Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಪ್ರೇಮಿಗಳ ದಿನ: ಪ್ರಪೋಸ್‌ಗೆ ಒಳ್ಳೆಯದೂ ಹೌದು, ಅಪಾಯವೂ ಇದೆ ಹೇಗೆ?
ಫೆಬ್ರವರಿ ತಿಂಗಳೆಂದರೆ ಪ್ರೇಮಿಗಳಿಗೆ ಹಬ್ಬ. ಈಗಾಗಲೇ ಪ್ರೀತಿಯಲ್ಲಿರುವವರಿಗೆ ಪ್ರೀತಿಯನ್ನು ಸಂಭ್ರಮಿಸುವ ದಿನಗಳು, ಇನ್ನು ಒನ್ ವೇ ಲವ್‌ನಲ್ಲಿರುವವರಿಗೆ ಅದನ್ನು ಟು ವೇ ಮಾಡುವ ತವಕ. ಪ್ರೇಮಿಗಳ ದಿನದಂದು ನನ್ನ ಪ್ರೀತಿಗೆ ಪ್ರೇಮ ನಿವೇದನೆ ಮಾಡಬೇಕೆಂದು ಕಾತರದಿಂದ ಎದುರುನೋಡುತ್ತಿರುತ್ತಾರೆ.

ಬೇರೆ ದಿನಗಳಲ್ಲಿ ಲವ್ ಪ್ರಪೋಸ್ ಮಾಡಿದರೆ ಆ ಕಡೆಯ ರಿಯಾಕ್ಷನ್ ಹೇಗಿರುತ್ತದೋ ಎಂಬ ಭಯದಲ್ಲಿದ್ದವರಿಗೆ ಈ ಪ್ರೇಮಿಗಳ ದಿನ ಎಂಬುವುದು ತುಂಬಾನೇ ವಿಶೇಷವಾದ ದಿನ.
ಪ್ರೇಮಿಗಳ ದಿನವೇ ತುಂಬಾನೇ ಒಳ್ಳೆಯದು ಎಂದು ಆ ದಿನ ಪ್ರಪೋಸ್ ಮಾಡಲು ಯೋಚಿಸುತ್ತಾರೆ, ನಿಮ್ಮಲ್ಲಿಯೂ ಈ ಆಲೋಚನೆ ಇದ್ದರೆ ಇದರ ಒಳಿತು ಕೆಡಕು ಬಗ್ಗೆ ತಿಳಿಯುವುದು ಒಳ್ಳೆಯದು:

ಪ್ರೇಮಿಗಳ ದಿನದಂದು ಪ್ರಪೋಸ್ ಮಾಡಿದರೆ ಅದರ ಗುಣಗಳ ಬಗ್ಗೆ ನೋಡುವುದಾದರೆ
ಈ ದಿನ ಪ್ರಪೋಸ್ ಮಾಡಿದಾಗ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು
ಪ್ರೇಮಿಗಳ ದಿನ ಎಲ್ಲರೂ ಪ್ರೀತಿಯ ಗುಂಗಿನಲ್ಲಿರುವಾಗ ನಾನೂ ಪ್ರೀತಿಯಲ್ಲಿ ಬೀಳಬೇಕೆಂದು ಮನಸ್ಸು ಬಯಸುತ್ತಿರುತ್ತದೆ. ತನ್ನ ಫ್ರೆಂಡ್ಸ್ ಅವರ ಪ್ರೇಮಿಯ ಜೊತೆ ಸುತ್ತಾಡುವಾಗ ನನಗೂ ಲವ್ವರ್ ಇದ್ದಿದ್ದರೆ ಈ ದಿನ ನನಗೂ ಸ್ಪೆಷಲ್ ಆಗಿರುತ್ತಿತ್ತು ಎಂದು ಮನಸ್ಸಿನಲ್ಲಿ ಅಂದುಕೊಳ್ಳುವಾಗ ನಿಮ್ಮ ಪ್ರೇಮ ನಿವೇದನೆ ಅವರನ್ನು ಮತ್ತಷ್ಟು ಪುಳುಕಿತಗೊಳಿಸುವುದು, ನಿಮ್ಮ ಪ್ರೀತಿ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು.

ಫ್ಯಾಂಟಸಿ ಲವ್ ಪ್ರಪೋಸ್‌ಗೆ ಸೂಕ್ತ ದಿನ
ಇತರ ಸಂದರ್ಭಗಳಲ್ಲಿ ನೀವು ಸಿನಿಮಾ ಸ್ಟೈಲ್‌ನಲ್ಲಿ ಲವ್ ಪ್ರಪೋಸ್ ಮಾಡಬೇಕೆಂದರೆ ಅದಕ್ಕೆ ಸೆಟ್‌ಅಪ್ ನೀವೇ ಮಾಡಬೇಕು. ಅದೇ ಪ್ರೇಮಿಗಳ ದಿನದಂದು ರೆಸ್ಟೋರೆಂಟ್, ಕಾಫಿ ಡೇಗಳಲ್ಲಿ ಲವ್ ಪ್ರಪೋಸ್‌ಗೆ ತಕ್ಕ ಅಟ್ಮೋಸ್ಪಿಯರ್ ಇರುವುದರಿಂದ ಈ ದಿನ ಲವ್ ಪ್ರಪೋಸ್ ತುಂಬಾನೇ ಸ್ಪೆಷಲ್.

ಪ್ರೇಮಿಗಳಿಗೆ ಪ್ರೇಮದ ಗುಂಗಿನಲ್ಲಿ ವಿಹರಿಸಲು ಸೂಕ್ತ ದಿನ
ಪ್ರೇಮಿಗಳ ದಿನ ಪ್ರೇಮಿಗಳಿಗೆ ಸ್ಪೆಷಲ್ ಫೀಲ್. ಈ ದಿನ ಮನೆಯವರ ಕಣ್ಣು ತಪ್ಪಿಸಿ ತನ್ನ ಪ್ರೇಮಿ ಜೊತೆ ಸುತ್ತಾಡುವ ಥ್ರಿಲ್ ಅನುಭವಿಸಲು ಇಷ್ಟಪಡುತ್ತಾರೆ. ಇನ್ನು ಮನೆಯಲ್ಲಿ ಇವರು ಪ್ರೀತಿಸುತ್ತಿರುವುದು ಗೊತ್ತಿದ್ದರೆ ಆ ಜೋಡಿಗಂತೂ ಈ ದಿನ ಯಾವುದೇ ಭಯವಿಲ್ಲದೆ ಪ್ರಣಯ ಪಕ್ಷಿಗಳಂತೆ ಖುಷಿಯಿಂದ ನಲಿಯಬಹುದು.

ನಿಶ್ಚಿತಾರ್ಥವಾಗಿದ್ದರೆ ಈ ದಿನ ತುಂಬಾನೇ ಸ್ಪೆಷಲ್
ನಿಶ್ಚಿತಾರ್ಥವಾಗಿದ್ದರೆ ಈ ಪ್ರೇಮಿಯ ದಿನ ಆಚರಿಸಲು ನಿಮ್ಮ ಜೋಡಿ ಇಷ್ಟಪಡುತ್ತಾರೆ, ಈ ದಿನ ಸಿಗುವ ಗಿಫ್ಟ್, ಜೊತೆಯಾಗಿ ಸುತ್ತಾಡಿದ ಸ್ಥಳ ಎಲ್ಲವೂ ನೆನಪಿನಲ್ಲಿ ಉಳಿಯುವುದು.

ಪ್ರೇಮಿಗಳ ದಿನವನ್ನು ಮತ್ತೊಂದು ದೃಷ್ಟಿಯಿಂದ ನೋಡುವುದಾದರೆ
ಪ್ರೇಮಿಗಳ ದಿನಕ್ಕಷ್ಟೇ ಪ್ರೀತಿ ಮೀಸಲಲ್ಲ: ಪ್ರೇಮಿಗಳ ದಿನದಂದು ಗಿಫ್ಟ್ ಕೊಟ್ಟರೆ ಅಥವಾ ಜೊತೆಯಾಗಿ ಸುತ್ತಾಡಿದರೆ, ರೊಮ್ಯಾಂಟಿಕ್ ಮೆಸೇಜ್‌ಗಳನ್ನು ಹಂಚಿಕೊಂಡರೆ ಮಾತ್ರ ಪ್ರೀತಿ ಎಂದರ್ಥವಲ್ಲ, ಪ್ರೇಮಿಗಳಿಗೆ ಈ ದಿನವಷ್ಟೇ ಅಲ್ಲ ಎಲ್ಲ ದಿನವೂ ವಿಶೇಷವೇ, ಆದ್ದರಿಂದ ಈ ದಿನ ವಿಶೇಷವಾಗಿ ಕೊಂಡಾಡಬೇಕಾಗಿಲ್ಲ ಎಂದು ಹೇಳುವವರೂ ಇದ್ದಾರೆ.
ಲವ್ ರಿಜೆಕ್ಟ್ ಆದರೆ ಅವಮಾನ
ಈ ದಿನ ರೊಮ್ಯಾಂಟಿಕ್ ಆಗಿ ಲವ್ ಪ್ರಪೋಸ್ ಮಾಡಲು ಹೋಗಿ ಅವರು ನಿಮ್ಮ ಲವ್ ತಿರಸ್ಕರಿಸಿದರೆ ಎಲ್ಲರೂ ಖುಷಿಯಿಂದ ಇರುವಾಗ ನೀವು ಮಾತ್ರ ತುಂಬಾ ಬೇಸರದಿಂದ ಇರಬೇಕಾಗುತ್ತದೆ, ಅಲ್ಲದೆ ಆ ಕಹಿ ನೆನಪು ಪ್ರತಿ ಪ್ರೇಮಿಗಳ ದಿನಕ್ಕೆ ಕಾಡಬಹುದು, ಆದ್ದರಿಂದ ಈ ದಿನ ಲವ್ ಪ್ರಪೋಸ್ ಮಾಡುವಾಗ ಆ ಕಡೆಯ ವ್ಯಕ್ತಿಗೂ ನಿಮ್ಮ ಕಡೆ ಆಕರ್ಷಣೆ ಇದ್ದರಷ್ಟೇ ಮಾಡಿ.

ಇದು ನಮ್ಮ ಸಂಸ್ಕೃತಿಯಲ್ಲ
ಇನ್ನು ವ್ಯಾಲೆಂಟೈನ್ಸ್ ಡೇ ಎಂಬುವುದು ವಿದೇಶ ಸಂಸ್ಕೃತಿ, ನಮ್ಮದ್ದಲ್ಲ ಎಂದು ವಿರೋಧ ಮಾಡುವವರು ಇದ್ದಾರೆ. ಅಲ್ಲದೆ ಈ ದಿನ ಪ್ರೇಮಿಗಳು ಸುತ್ತಾಡಿದರೆ ಕೆಲವರು ಪ್ರೇಮಿಗಳಿಗೆ ತೊಂದರೆ ಕೊಡಲೆಂದೇ ಕಾಯುತ್ತಿರುತ್ತಾರೆ.
ಅಂದ ಹಾಗೆ ವ್ಯಾಲೆಂಟೈನ್ಸ್ ಡೇ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ.



Click it and Unblock the Notifications