Latest Updates
-
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ?
Valentines day Special: ಬಸ್ ನಿಂತಿದ್ದಾಗ ಬೈಕ್‌ನಲ್ಲಿ ಬಂದು ಹಾರ್ನ್ ಹೊಡೆದವನ ಮೇಲೆ ಅರಳಿತು ಅನುರಾಗ
ಅದೊಂದು ಸುಂದರವಾದ ಸಂಜೆ ಆಗ ತಾನೆ ಸುರಿಯುತ್ತಿದ್ದ ಮಳೆ ತನ್ನ ಆರ್ಭಟ ವನ್ನು ಕೊಂಚ ಮಟ್ಟಿಗೆ ನಿಲ್ಲಿಸಿತ್ತು ,ಗಂಟೆ ಸುಮಾರು ಸಂಜೆ 4 ಆಗಿತ್ತು ಸಾಮಾನ್ಯವಾಗಿ ಕಾಲೇಜು ಬಿಡುವ ಹೊತ್ತು ಎಲ್ಲರೂ ತಮ್ಮ ಮನೆ ಕಡೆ ಹೊರಟರೆ ಅಲ್ಲೊಂದು ತಂಡ ಕ್ಯಾಂಟೀನ್ ಕಡೆ ಹೊರಡಿತು.

ಪ್ರೀತಿ ಪ್ರೇಮ ದ ಅರಿವಿಲ್ಲದ ನಾನು ಮತ್ತು ನನ್ನ ಸ್ನೇಹಿತರು ನಮ್ಮಷ್ಟಕ್ಕೆ ನಾವು ಇತರ ಜೋಡಿ ಹಕ್ಕಿಗಳ ನ್ನು ಕಂಡು ನಗೆಬೀರುತ್ತಿದ್ದೇವು. ಮನದೊಳಗೆ ನಮಗೂ ಪ್ರೇಮ ಪ್ರೀತಿ ಮಾಡ್ಬೇಕು ಅನ್ನುವ ಹಂಬಲ ಇದ್ರು ಸಹ ಏನೋ ಒಂಥರ ಬೇಡ ಅನ್ನುವ ಭಾವನೆ . ಹೀಗೆ ನಮ್ಮ ತಮಾಷೆ ಫ್ಯಾಕ್ಟರ್ ಗಳು ಮುಗಿದು ನಾವು ಸಹ ನಮ್ಮ ಮನೆ ಕಡೆ ಹೊರಟೆವು .
ಅದೇ ದಿನ ರಾತ್ರಿ ಸಾಕಾಗುವಷ್ಟು ಕಾಲೇಜು ವರ್ಕ್ ಗಳು ಇದ್ದುದರಿಂದ ನನ್ನ ಗಮನ ಮೊಬೈಲ್ ಕಡೆ ಕಮ್ಮಿ ಇದ್ದವು ಹಾಗೂ ಹೀಗೂ ಎಲ್ಲ ಕೆಲಸ ಮುಗಿಸಿ ಮೊಬೈಲ್ ನ ಕಡೆ ನೋಡಿದಾಗ ಗಂಟೆ ಸುಮಾರು ರಾತ್ರಿ 10 ಆಗಿತ್ತು ಸಾಮಾನ್ಯವಾಗಿ ಇನ್‌ಸ್ಟಾಗ್ರಾಮ್ ನೋಡಿದಾಗ ಅಲ್ಲೊಂದು ಅಪರಿಚಿತ ವ್ಯಕ್ತಿ ಯ ರಿಕ್ವೆಸ್ಟ್ ಕಂಡುಬಂತು ನೋಡಿಯೂ ನೋಡದ ಹಾಗೆ ಮೊಬೈಲ್ ಆಫ್ ಮಾಡಿ ಮಲ್ಕೊಂಡೆ ಮಾರನೇ ದಿನದಂದು ಮನೆ ಹತ್ತಿರದಲ್ಲಿ ಬಸ್‌ಗೆ ಎಂದು ನಿಂತಾಗ ಅದೇ ಅಪರಿಚಿತವಕ್ತಿ ಬೈಕ್ ಅಲ್ಲಿ ಹೋಗ್ತಾ ಇದ್ರು ನನ್ನ ನೋಡಿ ಬೈಕ್ ಹಾರ್ನ್ ಹೊಡೆದು ಹೋದದ್ದು ಸಂಜೆವರೆಗೂ ನನ್ನ ಮನಸಲ್ಲಿ ಕಾಡುತ್ತಾ ಇತ್ತು.
ಸಂಜೆ ಮನೆಗೆ ಬಂದ ತಕ್ಷಣ ಇನ್ಸ್ಟ್ ಗ್ರಾಂ ಓಪನ್ ಮಾಡಿ ರಿಕ್ವೆಸ್ಟ್ ಎಸೆಪ್ಟ್ ಮಾಡಿದೆ ತಕ್ಷಣ ಅಲ್ಲಿಂದ ಒಂದು ಹಾಯ್ ಎಂಬ ಮೆಸೇಜ್ ಬಂತು. ರಿಪ್ಲೈ ಕೊಡಲು ಹೆದರಿ ಮೆಸೇಜ್ ನೋಡಿಯು ಸುಮ್ಮನಾದೆ. ಆದರೆ ಒಂದು 2 ದಿನ ಕಳೆದ ನಂತರ ಮನಸ್ಸಲ್ಲಿ ಏರುಪೇರಾಗಿ ಹಾಯ್ ಮೆಸೇಜ್ ಗೆ ಹಲೋ ಎಂಬ ರಿಪ್ಲೈ ಕೊಡುವ ಮೂಲಕ ನಮ್ಮ ಸಂಭಾಷಷನೆ ಮುಂದುವರೆಯಿತು.
ನಂತರದ ದಿನಗಳಲ್ಲಿ ಮೆಸೇಜ್ ಗಳು ಇನ್‌ಸ್ಟಾಗ್ರಾಂ ನಲ್ಲಿ ನಿಂತು ವಾಟ್ಸ್ ಆ್ಯಪ್ ಗೆ ಬಂದು ತಲುಪಿತು ದಿನ ಹೋದಂತೆ ವಿಡಿಯೋ ಕಾಲ್ ಮಿತಿ ಹೆಚ್ಚುತ್ತಾ ಇದ್ದಂತೆ ಮನಸ್ಸಲ್ಲಿ ಭೇಟಿ ಯಾಗುವ ತವಕ ಜಾಸ್ತಿ ಆಯಿತು ಒಂದು ದಿನ ಆ ಸುದಿನ ಬಂದಿತು. ಮನಸಲ್ಲಿ ಅದೇನೋ ಆತುರ ,ಖುಷಿ ಒಂದೆಡೆ ಇನ್ನೊಂದೆಡೆ ಭಯ ಎಲ್ಲವೂ ಬಹು ದಿನದ ಬೇಡಿಕೆ ಈಡೀರಿದಂತೆ ಆಯಿತು. ಆದರೆ ಹುಡುಗಿಯರಿಗೆ ತಾನು ಇಷ್ಟಪಟ್ಟ ಹುಡುಗನೇ ಮೊದಲು ಪ್ರೀತಿ ನಿವೇದನೆ ಮಾಡಲಿ ಎಂಬ ಆಸೆ ಇರುತ್ತದೆ ಅದೇ ರೀತಿ ನನ್ನ ಜೀವನದಲ್ಲಿ ನಡೆದು ಹೋಯಿತು.
ಸಾಮಾಜಿಕ ಜಾಲ ತಾಣಗಳಲ್ಲಿ ಹುಟ್ಟುವ ಪ್ರೀತಿಯೂ ಹೆಚ್ಚು ದಿನ ಉಳಿಯುವುದಿಲ್ಲ ಎಂಬ ಮಾತಾನ್ನು ಎಲ್ಲರೂ ಹೇಳುತ್ತಾರೆ. ಅದರೆ, ಆ ಮಾತನ್ನು ಸುಳ್ಳು ಮಾಡಿದ್ದೇವೆ. ಪ್ರೀತಿ ಎನ್ನುವುದು ನಂಬಿಕೆ, ಭಾವನೆ, ಪರಸ್ಪರ ಅರ್ಥ ಮಾಡುವಿಕೆಯಲ್ಲಿ ನೆಲೆಯಾಗಿದೆ. ಹೊರತು ಬೇರೆಯವರ ಅಭಿಪ್ರಾಯಗಳಿಂದಲ್ಲ.
ವಿಶ್ವಶ್ರೀ,
ಎಸ್. ಡಿ.ಎಂ. ಕಾಲೇಜು ಉಜಿರೆ.



Click it and Unblock the Notifications

