Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಇವೆಲ್ಲಾ ಒಳ್ಳೆಯ ಗರ್ಲ್ ಫ್ರೆಂಡ್‌ನ ಲಕ್ಷಣ ಅಲ್ವೇ ಅಲ್ಲ!
ಪ್ರತಿಯೊಬ್ಬರೂ ತಮ್ಮ ತಪ್ಪುಗಳನ್ನು ಮತ್ತು ನ್ಯೂನತೆಗಳನ್ನು ಅದರಲ್ಲೂ ವಿಶೇಷವಾಗಿ ಸಂಬಂಧದಲ್ಲಿರುವಾಗ ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ. ಕೆಲವೊಮ್ಮೆ ದಂಪತಿಗಳು ಸಮಸ್ಯೆಯನ್ನು ಪರಿಹರಿಸುವ ಬದಲು ಪರಸ್ಪರರ ಒಬ್ಬರ ಮೇಲೆ ಒಬ್ಬರು ದೂಷಣೆ ಮಾಡಿಕೊಳ್ಳಬಹುದು. ಅಲ್ಲದೆ, ಕೆಲವೊಮ್ಮೆ ಕೇವಲ ನಮ್ಮ ಸಂಬಂಧದ ಕಾರಣಕ್ಕಾಗಿ ಸಮಸ್ಯೆಗಳನ್ನು ಕಡೆಗಣಿಸುತ್ತೇವೆ.

ಸಣ್ಣ ಸಮಸ್ಯೆಗಳನ್ನು ಕಡೆಗಣಿಸುವುದು ಸರಿಯೇ, ಆದರೆ ಅದು ಹೆಚ್ಚಾಗಲು ಪ್ರಾರಂಭಿಸಿದಾಗ, ನಿಮಗೆ ಇದಕ್ಕಿಂತ ಉತ್ತಮ ಪಾಲುದಾರ ಸಿಗಲು ನೀವು ಅರ್ಹರು ಎಂದು ನೀವು ಯೋಚಿಸಲು ಪ್ರಾರಂಭಿಸುತ್ತೀರಿ.
ನೀವು ಯಾಕೆ ಕೆಟ್ಟ ಗೆಳತಿಯಾಗಿರಬಹುದು ಮತ್ತು ನೀವು ಬದಲಾಯಿಸಬೇಕಾದದ್ದು ಏನು ಎಂಬುದರ ಬಗ್ಗೆ ನಾವು ಇಲ್ಲಿ 15 ಚಿಹ್ನೆಗಳನ್ನು ಪಟ್ಟಿ ಮಾಡಿದ್ದೇವೆ.

1. ಅನುಮಾನ
ನಂಬಿಕೆ ಎನ್ನುವುದು ಯಾವುದೇ ಸಂಬಂಧದ ಪ್ರಬಲ ಸ್ತಂಭಗಳಲ್ಲಿ ಒಂದಾಗಿದೆ. ಹೆಚ್ಚು ಅನುಮಾನಾಸ್ಪದ ಭಾವನೆ, ಅವನು ತನ್ನ ಯಾವುದೇ ಮಹಿಳಾ ಸಹೋದ್ಯೋಗಿಯೊಂದಿಗೆ ಸಂವಹನ ನಡೆಸುವ ಸಮಯ ನೀವು ಕದ್ದಾಲಿಸಿದರೆ ಅದು ನಿಮ್ಮಲ್ಲಿ ವಿಶ್ವಾಸಾರ್ಹ ಸಮಸ್ಯೆಗಳಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ನಿಮಗೆ ಅವಕಾಶ ಸಿಕ್ಕಾಗ ಅವನ ಫೋನ್ ಪರಿಶೀಲಿಸುವುದು, ಅವನು ಇತರ ಜನರೊಂದಿಗೆ ಸಂವಹನ ನಡೆಸುವಾಗ ಕದ್ದಾಲಿಕೆ ಮಾಡುವುದು, ನಿಮ್ಮ ಈ ಗುಣಗಳು ನಿಮ್ಮನ್ನು ಕೆಟ್ಟ ಗೆಳತಿಯನ್ನಾಗಿ ಮಾಡಬಹುದು. ಯಾವುದೇ ಪ್ರಮುಖ ಕಾರಣಗಳಿಲ್ಲದೇ ನಿಮ್ಮ ಸಂಗಾತಿಯನ್ನು ಅನುಮಾನಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ ಮತ್ತು ಇದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರಬಹುದು.

2. ಅವರಿಗೆ ವೈಯಕ್ತಿಕ ಮಿತಿ ನೀಡುವುದನ್ನು ನೀವು ಎಂದಿಗೂ ನಂಬುವುದಿಲ್ಲ
ನೀವು, ನಿಮ್ಮ ಹುಡುಗನೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಬಯಸುವುದು ಒಳ್ಳೆಯದು ಆದರೆ ಅವನ ವೈಯಕ್ತಿಕ ಮಿತಿಯನ್ನು ನೀಡಲು ನಿರಾಕರಿಸುವುದು ಬಹಳ ತಪ್ಪು. ನಮಗೆಲ್ಲರಿಗೂ ವಿಶ್ರಾಂತಿ ಪಡೆಯಲು ಮತ್ತು ಕೆಲವು 'ವಯಕ್ತಿಕ ಸಮಯ' ಕಳೆಯಲು ವೈಯಕ್ತಿಕ ಮಿತಿ ಅಗತ್ಯ. ಅವನ ವೈಯಕ್ತಿಕ ಮಿತಿಯನ್ನು ಅವನಿಗೆ ನೀಡದಿರುವುದು, ಅವನ ವಯಕ್ತಿಕ ಜೀವನವನ್ನು ನೀವು ಅಷ್ಟೇನೂ ಗೌರವಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ. ಇದು ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ನಿಸ್ಸಂದೇಹವಾಗಿ ನಿಮ್ಮನ್ನು ಕೆಟ್ಟ ಗೆಳತಿಯೆಂದು ಇದು ಬಿಂಬಿಸುತ್ತದೆ.

3. ನೀವು ಅವನು ಬದಲಾಗಬೇಕೆಂದು ನಿರೀಕ್ಷಿಸುತ್ತೀರಿ
ನೀವೇ ಉತ್ತಮ ವ್ಯಕ್ತಿಯಾಗುವ ಬದಲು, ನೀವು ಯಾವಾಗಲೂ ನಿಮ್ಮ ಸಂಗಾತಿಯ ಬಗ್ಗೆ ಬೆರಳು ಮಾಡಿ ತೋರಿಸುತ್ತೀರಿ. ನಿಮ್ಮ ಗೆಳೆಯ / ಗಂಡನ ನಡವಳಿಕೆಯನ್ನು ಬದಲಾಯಿಸಿಕೊಳ್ಳುವಂತೆ ನಿರಂತರವಾಗಿ ಕೇಳುವುದು ನಿಮ್ಮ ಸಂಬಂಧವನ್ನೇ ಮುರಿಯಬಹುದು. ನಿಮ್ಮ ಸಂಗಾತಿಯು ಕೆಲವು ನ್ಯೂನತೆಗಳನ್ನು ಹೊಂದಿರಬಹುದು ಮತ್ತು ತನ್ನನ್ನು ತಾನು ಸುಧಾರಿಸಿಕೊಳ್ಳುವ ಅವಶ್ಯಕತೆಯಿರಬಹುದು ಆದರೆ ಅವನನ್ನು ಸಂಪೂರ್ಣವಾಗಿ ಬದಲಾಯಿಸಲು ಪ್ರಯತ್ನಿಸುವುದು ಅಷ್ಟು ಒಳ್ಳೆಯದಲ್ಲ.

4. ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಸಂಬಂಧದ ಸ್ಥಿತಿಯನ್ನು ’ಸಿಂಗಲ್’ ಎಂದು ಹಾಕುವುದು
ನೀವು ಸ್ಥಿರ ಸಂಬಂಧದಲ್ಲಿರುವಾಗ ನಿಮ್ಮ ಸಂಬಂಧದ ಸ್ಥಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ 'ಸಿಂಗಲ್' ಎಂದು ಪ್ರಕಟಿಸುವುದು ನೀವು ಉತ್ತಮ ಗೆಳತಿಯಲ್ಲ ಎಂಬುದರ ಸಂಕೇತವಾಗಿದೆ. ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಅಥವಾ ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ನಿಮ್ಮ ಸಂಬಂಧದ ಬಗ್ಗೆ ವಿವರಗಳನ್ನು ಹಂಚಿಕೊಳ್ಳದಿರುವುದು ಸರಿಯೇ, ಆದರೆ ನೀವು ಸಂಗಾತಿಯನ್ನು ಹೊಂದಿರುವಾಗ ನಿಮ್ಮನ್ನು ಒಬ್ಬಂಟಿ ಎಂದು ಕರೆದುಕೊಳ್ಳುವುದು ಅಂದರೆ ನಿಮ್ಮ ಪ್ರಸ್ತುತ ಸಂಬಂಧದಲ್ಲಿ ನೀವು ಗಂಭೀರವಾಗಿಲ್ಲ ಎಂದೇ ಅರ್ಥ.

5. ನಿಮ್ಮ ಸಂಗಾತಿಗೆ ನೀವು ಮೋಸ ಮಾಡಿದ್ದೀರಿ
ಈ ವಿಷಯ, ನೀವು ಕೆಟ್ಟ ಗೆಳತಿಯಾಗಿರಬಹುದು ಎಂದು ಹೇಳುವ ದೊಡ್ಡ ಲಕ್ಷಣಗಳುಯಾಗಿದೆ. ನಿಮ್ಮ ಸಂಗಾತಿಗೆ ನೀವು ಮೋಸ ಮಾಡಿದ್ದರೆ ಮತ್ತು ಹಾಗೆ ಮಾಡಿದ್ದಕ್ಕಾಗಿ ತಪ್ಪಿತಸ್ಥರೆಂದು ಭಾವಿಸದಿದ್ದರೆ, ನೀವು ನಿಷ್ಠಾವಂತ ವ್ಯಕ್ತಿಯಲ್ಲ ಎನಿಸಿಕೊಳ್ಳುತ್ತದೆ. ಮೋಸ ಮಾಡುವುದು ಎಂದರೆ ನಿಮ್ಮ ಸಂಗಾತಿಯನ್ನು ಹೊರತುಪಡಿಸಿ ಬೇರೆಯವರೊಂದಿಗೆ ದೈಹಿಕವಾಗಿ ತೊಡಗಿಸಿಕೊಳ್ಳುವುದು ಮಾತ್ರವಲ್ಲ, ಅಸಭ್ಯ ಮೆಸೇಜ್ ಗಳನ್ನು ಕಳುಹಿಸುವುದು ಮತ್ತು ನಿಮ್ಮ ಸಂಗಾತಿಯನ್ನು ಹೊರತುಪಡಿಸಿ ಬೇರೆಯವರೊಂದಿಗೆ ಸ್ನೇಹಶೀಲರಾಗಿರುವುದು ಕೂಡ ಮೋಸಮಾಡುವುದು ಎನಿಸಿಕೊಳ್ಳುತ್ತದೆ. ನೀವು ಈ ರೀತಿ ಬಹಳ ಸಮಯದಿಂದಲೂ ಮಾಡುತ್ತಿದ್ದರೆ, ನೀವು ಉತ್ತಮ ಗೆಳತಿಯಾಗಿರಲು ಸಾಧ್ಯವೇ ಇಲ್ಲ.

6. ಅಪರೂಪಕ್ಕೆ ನಿಮ್ಮ ತಪ್ಪುಗಳಿಗಾಗಿ ನೀವು ಕ್ಷಮೆಯಾಚಿಸುತ್ತೀರಿ
ನಿಮ್ಮ ತಪ್ಪುಗಳಿಗೆ ಕ್ಷಮೆ ಕೋರುವುದನ್ನು ನೀವು ದ್ವೇಷಿಸುತ್ತೀರಾ ಅಥವಾ ಅದು ನಿಮ್ಮ ತಪ್ಪು ಆಗಿದ್ದರೂ ಕ್ಷಮೆಯಾಚಿಸುವುದು ಕಷ್ಟವೇ? ನಿಮ್ಮದೇ ತಪ್ಪಿದ್ದರೂ ಕೂಡ ನಿಮ್ಮ ಸಂಗಾತಿಯೇ ಕ್ಷಮೆಯಾಚಿಸಬೇಕೆಂದು ನೀವು ನಿರೀಕ್ಷಿಸುತ್ತೀರಾ? ಹಾಗಾದರೆ ಇಲ್ಲಿ ಕೇಳಿ, ನಿಮ್ಮ ಸ್ವಂತ ಅಹಂಕಾರಕ್ಕೆ ನೀವು ಬಲಿಯಾಗುವ ಸಾಧ್ಯತೆಗಳಿವೆ. ನಿಮ್ಮ ತಪ್ಪುಗಳಿಗೆ ಕ್ಷಮೆಯಾಚಿಸುವುದು ನಿಮ್ಮನ್ನು ಎಂದಿಗೂ ಕೀಳಾಗಿ ಮಾಡುವುದಿಲ್ಲ. ಹೀಗೆ ಮಾಡುವುದರಿಂದ ವಾಸ್ತವವಾಗಿ, ನಿಮ್ಮ ಸಂಬಂಧವನ್ನು ನೀವು ಹೆಚ್ಚು ಗೌರವಿಸುತ್ತೀರಿ ಎಂದರ್ಥ.

7. ನೀವು ತುಂಬಾ ಬೇಡಿಕೆಯಿಡುತ್ತೀರಿ
ಭಾವನಾತ್ಮಕವಾಗಿ ಸ್ಥಿರ ಮತ್ತು ಸ್ವತಂತ್ರವಾಗಿರುವ ಜನರು ಇತರರಿಗೆ ಸಾಕಷ್ಟು ಆಕರ್ಷಕವಾಗಿ ಕಾಣುತ್ತಾರೆ. ಸಂಬಂಧದಲ್ಲಿ ಒಬ್ಬ ವ್ಯಕ್ತಿಯು ಮಾತ್ರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಇನ್ನೊಬ್ಬರು ಇದರಿಂದ ಯಾವುದೇ ಸಮಸ್ಯೆಯೇ ಇಲ್ಲ ಎಂಬಂತೆ ಇದ್ದರೆ ಆ ಸಂಬಂಧ ಎಂದಿಗೂ ಉಳಿಯುವುದಿಲ್ಲ. ಆದ್ದರಿಂದ, ಎಂದಿಗೂ ನಿಮ್ಮ ಮುಗಿಯದ ಬೇಡಿಕೆಗಳಿಗಾಗಿ ನೀವು ಯಾವಾಗಲೂ ನಿಮ್ಮ ಗೆಳೆಯನ ಮೇಲೆ ಅವಲಂಬಿತರಾಗಿದ್ದರೆ, ಇದು ಸಕಾರಾತ್ಮಕ ಸಂಕೇತವಲ್ಲ. ನಿಮ್ಮ ಸಂಗಾತಿ ತನ್ನ ಜೀವನದಲ್ಲಿ ಉತ್ಕೃಷ್ಟನಾಗಿರುತ್ತಾನೆ ಮತ್ತು ಪ್ರವರ್ಧಮಾನಕ್ಕೆ ಬರಲಿ ಎಂದು ನಿರೀಕ್ಷಿಸುವುದು ಎಂದಿಗೂ ಕೆಟ್ಟದ್ದಲ್ಲ, ಆದರೆ ನಂತರ ಭೌತಿಕ ವಿಷಯಗಳಿಗೆ ಅವಾಸ್ತವಿಕ ಮತ್ತು ಬಾಲಿಶ ಬೇಡಿಕೆಗಳನ್ನು ಇಟ್ಟರೆ, ನೀವು ಕೆಟ್ಟ ಗೆಳತಿಯೆಂಬುದನ್ನು ಸಾಬೀತು ಪಡಿಸಿದಂತಾಗುತ್ತದೆ.

8. ನೀವು ಅವರ ಆಯ್ಕೆಗಳನ್ನು ನಿರಂತರವಾಗಿ ಟೀಕಿಸುತ್ತೀರಿ
ನೀವು ಮತ್ತು ನಿಮ್ಮ ಸಂಗಾತಿ ಒಂದೇ ರೀತಿಯ ಆಯ್ಕೆಗಳನ್ನು ಹೊಂದಿರದೇ ಇರುವ ಸಾಧ್ಯತೆಗಳಿವೆ. ಸಾಕಷ್ಟು ಸಲ ನೀವು ಅವರ ಆಯ್ಕೆಗಳನ್ನು ಒಪ್ಪುವುದಿಲ್ಲ ಮತ್ತು ಕೆಲವೊಮ್ಮೆ ಕಿರಿಕಿರಿ ಅನುಭವಿಸಬಹುದು. ಆದರೆ ನೀವು ಅವರ ಆಯ್ಕೆಗಳು ಮತ್ತು ಆದ್ಯತೆಗಳನ್ನು ಟೀಕಿಸಬಹುದು ಎಂದಲ್ಲ. ಹಾಗೆ ಮಾಡುವುದರಿಂದ ನಿಮ್ಮ ಸಂಗಾತಿಗೆ ಅವರ ಮೇಲೆಯೇ ಆತ್ಮವಿಶ್ವಾಸ ಕಡಿಮೆಯಾಗುತ್ತದೆ ಮತ್ತು ಅವನು ಕೀಳರಿಮೆ ಅನುಭವಿಸಬಹುದು.

9. ನೀವು ಯಾವಾಗಲೂ ಅವನ ಸುತ್ತಲಿನ ಮಹಿಳೆಯರ ಬಗ್ಗೆ ಅಸೂಯೆ ಪಡುತ್ತೀರಿ
ನಿಮ್ಮ ಸಂಗಾತಿಯ ಸುತ್ತಲೂ ಹಲವಾರು ಮಹಿಳೆಯರು ಇದ್ದಾಗ ನೀವು ಅಸೂಯೆ ಪಟ್ಟ ಸಂದರ್ಭಗಳಿರಬಹುದು. ಆದರೆ ಇದು ನಿಮ್ಮ ಅಭ್ಯಾಸವಾಗಿದ್ದರೆ, ನೀವು ಈ ಮನೋಭಾವವನ್ನು ಬದಲಾಯಿಸಿಕೊಳ್ಳುವುದು ಒಳಿತು. ನಿಮ್ಮ ಸಂಗಾತಿಯ ಸ್ತ್ರೀ ಸ್ನೇಹಿತರ ಬಗ್ಗೆ ನೀವು ಯಾವಾಗಲೂ ಅಸೂಯೆ ಹೊಂದಿದ್ದರೆ, ಇದು ನಿಮ್ಮ ಅಭದ್ರತೆಯ ಭಾವನೆಯನ್ನು ತೋರಿಸುತ್ತದೆ.

10. ಇತರ ಪುರುಷರೊಂದಿಗೆ ಚಲ್ಲಾಟವಾಡುವುದು ನಿಮಗೆ ತಪ್ಪು ಎನಿಸುವುದಿಲ್ಲ
ನಿಮ್ಮ ಸಂಗಾತಿ ಇತರ ಮಹಿಳೆಯರೊಂದಿಗೆ ಚೆಲ್ಲಾಟವಾಡುತ್ತಿದ್ದರೆ ನಿಮಗೆ ಹೇಗೆ ಅನಿಸುತ್ತದೆ? ನೀವು ಅದನ್ನು ಯಾವಾಗಲೂ ಇಷ್ಟಪಡುವುದಿಲ್ಲ ಅಲ್ಲವೇ? ನೀವು ಯಾವಾಗಲೂ ಇತರ ಪುರುಷರೊಂದಿಗೆ ಚೆಲ್ಲಾಟವಾಡುತ್ತಿದ್ದರೆ ನಿಮ್ಮ ಸಂಗಾತಿಗೂ ಇದೇ ರೀತಿಯ ಅನುಭವವಾಗಬಹುದು. ಫ್ಲರ್ಟಿಂಗ್ ಕೆಟ್ಟ ವಿಷಯವಲ್ಲ ಎಂದು ನೀವು ಕೆಲವೊಮ್ಮೆ ಭಾವಿಸಬಹುದು ಮತ್ತು ನೀವು ಅದನ್ನು ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಬಹುದು. ಆದರೆ ನೀವು ಇತರ ಪುರುಷರೊಂದಿಗೆ ಫ್ಲರ್ಟ್ ಮಾಡುವ ಅಭ್ಯಾಸವನ್ನು ಹೊಂದಿದ್ದರೆ ಮತ್ತು ಅದು ನಿಮ್ಮ ಸುತ್ತಲಿನ ಪುರುಷರೊಂದಿಗೆ ಸ್ನೇಹಪರವಾಗಿರಲು ಇದು ಮತ್ತೊಂದು ಮಾರ್ಗವೆಂದು ಭಾವಿಸಿದರೆ, ಇದು ಖಂಡಿತವಾಗಿಯೂ ನಿಮ್ಮ ಸಂಬಂಧವನ್ನು ಹೆಚ್ಚು ಸಮಯ ಉಳಿಯಲು ಬಿಡುವುದಿಲ್ಲ.

11. ನೀವು ಆಗಾಗ್ಗೆ ಅವರ ನಿರ್ಧಾರಗಳನ್ನು ನಿಯಂತ್ರಿಸಿ
ಒಂದು ವಿಷಯವನ್ನು ನೇರವಾಗಿ ಹೇಳುತ್ತೇವೆ. ಸಂಬಂಧದಲ್ಲಿ ಒಬ್ಬನ್ನೊಬ್ಬರು ನಿಯಂತ್ರಿಸುವುದನ್ನು ಯಾರೂ ಇಷ್ಟಪಡುವುದಿಲ್ಲ. ನೀವು ಯಾವಾಗಲೂ ಕೆಲಸಗಳನ್ನು ನಿಮ್ಮ ರೀತಿಯಲ್ಲಿಯೇ ಮಾಡಲು ಬಯಸಿದರೆ ನಿಮ್ಮ ಸಂಬಂಧವು ಶೀಘ್ರದಲ್ಲೇ ಅಂತ್ಯಗೊಳ್ಳಬಹುದು. ನಿಮ್ಮ ಸಂಗಾತಿಯ ಕಾರ್ಯಗಳನ್ನು ನೀವು ಯಾವಾಗಲೂ ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ನೀವು ಹಾಗೆ ಮಾಡಿದರೆ, ಅದು ಅವನ ಉಸಿರುಗಟ್ಟಿಸಬಹುದು ಇದರಿಂದ ನಿಮ್ಮ ಅತ್ಯಮೂಲ್ಯ ಸಂಬಂಧ ನಾಶವಾಗಬಹುದು.

12. ನೀವು ಅವನ ಸ್ನೇಹಿತರೊಂದಿಗೆ ಸುತ್ತಾಡಲು ಬಿಡುವುದಿಲ್ಲ
ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿ ತನ್ನ ಸ್ನೇಹಿತರೊಂದಿಗೆ ಸುತ್ತಾಡಲು ನೀವು ಬಿಡದಿದ್ದರೆ, ನೀವು ಅವನ ಸಂತೋಷವನ್ನು ಗೌರವಿಸುವುದಿಲ್ಲ ಎಂದರ್ಥ. ನಿಮ್ಮ ಸಂಗಾತಿಯ ಜೀವನದಲ್ಲಿ ಇನ್ನೂ ಅನೇಕ ಜನರಿದ್ದಾರೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಅವರು ಪ್ರತಿಯೊಬ್ಬರಿಗೂ ಸಮಾನ ಸಮಯವನ್ನು ನೀಡಬೇಕಾಗುತ್ತದೆ. ಅವನ ಸ್ನೇಹಿತರೊಂದಿಗೆ ಸಮಯ ಕಳೆಯುವುದನ್ನು ತಡೆಯುವುದು ನಿಮ್ಮ ನಕಾರಾತ್ಮಕತೆಯನ್ನು ತೋರಿಸುತ್ತದೆ.

13. ನೀವು ಯಾವಾಗಲೂ ಅವರ ತಪ್ಪುಗಳನ್ನು ಸೂಚಿಸುತ್ತೀರಿ
ಪ್ರತಿಯೊಬ್ಬ ವ್ಯಕ್ತಿಯು ಕೆಲವು ನ್ಯೂನತೆಗಳನ್ನು ಅಥವಾ ಸಮಸ್ಯೆಗಳನ್ನು ಹೊಂದಿರುತ್ತಾನೆ ಏಕೆಂದರೆ ಇಲ್ಲಿ ಯಾರೂ ಪರಿಪೂರ್ಣರಲ್ಲ. ಆದ್ದರಿಂದ, ನಿಮ್ಮ ಸಂಗಾತಿ ಪರಿಪೂರ್ಣ ವ್ಯಕ್ತಿಯಾಗಬೇಕೆಂದು ನಿರೀಕ್ಷಿಸುವುದು ಸಂಬಂಧದಲ್ಲಿ ಮಾಡುವ ಬುದ್ಧಿವಂತಿಕೆಯ ಕೆಲಸವಲ್ಲ. ಯಾವಾಗಲೂ ಅವನ ತಪ್ಪುಗಳನ್ನು ಎತ್ತಿ ತೋರಿಸುವುದು, ಅವನ ನಡವಳಿಕೆಯನ್ನು ಬದಲಾಯಿಸಲು ಪ್ರಯತ್ನಿಸುವುದು ಮತ್ತು ಎಲ್ಲಾ ವಿಷಯಗಳನ್ನು ದೊಡ್ಡ ಜಗಳವಾಗಿ ಬಿಂಬಿಸುವುದು ಸಭ್ಯ ಕೆಲಸವಲ್ಲ. ನಿಮ್ಮ ಸಂಗಾತಿಯ ಕಡೆಗೆ ನೀವು ಬೆರಳು ಮಾಡಿ ತೋರಿಸಿದಾಗ, ನೀವು ತಿಳಿಯದೆ ಅವರ ಭಾವನೆಗಳನ್ನು ನೋಯಿಸುತ್ತೀರಿ. ಅಂತಹ ನಡವಳಿಕೆಯು ಅಂತಿಮವಾಗಿ, ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ತರುತ್ತದೆ.

14. ನಿಮ್ಮ ಸಂಗಾತಿಯನ್ನು ನೀವು ಗೌರವಿಸುವುದಿಲ್ಲ
ಸಂಬಂಧದಲ್ಲಿ, ಪರಸ್ಪರ ಗೌರವವು ಅತ್ಯಗತ್ಯ ವಿಷಯಗಳಲ್ಲಿ ಒಂದಾಗಿದೆ. ಮೊದಲು ಒಬ್ಬ ಮನುಷ್ಯನಾಗಿ, ನಿಮ್ಮ ಸಂಗಾತಿಯನ್ನು ನೀವು ಗೌರವಿಸಬೇಕು. ನಿಮ್ಮ ಗೆಳೆಯನನ್ನು ಗುಲಾಮ, ಸೇವಕ ಅಥವಾ ಗೌರವಕ್ಕೆ ಅರ್ಹರಲ್ಲದವರಂತೆ ನೋಡಿಕೊಳ್ಳುವುದು ನೀವು ಕೆಟ್ಟ ಗೆಳತಿ ಎಂಬುದನ್ನು ಎತ್ತಿ ತೋರಿಸುತ್ತದೆ. ನಿಮ್ಮ ಸಂಗಾತಿಗೆ ಅಗೌರವ ತೋರುವುದು ನಿಮ್ಮ ಸಂಬಂಧವನ್ನು ಬಲಪಡಿಸುವುದಿಲ್ಲ ಎಂದು ನೀವು ಮೊದಲು ಅರ್ಥಮಾಡಿಕೊಳ್ಳಬೇಕು. ಇದು ಅಂತಿಮವಾಗಿ ನಿಮ್ಮ ಸಂಬಂಧದಲ್ಲಿ ಘರ್ಷಣೆಗೆ ಕಾರಣವಾಗುತ್ತದೆಯೇ ಹೊರತು ಸಂಬಂಧವನ್ನು ಉಳಿಸುವುದಿಲ್ಲ.

15. ಅವರ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ನಿಮಗೆ ಯಾವುದೇ ಗೌರವವಿಲ್ಲ
ನಿಮ್ಮ ಸಂಗಾತಿಯನ್ನು ಪ್ರೀತಿಸುವುದು ಎಂದರೆ ನಿಮ್ಮ ಸಂಗಾತಿಯನ್ನು ಗೌರವಿಸುವುದು ಮಾತ್ರ ಎಂದು ಅರ್ಥವಲ್ಲ. ನಾವೆಲ್ಲರೂ ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಪ್ರೀತಿಸುತ್ತೇವೆ ಹಾಗೆಯೇ ನೀವು ಇಬ್ಬರೂ ಪರಸ್ಪರ ಸ್ನೇಹಿತರು ಮತ್ತು ಕುಟುಂಬಕ್ಕೆ ಗೌರವವನ್ನು ತೋರಿಸುವುದು ಅತ್ಯಗತ್ಯ. ಮತ್ತೊಂದೆಡೆ, ಪ್ರತಿ ಬಾರಿಯೂ ನಿಮ್ಮ ಗೆಳೆಯನ ಪೋಷಕರು ಮತ್ತು ಸ್ನೇಹಿತರನ್ನು ನಿರಂತರವಾಗಿ ಅಗೌರವಗೊಳಿಸುವುದರಿಂದ, ನೀವು ಉತ್ತಮ ಗೆಳತಿಯಲ್ಲ ಎಂಬುದನ್ನು ತೋರಿಸುತ್ತದೆ.
ಹಾಗಾಗಿ ಸ್ನೇಹಿತರೇ, ಇದು ಒಳ್ಳೆಯದಕ್ಕಾಗಿ ಬದಲಾಗಬೇಕಾದ ಸಮಯ. ಏನನ್ನುತ್ತೀರಿ?



Click it and Unblock the Notifications











