Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಪ್ರೀತಿಯಲ್ಲಿ ಮೊದಲ ಹಂತ ಕಾಮವಾದರೆ ಕೊನೆಯ ಹಂತ ಯಾವುದು ಗೊತ್ತೇ?
ಪ್ರೀತಿ ಎಂದರೆ ಅದೊಂದು ಸುಂದರವಾದ ಅನುಭವ. ಒಬ್ಬ ವ್ಯಕ್ತಿಯನ್ನು ನೋಡಿ ಆ ವ್ಯಕ್ತಿ ನಮ್ಮ ಬದುಕಿನಲ್ಲಿ ಬೇಕೆಂದು ಬಯಸುವುದೇ ಪ್ರೀತಿ. ಪ್ರೀತಿ ಮೂಡಿದಾಗ ಪ್ರತಿಕ್ಷಣವೂ ಅವರ ಗುಂಗಿನಲ್ಲಿರುತ್ತೇವೆ, ಅವರಿಗಾಗಿ ಏನು ಮಾಡಲೂ ಸಿದ್ಧರಾಗುತ್ತೇವೆ. ಈ ದೇಹ-ಮನಸ್ಸು ಎರಡೂ ಅವರಿಗೇ ಸಮರ್ಪಿಸಲು ಸಿದ್ಧರಾಗುತ್ತೇವೆ.
ಪ್ರೀತಿ ಎಂದ ಮೇಲೆ ನಿಷ್ಕಲ್ಮಷ ಪ್ರೀತಿ ಮಾತ್ರವಲ್ಲ, ಅಲ್ಲಿಯೂ ಕಾಮವೂ ಇರುತ್ತದೆ. ಪ್ರೀತಿಯಲ್ಲಿ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಾ, ಕಾಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಾ? ಎಂದು ಕೇಳುವುದಾದರೆ ಪ್ರೀತಿ ಎಂಬುವುದು ಪ್ರೇಮ+ಕಾಮದ ಮಿಶ್ರಣವಾಗಿದೆ. ಮೊದಲನೇ ಹಂತ ಕಾಮವೇ ಪ್ರಮುಖವಾಗಿರುತ್ತದೆ ನಂತರ ಮೈತ್ರಿಯಾಗುವುದು, ಬಳಿಕ ಆತ್ಮ ಪ್ರೀತಿ ಬೆಳೆಯುತ್ತದೆ. ಹೀಗೆ ಪ್ರೀತಿಯ ವಿವಿಧ ಹಂತಗಳ ಬಗ್ಗೆ ಪುರಾತನವಾದ ಹಿಂದೂ ತತ್ತ್ವದಲ್ಲಿ ಕೂಡ ಹೇಳಲಾಗಿದೆ.
ಪ್ರೀತಿಯ ವಿವಿಧ ಹಂತಗಳನ್ನು ನೋಡುವುದಾದರೆ:

1. ಕಾಮ
ಪ್ರೀತಿಯ ಮೊದಲ ಹಂತವೆಂದರೆ ದೈಹಿಕ ಆಕರ್ಷಣೆ. ಒಬ್ಬ ಹೆಣ್ಣು-ಗಂಡು ಪ್ರೀತಿಯಲ್ಲಿ ಬಿದ್ದಾಗ ಅವರಲ್ಲಿ ದೈಹಿಕ ಆಕರ್ಷಣೆ ಇರುತ್ತದೆ. ಒಂದು ಜೋಡಿ ಪ್ರೀತಿಯಲ್ಲಿದ್ದಾಗ ಅವರು ದೈಹಿಕವಾಗಿ ಒಂದಾಗದಿದ್ದರೂ ಒಂದಾಗಬೇಕೆಂಬ ದೈಹಿಕ ಆಕರ್ಷಣೆ ಇದ್ದೇ ಇರುತ್ತದೆ. ವೈವಾಹಿಕ ಜೀವನದ ಭದ್ರತೆಯ ಕೀಲಿಕೈ ದೈಹಿಕ ತೃಪ್ತಿಯೇ ಆಗಿದೆ. ಆದರೆ ಪ್ರೀತಿಯ ಮೊದಲ ಹಂತ ಕಾಮ. ಕಾಮಸೂತ್ರ ಎಂಬುವುದು ಲೈಂಗಿಕತೆ ಕುರಿತು ಹೇಳುವುದು ಮಾತ್ರವಲ್ಲ, ಅದರಲ್ಲಿ ಬದುಕಿನ ತತ್ತ್ವವೂ ಅಡಗಿದೆ.

2. ಶೃಂಗಾರ
ಇದರಲ್ಲಿ ಕಾಮ ಶೃಂಗಾರವಾಗಿ ಮಾರ್ಪಡಬಹುದು. ತನ್ನ ಸಂಗಾತಿ ಜೊತೆ ರೊಮ್ಯಾಂಟಿಕ್ ಮಾತನಾಡುವುದು, ಅವರನ್ನು ಪ್ರೀತಿಯಿಂದ ಅಡ್ಡ ಹೆಸರಿನಲ್ಲಿ ಮುದ್ದಾಡುವುದು, ಉಡುಗೊರೆಗಳನ್ನು ನೀಡುವುದು, ಸರ್ಫ್ರೈಸ್ ನೀಡುವುದು ಇವೆಲ್ಲಾ ಶೃಂಗಾರದ ಭಾಗವಾಗಿದೆ.

3. ಮೈತ್ರಿ
ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ಸ್ನೇಹವಿದ್ದರೆ ಮಾತ್ರ ಆ ಪ್ರೀತಿ ಮತ್ತಷ್ಟು ಬಿಗಿಯಾಗಲು ಸಾಧ್ಯ. ಒಬ್ಬರಿಗೊಬ್ಬರು ಅಕ್ಕರೆ ತೋರುವುದು, ಆರೈಕೆ ಮಾಡುವುದು, ಭಾವನೆಗಳಿಗೆ ಸ್ಪಂದಿಸುವುದು ಇವೆಲ್ಲಾ ಮೈತ್ರಿಯಾಗಿದೆ.

4. ಭಕ್ತಿ
ನಮ್ಮ ಸಂಗಾತಿಗೆ ನಾವು ತೋರುವ ಗೌರವವೇ ಭಕ್ತಿ. ಅವರನ್ನು ಗೌರವಿಸುವುದು , ಅವರ ಭಾವನೆಗಳನ್ನು ಗೌರವಿಸುವುದು, ಅವರ ಇಷ್ಟದಂತೆ ನಡೆದುಕೊಳ್ಳುವುದು ಭಕ್ತಿಯಾಗಿದೆ.

5. ಆತ್ಮ ಪ್ರೇಮ
ಇದು ಪ್ರೀತಿಯ ಅತ್ಯುನ್ನತ ಹಂತವಾಗಿದೆ. ನಾವು ನಮ್ಮನ್ನು ಪ್ರೀತಿಸದಿದ್ದರೆ ಬೇರೆಯವರನ್ನು ಪ್ರೀತಿಸಲು ಸಾಧ್ಯವೇ ಇಲ್ಲ ಎಂದು ಇದು ಹೇಳುತ್ತದೆ. ನಮ್ಮೊಂದಿಗೆ ಇತರರು ಹೇಗೆ ವರ್ತಿಸುತ್ತಾರೋ ಅದು ನಮ್ಮ ಆಲೋಚನೆ ಹಾಗೂ ವ್ಯಕ್ತಿತ್ವವನ್ನು ತೋರಿಸುತ್ತದೆ.



Click it and Unblock the Notifications
