Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಡೇಟಿಂಗ್ ಆ್ಯಪ್ ಬಳಸುತ್ತಿದ್ದೀರಾ? ಇದರಲ್ಲಿ ಗುಣಗಳಿವೆ, ಈ ಅಪಾಯ ಕೂಡ ಇದೆ
ಆನ್‌ಲೈನ್ ಡೇಟಿಂಗ್ ಖಂಡಿತ ಒಳ್ಳೆಯದಲ್ಲ ಅಂತ ಹೇಳಲೇನು ಸಾಧ್ಯವಿಲ್ಲ. ಏಕೆಂದರೆ ಯಾವುದನ್ನು ಸಂಪೂರ್ಣವಾಗಿ ಇದು, ಇದು ಕೆಟ್ಟದ್ದು ಅಂತ ಹೇಳಲು ಸಾಧ್ಯವಿಲ್ಲ. ಬೆಂಕಿ ಕಡ್ಡಿಯಿಂದ ಮನೆಯಲ್ಲಿ ದೀಪವನ್ನು ಬೆಳಗಬಹುದು, ಮನೆಗೆ ಬೆಂಕಿಯನ್ನೂ ಕೊಡಬಹುದು.

ಈ ಆನ್‌ಲೈನ್ ಡೇಟಿಂಗ್ ಕೆಟ್ಟ ರೀತಿಯಲ್ಲೇ ಸುದ್ದಿ ಮಾಡುವುದರಿಂದ ಇದು ತುಂಬಾ ಕೆಟ್ಟದ್ದು ಎಂಬ ಭಾವನೆ ನಮ್ಮಲ್ಲಿದೆಯಷ್ಟೇ... ಈ ಆನ್‌ಲೈನ್ ಡೇಟಿಂಗ್ ಮೂಲಕ ಒಳ್ಳೆಯ ಬಾಳ ಸಂಗಾತಿ ಕಂಡು ಕೊಂಡವರೂ ಇದ್ದಾರೆ, ಬಾಳನ್ನು ಹಾಳು ಮಾಡಿಕೊಂಡವರೂ ಇದ್ದಾರೆ.
ಆದ್ದರಿಂದ ಆನ್‌ಲೈನ್ ಡೇಟಿಂಗ್ ಮಾಡುವಾಗ ತುಂಬಾನೇ ಹುಷಾರಾಗಿರಬೇಕು, ಆನ್‌ಲೈನ್ ಡೇಟಿಂಗ್‌ನ ಗುಣಗಳು ಹಾಗೂ ಅಪಾಯಗಳ ಬಗ್ಗೆ ನೋಡೋಣ:

ಸಂಗಾತಿಯನ್ನು ಹುಡುಕುವುದು ಸುಲಭ
ಆನ್‌ಲೈನ್ ಡೇಟಿಂಗ್ ಸೈಟ್‌ನಲ್ಲಿ ನಮಗೆ ಬೇಕಾದ ಸಂಗಾತಿಯನ್ನು ಸುಲಭದಲ್ಲಿ ಹುಡುಕಬಹುದು, ಅಲ್ಲದೆ ನಮ್ಮ ಅಭಿರುಚಿಗೆ ಹೊಂದುವ ಜೋಡಿ ಸಿಗುವುದು.
ಹೊಸ ವ್ಯಕ್ತಿಗಳನ್ನು ಭೇಟಿಯಾಗುವುದು ಸುಲಭ
ಇದರಲ್ಲಿ ಸಂಗಾತಿ ಸಿಗುವುದು ಮಾತ್ರವಲ್ಲ, ಕೆಲವೊಮ್ಮೆ ಒಳ್ಳೆಯ ಸ್ನೇಹಿತರೂ ಸಿಗುತ್ತಾರೆ.

ಡೇಟಿಂಗ್ ಪೂಲ್ ಫಿಲ್ಟರ್ ಮಾಡಬಹುದು
ನಿಮಗೆ ಯಾವ ಬಗೆಯ ಡೇಟಿಂಗ್ ಬೇಕು ಅದರಂತೆ ಜನ ಸಿಗುವುದು. ಸ್ಪೀಡ್ ಡೇಟಿಂಗ್, ಬ್ಲೈಂಡ್ ಡೇಟಿಂಗ್ ಹೀಗೆ ಯಾವ ಬಗೆಯ ಡೇಟಿಂಗ್ ಬಯಸುತ್ತಾರೋ ಅದರಂತೆ ಜನ ಸಿಗುವುದು. ಅವರಲ್ಲಿ ನಿಮಗೆ ಸೂಕ್ತವಾಗುವ ವ್ಯಕ್ತಿಯನ್ನು ಆಯ್ಕೆ ಮಾಡಬಹುದು.

ಡೇಟಿಂಗ್ ಆನ್‌ಲೈನ್‌ನ ಅಪಾಯಗಳೇನು?
ನಂಬಿಕೆ ಕಡಿಮೆ ಇರುತ್ತದೆ
ಆನ್‌ಲೈನ್ ಡೇಟಿಂಗ್ ಮೂಲಕ ಪರಿಚಯವಾದರೆ ಆ ವ್ಯಕ್ತಿ ಮೇಲೆ ನಂಬಿಕೆ ಕಡಿಮೆ ಇರುತ್ತದೆ. ಈ ವ್ಯಕ್ತಿ ನನ್ನ ಜೊತೆ ಅಲ್ಲದೆ ಬೇರೆಯವರ ಜೊತೆ ಒಂದೇ ಸಮಯದಲ್ಲಿ ಡೇಟಿಂಗ್ ಮಾಡುತ್ತಿದ್ದಾರಾ ಎಂಬೆಲ್ಲಾ ಸಂಶಯಗಳಿರುತ್ತದೆ.
ಆನ್‌ಲೈನ್ ಡೇಟಿಂಗ್‌ನಲ್ಲಿ ಮೋಸ ಮಾಡುವ ಸಾಧ್ಯತೆ
ಆನ್‌ಲೈನ್ ಡೇಟಿಂಗ್ ಮಾಡುವಾಗ ತುಂಬಾ ಹುಷಾರಾಗಿರಬೇಕು. ಇಲ್ಲದಿದ್ದರೆ ಮೋಸ ಹೋಗಬೇಕಾಗುತ್ತದೆ. ಮೋಸ ಹೋಗುತ್ತಿದ್ದೇವೆ ಎಂದು ಗೊತ್ತಾಗದೇ ಇಲ್ಲ, ಆ ರೀತಿ ಮೋಸ ಮಾಡುವವರೂ ಇದ್ದಾರೆ. ಎಷ್ಟೋ ಜನ ಆನ್‌ಲೈನ್ ಡೇಟಿಂಗ್‌ನಲ್ಲಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹನಿಟ್ರ್ಯಾಪ್ ಆಗುವ ಸಾಧ್ಯತೆ ಹೆಚ್ಚು.

ಖರ್ಚು ಹೆಚ್ಚು
ಆನ್‌ಲೈನ್ ಡೇಟಿಂಗ್‌ನಲ್ಲಿ ಶೋ ಆಫ್ ಮಾಡುವವರೇ ಜಾಸ್ತಿ, ಆ ಕಾರಣಕ್ಕಾಗಿ ಹಣ ಹೆಚ್ಚು ಖರ್ಚಾಗುವುದು. ಬ್ಲೈಂಡ್ ಡೇಟಿಂಗ್‌ನಲ್ಲಿ ಮೀಟ್ ಮಾಡೋಣ ಅಂದ್ರೆ ಒಳ್ಳೆಯ ರೆಸ್ಟೋರೆಂಟ್‌ಗಳು, ಪಬ್‌ಗಳು ಬೇಕು , ಅದಕ್ಕೆಲ್ಲಾ ತುಂಬಾ ಹಣ ಖರ್ಚಾಗುವುದು.
ನೀವು ಆನ್‌ಲೈನ್ ಡೇಟಿಂಗ್ ಮಾಡುವಾಗ ಹಣದ ವಿಷಯದಲ್ಲಿ ತುಂಬಾ ಜಾಗ್ರತೆವಹಿಸಬೇಕು. ಗೊತ್ತಿಲ್ಲದ ವ್ಯಕ್ತಿಗಾಗಿ ತುಂಬಾ ಹಣ ಖರ್ಚು ಮಾಡಬೇಡಿ. ಎಷ್ಟು ಹಣ ಖರ್ಚು ಮಾಡಬೇಕು ಎಂಬುವುದು ಗೊತ್ತಿರಲಿ, ಬಣ್ಣದ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ.

ಡೇಟಿಂಗ್ ಆ್ಯಪ್‌ನಲ್ಲಿ ಸಂಗಾತಿ ಸಿಕ್ಕಾಗ
ಡೇಟಿಂಗ್ ಆ್ಯಪ್ ಬಳಸುವುದು ತಪ್ಪಲ್ಲ, ಆದರೆ ಡೇಟಿಂಗ್ ಆ್ಯಪ್ ಬಳಸುವುದು ಗೊತ್ತಿಲ್ಲದಿದ್ದರೆ ಆವಾಗ ತಪ್ಪಾಗುತ್ತದೆ. ಮೋಸ ಹೋಗುವವರು ಇದ್ದರೆ ಮೋಸ ಮಾಡುವವರು ಹೊಂಚು ಹಾಕುತ್ತಲೇ ಇರುತ್ತಾರೆ. ಆದ್ದರಿಂದ ತುಂಬಾನೇ ಎಚ್ಚರಿಕೆವಹಿಸಬೇಕು. ಸಾಕಷ್ಟು ಬಾರಿ ಒಂಟಿತನ ಅಥವಾ ಇಂಟ್ರೋವರ್ಟ್ ಸ್ವಭಾವದಿಂದಾಗಿ ಇಂಥ ಡೇಟಿಂಗ್ ಆ್ಯಪ್ ಮೊರೆ ಹೋಗುತ್ತಾರೆ, ಅಲ್ಲಿ ಪರಿಚಯವಾದವರ ಜೊತೆಗೆ ಚಾಟಿಂಗ್ ಪ್ರಾರಂಭಿಸುತ್ತಾರೆ. ಆದರೆ ಹೀಗೆ ಪರಿಚಯವಾದವರು ಒಳ್ಳೆಯವರಾ ಅಥವಾ ಅವರಿಂದ ದೂರ ಸರಿಯಬೇಕಾ ಎಂಬುವುದು ಕೆಲವೊಂದು ದಿನಗಳಲ್ಲಿ ಅವರ ನಡವಳಿಕೆಯಿಂದಲೇ ತಿಳಿಯುತ್ತದೆ.
ಮೊದ ಮೊದಲು ಚೆನ್ನಾಗಿದ್ದು ನಂತರ ನಿಮ್ಮ ಬಳಿ ವಸ್ತು ಅಥವಾ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದರೆ ಆ ಸಂಬಂಧದ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು. ಇನ್ನು ಈ ಮೊದಲೇ ಹೇಳಿದಂತೆ ಡೇಟಿಂಗ್ ಆ್ಯಪ್‌ನಲ್ಲಿರುವವರು ಎಲ್ಲರೂ ಕೆಟ್ಟವರು ಅಲ್ಲ. ನಿಮಗೆ ಅಲ್ಲಿ ಯಾರಾದರೂ ಸೂಕ್ತ ವ್ಯಕ್ತಿ ಸಿಕ್ಕಿ ಅವರ ಜೊತೆ ಸಂಬಂಧ ಬೆಳೆಸಬೇಕೆಂದು ಬಯಸಿದರೆ ಮೊದಲು ನೀವು ಅವರನ್ನು ನಂಬಬೇಕು, ನಿಮ್ಮಲ್ಲಿ ಅವರ ಬಗ್ಗೆ ಎಳೆಯಷ್ಟೂ ಸಂಶಯವಿದ್ದರೂ ನೀವು ಅವರ ತಂಟೆಗೆ ಹೋಗಬೇಡಿ, ಏಕೆಂದರೆ ಅಂಥ ಸಂಬಂಧದಲ್ಲಿ ಮುಂದುವರೆದರೆ ನೀವೂ ನೆಮ್ಮದಿಯಾಗಿರಲ್ಲ, ಅವರಿಗೂ ನೆಮ್ಮದಿ ಕೊಡಲ್ಲ. ಆದ್ದರಿಂದ ಡೇಟಿಂಗ್ ಆ್ಯಪ್ ಬಳಸುವಾಗ ಎಚ್ಚರ... ಎಚ್ಚರ



Click it and Unblock the Notifications
