ಯಶ್‌-ರಾಧಿಕಾ ಲವ್‌ ಸ್ಟೋರಿಯಿಂದ ಪ್ರೇಮಿಗಳು ತಿಳಿಯಲೇಬೇಕಾದ 3 ಸಂಗತಿಗಳಿವು

ರಾಕಿಂಗ್ ಸ್ಟಾರ್ ಯಶ್‌ ಹಾಗೂ ರಾಧಿಕಾ ಪಂಡಿತ್‌ ಪ್ರೀತಿಸಿ ಮದುವೆಯಾಗಿದ್ದಾರೆ, ತುಂಬಾ ಅಚ್ಚುಕಟ್ಟಾದ, ಸುಂದರವಾದ ಸಂಸಾರ ಅವರದ್ದು ಎಂಬುವುದು ಎಲ್ಲರಿಗೆ ಗೊತ್ತೇ ಇದೆ. ಇವರ ಲವ್‌ ಸ್ಟೋರಿ ಪ್ರೇಮಿಗಳಿಗೆ ಆದರ್ಶವಾಗಿರುವಂತಿದೆ.

ಹೌದು ಇವರು ತಮ್ಮ ಪ್ರೀತಿಯ ಜೀವನದಲ್ಲಿ ಪಾಲಿಸಿಕೊಂಡು ಬಂದ, ಬರುತ್ತಿರುವ ಈ 3 ವಿಷಯಗಳನ್ನು ಪ್ರೇಮಿಗಳು ಪಾಲಿಸಿದರೆ ನೀವು ಕೂಡ ಸುಂದರವಾದ ದಾಂಪತ್ಯ ಜೀವನ ಕಟ್ಟಬಹುದು. ಹಾಗಾದರೆ ಸಕ್ಸಸ್‌ಫುಲ್‌ ಲವ್‌ಸ್ಟೋರಿಗೆ ಯಾವ ಅಂಶಗಳನ್ನು ಪಾಲಿಸಬೇಕು ಎಂದು ನೋಡೋಣ ಬನ್ನಿ:

1. ನಿಮ್ಮ ಪ್ರೇಮ ಸಂಬಂಧದ ಬಗ್ಗೆ ಮೊದಲೇ ಸಾಮಾಜಿಕ ತಾಣದಲ್ಲಿ ಡಂಗೂರ ಬೇಡ

1. ನಿಮ್ಮ ಪ್ರೇಮ ಸಂಬಂಧದ ಬಗ್ಗೆ ಮೊದಲೇ ಸಾಮಾಜಿಕ ತಾಣದಲ್ಲಿ ಡಂಗೂರ ಬೇಡ

ರಾಧಿಕಾ ಯಶ್‌ ಅವರನ್ನು ಮೊದಲು ಭೇಟಿ ಮಾಡಿದ್ದು ಸೀರಿಯಲ್‌ನಲ್ಲಿ. ನಂತರ ಸಿನಿ ಜಗತ್ತಿಗೆ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸಿನಿರಂಗಕ್ಕೆ ಬರುತ್ತಾರೆ. ಈ ಮುದ್ದಾದ ಜೋಡಿ ಸಿನಿ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗುತ್ತೆ. ಯಶ್‌ ಹಾಗೂ ರಾಧಿಕಾ ಪಂಡಿತ್‌ ನಡುವೆ ಕೂಡ ಪ್ರೀತಿ ಚಿಗುರುತ್ತೆ, ಇವರು ಪ್ರೀತಿಸುವಾಗ ಯಶ್‌ ದೊಡ್ಡ ಸ್ಟಾರ್‌ ಆಗಿರಲಿಲ್ಲ, ಇವರಿಬ್ಬರ ನಡುವೆ ಸ್ವಚ್ಛ ಪ್ರೀತಿ ಅರಳಿತು. ಆದರೆ ತಮ್ಮ ಪ್ರೀತಿಯನ್ನೂ ಎಲ್ಲಿಯೂ ಬಹಿರಂಗಗೊಳಿಸಿರಲಿಲ್ಲ, ಮತ್ತೊಬ್ಬರ ಬಾಯಿಗೆ ಆಹಾರವಾಗುವ ಪ್ರಸಂಗವನ್ನೂ ಎಂದಿಗೂ ತಂದುಕೊಳ್ಳಲಿಲ್ಲ. ಇವರಿಬ್ಬರ ಪ್ರೀತಿಸುತ್ತಿದ್ದಾರೆ ಎಂಬುವುದೇ ಗೊತ್ತಾಗಿದ್ದು ಅವರು ಮದುವೆಯಾಗುವ ಸ್ವಲ್ಪ ಮುಂಚೆಯಷ್ಟೇ.

ಆದ್ದರಿಂದ ನೀವು ಕೂಡ ಪ್ರೀತಿಸುತ್ತಿದ್ದರೆ ನಿಮ್ಮ ಪ್ರೀತಿಯ ಬಗ್ಗೆ ತೋರ್ಪಡಿಕೆ ಬೇಡ

ಕೆಲವರು ಪ್ರೀತಿಯಲ್ಲಿದ್ದಾಗ ಜಗತ್ತನ್ನು ಮರೆಯುತ್ತಾರೆ. ಸಾವರ್ಜನಿಕ ಸ್ಥಳಗಳಲ್ಲಿ, ತಮ್ಮ ಸಾಮಾಜಿಕ ತಾಣಗಳಲ್ಲಿ ತಾವು ಪ್ರೇಮಿಗಳು ಎಂದು ಸಾರಿ ಹೇಳುತ್ತಿರುತ್ತಾರೆ, ಅವರನ್ನು ನೋಡುವಾಗ ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತಾರಪ್ಪಾ ಎಂದನಿವಷ್ಟು ತಮ್ಮ ಪ್ರೀತಿ ತೋರ್ಪಡಿಸುತ್ತಾರೆ, ಆದರೆ ಈ ರೀತಿ ಮಾಡಿದಾಗ ಒಂದು ವೇಳೆ ಬ್ರೇಕಪ್‌ ಆದರೆ ಭವಿಷ್ಯದಲ್ಲಿ ನಿಮ್ಮ ಹಳೆಯ ಸಂಬಂಧ ನಿಮಗೆ ಭವಿಷ್ಯದಲ್ಲಿ ಮುಳುವಾಗಬಹುದು. ಆದ್ದರಿಂದ ಪ್ರೀತಿಸುತ್ತಿದ್ದರೆ ನೀವು ಮದುವೆಗೆ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಪ್ರೇಮವನ್ನು ಸಾಮಾಜಿಕ ತಾಣದಲ್ಲಿ ತಿಳಿಸಿ.

2. ಪರಸ್ಪರ ಗೌರವ ಹಾಗೂ ಎಲ್ಲಾ ಸಂದರ್ಭಗಳಲ್ಲಿ ಒತ್ತಾಸೆಯಾಗಿ ನಿಲ್ಲುವುದು

2. ಪರಸ್ಪರ ಗೌರವ ಹಾಗೂ ಎಲ್ಲಾ ಸಂದರ್ಭಗಳಲ್ಲಿ ಒತ್ತಾಸೆಯಾಗಿ ನಿಲ್ಲುವುದು

ಯಶ್‌-ರಾಧಿಕಾ ದಂಪತಿ ಒಬ್ಬರನ್ನೊಬ್ಬರು ತುಂಬಾನೇ ಗೌರವಿಸುತ್ತಾರೆ, ಒಬ್ಬರ ಏಳಿಗೆಯಲ್ಲಿ ಮತ್ತೊಬ್ಬರು ಒತ್ತಾಸೆಯಾಗಿ ನಿಲ್ಲುತ್ತಾರೆ. ಪ್ರೀತಿಯಲ್ಲಿ ತಾನು ಮೇಲು-ನೀನು ಮೇಲು ಎಂಬ ಭಾವನೆ ಇರಲೇಬಾರದು, ಅದನ್ನು ನೀವು ಈ ದಂಪತಿಯಲ್ಲಿ ಕಾಣಬಹುದು.

ನೀವು ಪ್ರೀತಿಸುತ್ತಿದ್ದರೆ ನಿಮ್ಮ ಸಂಗಾತಿಯನ್ನು ಗೌರವಿಸಿ, ಅವರ ಏಳಿಗೆಯಲ್ಲಿ ಒತ್ತಾಸೆಯಾಗಿ ನಿಲ್ಲಿ ಈ ರೀತಿ ಮಾಡುವುದರಿಂದ ನಿಮ್ಮ ಸಂಬಂಧ ಗಟ್ಟಿಯಾಗುವುದು. ಏಳುಬೀಳುಗಳಲ್ಲಿ ಜೊತೆಯಾಗಿ ನಿಲ್ಲಬೇಕು.

3. ಎಷ್ಟೇ ಬ್ಯುಸಿ ಇದ್ದರೂ ನಿಮ್ಮವರಿಗಾಗಿ ಸಮಯ ಕೊಡಿ

3. ಎಷ್ಟೇ ಬ್ಯುಸಿ ಇದ್ದರೂ ನಿಮ್ಮವರಿಗಾಗಿ ಸಮಯ ಕೊಡಿ

ಇದನ್ನು ಯಶ್‌ ನೋಡಿ ಕಲಿಯಬೇಕು. ಕೆಲವರು ಸದಾ ಬ್ಯುಸಿ-ಬ್ಯುಸಿ ಎಂದ ಹೆಂಡತಿ-ಮಕ್ಕಳಿಗೆ ಸಮಯ ಕೊಡುವುದೇ ಇಲ್ಲ. ಒಂದು ಕ್ಷಣ ಯೋಚಿಸಿ ನೀವು ಇಷ್ಟೆಲ್ಲಾ ದುಡಿಯುತ್ತಿರುವುದು ಯಾರಿಗಾಗಿ, ಹೆಂಡತಿ -ಮಕ್ಕಳಿಗಾಗಿ ತಾನೆ. ಜೀವನದಲ್ಲಿ ಮುಂದೆ ಬರಬೇಕೆಂದರೆ ಕಷ್ಟಪಟ್ಟು ದುಡಿಯಬೇಕು ಎನ್ನುವುದು ನಿಜ, ಆದರೆ ದುಡಿಮೆಯೇ ಜೀವನ ಅಂತಾಗಬಾರದು, ಎಷ್ಟೇ ಕೆಲಸದ ಒತ್ತಡದ ನಡುವೆಯೂ ನಿಮ್ಮವರಿಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳಬೇಕು.

ಯಶ್ ಅವರು ಎಷ್ಟೇ ಬ್ಯುಸಿ ಇದ್ದರೂ ತನ್ನ ಕುಟುಂಬ ಹಾಗೂ ಮಕ್ಕಳಿಗಾಗಿ ಸಮಯ ನೀಡುತ್ತಿದ್ದಾರೆ, ಅದು ತುಂಬಾನೇ ಮುಖ್ಯ. ಎಷ್ಟೋ ಕುಟುಂಬಗಳಲ್ಲಿ ನನ್ನ ಗಂಡ ನನಗೆ ಸಮಯ ಕೊಡುತ್ತಿಲ್ಲ ಎಂಬುವುದೇ ಕಂಪ್ಲೇಂಟ್ ಆಗಿರುತ್ತದೆ. ನಮ್ಮವರಿಗೆ ನಾವು ಹಣ, ಐಶ್ವರ್ಯಗಿಂತ ನಾವು ನೀಡುವ ಸಮಯ ಮುಖ್ಯವಾಗಿರುತ್ತದೆ, ಅದನ್ನು ಅರ್ಥಮಾಡಿಕೊಂಡರೆ ಒಳ್ಳೆಯದು.

ಚಿಕ್ಕ ಸಲಹೆ

ಚಿಕ್ಕ ಸಲಹೆ

ಪ್ರೀತಿಸಿದ ಮೇಲೆ ಹಲವು ಸಮಸ್ಯೆಗಳು ಎದುರಾಗುತ್ತೆ ಅವೆಲ್ಲವನ್ನೂ ಜೊತೆಯಾಗಿ ಎದುರಿಸಿದರೆ ಮಾತ್ರ ಪ್ರೀತಿಯಲ್ಲಿ ಸಕ್ಸಸ್‌ ಕಾಣಲು ಸಾಧ್ಯ. ಆದ್ದರಿಂದ ನೀವು ಪ್ರೀತಿಯಲ್ಲಿ ಬೀಳುವ ಮೊದಲು ಯೋಚಿಸಿ ನಂತರ ಪ್ರೀತಿಸಿ, ಕೆಲವರು ಪ್ರೀತಿಯೇನೋ ಮಾಡುತ್ತಾರೆ ನಂತರ ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ದೂರಾಗುತ್ತಾರೆ. ನಿಮಗೆ ಏನಾದರೂ ಮನೆಯಲ್ಲಿ ಒಪ್ಪುತ್ತಾರೋ ಇಲ್ವೋ ಎಂಬ ಸಂಶಯವಿದ್ದರೆ ಪ್ರೀತಿಸುವ ಮೊದಲೇ ಮನೆಯವರ ಬಳಿ ಮಾತನಾಡಿ, ನನಗೆ ಇಂಥ ಹುಡುಗ ಅಥವಾ ಹುಡುಗಿ ಇಷ್ಟ ಅಂತ ಹೇಳಿ, ಪ್ರೀತಿಸಿ ನಂತರ ಮನೆಯವರಿಗೋಸ್ಕರ ದೂರಾಗುತ್ತಿದ್ದೇನೆ ಎಂದು ಪ್ರೀತಿಸುವವರಿಗೆ ಮೋಸ ಮಾಡಬೇಡಿ, ಈ ಮಾತು ನೀವೂ ಒಪ್ಪುತ್ತೀರಿ ತಾನೆ?

English summary

Valentines Day special: For This 3 Reason Yash Radhika couple Role Model For Lover

Valentines Day special: Every lover must take yash-radhika couple for role model for this 3 reason read on...
Story first published: Wednesday, February 8, 2023, 13:30 [IST]
X
Desktop Bottom Promotion