Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅವನ/ ಅವಳ ಮನಸ್ಸಿಗೆ ಹತ್ತಿರವಾಗಬೇಕೆಂದರೆ ಹೀಗೆ ವರ್ತಿಸಬೇಕು
ಎಷ್ಟೋ ದಂಪತಿಗಳ ನಡುವೆ ದೈಹಿಕ ಸಂಪರ್ಕವಿರುತ್ತದೆ, ಆದರೆ ಅವರಿಬ್ಬರ ನಡುವೆ ಭಾವನಾತ್ಮಕ ಬೆಸುಗೆ ಇರುವುದೇ ಇಲ್ಲ. ಮದುಎಯಾಗುತ್ತೆ, ಮಗುವಾಗುತ್ತೆ ಸಂಸಾರ ಏನೋ ಒಂದು ರೀತಿ ನಡೆಯುತ್ತಿರುತ್ತದೆ, ಆದರೆ ಅವರಿಬ್ಬರ ಮನಸ್ಸು ಬೆರೆತಿರುವುದಿಲ್ಲ, ಇವಳ ಮನಸ್ಸು ಅರಿಯಲು ಅವನು ಪ್ರಯತ್ನಿಸಿರುವುದಿಲ್ಲ ಅಥವಾ ಅವನ ಮನಸ್ಸು ಅರಿಯಲು ಇವಳು ಪ್ರಯತ್ನಿಸಿರುವುದಿಲ್ಲ.
ಈ ರೀತಿ ಇರುವ ಸಂಬಂಧದಲ್ಲಿ ಖುಷಿಯೆಂಬುವುದು ಮರೀಚಿಕೆಯಾಗಿರುತ್ತದೆ. ಏನೋ ಒಂದು ಸಂಸಾರ ಕುಂಟುತ್ತಾ ನಡೆಯುವಷ್ಟು ಸಮಯ ನಡೆಯುತ್ತೆ, ನಂತರ ಮುರಿದು ಬೀಳುವುದು. ಹಾಗಾದರೆ ಇಂಥ ಸಂಬಂಧಗಳಲ್ಲಿ ಏನು ಮಿಸ್ಸಾಗಿತ್ತು ಎಂದು ನೋಡುವುದಾದರೆ ಅಲ್ಲಿ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಕೊರತೆಯಿತ್ತು, ಅವರಿಬ್ಬರು ಭಾವನತ್ಮಕವಾಗಿ ಒಂದಾಗಿರುವುದಿಲ್ಲ, ಆದ್ದರಿಂದಲೇ ಸಂಸಾರದಲ್ಲಿ ಸಾಕಷ್ಟು ಸಮಸ್ಯೆಗಳು ಎದ್ದು ಹೊಂದಾಣಿಕೆಯೇ ಕಷ್ಟವಾಗುವುದು.
ನೀವೇ ಯೋಚಿಸಿ ನಮಗೆ ತಂಬಾ ಇಷ್ಟವಿರುವ ವ್ಯಕ್ತಿಯಿಂದ ಸಣ್ಣ-ಪುಟ್ಟ ತಪ್ಪಾದರೆ ಕ್ಷಮಿಸುತ್ತೇವೆ ಅತವಾ ಆ ತಪ್ಪು ದೊಡ್ಡದಾಗಿ ಕಾಣುವುದೇ ಇಲ್ಲ. ಅದೇ ನಮಗೆ ಒಬ್ಬರು ಅಷ್ಟಾಗಿ ಆಗಿ ಬರುವುದಿಲ್ಲ ಎಂದಾದರೆ ಅವರು ಏನೇ ಮಾಡಿದರೂ ತಪ್ಪಾಗಿ ಕಾಣುತ್ತದೆ ಅಲ್ವಾ? ಅದೇ ರೀತಿ ದಾಂಪತ್ಯದಲ್ಲಿ ಭಾವನಾತ್ಮಕವಾದ ಬೆಸುಗೆಯಿಲ್ಲದಿದ್ದರೆ ಸಣ್ಣ-ಪುಟ್ಟ ವಿಷಯಗಳೇ ದೊಡ್ಡ ಜಗಳಕ್ಕೆ ಕಾರಣವಾಗುವುದು.
ಗಂಡ-ಹೆಂಡತಿ ನಡುವೆ ಭಾವನಾತ್ಮಕ ಸಂಬಂಧದಲ್ಲಿ ಕೊರತೆ ಉಂಟಾಗಲು ಅನೇಕ ಕಾರಣಗಳಿರಬಹುದು. ಇಷ್ಟವಿಲ್ಲದೆ ಮದುವೆಯಾಗಿದ್ದು ಅಥವಾ ಅನೈತಿಕ ಸಂಬಂಧ ಈ ಕಾರಣಗಳಿದಾಗಿ ಗಂಡ-ಹೆಂಡತಿ ನಡುವೆ ಅನ್ಯೂನ್ಯತೆ ಕಡಿಮೆಯಾಗುವುದು
ನಿಮ್ಮ ಸಂಗಾತಿ ನಿಮ್ಮೊಂದಿಗೆ ಚೆನ್ನಾಗಿ ಮಾತನಾಡಲ್ಲ, ನಿಮ್ಮ ಜೊತೆ ಏನೂ ಹಂಚಿಕೊಳ್ಳುವುದಿಲ್ಲ ಏಕೋ ಸಂಸಾರ ಹಳಿ ತಪ್ಪುತ್ತಿದೆ ಎಂದಾದರೆ ನೀವು ಈ ಪ್ರಯತ್ನ ಮಾಡಿ ನಿಮ್ಮ ಸಂಸಾರವನ್ನು ಸರಿಮಾಡಬಹುದು.

1. ನಿಮ್ಮ ಸಂಗಾತಿಯನ್ನು ಹೊಗಳಿ
ಯಾವತ್ತೂ ಟೀಕೆ ಮಾಡುತ್ತಲೇ ಇರಬೇಡಿ ಅದು ನಿಮ್ಮಿಬ್ಬರ ನಡುವಿನ ಅಂತರ ಹೆಚ್ಚಿಸುವುದು. ನಿಮ್ಮ ಸಂಗಾತಿಯನ್ನು ಆಗಾಗ ಹೊಗಳಿ, ಅವರ ಕೆಲವೊಂದು ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ. ಈ ನಡವಳಿಕೆ ನಿಮ್ಮ ಸಂಸಾರದಲ್ಲಿ ಒಳ್ಳೆಯ ಬದಲಾವಣೆ ತರುತ್ತದೆ.

2. ಇಬ್ಬರು ಜೊತೆಯಲ್ಲಿ ಸ್ವಲ್ಪ ಸಮಯ ಕಳೆಯಿರಿ
ನಿಮ್ಮ ಸಂಬಂಧವನ್ನು ಗಟ್ಟಿಯಾಗಿಸಲು ಇಬ್ಬರು ಜೊತೆಯಾಗಿ ಸಮಯ ಕಳೆಯಿರಿ. ಎಷ್ಟೇ ಕೆಲಸ ಬ್ಯುಸಿ ಇರಲಿ, ನಿಮ್ಮಿಬ್ಬರಿಗಾಗಿ ನೀವು ಸ್ವಲ್ಪ ಸಮಯ ಮೀಸಲಿಡಿ. ಆ ಸಮಯದಲ್ಲಿ ಮನಸ್ಸು ಬಿಚ್ಚಿ ಮಾತನಾಡಿ.
ಇಬ್ಬರು ಜೊತೆಯಾಗಿ ಡಿನ್ನರ್‌ಗೆ ಹೋಗಿ, ಚಿಕ್ಕ ಪ್ರವಾಸ ಮಾಡಿ, ಇವೆಲ್ಲ ನಿಮ್ಮಿಬ್ಬರ ನಡುವಿನ ಬಾಂಧವ್ಯ ಹೆಚ್ಚುವುದು.

3. ನಿಮ್ಮ ಸಂಗಾತಿಯ ಮಾತನ್ನು ಆಲಿಸಿ
ಅವರು ಏನಾದರೂ ಹೇಳುವಾಗ ಮಧ್ಯ ಬಾಯಿ ಹಾಕುವುದು ಅಥವಾ ಅವರು ಹೇಳುವ ಮುನ್ನವೇ ಅದಕ್ಕೆ ನಿಮ್ಮ ಅಭಿಪ್ರಾಯ ಹೇಳುವುದು ಮಾಡಬೇಡಿ, ಸಮಧಾನವಾಗಿ ಆಲಿಸಿ. ಈ ಅಭ್ಯಾಸ ಅವರು ನಿಮ್ಮೊಂದಿಗೆ ಹೆಚ್ಚು ಮಾತನಾಡುವಂತೆ ಮಾಡುತ್ತದೆ.

4. ನಿಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ
ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯ ಅರ್ಥ ಮಾಡಿಕೊಳ್ಳಲಿ ಎಂದು ಭಾವಿಸುವುದರಿಂದ ಕೆಲವೊಮ್ಮೆ ನಿಮ್ಮ ನಿರೀಕ್ಷೆ ಸುಳ್ಳಾಗಬಹುದು. ಆದ್ದರಿಂದ ನಿಮ್ಮ ಭಾವನೆಗಳನ್ನು ನೀವೇ ಅವರೊಂದಿಗೆ ಹಂಚಿಕೊಳ್ಳಿ. ಇದರಿಂದ ಅವರು ನಿಮ್ಮ ಭಾವನೆಗಳಿಗೆ ಸ್ಪಂದಿಸಬಹುದು.

5. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಅಂತ ಬೈಯ್ಯಬೇಡಿ
ನೀವು ಏನಾದರೂ ನಿಮ್ಮ ಸಂಗಾತಿ ಬಳಿ ಹೇಳಿದಾಗ ಅದರಂತೆ ಅವರಿಗೆ ನಡೆದುಕೊಳ್ಳಲು ಸಾಧ್ಯವಾಗದೇ ಹೋಗದೆ ಹೋದರೆ, ಹಾಗಂತ ಆ ವಿಷಯಕ್ಕೆ ಅವರನ್ನು ಬೈಯ್ಯಬೇಡಿ ಅಥವಾ ಆ ಬಗ್ಗೆ ಪ್ರಶ್ನೆ ಮಾಡಬೇಡಿ. ಉದಾಹರಣೆಗೆ ನೀನು ರೊಮ್ಯಾಂಟಿಕ್ ಅಲ್ಲ ಎಂದು ಹೇಳುವ ಬದಲಿಗೆ ನೀವು ಹೀಗೆ ಮಾಡಿದ್ದರೆ ಖುಷಿಯಾಗುತ್ತಿತ್ತು ಅತ ಹೇಳಿ.

6. ಸಂಶಯ ಪಡಬೇಡಿ
ಒಂದು ವೇಳೆ ನಿಮ್ಮ ಸಂಗಾತಿಯ ಮೇಲೆ ಸಂಶಯವಿದ್ದರೂ ಸಂಶಯ ವ್ಯಕ್ತಪಡಿಸಬೇಡಿ. ಯಾವುದೇ ವಿಷಯವನ್ನು ಖಚಿತವಾಗುವ ಮುನ್ನ ಹೇಳಲು-ಕೇಳಲು ಹೋಗಬೇಡಿ. ನಿಮ್ಮ ಸಂಗಾತಿ ಹಾದಿ ತಪ್ಪುತ್ತಿದ್ದಾರೆ ಎಂದಾದರೆ ಅವರ ಮೇಲೆ ಪ್ರೀತಿ ತೋರಿಸಿ ಅದನ್ಉ ತಡೆಗಟ್ಟಿ ನಿಮ್ಮ ಸಂಸಾರ ಉಳಿಸಿಕೊಳ್ಳಲು ಪ್ರಯತ್ನಿಸಿ.
ಈ ಟಿಪ್ಸ್ ನಿಮ್ಮಬ್ಬರ ನಡುವೆ ಮಾಧುರ್ಯ ಹೆಚ್ಚಲು ಖಂಡಿತ ಸಹಾಯ ಮಾಡುತ್ತೆ.



Click it and Unblock the Notifications











