Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಅವರ ಆಂಗಿಕ ಭಾಷೆ ಹೀಗಿದ್ದರೆ ಅವರ ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂಬುವುದರಲ್ಲಿ ನೋ ಡೌಟ್
ಪ್ರೀತಿ ಎಲ್ಲರಲ್ಲೂ ಮೂಡುವಂತಹ ಭಾವನೆ. ಕೆಲವೊಬ್ಬರು ನಮಗೆ ಇಷ್ಟವಾದಾಗ ಅವರ ಬಗ್ಗೆ ಆ ಪ್ರೀತಿಯನ್ನು ತೋರ್ಪಡಿಸಲು ಕೆಲವೊಂದು ವಿಧಾನಗಳನ್ನು ಅನುಸರಿಸಬಹುದು. ನೇರವಾಗಿ ಹೇಳುವುದರ ಮೂಲಕವೋ ಅಥವಾ ಇತರ ದೇಹ ಭಾಷೆಗಳ ಮೂಲಕವೂ ಪ್ರೀತಿಯನ್ನು ವ್ಯಕ್ತಪಡಿಸಬಹುದು.

ಕೆಲವೊಮ್ಮೆ ಆ ವ್ಯಕ್ತಿಯು ನಮ್ಮೊಂದಿಗೆ ನಡೆದುಕೊಳ್ಳುವ ರೀತಿಗೆ ನಾನೆಂದರೆ ಅವರಿಗೆ ಇಷ್ಟವಿದೆಯೇನೋ ಅನಿಸುವುದುಂಟು. ತಜ್ಞರ ಪ್ರಕಾರ ವ್ಯಕ್ತಿಗೆ ನಿಮ್ಮ ಮೇಲೆ ಆಕರ್ಷಣೆ ಇದೆ ಎಂದು ಸೂಚಿಸುವ ಕೆಲವೊಂದು ಚಿಹ್ನೆಗಳಿವೆ.
ಅದನ್ನು ತಿಳಿದುಕೊಳ್ಳುವುದರ ಮೂಲಕ ವ್ಯಕ್ತಿಯು ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬಹುದು. ಆ ದೈಹಿಕ ಚಿಹ್ನೆಗಳು ಯಾವುವೆಂದರೆ...

ನಿಮ್ಮ ಮುಖದ ವಿವಿಧ ಭಾಗಗಳನ್ನು ನೋಡುವುದು
ಯಾರಾದರೂ ನಿಮ್ಮನ್ನು ಆರಾಧಿಸುತ್ತಾರೆಂದರೆ ಅವರು ನಿಮ್ಮನ್ನು ನೋಡುವ ರೀತಿಯೇ ಬದಲಾಗುತ್ತದೆ. ಅವರು ನಿಮ್ಮನ್ನು ಸಂಪೂರ್ಣವಾಗಿ ಗಮನಿಸುತ್ತಾರೆ. ನಿಮ್ಮನ್ನು ಇಷ್ಟಪಡುವ ವ್ಯಕ್ತಿಯು ಮಾತನಾಡುವಾಗ ನಿಮ್ಮ ಕಣ್ಣುಗಳೊಂದಿಗೆ ಅವರ ಕಣ್ಣುಗಳನ್ನು ಬೆಸೆಯುತ್ತಾರೆ. ನೀವೂ ಅವರ ಮನಸ್ಸೊಳಗೆ ಇದ್ದೀರಾ ಎನ್ನುವುದನ್ನು ನೋಡಲು ಅವರೂ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಾರಂತೆ.ಜೊತೆಗೆ ನಿಮ್ಮ ಕಣ್ಣುಗಳು ಮಾತ್ರವಲ್ಲ ತುಟಿಗಳು, ಹಣೆಯಲ್ಲಿ ಹಾರಾಡುವ ಮುಂಗುರುಳನ್ನೂ ನೋಡುತ್ತಾರಂತೆ. ನಿಮ್ಮ ಮುಖದ ಕಡೆಗಿರುವ ಅವರ ಆರಾಧನೆಯ ನೋಟವೇ ನಿಮ್ಮನ್ನು ಅವರು ಇಷ್ಟಪಡುತ್ತಿದ್ದಾರೆ ಎನ್ನುವ ಸೂಚನೆಯಾಗಿದೆ.

ನಿಮ್ಮ ಮತ್ತು ಅವರ ನಡುವಿನ ಅಂತರವು ಕಡಿಮೆಯಾಗುವುದು
ಯಾರಾದರೂ ನಿಮ್ಮತ್ತ ಆಕರ್ಷಿತರಾದರೆ ಅವರು ಹೆಚ್ಚು ಹತ್ತಿರವಾಗುವುದನ್ನು ನೀವು ಗಮನಿಸಬಹುದು.ಅವರ ಕುರಿತಾದ ಎಲ್ಲಾ ವೈಯಕ್ತಿಕ ವಿಷಯವನ್ನು ಹಂಚಿಕೊಳ್ಳುವ ಮೂಲಕ ನಿಮಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಅದು ಮಾನಸಿಕವಾಗಿಯೂ ಹಾಗೂ ದೈಹಿಕವಾಗಿಯೂ ಆಗಿರಬಹುದು. ಅಪರಿಚಿತರಾಗಿದ್ದಾಗ ನೀವಿಬ್ಬರೂ ಕುಳಿತುಕೊಳ್ಳುತ್ತಿದ್ದ ಅಂತರಗಳು ಆತ್ಮೀಯವಾದ ಮೇಲೆ, ಅವರಿಗೆ ನೀವು ಇಷ್ಟವಾದ ಮೇಲೆ ಕಡಿಮೆಯಾಗುವುದನ್ನು ಗಮನಿಸಿ. ನಿಮ್ಮ ಮೇಲಿನ ಆಕರ್ಷಣೆಯಿಂದ ಕೆಲವೊಮ್ಮೆ ಅನಿರೀಕ್ಷಿತವಾಗಿ ಆಡಬಹುದು. ನೀವು ಅವರನ್ನು ನಿಮ್ಮ ಮುಖದ ಸಮೀಪಕ್ಕೆ ಬರಲು ಅನುವು ಮಾಡಿಕೊಟ್ಟರೆಂದರೆ ಅವರಿಗೆ ಅದು ಗ್ರೀನ್ ಸಿಗ್ನಲ್ ಕೊಟ್ಟಂತೆಯೇ.

ನಿಮ್ಮೊಂದಿರುವಾಗ ನಗು ಸ್ವಾಭಾವಿಕವಾಗಿರುತ್ತದೆ
ಕೆಲವರು ನಮ್ಮೊಂದಿಗೆ ಮಾತನಾಡುವಾಗ ಬೇಕೋ ಬೇಡವೋ ಎಂದು ನಗುತ್ತಾರೆ. ಅದು ಕೆಲವೊಮ್ಮೆ ನಕಲಿ ನಗುವಾಗಿರುತ್ತದೆ. ಯಾರಿಗಾದರೂ ನಿಮ್ಮ ಮೇಲೆ ಆಕರ್ಷಣೆ ಹುಟ್ಟಿತೆಂದರೆ ಅವರ ಮುಖದಲ್ಲಿ ಮೂಡುವ ನಗುವುದು ಆಕರ್ಷಣೆಯ ಸೂಚಕವಾಗಿರುತ್ತೆ. ದೇಹ ಭಾಷೆಯ ಮೂಲಕವೇ ಒಬ್ಬರಿಗೆ ನೀವೆಂದರೆ ಇಷ್ಟ ಎನ್ನುವುದನ್ನು ತಿಳಿದುಕೊಳ್ಳಬಹುದು. ನಿಮ್ಮನ್ನು ಇಷ್ಟಪಡುವವರ ಮುಖದಲ್ಲಿ ಮೂಡುವ ಮಂದಹಾಸವು ಅದು ಹೃದಯದಿಂದ ಬಂದಿರುತ್ತದೆ. ಅದು ನಿಮ್ಮೊಂದಿಗೆ ಅವರು ಮಾತನಾಡುವಾಗ ಅವರ ಮುಖದಲ್ಲಿನ ನಗುವು ಮಾಸುವುದೇ ಇಲ್ಲ. ಅವರ ಈ ನಗುವಿನ ಮೂಲಕವೇ ನೀವೆಂದರೆ ಅವರಿಗಿಷ್ಟ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

ದೈಹಿಕ ಸ್ಪರ್ಶ
ಕೆಲವರ ಸ್ಪರ್ಶದಲ್ಲೇ ಅವರಿಗೆ ನಮ್ಮ ಮೇಲಿರುವ ಭಾವನೆಯನ್ನು ತಿಳಿದುಕೊಳ್ಳಬಹುದು. ನಿಮ್ಮ ಭುಜದ ಮೇಲೆ ಅವರಿಡುವ ಕೈಯ ಸ್ಪರ್ಶ, ತೊಡೆಯ ಮೇಲೆ ತಟ್ಟುವ ರೀತಿಯು ಸರಳವಾಗಿದ್ದರೂ ಅವರಿಗೆ ನಮ್ಮ ಮೇಲಿರುವ ಆಕರ್ಷಣೆಯನ್ನು ಸಾರಿ ಹೇಳುತ್ತದೆ. ಸಾಂದರ್ಭಿಕ ಸ್ಪರ್ಶದ ಪ್ರಯತ್ನಗಳು ಅವರ ಮನಸ್ಸಿನಲ್ಲಿ ನೀವಿದ್ದೀರಿ ಎನ್ನುವ ಸಂಕೇತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ನಾವು ಯಾರ ಕಡೆಗಾದರೂ ಆಕರ್ಷಿತರಾದಾಗ ಅವರ ಉಪಸ್ಥಿತಿಯನ್ನು ಸ್ಪರ್ಶದ ಮೂಲಕ ಅನುಭವಿಸಲು ಬಯಸುತ್ತೇವೆ. ಮಾನಸಿಕ ಸ್ಪರ್ಶವು ಆಕ್ಸಿಟೋಸಿನ್ ಬಿಡುಗಡೆಗೆ ಕಾರಣವಾಗುತ್ತದೆ. ಇದನ್ನು ಪ್ರೀತಿಯ ಹಾರ್ಮೋನ್ ಎಂದು ಕರೆಯಲಾಗುತ್ತೆ. ಇದು ಹೆಚ್ಚು ಬಿಡುಗಡೆಯಾದಾಗ ಅದು ವ್ಯಕ್ತಿಯೊಂದಿಗೆ ನಾವು ಹತ್ತಿರವಾಗಲು ಮತ್ತು ಹೆಚ್ಚು ಸಂಪರ್ಕ ಹೊಂದಲು ಕಾರಣವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಹತ್ತಿರ ಬಂದಾಗಲೆಲ್ಲಾ ತಳಮಳ
ನೀವು ತುಂಬಾ ಇಷ್ಟಪಡುವ ವ್ಯಕ್ತಿ ಅಥವಾ ಕ್ರಷ್ ಕೂಡಾ ಆಗಿರಬಹುದು. ಅವರು ದೂರದಿಂದಲೇ ನಿಮ್ಮ ಹತ್ತಿರ ಬರುತ್ತಿದ್ದಾರೆಂದರೆ ನೀವು ವಿಚಿತ್ರ ತಳಮಳವನ್ನು ಅನುಭವಿಸಬಹುದು. ಒಂದು ರೀತಿಯ ಭಯ ಆವರಿಸಿಬಿಡುತ್ತದೆ, ಮಾತನಾಡಲು ನಾಚಿಕೆಯಾಗುತ್ತೆ, ಮಾತುಗಳು ತೊದಲುತ್ತೆ, ಅಂಗೈಗಳು ಬೆವರುವ ಜೊತೆಗೆ ಹಲವಾರು ನಡವಳಿಕೆಯ ರೀತಿ ಬದಲಾಗಬಹುದು.
ತಜ್ಞರು ಹೇಳುವಂತೆ ಇಷ್ಟಪಡುವ ವ್ಯಕ್ತಿಯು ಹತ್ತಿರ ಬಂದಾಗ ಮನಸ್ಸಿನಲ್ಲಿ ಚಡಪಡಿಕೆ ಉಂಟಾಗುತ್ತದಂತೆ ಹಾಗೂ ಮಾತುಗಳು ತನ್ನಿಂದ ತಾನೆ ತೊದಲಲು ಶುರುವಾಗುತ್ತಂತೆ. ಈ ಚಿಹ್ನೆಗಳು ಕೂಡಾ ಆಕರ್ಷಣೆಯನ್ನು ಸೂಚಿಸುತ್ತದೆ. ಏಕೆಂದರೆ ಅವರ ಹಾರ್ಮೋನ್‌ಗಳಲ್ಲಿ ಏರಿಳಿತವುಂಟಾಗುತ್ತದೆ. ಅದರಿಂದಾಗಿ ವರ್ತನೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ.



Click it and Unblock the Notifications











