪ್ರೀತಿಸುತ್ತಿದ್ದೇವೆ ಎಂದು ತಿಳಿಯುವುದು ಹೇಗೆ?
* ಆ ವ್ಯಕ್ತಿ ಬಗ್ಗೆ ಯೋಚಿಸಿದಾಗ ಅಥವಾ ಅವರು ಎದುರಿಗೆ ಬಂದಾಗ ತುಂಬಾ ಸಂತೋಷವಾಗುತ್ತೆ
* ಅವರನ್ನು ನೋಡುತ್ತಲೇ ಇರಬೇಕೆನಿಸುತ್ತೆ
* ಅವರ ಜೊತೆ ನಡೆಸಿದ ಮಾತುಕತೆಯನ್ನು ಆಗಾಗ ನೆನಪಿಸುತ್ತಲೇ ಇರುತ್ತೇವೆ.
* ಅವರೊಂದಿಗೆ ಭವಿಷ್ಯವನ್ನುಕಟ್ಟಿಕೊಳ್ಳುವುದರ ಬಗ್ಗೆ ಯೋಚಿಸುತ್ತೀರ.
* ಒಬ್ಬರನ್ನೊಬ್ಬರು ಸಂತೋಷವಾಗಿಡಲು ಬಯಸುತ್ತೀರಿ
ಇವೆಲ್ಲಾ ನಿಮಗೆ ಅವರ ಮೇಲೆ ತುಂಬಾ ಪ್ರೀತಿ ಇದ್ದರೆ ಕಂಡು ಬರುವ ಲಕ್ಷಣಗಳಾಗಿವೆ.
ನಿಮ್ಮ ಲೈಫ್‌ನಲ್ಲಿ ನಮಗೆ ಸೂಟ್ ಆಗುವ ವ್ಯಕ್ತಿಯನ್ನು ಆರಿಸುವಾಗ ಈ ಅಂಶಗಳನ್ನೂ ಗಮನಿಸಿ:

ನಿಮಗೆ ಎಂಥವರು ಬೇಕು ಎಂಬುವುದನ್ನು ಮೊದಲು ಯೋಚಿಸಬೇಕು
ನಮ್ಮ ಜೀವನ ಸಂಗಾತಿಯಾಗಿ ಬರುವವರಲ್ಲಿ ಇರಬೇಕಾದ ಗುಣಗಳೇನು ಎಂಬುವುದನ್ನು ಯೋಚಿಸಿ. ಹಲವು ಮದುವೆಗಳು ಹಣ, ಅಂತಸ್ತು ನೋಡಿ ಆಗುತ್ತವೆ, ಆದರೆ ಅವೆಲ್ಲಕ್ಕಿಂತ ಮುಖ್ಯವಾಗಿ ಗುಣ ನೋಡಿ. ನಿಮಗೆ ಹೊಂದುವ ಗುಣದವರಾದರೆ ಅವರ ಜೊತೆಗಿನ ಬಾಳು ಸಂತೋಷವಾಗಿರುತ್ತೆ.

ಆ ಸಂಬಂಧದಲ್ಲಿ ನೀವು ಖುಷಿಯಾಗಿರಬೇಕು
ಸಂಬಂಧದಲ್ಲಿ ಖುಷಿ ಇಲ್ಲ ಎಂದರೆ ಮನೆ, ಆಸ್ತಿ ಏನು ಇದ್ದೂ ಪ್ರಯೋಜನವಿಲ್ಲ. ನಿಮ್ಮ ಸಂಗಾತಿಗೆ ನಿಮ್ಮನ್ನು ಖುಷಿಯಾಗಿಡಬೇಕು ಎಂಬ ಮನಸ್ಸಿರಬೇಕು, ಇನ್ನು ನಿಮ್ಮ ಸಂಗಾತಿಯನ್ನು ನೋಡಿದಾಗ ನಿಮ್ಮನ್ನು ಸೆಳೆಯುವಂತಿರಬೇಕು.

ನಿಮ್ಮವರನ್ನು ಎಲ್ಲಿ ಹುಡುಕಬೇಕು?
ಬಾಳ ಸಂಗಾತಿಯನ್ನು ಹುಡುಕಲು ಅನೇಕ ಆಯ್ಕೆಗಳಿವೆ, ಡೇಟಿಂಗ್ ಆ್ಯಪ್‌ಗಳಿವೆ, ನಿಮ್ಮ ಸ್ನೇಹಿತ/ ಸ್ನೇಹಿತೆಯ ಗುಣ ನಿಮಗೆ ಇಷ್ಟವಾಗಿದ್ದರೆ, ನಿಮಗಿರುವ ಫೀಲಿಂಗ್ ಅವರಿಗೂ ಇದೆ ಎಂದು ಅನಿಸಿದರೆ ಅವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಬಹುದು. ಇನ್ನು ಅರೇಂಜ್ಡ್ ಮ್ಯಾರೇಜ್ ಆದರೆ ಮನೆಯವರು ಹುಡುಕಿ ಕೊಡಬಹುದು.
ನೀವು ಯಾರನ್ನಾದರೂ ಮದುವೆಯಾಗಲು ಇಷ್ಟಪಟ್ಟರೆ ಅವರನ್ನು ಏಕೆ ಇಷ್ಟವಾಯಿತು ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ, ನಿಮಗೆ ಗೊಂದಲವಿದ್ದರೆ ಆ ಸಂಬಂಧದಲ್ಲಿ ಮುಂದುವರೆಯಬೇಡಿ. ಅವರ ಹಣ, ಅಂತಸ್ತು, ಉದ್ಯೋಗ ಎಲ್ಲಕ್ಕಿಂತ ನೀವು ಅವರನ್ನು ಬಯಸುತ್ತಿರುವುದು ಅವರ ಮೇಲಿರುವ ಪ್ರೀತಿಯಿಂದಷ್ಟೇ ಎಂದಾದರೆ ಮಾತ್ರ ಮದುವೆಗೆ ಯೆಸ್ ಅನ್ನಿ.

ಮೊದಲು ನಿಮ್ಮನ್ನು ನೀವು ಪ್ರೀತಿಸಿ
ಎಲ್ಲಕ್ಕಿಂತ ಮೊದಲು ನಿಮ್ಮನ್ನು ನೀವು ಪ್ರೀತಿಸಬೇಕು. ಬೇರೆಯವರಿಗಾಗಿ ನಿಮ್ಮ ಬಗ್ಗೆ ನೀವು ಅಸಹ್ಯ ಪಟ್ಟುಕೊಳ್ಳುವುದು ಮಾಡಬೇಡಿ. ನಾನು ನೋಡಲು ಆಕರ್ಷಕವಾಗಿಲ್ಲ ಆದ್ದರಿಂದ ನನ್ನನ್ನು ರಿಜೆಕ್ಟ್ ಮಾಡಿದ್ದಾರೆ, ಬಿಟ್ಟು ಹೋಗಿದ್ದಾರೆ, ಯಾರೂ ನನ್ನನ್ನು ಇಷ್ಟಪಡುತ್ತಿಲ್ಲ ಎಂದೆಲ್ಲಾ ಯೋಚಿಸಲೇಬೇಡಿ. ಮೊದಲು ನಿಮ್ಮನ್ನು ನೀವು ಪ್ರೀತಿಸಿ, ಆಗ ನಮ್ಮ ಆತ್ಮವಿಶ್ವಾಸ ಹೆಚ್ಚುವುದು. ಆತ್ಮವಿಶ್ವಾಸದಿಂದ ಇರುವ ವ್ಯಕ್ತಿಯನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ನಿಮ್ಮ ಗುಣ ನೋಡಿ ಬರುವವರು ಖಂಡಿತ ನಿಮ್ಮನ್ನು ಇಷ್ಟಪಡುತ್ತಾರೆ.



Click it and Unblock the Notifications