Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಪ್ರೇಮಿಗಳ ದಿನದಂದು ನಿಮ್ಮವನು/ನಿಮ್ಮವಳಿಗೆ ಈ ಬಗೆಯ ಗಿಫ್ಟ್ಸ್ ಮಾತ್ರ ನೀಡಲೇಬೇಡಿ
ವ್ಯಾಲೆಂಟೈನ್ಸ್ ಡೇ ಪ್ರೇಮಿಗಳ ಪಾಲಿಗಂತೂ ತುಂಬಾನೇ ಸ್ಪೆಷಲ್, ಈ ದಿನ ತನ್ನ ಪ್ರೇಮಿಗೆ ಏನಾದರೂ ಸ್ಪೆಷಲ್ ಗಿಫ್ಟ್ ನೀಡಬೇಕೆಂದು ಬಯಸುವುದು ಸಹಜ. ಗಿಫ್ಟ್ ಕೊಡುವ ಬರದಲ್ಲಿ ಕೆಲವು ತಪ್ಪುಗಳನ್ನು ಮಾಡದಿದ್ದರೆ ಪ್ರೇಮಿಗಳ ದಿನ ಸುಂದರವಾಗಿರುತ್ತೆ.

ಪ್ರೇಮಿಗೆ ನೀವು ಕೊಡುವ ಗಿಫ್ಟ್ಸ್ ತುಂಬಾನೇ ಸ್ಪೆಷಲ್ ಆಗಿರಬೇಕು, ಹಾಗಂತ ದುಬಾರಿ ಗಿಫ್ಟ್ಸ್ ಬೇಕಾಗಿಲ್ಲ, ಒಂದು ಕೆಂಪು ಗುಲಾಬಿ ಹೂ ಕೊಟ್ಟರೂ ಸಾಕು, ಆದರೆ ಈ ರೀತಿಯ ಗಿಫ್ಟ್ಸ್ ಮಾತ್ರ ಕೊಡಲೇಬೇಡಿ.

ಲಾಸ್ಟ್ ಮಿನಿಟ್ ಕಾರ್ಡ್
ನೀವು ಒಂದು ಸುಂದರ ಗ್ರೀಟಿಂಗ್ ಕಾರ್ಡ್ ಕೊಡಲು ಬಯಸುವುದಾದರೆ ಒಂದು ಮೊದಲೇ ಕೊಂಡು ಅದರಲ್ಲಿ ನಿಮ್ಮ ಭಾವನೆಗಳನ್ನು ಬರೆಯಿರಿ. ಕೊನೆ ಕ್ಷಣದಲ್ಲಿ ಖರೀದಿ ಮಾಡಲು ಹೋದರೆ ನಿಮ್ಮ ಗ್ರೀಟಿಂಗ್ ಕಾರ್ಡ್ ತುಂಬಾ ಎಫೆಕ್ಟಿವ್ ಆಗಿ ನೀಡಲು ಸಾಧ್ಯವಿಲ್ಲ.

ಕಾಫಿ ಮಗ್
ತುಂಬಾ ಜನ ಕಾಫಿ ಮಗ್‌ನಲ್ಲಿ ತಮ್ಮಿಬ್ಬರ ಫೋಟೋ ಹಾಕಿ ತುಂಬಾ ಜನ ಗಿಫ್ಟ್ ಮಾಡುತ್ತಾರೆ. ಇದು ಗುಡ್ ಐಡಿಯಾ ಅಂತು ಅಲ್ವೇ ಅಲ್ಲ, ಏಕೆಂದರೆ ಇದನ್ನು ಬಳಸುವಾಗ ಬಿದ್ದು ಒಡೆದರೆ ಮನಸ್ಸಿಗೆ ತುಂಬಾನೇ ನೋವಾಗುವುದು, ಆದ್ದರಿಂದ ಈ ಗಿಫ್ಟ್ಸ್ ಸೂಕ್ತವಲ್ಲ ಎಂಬುವುದು ನನ್ನ ಅನಿಸಿಕೆ, ನಿಮಗೇನಿಸುತ್ತೆ?

ದೊಡ್ಡ ಟೆಡ್ಡಿ
ತುಂಬಾ ಪ್ರೇಮಿಗಳು ತಮ್ಮವನು/ವಳಿಗೆ ಟೆಡ್ಡಿ ಕೊಡುತ್ತಾರೆ. ಚಿಕ್ಕ ಟೆಡ್ಡಿಯಾದರೆ ಒಕೆ, ಆದರೆ ತುಂಬಾ ದೊಡ್ಡ ಟೆಡ್ಡಿ ಗಿಫ್ಟ್ಸ್ ಮಾಡುತ್ತಾರೆ. ಇಷ್ಟು ದೊಡ್ಡ ಟೆಡ್ಡಿ ಕೊಟ್ಟರೆ ನಿಮ್ಮ ಪ್ರೀತಿಯ ವಿಷಯ ಮನೆಯಲ್ಲಿ ಇನ್ನೂ ಗೊತ್ತಿಲ್ಲ ಎಂದಾದರೆ ಈ ಟೆಡ್ಡಿ ಎಸೆಯುವಂತೆಯೂ, ಮನೆಗೆ ಕೊಂಡೊಯ್ಯುವಂತೆಯೂ ಇಲ್ಲ, ಆದ್ದರಿಂದ ಇಂಥ ಟೆಡ್ಡಿ ಕೊಡುವ ಮುನ್ನ ಯೋಚಿಸಿ.

ಗಿಫ್ಟ್ಸ್ ಕಾರ್ಡ್
ನಿಮ್ಮ ಪ್ರೇಮಿಗೆ ನೀವು ಗಿಫ್ಟ್ಸ್ ಕಾರ್ಡ್ ನೀಡಿ ನಿನಗೆ ಇಷ್ಟವಾಗಿದ್ದು ತೆಗೆದಿಕೋ ಎಂದು ಹೇಳಬೇಡಿ, ಅವರು ಆಯ್ಕೆ ಮಾಡುವುದಕ್ಕಿಂತ ನೀವು ಅವರಿಗಾಗಿ ಹುಡುಕಿ-ಹುಡುಕಿ ತರುವ ಗಿಫ್ಟ್ಸ್ ತುಂಬಾನೇ ಸ್ಪೆಷಲ್ ಫೀಲ್ ಕೊಡುತ್ತೆ, ಆದ್ದರಿಂದ ನೀವೇ ನಿಮ್ಮವವರಿಗಾಗಿ ತನ್ನಿ.

ಬಳಸದೇ ಇರುವ ಗಿಫ್ಟ್ಸ್
ನಮಗೆ ಇಷ್ಟ ಅಂತ ಗಿಫ್ಟ್ಸ್ ನೀಡಬೇಡಿ, ಅವರಿಗೆ ಏನು ಇಷ್ಟ ಅಂತ ತಿಳಿದು ಗಿಫ್ಟ್ಸ್ ಮಾಡಿ, ಉದಾಹರಣೆಗೆ ಚಾಕಲೇಟ್ ಇಷ್ಟವಿರಲ್ಲ, ತುಂಬಾ ಚಾಕಲೇಟ್ ತಂದುಕೊಡುವುದು ಮಾಡಬೇಡಿ.



Click it and Unblock the Notifications
