For Quick Alerts
ALLOW NOTIFICATIONS  
For Daily Alerts

ನಿಮ್ಮ ಗೆಳತಿಯಲ್ಲಿ ಈ ಅಂಶಗಳನ್ನು ಗುರುತಿಸಿದರೆ ಅವರು ಖಂಡಿತ ನಿಮಗೆ ಮೋಸ ಮಾಡಲ್ಲ

|

ಲವ್ ಅಥವಾ ಪ್ರೀತಿ, ಚಿಕ್ಕವರಿಂದ ಹಿಡಿದು ದೊಡ್ಡವರಲ್ಲೂ ಈ ಪ್ರೀತಿ ಅನ್ನೋ ಮಾಯೆ ಸುಳಿಯದೆ ಇರಲ್ಲ. ಅದರಲ್ಲೂ ಯವ್ವನದ ಪ್ರಾಯದಲ್ಲಿ ಎಲ್ಲರೂ ಪ್ರೀತಿಯ ಸುಳಿಯಲ್ಲಿ ಬಿದ್ದೆ ಬೀಳುತ್ತಾರೆ. "ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ" ಅನ್ನೋ ಹಾಡು ಆಲ್ ಮೋಸ್ಟ್ ಎಲ್ಲರೂ ಕೇಳಿರುತ್ತಿರಾ. ಹೌದು, ಪ್ರೀತಿಯ ಸುಖ ನಿಜಕ್ಕೂ ಅನುಭವಿಸಿದವನೇ ಬಲ್ಲ. ಆ ಕೇರಿಂಗ್, ಆ ಲವ್, ಪೊಸೇಸಿವ್ ನೆಸ್ ಅದರ ಖುಷಿಯೇ ಬೇರೆ. ಆದರೆ ಇತ್ತೀಚಿಗೆ ಆಲ್ ಮೋಸ್ಟ್ ಪ್ರೇಮ ಕತೆಗಳು ಅರ್ಧಕ್ಕೆ ಮುರಿದು ಬೀಳುತ್ತಿದೆ.

ಹೌದು, ಪ್ರೀತಿ ಮಾಡಿ ಕೊಂಚ ಸಮಯ ಒಟ್ಟಿಗೆ ಇದ್ದು ನಂತರ ಆ ಪ್ರೇಮ , ಗಾಳಿಗೆ ಸಿಲುಕಿ ಮರಗಳು ಉರುಳಿ ಬೀಳುವಂತೆ ನೆಲಕ್ಕೆ ಉರುಳಿ ಬೀಳುತ್ತಿದೆ. ಆದರೆ ಸಂಬಂಧದಲ್ಲಿ ಬಿರುಗಾಳಿ ಎಂಬುವುದು ಅನುಮಾನವಾಗಿದ್ದು ಈ ಅನುಮಾನದ ಸುಂಟರ ಗಾಳಿಗೆ ಪ್ರೀತಿ ಅನ್ನೋ ಮರ ಉರುಳಿ ಬೀಳುತ್ತಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಪ್ರೀತಿಯಲ್ಲಿ ನಿಷ್ಠೆ ತೋರುವುದು ಕಪಲ್ ಗಳಿಗೆ ತುಂಬಾ ಕಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಬ್ರೇಕ್ ಅಪ್ ಗಳು ಸಂಭವಿಸುತ್ತಿದೆ.

ಅದರಲ್ಲೂ ಬ್ರೇಕ್ ಅಪ್ ವಿಚಾರಕ್ಕೆ ಬಂದರೆ ಹುಡುಗರೇ ಜಾಸ್ತಿ ಬಲಿಪಶುಗಳು. ಅನೇಕ ಲವ್ ನಲ್ಲಿ ಹುಡುಗರಿಗಿಂತ, ಹುಡುಗಿಯರೇ ಕೈ ಕೊಟ್ಟು ಹೋಗುವುದು ಜಾಸ್ತಿ. ಇದರಿಂದ ಅನೇಕ ಯುವಕರು ತಮ್ಮ ಮೊದಲ ಲವ್ ನಲ್ಲಿ ಮೋಸ ಹೋದರೆ ಮತ್ತೆ ಪ್ರೀತಿಯತ್ತ ತಲೆ ಕೂಡ ಹಾಕುವುದಿಲ್ಲ. ಈ ರೀತಿಯ ಘಟನೆ ನಡೆದರೆ ಅನೇಕ ಯುವಕರು ಲವ್ ಅಂದರೆ ಉರ್ಕೋಳೋದು ಉಂಟು.

ಹಾಗಾದರೆ ನಿಮ್ಮ ಗೆಳತಿ ನಿಮ್ಮ ಜೊತೆಗೆ ನಿಷ್ಠೆಯಾಗಿ ಇದ್ದಾಳೆ. ನಿಮ್ಮನ್ನು ಮಾತ್ರ ಪ್ರೀತಿ ಮಾಡುತ್ತಾಳೆ ಎಂಬುವುದನ್ನು ನೀವು ಹೇಗೆ ತಿಳಿದುಕೊಳ್ಳುತ್ತೀರಾ? ಇದಕ್ಕೆ ಈ ಸ್ಟೋರಿ ಮೂಲಕ ಯುವಕರಿಗೆ ಕೆಲವೊಂದು ಟಿಪ್ಸ್ ಇಲ್ಲಿದೆ.

ನಿಮ್ಮೊಂದಿಗೆ ಮತನಾಡಲು, ಸುತ್ತಾಡಲು ಬಯಸುತ್ತಾಳೆ ಆಕೆ!

ನಿಮ್ಮೊಂದಿಗೆ ಮತನಾಡಲು, ಸುತ್ತಾಡಲು ಬಯಸುತ್ತಾಳೆ ಆಕೆ!

ಪ್ರೀತಿ ಅಂದರೆ ಹಾಗೇ ಯಾವತ್ತು ಮಾತನಾಡಲು ಹೃದಯ ಬಯಸುತ್ತೆ. ಧ್ವನಿ ಕೇಳಲು ಮನ ಮಿಡಿಯುತ್ತೆ. ಹಾಗೇ ನಿಮ್ಮ ಗೆಳತಿ ನಿಮಗೆ ನಿಷ್ಟೆಯಿಂದ ಇದ್ದರೆ ಆಕೆ ಪ್ರತಿನಿತ್ಯ ಮಾತನಾಡಲು ಬಯಸುತ್ತಾಳೆ. ಒಂದೇ ವಿಷಯದ ಬಗ್ಗೆ ಅನೇಕ ಬಾರಿ ಮಾತನಾಡಿದರೂ ಆದೇ ವಿಷಯವನ್ನು ಮಾತನಾಡುತ್ತ ನಿಮ್ಮ ಧ್ವನಿ ಕೇಳಲು ಬಯಸುತ್ತಾಳೆ. ಸಣ್ಣ ಸಣ್ಣ ವಿಷಯವನ್ನು ಕೂಡ ಆಕೆ ತುಂಬಾನೆ ಖುಷಿಯಿಂದಲೇ ಶೇರ್ ಮಾಡಿಕೊಂಡು ಮಾತನಾಡುತ್ತಾಳೆ. ಅಲ್ಲದೇ ನೀವು ಕರೆದಾಗ ನಿಮ್ಮ ಜೊತೆ ಸುತ್ತಾಡಲು ಬಯಸುತ್ತಾಳೆ. ಅಲ್ಲದೇ ನಿಮ್ಮ ಜೊತೆ ಎಲ್ಲಿಗೆ ಬೇಕಾದರೂ ಬರಲು ಆಕೆ ಬಯಸುತ್ತಾಳೆ. ನಿಮ್ಮ ಜೊತೆ ಸುತ್ತಾಡಿಕೊಂಡು ಪ್ರೀತಿಯನ್ನು ಅನುಭವಿಸುತ್ತಾ ಸಮಯ ಕಳೆಯಲು ಅವಳು ಬಯಸುತ್ತಾಳೆ.

ನಿಮ್ಮನ್ನು ಆಕೆಯ ಸ್ನೇಹಿತರು, ಕುಟುಂಬಕ್ಕೆ ಪರಿಚಯಿಸುತ್ತಾಳೆ

ನಿಮ್ಮನ್ನು ಆಕೆಯ ಸ್ನೇಹಿತರು, ಕುಟುಂಬಕ್ಕೆ ಪರಿಚಯಿಸುತ್ತಾಳೆ

ನಿಮ್ಮನ್ನು ನಿಜವಾಗಿ ಪ್ರೀತಿ ಮಾಡೋದಾದ್ರೆ, ನಿಮಗೆ ಆಕೆ ನಿಷ್ಠೆಯಿಂದ ಇರಲು ಬಯಸಿದರೆ ಆಕೆ ಖಂಡಿತವಾಗಿಯೂ ಆಕೆಯ ಕುಟುಂಬಸ್ಥರಿಗೆ ನಿಮ್ಮನ್ನು ಪರಿಚಯ ಮಾಡಿಕೊಡುತ್ತಾಳೆ. ಲವ್ ಆಗಿ ನಿಮ್ಮನ್ನು ಮನಸಾರೆಯಾಗಿ ಒಪ್ಪಿದ ಮೇಲೆ ಆಕೆ ನಿಮ್ಮನ್ನು ಆಕೆಯ ಕುಟುಂಬದ ಒಂದು ಭಾಗ ಎಂದು ತಿಳಿದುಕೊಳ್ಳುತ್ತಾಳೆ. ಹೀಗಾಗಿ ಕುಟುಂಬಸ್ಥರು, ಸ್ನೇಹಿತರಿಗೆ ನಿಮ್ಮನ್ನು ಪರಿಚಯಿಸಲು ಆಕೆ ಯಾವಾಗಲೂ ಉತ್ಸುಕಳಾಗಿರುತ್ತಾಳೆ. ನಿಮ್ಮ ಜೊತೆಗಿನ ಪ್ರೀತಿಯನ್ನು ಆಕೆ ಗುಟ್ಟಾಗಿ ಇಡಲು ಬಯಸುವುದಿಲ್ಲ. ನೀವು ಆಕೆಯ ಬಾಯ್ ಫ್ರೆಂಡ್ ಆಗಿರುವುದು ಆಕೆಯ ಸೌಭಾಗ್ಯ ಎನ್ನುವ ರೀತಿ ಆಕೆಯ ಪರಿಚಯಸ್ಥರ ಮುಂದೆ ತೋರಿಸುತ್ತಾಳೆ. ಈ ಮೂಲಕ ತನ್ನ ನಿಷ್ಠೆ ಹಾಗೂ ಪ್ರೀತಿ ತೋರಿಸುತ್ತಾಳೆ.

ಸಾಮಾಜಿಕ ಜಾಲತಾಣದಲ್ಲಿ ನಿಮಗೆ ಪ್ರಾಶಸ್ತ್ಯ!

ಸಾಮಾಜಿಕ ಜಾಲತಾಣದಲ್ಲಿ ನಿಮಗೆ ಪ್ರಾಶಸ್ತ್ಯ!

ನಾವೀಗ ಸೋಶಿಯಲ್ ಮೀಡಿಯಾ ಯುಗದಲ್ಲಿದ್ದೇವೆ. ನಿಮ್ಮನ್ನ ಪ್ರೀತಿ ಮಾಡುವ ಹುಡುಗಿ ನಿಮ್ಮಲ್ಲಿ ನಿಷ್ಠೆ ಹಾಗೂ ಪ್ರೀತಿ ಇದ್ದರೆ ಆಕೆ ಯಾವಾಗಲೂ ಆಕೆ ನಿಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಗುರುತಿಸುವ ಕೆಲಸ ಮಾಡುತ್ತಾಳೆ. ಉದಾಹರಣೆಗೆ ಆಕೆ ಮತ್ತು ನಿಮ್ಮ ಫೋಟೋ ಹಾಕಿ ನೀವು ಆಕೆಯ ಲವರ್ ಅಂತ ತೋರ್ಪಡಿಸುವುದು. ಅಥವಾ ಭೂಪಟದ ಚಿತ್ರ ಹಾಗೀ ನೀನೆ ನನ್ನ ಪ್ರಪಂಚ ಎಂದು ಬಿಂಬಿಸುವ ಕೆಲ ಮಾಡುತ್ತಾರೆ. ಇನ್ನು ಇದೀಗ ಇರುವ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ನಿಮ್ಮ ಹೆಸರನ್ನು ನಮೂದಿಸುವ ಕೆಲಸ ಮಾಡುತ್ತಾರೆ. ಹೀಗೆ, ನೀವು ಆಕೆಯ ಪ್ರೇಮಿ ಎನ್ನುವುದನ್ನು ಇಡೀ ಜಗತ್ತಿಗೆ ತೋರಿಸಲು ಆಕೆ ಇಚ್ಚೆ ಪಡುತ್ತಾಳೆ. ನಿಮ್ಮ ಜೊತೆಗಿನ ಸಂಬಂಧವನ್ನು ಸಿಕ್ರೇಟ್ ಆಗಿ ಇಡಲು ಆಕೆ ಬಯಸುವುದಿಲ್ಲ.

ಎಲ್ಲಾ ಸಮಯದಲ್ಲೂ ನಿಮ್ಮನ್ನು ಮೆಚ್ಚಿಸಲು ಪ್ರಯತ್ನಿಸುತ್ತಾಳೆ!

ಎಲ್ಲಾ ಸಮಯದಲ್ಲೂ ನಿಮ್ಮನ್ನು ಮೆಚ್ಚಿಸಲು ಪ್ರಯತ್ನಿಸುತ್ತಾಳೆ!

ನಿಮ್ಮ ಗೆಳತಿ ನಿಮ್ಮನ್ನು ಯಾವಾಗಲೂ ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಾಳೆ. ನೀವು ಆಕೆಯ ಜೀವನದ ಮುಖ್ಯ ಭಾಗ ಎಂದು ತೋರಿಸುವ ನಿಟ್ಟಿನಲ್ಲಿ ಆಕೆ ಕೆಲವೊಂದು ಕಸರತ್ತು ಮಾಡುತ್ತಾಳೆ. ನಿಮಗೆ ತುಂಬಾನೆ ರೆಸ್ಪೆಕ್ಟ್ , ಲವ್, ಕೇರ್ ಕೊಡುವ ಮೂಲಕ ಇಂಪ್ರೆಸ್ ಮಾಡುತ್ತಾಳೆ. ನಿಮ್ಮ ಹುಟ್ಟಿದ ಹಬ್ಬ ಇನ್ನಿತರ ವಿಶೇಷ ದಿನ ಆಕೆ ಅದನ್ನು ಕೊಂಡಾಡುವ ಮೂಲಕ ಇಂಪ್ರೆಸ್ ಮಾಡುತ್ತಾಳೆ. ರೊಮ್ಯಾನ್ಸ್, ಸೆಕ್ಸ್ ವಿಷಯದಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮನ್ನ ಮೆಚ್ಚಿಸಲು ಪ್ರಯತ್ನಿಸುತ್ತಾಳೆ. ಇಂತಹ ಗುಣ ಲಕ್ಷಣಗಳಿದ್ದರೆ ಖಂಡಿತ ನಿಮ್ಮ ಗೆಳತಿಯನ್ನು ನೀವು ಬಿಡಬೇಡಿ.

ನಿಮ್ಮನ್ನು ತೀವ್ರವಾಗಿ ನಂಬಿ ವಿಚಾರ ಹಂಚಿಕೊಳ್ಳುತ್ತಾಳೆ!

ನಿಮ್ಮನ್ನು ತೀವ್ರವಾಗಿ ನಂಬಿ ವಿಚಾರ ಹಂಚಿಕೊಳ್ಳುತ್ತಾಳೆ!

ಆಕೆಗೆ ನೀವು ಕೇವಲ ಲವರ್ ಆಗಿರುವುದಿಲ್ಲ. ನೋವು, ಖುಷಿ, ಸಿಕ್ರೇಟ್ ಹಂಚುವ ಬೆಸ್ಟ್ ಫ್ರೆಂಡ್ ಕೂಡ ಹೌದು. ತಾನು ಯಾರಿಗೂ ಹೇಳದ ಸಿಕ್ರೇಟ್ ಗಳನ್ನು ಅವಳು ಹೇಳುತ್ತಾಳೆ ಎಂದಾದರೆ ಆಕೆ ನಿಮ್ಮನ್ನು ನಂಬುತ್ತಾಳೆ ಹಾಗೂ ಆಕೆ ನಿಮ್ಮನ್ನು ಎಲ್ಲರಿಗಿಂತಲೂ ಮಿಗಿಲು ಎಂದು ಭಾವಿಸುವುದರಿಂದ ಮಾತ್ರ. ಹೀಗಾಗಿ ಆಕೆ ನಿಮ್ಮ ಬಳಿ ಎಲ್ಲವನ್ನೂ ಶೇರ್ ಮಾಡುತ್ತಾಳೆ. ರೊಮ್ಯಾನ್ಸ್ , ಸೆಕ್ಸ್ ಬಗ್ಗೆ ಆಕೆ ಮನಬಿಚ್ಚಿ ಹೇಳುತ್ತಾಳೆ ಎಂದಾದರೂ ಅದು ಆಕೆ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ. ಹೀಗಾಗಿ ಆ ನಂಬಿಕೆ ಉಳಿಸುವ ಕೆಲಸವನ್ನು ಯುವಕರು ಮಾಡಬೇಕಿದೆ.

ಆಕೆ ಸುಳ್ಳು ಹೇಳುವುದಿಲ್ಲ, ನಂಬಿಕೆಗೆ ಪ್ರಾಶಸ್ತ್ಯ!

ಆಕೆ ಸುಳ್ಳು ಹೇಳುವುದಿಲ್ಲ, ನಂಬಿಕೆಗೆ ಪ್ರಾಶಸ್ತ್ಯ!

ಇತ್ತೀಚಿನ ದಿನಗಳಲ್ಲಿ ಸಂಬಂಧಗಳಲ್ಲಿ ಸುಳ್ಳು ಹೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿಯೇ ಅನೇಕ ಪ್ರೇಮ ಕಹಾನಿಗಳ ಅಂತ್ಯವೂ ಆಗಿದೆ. ಆದರೆ ಯಾವೊಬ್ಬ ಪ್ರೇಮಿ ಸಂಬಂಧವನ್ನು ಹಾಳುಗೆಡವಲು ಬಯಸುವುದಿಲ್ಲವೂ ಆಕೆ ಯಾವತ್ತೂ ಸುಳ್ಳು ಹೇಳಲು ಬಯಸುವುದಿಲ್ಲ. ಮುಖ್ಯವಾಗಿ ನಿಮ್ಮ ಸಂಬಂಧಕ್ಕೆ ಸಂಬಂಧಿಸಿದ ವಿಚಾರಕ್ಕಂತೂ ಆಕೆ ಯಾವತ್ತೂ ಸುಳ್ಳು ಹೇಳಲು ಹೋಗುವುದೇ ಇಲ್ಲ. ಸುಳ್ಳು ಹೇಳಿ ಸಂಬಂಧ ನಡೆಸಿದರೆ ಅದು ಒಂದಲ್ಲ ಒಂದು ದಿನ ಬಟಬಯಲಾಗುವುತ್ತದೆ ಎಂಬ ಅರಿವು ಆಕೆಗೆ ಖಂಡಿತ ಇರುತ್ತದೆ.

ಕೆಟ್ಟ ಸಮಯದಲ್ಲೂ ಜೊತೆ ಇರುವುದು!

ಕೆಟ್ಟ ಸಮಯದಲ್ಲೂ ಜೊತೆ ಇರುವುದು!

ಮನುಷ್ಯ ಎಂದ ಮೇಲೆ ಒಳ್ಳೆ ಸಮಯ ಹಾಗೂ ಕೆಟ್ಟ ಸಮಯ ಬರುವುದು ಸಾಮಾನ್ಯ. ಇನ್ನು ನಿಮ್ಮ ಗರ್ಲ್ ಫ್ರೆಂಡ್ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಆಕೆ ನಿಮಗೆ ನಿಜವಾಗಿಯೂ ಟ್ರೂ ಆಗಿದ್ದರೆ. ಆಕೆ ಖಂಡಿತವಾಗಿಯೂ ನಿಮ್ಮನ್ನು ಕೆಟ್ಟ ಸಮಯ ಬಂದಾಗ ಬಿಟ್ಟು ಹೋಗುವುದಿಲ್ಲ. ನಿಮ್ಮ ಒಳ್ಳೆ ಸಮಯದಲ್ಲಿ ಎಷ್ಟು ಪ್ರೀತಿ ತೋರುತ್ತಿರುತ್ತಾಳೋ ಅದಕ್ಕಿಂತ ದುಪ್ಪಟ್ಟು ಪ್ರೀತಿ ನಿಮ್ಮ ಸಮಯ ಕೆಟ್ಟಾಗಲೂ ಆಕೆ ನೀಡುತ್ತಾಳೆ. ನಿಮ್ಮನ್ನು ಪ್ರೀತಿ ಮಾಡುತ್ತಾಳೆ. ಇದಕ್ಕೆ ಉದಾಹರಣೆ ರೂಪದಲ್ಲಿ ಹೇಳಬೇಕೆಂದರೆ ನೀವು ತುಂಬಾನೆ ದುಡ್ಡು ಇರುವವರು ಆಗಿರುತ್ತೀರಿ. ನಿಮಗೆ ಈ ವೇಳೆ ಗರ್ಲ್ ಫ್ರೆಂಡ್ ಸಿಗುತ್ತಾಳೆ. ಒಂದು ವೇಳೆ ಏಕಾಏಕಿ ನೀವು ಬ್ಯುಸಿನೆಸ್ ನಲ್ಲಿ ಲಾಸ್ ಆಗಿ ದುಡ್ಡು ಕಳೆದುಕೊಂಡು ನಷ್ಟಕ್ಕೆ ಸಿಲುಕಿದ್ದರೆ. ಈ ವೇಳೆ ಕೂಡ ಆಕೆ ಇರುತ್ತಾಳೆ ಎಂದಾದರೆ ನೀವು ನಿಜಕ್ಕೂ ಲಕ್ಕಿ ಆಕೆಯೇ ನಿಮ್ಮ ನಿಜವಾದ ಸೌಲ್ ಮೇಟ್. ಇದಲ್ಲದೇ ಲವ್ ಇದ್ದಾಗ ಆರೋಗ್ಯ ಚೆನ್ನಾಗಿದ್ದು ಬಳಿಕ ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ನೀವು ಹಾಸಿಗೆ ಹಿಡಿದರೆ ಈ ವೇಳೆ ನಿಮ್ಮ ಜೊತೆ ನಿಲ್ಲುವವಳೇ ನಿಜವಾದ ಸಂಗಾತಿ. ಖುಷಿಗೆ ಮಾತ್ರವಲ್ಲದೇ ಕಷ್ಟದಲ್ಲೂ ಕೈಜೋಡಿಸುವವಳೇ ಟ್ರೂ ಲವರ್.

ನಿಮ್ಮ ಜೊತೆ ಸೆಕ್ಸ್ ಮಾಡಲು ಬಯಸುತ್ತಾಳೆ!

ನಿಮ್ಮ ಜೊತೆ ಸೆಕ್ಸ್ ಮಾಡಲು ಬಯಸುತ್ತಾಳೆ!

ನಿಮಗೊಂದು ಗೊತ್ತಿರಲಿ ಒಬ್ಬಳು ಯುವತಿ ಒಬ್ಬ ಯುವಕನ ಜೊತೆ ಸೆಕ್ಸ್ ಮಾಡುತ್ತಾಳೆ ಎಂದಾದರೆ ಅದಕ್ಕೆ ಒಂದೇ ಅರ್ಥ ಆಕೆ ನಿಮ್ಮನ್ನು ತೀವ್ರವಾಗಿ ನಂಬುತ್ತಾಳೆ ಮತ್ತು ತೀವ್ರವಾಗಿ ಲವ್ ಮಾಡುತ್ತಾಳೆ ಎಂಬುವುದು. ಯಾವ ಹುಡುಗಿ ಕೂಡ ಒಬ್ಬನನ್ನು ಮನಸಾರೆ ಪ್ರೀತಿಸಿದ್ದರೆ, ಆತ ತನ್ನ ಜೀವ ಎಂದು ತಿಳಿದರೆ ಮಾತ್ರ ಆಕೆ ತನ್ನ ದೇಹವನ್ನು ಅವನಿಗೆ ಒಪ್ಪಿಸುತ್ತಾಳೆ. ಯಾವಾಗ ಯುವಕ ಸೆಕ್ಸ್ ಗಾಗಿ ಕೇಳುತ್ತಾನೋ ಆಗ ಆಕೆ ಕೊಂಚ ಯೋಚಿಸಿ ಹುಡುಗನನ್ನು ಖುಷಿ ಅಥವಾ ತೃಪ್ತಿಪಡಿಸಲು ಮುಂದಾಗುತ್ತಾಳೋ ಅವಳನ್ನು ನೀವು ಎಂದು ಕೈಬಿಡಬಾರದು. ಆಕೆ ನಿಜಕ್ಕೂ ನಿಮ್ಮನ್ನು ಲವ್ ಮಾಡುತ್ತಾಳೆ. ನೀವೆ ಆಕೆಯ ಪ್ರಾಣ ಸಂಗಾತಿ ಎಂದು ತಿಳಿದಿರುವುದರಿಂದ ನೀವು ಏನು ಹೇಳಿದರು ಆಕೆ ಕೇಳುತ್ತಾಳೆ.

ನಿಮ್ಮ ಏಳಿಗೆಗೆ ಬೆಂಬಲ!

ನಿಮ್ಮ ಏಳಿಗೆಗೆ ಬೆಂಬಲ!

ಒಂದು ವೇಳೆ ನೀವು ಏನಾದರೂ ಸಾಧನೆ ಮಾಡಬೇಕು ಎಂದಿದ್ದರೆ ನಿಮ್ಮ ಹುಡುಗಿ ಯಾವತ್ತೂ ನಿಮಗೆ ಬೆಂಬಲ ನೀಡುತ್ತಾಳೆ. ಈ ಸಂಬಂಧ ಏನು ಬೇಕಾದರೂ ಆಕೆ ಮಾಡಲು ಆಕೆ ರೆಡಿ ಇರುತ್ತಾಳೆ. ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತಾಳೆ ಎಂದಾದರೆ ಆಕೆ ನಿಜಕ್ಕೂ ನಿಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಲವ್ ಮಾಡುತ್ತಾಳೆ ಎಂದು ಅರ್ಥ. ನಿಮ್ಮ ಸಾಧನೆಗೆ ಮತ್ಸರ ಪಡದೆ ಬೆಂಬಲಿಸುವುದೇ ನಿಜವಾದ ಪ್ರೀತಿ.

ದಿನ ನಿತ್ಯ ಲವ್ ಯೂ ಎನ್ನಲು ಬಯಸುತ್ತಾಳೆ!

ಯುವತಿ ನಿಮ್ಮನ್ನು ಟ್ರೂ ಆಗಿ ಲವ್ ಮಾಡುತ್ತಿದ್ದರೆ. ಆಕೆ ಯಾವತ್ತೂ ನಿಮಗೆ ಹರ್ಟ್ ಮಾಡಲು ಬಯಸುವುದಿಲ್ಲ. ಯಾವಾಗಲೂ ನಿಮ್ಮನ್ನು ಅಕ್ಕರೆಯಿಂದ ಕಾಣುತ್ತಾಳೆ. ಅಲ್ಲದೇ ಆಕೆ ಪ್ರತಿ ನಿತ್ಯ ನಿಮಗೆ ಐ ಲವ್ ಎಂದು ಹೇಳೇ ಹೇಳುತ್ತಾಳೆ. ಪ್ರೀತಿ ಉಕ್ಕಿ ಹರಿದರಂತೂ ಸಂದರ್ಭ, ಸಮಯ ನೋಡದೆ ಆಕೆ ಐ ಲವ್ ಯೂ ಅನ್ನುತ್ತಾಳೆ. ನಿತ್ಯವೂ ಆಕೆಗೆ ಇರುವ ಪ್ರೀತಿ, ಕೇರಿಂಗ್ ತೋರಿಸಲು ಬಯಸುತ್ತಾಳೆ. ಕೆಲವೊಂದು ಬಾರಿ ನಿಮ್ಮನ್ನ ನೋಡಬೇಕು ಎಂದು ಹೇಳಿ ವಿಡಿಯೋ ಕಾಲ್ ಕೂಡ ಮಾಡುವುದುಂಟು. ಇದೆಲ್ಲ ನೈಜ ಪ್ರೇಮಿಯ ಗುಣ ಲಕ್ಷಣಗಳಾಗಿದೆ. ಆದರೆ ಇವೆಲ್ಲ ಎಲ್ಲರಿಗೂ ಅನ್ವಯಿಸಲ್ಲ ಕೆಲವರು ನೈಜ ಪ್ರೀತಿ ಇದ್ದರೂ ಈ ವಿಚಾರಗಳ ವಿರುದ್ಧವಾಗಿ ಇರುತ್ತಾರೆ. ಆದರೆ ಆಲ್ ಮೋಸ್ಟ್ ಹೀಗೆ ಇರುತ್ತಾರೆ.

English summary

Signs Your Girlfriend is Faithful and Not Cheating on You in kannada

These are Signs shows your girlfriend is faithful and she ever cheat You, Have a look...
Story first published: Saturday, July 2, 2022, 10:37 [IST]
X
Desktop Bottom Promotion