Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ತನ್ನ ಗೆಳೆಯನನ್ನು ಮಿಸ್ ಮಾಡಿಕೊಂಡಾಗ ಹುಡುಗಿಯರು ಮಾಡುವ ಕೆಲಸಗಳಿವು
ಪ್ರೀತಿಯಲ್ಲಿ ಬಿದ್ದವರು ಸದಾ ತಮ್ಮ ಸಂಗಾತಿಯ ಜೊತೆಗೆ ಭವಿಷ್ಯವನ್ನು ಕಳೆಯುವ ಕನಸು ಕಾಣುತ್ತಲೇ ಇರುತ್ತಾರೆ. ಅದಕ್ಕೆ ಹಗಲು-ರಾತ್ರಿಯೆಂಬುದು ಇರುವುದಿಲ್ಲ. ಒಂದು ಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ ಎಂಬಂತೆ ಇರುವ ಪ್ರೇಮಿಗಳು ಸಣ್ಣ ಅಂತರವನ್ನು ಸಹಿಸಲಾರರು. ಅಂತಹ ಸಂದರ್ಭ ಬಂದಾಗ ಹುಡುಗಿ ಆದವಳು ತನ್ನ ಪ್ರಿಯಕರನ ನೆನಪಾದಾಗ ಏಕೆ ಏನು ಮಾಡುತ್ತಾಳೆ ಗೊತ್ತಾ? ಈ ಸ್ಟೋರಿ ಓದಿ ತಿಳಿಯುವುದು.
ಪ್ರೇಯಸಿ ತನ್ನ ಪ್ರಿಯತಮನನ್ನು ಮಿಸ್ ಮಾಡಿಕೊಳ್ಳುವಾಗ ಆಕೆ ಮಾಡುವ ಕೆಲಸಗಳನ್ನು ಈ ಕೆಳಗೆ ನೀಡಲಾಗಿದೆ:

ಸಂಗಾತಿಯ ಸೋಶಿಯಲ್ ಮೀಡಿಯಾ ಪರಿಶೀಲನೆ:
ಒಂದು ಹುಡುಗಿ ತನ್ನ ಸಂಗಾತಿಯನ್ನು ಭೇಟಿಯಾಗಲು ಸಾಧ್ಯವಾಗದಿದ್ದಾಗ ಅಥವಾ ಅವನನ್ನು ಕಳೆದುಕೊಂಡಾಗ, ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೊಫೈಲ್ ನೋಡುತ್ತಾಳೆ. ಪ್ರತಿ ಗಂಟೆಗೆ ಒಮ್ಮೆ ಅದನ್ನು ವೀಕ್ಷಿಸುವುದನ್ನು ಮರೆಯುವುದಿಲ್ಲ. ಅವಳು ಆತನ ಪ್ರೊಫೈಲ್‌ನಲ್ಲಿರುವ ಪ್ರತಿಯೊಂದು ಸಣ್ಣ ವಿಷಯವನ್ನೂ ದೀರ್ಘಕಾಲ ನೋಡುತ್ತಲೇ ಇರುತ್ತಾಳೆ. ಜೊತೆಗೆ ಆತನ ಪೋಸ್ಟ್ ಗೆ ಇತರ ಜನರು ಮಾಡಿರುವ ಕಾಮೆಂಟ್‌ಗಳನ್ನು ಓದಲು ತನ್ನ ಸಮಯವನ್ನು ಕಳೆಯುತ್ತಾಳೆ.

ಕನಸಿನಲ್ಲಿ ಕಳೆದುಹೋಗುವುದು:
ಗೆಳೆಯನ ಅನುಪಸ್ಥಿತಿಯಲ್ಲಿ ಹುಡುಗಿ ರೋಮ್ಯಾಂಟಿಕ್ ಚಲನಚಿತ್ರವನ್ನು ನೋಡುತ್ತಿದ್ದರೆ, ಆ ಚಿತ್ರದಲ್ಲಿ ಅವಳು ತನ್ನ ಗೆಳೆಯನ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾಳೆ. ಆ ಚಿತ್ರವನ್ನು ತನಗೆ ರಿಲೇಟ್ ಮಾಡಿಕೊಂಡು ಹಗಲು ಕನಸು ಕಾಣುವುದರಲ್ಲಿ ಮಗ್ನರಾಗಿರುತ್ತಾಳೆ. ಒಂದು ವೇಳೆ ಆತ ಆಕೆಯನ್ನು ತೊರೆದು ಹೋಗಿದ್ದರೆ, ಚಲನಚಿತ್ರ ನೋಡಿದಾಗ ಅದನ್ನು ನೆನೆಸಿಕೊಂಡು ಅಳುವುದು ಉಂಟು.

ಪದೇ ಪದೇ ಕರೆ ಮಾಡುವುದು:
ಒಂದು ಹುಡುಗಿ ತನ್ನ ಸಂಗಾತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ ಆತನಿಗೆ ಆಕೆ ಪದೇ ಪದೇ ಕರೆ ಮಾಡುವಳು. ಏನೋ ಎಮರ್ಜೆನ್ಸಿ ಹೇಳೋಕೆ ಇದೆ ಅಂತ ಕಾರಣ ಹೇಳಿ, ಅದಕ್ಕೆ 'ಸಾರಿ' ನೂ ಕೇಳಿ ಆತನ ಜೊತೆ ಮಾತನಾಡುವಳು. ಆದಾಗ್ಯೂ, ಇಬ್ಬರ ನಡುವಿನ ತುರ್ತು ಮಾತು 'ಐ ಲವ್ ಯು' ನಿಂದ ಪ್ರಾರಂಭವಾಗಿ, 'ಐ ಲವ್ ಯು' ನೊಂದಿಗೆ ಕೊನೆಗೊಳ್ಳುತ್ತದೆ.

ಸ್ನೇಹಿತರೊಂದಿಗೆ ಚರ್ಚೆ:
ತನ್ನ ಸ್ನೇಹಿತರೊಂದಿಗೆ ಮಾತನಾಡುವಾಗಲೂ ಸಹ ಹುಡುಗಿ ತನ್ನ ಗೆಳೆಯನ ಬಗ್ಗೆ ಮಾತ್ರ ಚರ್ಚಿಸುತ್ತಲೇ ಇರುತ್ತಾಳೆ. ತನ್ನ ಬಿಡುವಿನ ವೇಳೆಯಲ್ಲಿ ತನ್ನ ಹತ್ತಿರದ ಸ್ನೇಹಿತರೊಂದಿಗೆ ತನ್ನ ಪ್ರೀತಿಯ ಅನುಭವಗಳನ್ನು ಹಂಚಿಕೊಳ್ಳಲು ಅವಳು ಇಷ್ಟಪಡುತ್ತಾಳೆ. ಅದು ಆತ ಅವಳೊಂದಿಗೆ ಇಲ್ಲದೇ ಇರುವಾಗಲಂತೂ ತುಂಬಾ ಹೆಚ್ಚು. ತಾನು ಆತನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ಯಾರ ಬಳಿಯಾದರೂ ಹೇಳಿಕೊಂಡರೆ ಆಕೆಗೆ ಸಮಾಧಾನ. ಆಗ ತನ್ನ ಸ್ನೇಹಿತರ ಮೊರೆ ಹೋಗುವಳು.

ಆತ ನೀಡಿದ ಉಡುಗೊರೆಗಳು:
ತಮ್ಮ ಸಂಗಾತಿಯನ್ನು ನೆನಪಿಸಿಕೊಳ್ಳುತ್ತಾ, ಹುಡುಗಿಯರು ಆಗಾಗ್ಗೆ ಅವರು ನೀಡಿದ ಉಡುಗೊರೆಗಳನ್ನು ಮತ್ತೆ ಮತ್ತೆ ನೋಡುತ್ತಲೇ ಇರುತ್ತಾರೆ. ಇದು ಅವರ ಸಂಗಾತಿಗೆ ಹತ್ತಿರವಾಗಬೇಕೆಂಬ ಭಾವನೆಯನ್ನು ಸಹ ನೀಡುತ್ತದೆ. ಇದಲ್ಲದೆ, ಗೆಳೆಯನ ಪತ್ರಗಳು ಅಥವಾ ಫೋನ್‌ನಲ್ಲಿ ಸೇವ್ ಮಾಡಿದ ಸಂದೇಶಗಳು ಸಹ ಪಾಲುದಾರನಿಗೆ ಹತ್ತಿರವಾಗುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಇನ್ನು ಕೆಲವರು ಆತನ ಭಾವಚಿತ್ರದ ಜೊತೆ ಮಾತನಾಡುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ.



Click it and Unblock the Notifications
