Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Valentines Day Gift Ideas : ಪ್ರೇಮಿಗಳ ದಿನದಂದು ಅವರ ರಾಶಿ ಪ್ರಕಾರ ಗಿಫ್ಟ್ ನೀಡಿದರೆ ತುಂಬಾನೇ ಒಳಿತಾಗುತ್ತೆ
ಫೆಬ್ರವರಿ 14 ಪ್ರೇಮಿಗಳ ದಿನದಂದು ನಿಮ್ಮ ಪ್ರೇಮಿಗೆ ನೀಡುವ ಗಿಫ್ಟ್ ತುಂಬಾ ಗಿಫ್ಟ್ ಆಗಿರಬೇಕು ಎಂದು ನೀವು ಬಯಸುತ್ತಿದ್ದೀರಾ? ಹಾಗಾದರೆ ನೀವು ಅವರ ರಾಶಿಗೆ ತಕ್ಕಂತೆ ಗಿಫ್ಟ್ ನಿಡುವುದು ಒಳ್ಳೆಯದು ನೋಡಿ.
ಹೌದು ಒಂದೊಂದು ರಾಶಿಗೂ ಒಂದೊಂದು ಬಣ್ಣ ಶುಭಕರ, ನೀವು ಅಂಥದ್ದೇ ಬಣ್ಣದ ಗಿಫ್ಟ್ ನೀಡಿ, ನೀವು ನೀಡುವ ಗಿಫ್ಟ್ ಅವರ ಪಾಲಿಗೆ ಸ್ಪೆಷಲ್ ಗಿಫ್ಟ್ ಆಗುವುದು ಮಾತ್ರವಲ್ಲ, ಅದೃಷ್ಟದ ಗಿಫ್ಟ್ ಕೂಡ ಆಗುವುದು, ಹೇಗಿದೆ ಐಡಿಯಾ ಸೂಪರ್ ತಾನೆ? ಹಾಗಾದರೆ ನಿಮ್ಮವರ ರಾಶಿಗೆ ಯಾವ ಬಣ್ಣದ ಗಿಫ್ಟ್ ಅದೃಷ್ಟಕರ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಮಂಗಳ ಮತ್ತು ಕೆಂಪು ಬಣ್ಣವನ್ನು ಮೇಷ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಪ್ರೇಮಿಗಳ ದಿನದಂದು ಕೆಂಪು ಬಣ್ಣದ ಉಡುಗೊರೆಗಳನ್ನು ಅಥವಾ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು. ಇದಲ್ಲದೆ, ನೀವು ನಿಮ್ಮ ಸಂಗಾತಿಗೆ ಕೆಂಪು ಗುಲಾಬಿಗಳನ್ನು ಸಹ ನೀಡಬಹುದು.

ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ ಮತ್ತು ವೃಷಭ ರಾಶಿಯ ಮಂಗಳಕರ ಬಣ್ಣವನ್ನು ಬಿಳಿ. ಆದ್ದರಿಂದ ನೀವು ನಿಮ್ಮ ಸಂಗಾತಿಯು ವೃಷಭ ರಾಶಿಯವರಾಗಿದ್ದರೆ ನೀವು ಪ್ರೇಮಿಗಳ ದಿನದಂದು ಬಿಳಿ ಅಥವಾ ತಿಳಿ ಕೆನೆ ಬಣ್ಣದ ಬಟ್ಟೆ ಉಡುಗೊರೆ ನೀಡಬಹುದು.

ಮಿಥುನ ರಾಶಿ
ಬುಧವು ಮಿಥುನ ರಾಶಿಯ ಅಧಿಪತಿ, ಆದ್ದರಿಂದ ಈ ರಾಶಿಯವರಿಗೆ ಹಸಿರು ಬಣ್ಣ ಮಂಗಳಕರ. ನಿಮ್ಮ ಪ್ರೇಮಿ ವೃಷಭ ರಾಶಿಯವರಾಗಿದ್ದರೆ ಈ ಬಣ್ಣಕ್ಕೆ ಸಂಬಂಧಿಸಿದ ಸುಂದರ ಉಡುಗೊರೆ ನೀಡಬಹುದು.

ಕರ್ಕ ರಾಶಿ
ಕರ್ಕ ರಾಶಿಯವರ ಶುಭ ಬಣ್ಣ ಬಿಳಿ ಆದ್ದರಿಂದ ನೀವು ನಿಮ್ಮ ಸಂಗಾತಿಗೆ ಬಿಳಿ ಬಣ್ಣದ ವಸ್ತುಗಳನ್ನು ಉಡುಗೊರೆಕೊಡಬಹುದು. ನಿಮ್ಮವಳಿಗೆ ಮುತ್ತಿನ ಹಾರ ಅಥವಾ ಸುಗಂಧ ದ್ರವ್ಯವನ್ನೂ ನೀಡಬಹುದು.

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಸಿಂಹ ರಾಶಿಯವರಿಗೆ ಗಾಢ ಕೆಂಪು, ಕಿತ್ತಳೆ, ಕೇಸರಿ, ಹಳದಿ ಮತ್ತು ಚಿನ್ನದ ಬಣ್ಣ ಅದೃಷ್ಟಕರ. ಆದ್ದರಿಂದ ನೀವು ನಿಮ್ಮ ಪ್ರೇಮಿಗೆ ಬಣ್ಣದ ಗಿಫ್ಟ್ ನೀಡಬಹುದು.

ಕನ್ಯಾರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ. ಕನ್ಯಾ ರಾಶಿಯವರಿಗೆ ಹಸಿರು ಬಣ್ಣ ಮಂಗಳಕರ. ಆದ್ದರಿಂದ ನೀವು ಸಂಗಾತಿಗೆ ಗಿಫ್ಟ್ ನೀಡುವಾಗ ಅದರಲ್ಲಿ ಹಸಿರು ಬಣ್ಣವಿದ್ದರೆ ಒಳ್ಳೆಯದು.

ತುಲಾ ರಾಶಿ
ತುಲಾ ರಾಶಿಯವರ ಅಧಿಪತಿ ಶುಕ್ರ, ಆದ್ದರಿಂದ ನಿಮಗೆ ಬಿಳಿ ಶುಭ ಬಣ್ಣ. ನೀವು ನಿಮ್ಮ ಪ್ರೇಮಿಗೆ ಇಷ್ಟವಾಗುವ ಗಿಫ್ಟ್ ಅನ್ನು ಈ ಬಣ್ಣದಲ್ಲಿ ನೀಡಬಹುದು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಅಧಿಪತಿ ಬುಧ. ಈ ರಾಶಿಯವರಿಗೆ ಕೆಂಪು ಮತ್ತು ಮರೂನ್ ತುಂಬಾನೇ ಶುಭ ಬಣ್ಣವಾಗಿದೆ. ಆದ್ದರಿಂದ ನೀವು ನಿಮ್ಮ ಪ್ರೇಮಿಗೆ ಶುಭ ತರುವ ಗಿಫ್ಟ್ ನೀಡಬೇಕೆಂದು ಬಯಸುವುದಾದರೆ ಈ ಬಣ್ಣದಲ್ಲಿ ನೀಡಿ.

ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಆದ್ದರಿಂದ ನಿಮಗೆ ಹಳದಿ ಬಣ್ಣ, ಚಿನ್ನದ ಬಣ್ಣ ಶುಭವಾಗಿದೆ. ನೀವು ಹಳದಿ ಬಣ್ಣದ ವಸ್ತುಗಳು ಅಥವಾ ಚಿನ್ನವನ್ನು ಉಡುಗೊರೆಯಾಗಿ ನೀಡಬಹುದು.

ಮಕರ ಸಂಕ್ರಾಂತಿ
ಮಕರ ರಾಶಿಯ ಅಧಿಪತಿ ಶನಿ. ಶನಿಯು ನಿಮ್ಮ ಅಧಿಪತಿಯಾಗಿರುವುದರಿಂದ ಕಪ್ಪು ಮಂಗಳಕರ ಬಣ್ಣವಾಗಿದೆ. ಆದರೆ ಗಿಫ್ಟ್ ಅಂತ ನೀಡುವಾಗ ಕಪ್ಪು ಬಣ್ಣ ಕೊಡಲು ಸಾಧ್ಯವಿಲ್ಲ ಇದರ ಬದಲಿಗೆ ನೀವು ಕಡು ನೀಲಿ ಬಣ್ಣದ ವಸ್ತುಗಳನ್ನು ಗಿಫ್ಟ್ ನೀಡಬಹುದು.

ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಕೂಡ ಶನಿ, ನಿಮಗೂ ಕೂಡ ಕಪ್ಪು ಬಣ್ಣವೇ ಮಂಗಳಕರ, ಆದರೆ ಪ್ರೀತಿಯ ಗಿಫ್ಟ್ ಕಪ್ಪುಬಣ್ಣದಲ್ಲಿ ಕೊಡಲು ಹೇಗೆ ಸಾಧ್ಯ ಆದ್ದರಿಂದ ನೀವು ಈ ರಾಶಿಯವರಿಗೆ ನೀಲಿ , ಗುಲಾಬಿ ಬಣ್ದದ ಉಡುಗೊರೆ ನೀಡಬಹುದು.

ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು. ಆದ್ದರಿಂದ ಹಳದಿ ಬಣ್ಣ ಶುಭಕರ. ಹಳದಿ ಬಣ್ಣ ಈ ರಾಶಿಯವರಿಗೆ ಮಂಗಳಕರವಾಗಿರುವುದರಿಂದ ಈ ಬಣ್ಣದ ಉಡುಗೊರೆ ನೀಡಬಹುದು.



Click it and Unblock the Notifications