Latest Updates
-
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ!
ದಂಪತಿಗಳೇ ವ್ಯಾಲೆಂಟೈನ್ಸ್ ಡೇಯಂದು ಬೆಡ್‌ರೂಂ ಹೀಗಿದ್ದರೆ ಮತ್ತಷ್ಟು ಸ್ಪೆಷಲ್ ಆಗಿರುತ್ತೆ
ವ್ಯಾಲೆಂಟೈನ್ಸ್ ಡೇ ಪ್ರೇಮಿಗಳ ಹಬ್ಬ ಮಾತ್ರವಲ್ಲ ಇದನ್ನು ಟೀನೇಜರ್ಸ್‌ನಿಂದ ಹಿಡಿದು ಹಣ್ಣ ಹಣ್ಣು ಮುದುಕರು ಕೂಡ ತಮ್ಮ ಗೆಳತಿಯ ಜೊತೆಯಲ್ಲಿ ಸೆಲೆಬ್ರೇಟ್ ಮಾಡ್ತಾರೆ. ಸದ್ಯ ವ್ಯಾಲೆಂಟೈನ್ಸ್ ಡೇ ಹತ್ತಿರದಲ್ಲೇ ಇರೋದ್ರಿಂದ ಪ್ರೇಮಿಗಳು ಸಿಕ್ಕಾಪಟ್ಟೆ ಪ್ಲಾನಿಂಗ್ ಮಾಡ್ಕೊಂಡಿರ್ತಾರೆ. ಆದ್ರೆ ನಾವೀಗ ನವ ದಂಪತಿಗಳಿಗಾಗಿ ಸಿಂಪಲ್ ಬೆಡ್ ರೂಂ ಟಿಪ್ಸ್ ಕೊಡ್ತಿದ್ದೀವಿ.
ವ್ಯಾಲೆಂಟೈನ್ಸ್ ಡೇ ದಿನ ನಿಮ್ಮ ಬೆಡ್ ರೂಂ ಡೆಕೊರೇಷನ್ ಹೇಗಿರಬೇಕು? ಯಾವ ರೀತಿ ನಿಮ್ಮ ಬೆಡ್ ರೂಂ ಅಲಂಕರಿಸಿದ್ರೆ ನಿಮ್ಮ ಸಂಗಾತಿ ಇಷ್ಟ ಪಡ್ತಾರೆ? ಎಲ್ಲದರ ಬಗ್ಗೆ ಡಿಟೇಲ್ ಆಗಿ ಹೇಳ್ತೀವಿ.

ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಬೆಡ್ ರೂಂ ಹೀಗಿದ್ದರೆ ಚೆಂದ
ನವ ದಂಪತಿಗಳಿಗೆ ಈ ವರ್ಷದ ವ್ಯಾಲೆಂಟೈನ್ಸ್ ಡೇ ತುಂಬಾನೇ ಸ್ಪೆಷಲ್ ಆಗಿರುತ್ತೆ. ಈ ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಸಂಗಾತಿಯ ಜೊತೆಗೆ ರೋಮ್ಯಾಂಟಿಕ್ ಆಗಿ ಕಳೀಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿದ್ರೆ ಉತ್ತಮ. ನಿಮ್ಮ ಪ್ರೀತಿ ಪಾತ್ರದ ಖುಷಿಗೆ ಇಲ್ಲಿದೆ ವಂಡರ್ಫುಲ್ ಟಿಪ್ಸ್.

1. ಬಿಳಿ ಬಣ್ಣದ ಬೆಡ್‌ಶೀಟ್ ಜೊತೆಗೆ ಸಾಫ್ಟ್‌ಬೆಡ್ ಬಳಸಿ
ಬೆಡ್ ಯಾವತ್ತೂ ಸಾಫ್ಟ್ ಆಗಿರಬೇಕು. ಬೆಡ್ ಅಷ್ಟೇ ಅಲ್ಲ, ಅದರ ಜೊತೆಗೆ ಬೆಡ್‌ಶೀಟ್ ಬಗ್ಗೆನೂ ಗಮನ ಹರಿಸಿ ಸಿಲ್ಕ್ ಅಥವಾ ಸ್ಯಾಟಿನ್ ಬೆಡ್‌ಶೀಟ್ ಬಳಸಿದ್ರೆ ಉತ್ತಮ. ಸಾಧ್ಯಾವಾದಷ್ಟು ಹೊಸ ಬೆಡ್‌ಶೀಟ್ ಬಳಸಿ ಇಲ್ಲವಾದಲ್ಲಿ ಒಗೆದು ಶುಚಿಯಾದ ಬೆಡ್‌ಶೀಟ್ ಬಳಸಿದರೆ ಉತ್ತಮ.

2. ಕೋಣೆಗೆ ಹೊಂದಿಕೊಳ್ಳುವ ಕರ್ಟನ್ ಬಳಸಿ
ನಿಮ್ಮ ರೂಂ ಒಳಗಿನ ಕರ್ಟನ್ ಬಗ್ಗೇನೂ ನೀವು ತುಂಬಾನೇ ಜಾಗೃತೆ ವಹಿಸಬೇಕಾಗುತ್ತದೆ. ಗಾಢವಾದ ಬಣ್ಣದ ಕರ್ಟನ್ ಬಳಸಿದರೆ ಸಾಮಾನ್ಯವಾಗಿ ಚೆನ್ನಾಗಿ ಕಾಣಿಸೋದಿಲ್ಲ. ಬದಲಾಗಿ ಲೈಟ್ ಕಲರ್ ಕರ್ಟನ್ ಬಳಸಿ. ಅದೂ ಕೂಡ ನಿಮ್ಮ ಬೆಡ್‌ಶೀಟ್‌ಗೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಿ. ಖಂಡಿತ ನಿಮ್ಮ ಸಂಗಾತಿ ಇಷ್ಟ ಪಡುತ್ತಾರೆ.

3. ಸಾಫ್ಟ್ ಲೈಟಿಂಗ್‌ಗೆ ಆಧ್ಯತೆ ನೀಡಿ
ನಿಮ್ಮ ಬೆಡ್‌ರೂಂನ ಲೈಟಿಂಗ್ ತುಂಬಾನೇ ಮುಖ್ಯವಾಗುತ್ತದೆ. ಲೈಟಿಂಗ್ ಯಾವತ್ತಿಗೂ ಕಣ್ಣು ಕುಕ್ಕುವಂತೆ ಇರಬಾರದು. ನಿಮ್ಮ ವ್ಯಾಲೆಂಟೈನ್ಸ್ ಡೇ ರೋಮ್ಯಾಂಟಿಕ್ ಆಗ್ಬೇಕಂದ್ರೆ ಬೆಡ್‌ರೂಂನಲ್ಲಿ ಸಾಫ್ಟ್‌ಲೈಟಿಂಗ್ ಇದ್ದರೆ ಚೆಂದ. ಅದ್ರಲ್ಲೂ ಡಿಮ್ ಆಪ್ಷನ್ ಇದ್ದರೆ ಆದಷ್ಟು ಬೆಳಕನ್ನ ಕಡಿಮೆ ಮಾಡಿ. ಆಗ ನಿಮ್ಮ ದಿನ ಮತ್ತಷ್ಟು ರೊಮ್ಯಾಂಟಿಕ್ ಆಗುತ್ತದೆ.

4. ಕ್ಯಾಂಡಲ್‌ನಿಂದ ಅಲಂಕರಿಸಿ
ನಿಮ್ಮ ಕೋಣೆಯೊಳಗಡೆ ಕ್ಯಾಂಡಲ್‌ನಿಂದ ಅಲಂಕರಿಸಿ. ಜೊತೆಗೆ ನಿಮ್ಮ ಸಂಗಾತಿಗೆ ಇಷ್ಟವಾಗುವ ಪಾನೀಯವನ್ನು ಬೆಡ್‌ರೂಂನಲ್ಲಿ ಇರಿಸಿ. ಇನ್ನೂ ಸಂಗಾತಿ ರೂಂಗೆ ಬಂದ ತಕ್ಷಣ ಅವರಿಗೆ ಇಷ್ಟವಾಗುವ ಗಿಫ್ಟ್ ನೀಡಿ ಅವರನ್ನ ಸ್ವಾಗತಿಸಿ.

5. ಗುಲಾಬಿ ಹೂವಿನಿಂದ ಸಿಂಗರಿಸಿ
ಕೆಂಪು ಪ್ರೇಮದ ಸಂಕೇತ. ಅದ್ರಲ್ಲೂ ಗುಲಾಬಿ ಹೂ ಪ್ರೀತಿಗೆ ಮತ್ತೊಂದು ಹೆಸರು. ನಿಮ್ಮ ಬೆಡ್‌ರೂಂ ಅನ್ನ ಗುಲಾಬಿ ಎಸಳಿನಿಂದ ಅಲಂಕರಿಸಿ. ಜೊತೆಗೆ ನಿಮ್ಮ ಸಂಗಾತಿ ಕೋಣೆಯೊಳಗಡೆ ಬಂದ ತಕ್ಷಣ ಅವರಿಗೆ ಮಂಡಿಯೂರಿ ಪ್ರಪೋಸ್ ಮಾಡಿ ಗುಲಾಬಿ ಹೂವನ್ನು ನೀಡಿ.

6. ಫೋಟೋ ಫ್ರೇಮ್ ಸಿದ್ಧಪಡಿಸಿ
ನಿಮ್ಮ ಬಳಿ ಸಾಕಷ್ಟು ಸಮಯವಿದ್ದರೆ ನಿಮ್ಮ ಸಂಗಾತಿಯ ಜೊತೆಗಿನ ಎಲ್ಲಾ ಫೋಟೋಗಳನ್ನ ಸಂಗ್ರಹಿಸಿ ಒಂದು ಫೋಟೋ ಫ್ರೇಮ್ ತಯಾರಿಸಿ ಕೋಣೆಯೊಳಗಡೆ ಅಳವಡಿಸಿ. ನಂತರ ಫೇರಿ ಲೈಟಿಂಗ್ ಜೊತೆಗೆ ನಿಮ್ಮಿಬ್ಬರ ಫೋಟೋಗಳನ್ನ ಅಟ್ಯಾಚ್ ಮಾಡಿ. ಖಂಡಿತ ನಿಮ್ಮ ಸಂಗಾತಿಗೆ ಇಷ್ಟವಾಗುತ್ತದೆ.

7. ರೊಮ್ಯಾಂಟಿಕ್ ಹಾಡು ಇರಲಿ
ನಿಮ್ಮ ವ್ಯಾಲಂಟೈನ್ಸ್ ಡೇ ಅನ್ನ ಮತ್ತಷ್ಟು ಸುಂದರಗೊಳಿಸಲು ನಿಮ್ಮ ಕೋಣೆಯಲ್ಲಿ ಆದಷ್ಟು ರೊಮ್ಯಾಂಟಿಕ್ ಹಾಡು ಪ್ಲೇ ಮಾಡಿ. ಅಷ್ಟೇ ನಿಮ್ಮ ಸಂಗಾತಿ ಹೆಜ್ಜೆಯಿಡುವ ಜಾಗವನ್ನು ಗುಲಾಬಿ ಹೂ ಹಾಗೂ ಕ್ಯಾಂಡಲ್‌ನಿಂದ ಸಿಂಗರಿಸಿ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಬೆಡ್‌ರೂಂ ಸಿಂಗರಿಸಿ. ಒಟ್ಟಿನಲ್ಲಿ ನಿಮ್ಮ ಬೆಡ್‌ರೂಂ ಅಲಂಕಾರ ನಿಮ್ಮ ಸಂಗಾತಿ ಒಪ್ಪುವಂತಿರಲಿ.



Click it and Unblock the Notifications