Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಚುಂಬಿಸುವಾಗ ಈ ತಪ್ಪು ಮಾಡದಿರಿ, ಸಂಗಾತಿಗೆ ಇಷ್ಟವಾಗಲ್ಲ
ಸಂಗಾತಿ ನಿಮಗೆ ನೀಡಿದ ಮೊದಲ ಚುಂಬನ ನೀಡಿದ ರೋಮಾಂಚನ ನೆನಪಿದೆಯೇ? ಹೀಗೆ ಯಾರಾದರೂ ಕೇಳಿದರೂ ಛೀ... ಅಂತ ನೀವು ಹೇಳಿದರೂ ನಿಮ್ಮಲ್ಲಿ ಆ ಮುತ್ತಿನ ರೋಮಾಂಚನದ ನೆನಪು ಮರುಕಳಿಸಿ ತುಟಿಯಲ್ಲಿ ಕಿರುನಗೆಯೊಂದು ಮೂಡಿಯೇ ಮೂಡುವುದು.
ಸಂಬಂಧದಲ್ಲಿ ಮುತ್ತಿಗೆ ತುಂಬಾನೇ ಪ್ರಾಮುಖ್ಯತೆ ಇದೆ. ನಿಮ್ಮ ಎಲ್ಲಾ ದುಃಖ ಮರೆಸುವ ಶಕ್ತಿ ಸಂಗಾತಿಯ ಚುಂಬನದಲ್ಲಿದೆ, ಒಬ್ಬರಿಗೊಬ್ಬರು ಪರಸ್ಪರ ಬಿಗಿದಪ್ಪಿ ಸಿಹಿಯದ ಚುಂಬನ ಕೊಟ್ಟರೆ ಸಾಕು ನಿಮ್ಮಿಬ್ಬರ ನಡುವೆ ಇದ್ದ ಚಿಕ್ಕ-ಪುಟ್ಟ ಕೋಪ, ಭಿನ್ನಾಭಿಪ್ರಾಯ ದೂರಾಗಿ ಇಬ್ಬರಲ್ಲಿ ಪ್ರೀತಿ ಹೆಚ್ಚುವುದು.
ಇನ್ನು ಸಂಗಾತಿಗೆ ನೀವು ನೀಡುವ ಚುಂಬನ ಅವರಿಗೆ ಹಿತ ಅನುಭವ ನೀಡಬೇಕೇ ಹೊರತು ಕಿರಿಕಿರಿ, ಮುಜುಗರ ಉಂಟು ಮಾಡಬಾರದು, ಆದ್ದರಿಂದ ಚುಂಬನ ನೀಡುವಾಗ ಅದು ಸಿಹಿ ಚುಂಬನವಾಗಲು ಈ ತಪ್ಪುಗಳನ್ನು ಮಾಡದಿರಿ:

ನಾಲಗೆಯನ್ನು ತುಂಬಾ ಬಳಸುವುದು
ತುಂಬಾ ನಾಲಗೆ ಬಳಸಿದರೆ ಅದು ಬ್ಯಾಡ್ ಕಿಸ್ ಆಗಿದೆ, ಕಿಸ್ ಮಾಡಲು ಪ್ರಾರಂಭಿಸಿದಾಗಲೇ ಸಂಗಾತಿಯ ಬಾಯಿಯೊಳಗೆ ತಮ್ಮ ನಾಲಗೆ ಹಾಕುವುದು ಬ್ಯಾಡ್ ಐಡಿಯಾ ಅಂತಾರೆ ರಿಲೇಷನ್‌ಶಿಪ್ ಎಕ್ಸ್‌ಪರ್ಟ್. ಅಲ್ಲದೆ ನಾಲಗೆ ಬಳಸುವಾಗ ನಿಮ್ಮ ಬಾಯಿಯೊಳಗೆ ತುಂಬಾ ಎಂಜಲು ಇದ್ದರೆ ಅದು ನಿಮ್ಮ ಸಂಗಾತಿ ಕಿರಿಕಿರಿ ಅನಿಸಬಹುದು. ಅವರಿಗೆ ಹೇಳಲೂ ಸಾಧ್ಯವಾಗಲ್ಲ, ಇತ್ತ ನಿಮ್ಮ ಜೊತೆ ರೊಮ್ಯಾಂಟಿಕ್ ಆಗಿ ಇರಲೂ ಸಾಧ್ಯವಾಗಲ್ಲ, ಆದ್ದರಿಂದ ನಿಮ್ಮ ಎಂಜಲು ಅವರ ಮುಖದ ಮೇಲಾಗದಂತೆ ಎಚ್ಚರವಹಿಸಿ.

ಚುಂಬನ ಮಾಡಲು ಮುಂದಾದಗ ಕಚಗುಳಿಯಿಟ್ಟಂತೆ ನಗುವುದು
ಈ ರೀತಿ ಮಹಿಳೆಯರು ಹೆಚ್ಚಾಗಿ ಮಾಡುತ್ತಾರೆ. ಸಂಗಾತಿ ತುಂಬಾ ರೊಮ್ಯಾಂಟಿಕ್ ಫೀಲ್‌ನಿಂದ ಮುತ್ತಿಕ್ಕಲು ಬಂದಾಗ ಕಚಗುಳಿಯಿಟ್ಟಾಂತಾಗಿ ಕೊಸರಿಕೊಂಡರೆ ನಿಮ್ಮ ಸಂಗಾತಿ ಮೂಡ್ ಆಫ್ ಆಗುವುದು. ಕಿಸ್‌ನ ಫೀಲ್ ಸಿಗದೆ ಅವರಿಗೆ ನಿರಾಸೆಯಾಗಬಹುದು. ಅವರಿಗೆ ಮುಂದುವರೆಯಲು ಅಸಕ್ತಿ ಬರಲ್ಲ. ಆದ್ದರಿಂದ ಸಂಗಾತಿ ಜೊತೆ ಚುಂಬಿಸುವಾಗ ಈ ರೀತಿ ತಪ್ಪು ಮಾಡದಿರಿ.

ಕಿಸ್ ಮಾಡುವಾಗ ಮಾತನಾಡುವುದು
ಚುಂಬನವೇ ಭಾವನೆಗಳನ್ನು ಹೇಳುತ್ತಿರುವಾಗ ಅಲ್ಲಿ ಮಾತಿನ ಅವಶ್ಯಕತೆ ಏಕೆ? ಆದ್ದರಿಂದ ಚುಂಬಿಸುವಾಗ ಮಾತನಾಡಬೇಡಿ. ಯೂ ಆರ್ ಹಾಟ್, ನೀನು ತುಂಬಾ ಸೆಕ್ಸಿ ಈ ರೀತಿ ಹೇಳಬಹುದು, ಆದರೆ ರೊಮ್ಯಾಂಟಿಕ್ ಮೂಡ್‌ನಲ್ಲಿರುವಾಗ ಫ್ಯಾಮಿಲಿ ವಿಷಯ ಮಾತನಾಡಬೇಡಿ.

ಅವನ /ಅವಳ ಹಲ್ಲು ನೆಕ್ಕುವುದು
ಚುಂಬನದಲ್ಲಿ ನಾಲಗೆಯನ್ನು ಹೆಚ್ಚಾಗಿ ಬಳಸುವುದು ಹೇಗೆ ಒಳ್ಳೆಯದಲ್ಲವೋ ಅದೇ ರೀತಿ ಸಂಗಾತಿ ಹಲ್ಲು ನೆಕ್ಕಬೇಡಿ. ಲಿಪ್ ಕಿಸ್ ಮಾಡುವುದಾದರೆ ಅದು ರೊಮ್ಯಾಂಟಿಕ್ ಆಗಿರಬೇಕು, ನಿಮ್ಮಿಬ್ಬರಿಗೆ ಇನ್ನೂ ಬೇಕೆಂದು ಅನಿಸುವಂತಿರಬೇಕು, ಸಂಗಾತಿಯ ಆಸಕ್ತಿ ಕುಗ್ಗಿಸುವಂತಿರಬಾರದು.

ಕಿಸ್ ಮಾಡುವಾಗ ಸಂಗಾತಿಯ ಮುಖವನ್ನು ದಿಟ್ಟಿಸಿ ನೋಡುವುದು
ಕಿಸ್ ಮಾಡುವಾಗ ಇಬ್ಬರು ಕಣ್ಣುಚ್ಚಿ ಆ ಕ್ಷಣವನ್ನು ಆನಂದಿಸಬೇಕು, ಬದಲಿಗೆ ಕಣ್ತೆರೆದು ಸಂಗಾತಿಯನ್ನು ದಿಟ್ಟಿಸಿ ನೋಡುವುದು ಗುಡ್ ಐಡಿಯಾ ಅಲ್ವೇ ಅಲ್ಲ, ನಿಮ್ಮ ಸಂಗಾತಿ ಕಣ್ತೆರೆದು ನೋಡಿದರೆ ಅವರು ಆ ಕ್ಷಣ ಎಂಜಾಯ್ ಮಾಡುತ್ತಿಲ್ಲ, ಏನೋ ಬಲವಂತಕ್ಕೆ ಮಾಡುತ್ತಿದ್ದಾರೆ ಎಂದು ಹೇಳಬಹುದು.

ಬಾಯಿ ದುರ್ವಾಸನೆ ಬೀರದಂತೆ ಎಚ್ಚರವಹಿಸಿ
ನೀವು ಸಂಗಾತಿಗೆ ಲಿಪ್‌ಕಿಸ್ ಮಾಡುವಾಗ ಬಾಯಿ ದುರ್ವಾಸನೆ ಬೀರಿದರೆ ಅದು ಅವರಿಗೆ ವಾಕರಿಗೆ ತರಬಹುದು. ಆದ್ದರಿಂದ ಕಿಸ್ ಮಾಡುವ ಮುನ್ನ ಬಾಯಿಯನ್ನು ಚೆನ್ನಾಗಿ ತೊಳೆಯಿರಿ, ಮೌತ್ ಫ್ರೆಷ್ ಬಳಸಿ. ಸಿಗರೇಟ್, ಮದ್ಯ, ಗುಟುಕ ಇವುಗಳ ವಾಸನೆ ಬೀರುತ್ತಿದ್ದರೆ ಸಂಗಾತಿ ನೀವು ಸಮೀಪ ಬಂದಾಗ ವಾಕರಿಕೆಯ ಅನುಭವವಾಗುವುದು.

ಲಿಪ್ ಮಾತ್ರ ಫೋಕಸ್ ಆಗದಿರಲಿ
ಪುರುಷರು ಕಿಸ್ ಮಾಡುವ ಲಿಪ್ ಕಿಸ್ ಕಡೆ ಹೆಚ್ಚು ಗಮನ ಹರಿಸಿದರೆ ಮಹಿಳೆಯರು ಹಾಟ್ ಕಿಸ್ ಜೊತೆಗೆ ರೊಮ್ಯಾಂಟಿಕ್ ಕಿಸ್ ಕೂಡ ಬಯಸುತ್ತಾರೆ. ಮೊದಲು ರೊಮ್ಯಾಂಟಿಕ್ ಆಗಿ ಪ್ರಾರಂಭಿಸಿ, ಅಂದರೆ ಮೊದಲಿಗೆ ಕೆನ್ನೆಗೆ, ಹಣೆಗೆ ಮುತ್ತಿಕ್ಕಿ, ಈ ರೀತಿಯ ಮುತ್ತು ಅವಳಿಗೆ ತುಂಬಾನೇ ಸುರಕ್ಷತೆಯ ಫೀಲ್ ನೀಡುವುದು. ಆದ್ದರಿಂದ ನೀವು ಅವಳನ್ನು ನಿಮ್ಮತ್ತ ಆಕರ್ಷಿಸಲು ಮೊದಲಿಗೆ ಹಣೆಗೆ ಮುತ್ತಿಕ್ಕಿ, ಅದೂ ನಿಮ್ಮದು ಮೊದಲ ಚುಂಬನವಾಗಿದ್ದರೆ ನೇರವಾಗಿ ತುಟಿಗೆ ನೀಡುವುದರ ಬದಲು, ಮೊದಲು ಹಣೆಗೆ ಚುಂಬಿಸಿ.



Click it and Unblock the Notifications
