Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಸಂಗಾತಿ ಜೊತೆ 'ನ್ಯೂ ಇಯರ್' ಮತ್ತಷ್ಟು ರೊಮ್ಯಾಂಟಿಕ್ ಆಗಿಸಲು ಟಿಪ್ಸ್
ಇನ್ನೇನು ನಾವು 2021ಕ್ಕೆ ಗುಡ್‌ಬೈ ಹೇಳಿ 2022ನ್ನು ಸ್ವಾಗತಿಸಲು ರೆಡಿಯಾಗಿದ್ದೇವೆ. ಹೊಸ ವರ್ಷ ಎಂದರೆ ಏನೋ ಒಂದು ಸಂಭ್ರಮ, ಹೊಸ ವರ್ಷ ನಮ್ಮ ಪಾಲಿಗೆ ಒಳಿತನ್ನೇ ಮಾಡುತ್ತದೆ ಎಂಬ ಆಶಯ, ಸಾಕಷ್ಟು ನಿರೀಕ್ಷೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ.

ಇನ್ನು ಹೊಸದಾಗಿ ಮದುವೆಯಾಗಿದ್ದರೆ ಹೊಸ ವರ್ಷ ಮತ್ತಷ್ಟು ಸ್ಪೆಷಲ್ ಆಗಿರುತ್ತೆ, ಈ ಹೊಸ ವರ್ಷವನ್ನು ಮಧುರವಾದ ನೆನಪಾಗಿ ಉಳಿಯುವಂತೆ ಮಾಡುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ. ಕೆಲವರು ಟ್ರಿಪ್ ಹೋಗುವ ಎಂದು ಪ್ಲ್ಯಾನ್ ಮಾಡಿದರೆ ಇನ್ನು ಕೆಲವರು ಮನೆಯಲ್ಲೇ ಇದ್ದು ಆಚರಿಸೋಣ ಎಂದು ಬಯಸುತ್ತಾರೆ. ನಿಮ್ಮ ಪ್ಲ್ಯಾನ್ ಏನೇ ಒಟ್ಟಿನಲ್ಲಿ ಆ ದಿನ ತುಂಬಾ ಸ್ಪೆಷಲ್ ಆಗಿರಬೇಕು ಅಷ್ಟೇ ಅಲ್ವಾ? ಹಾಗಾದರೆ ಈ ಟಿಪ್ಸ್ ಸಹಾಯಕ್ಕೆ ಬರುತ್ತೆ ನೋಡಿ:

1. ಸಂಜೆ ಸಮಯ ಜೊತೆಯಾಗಿ ಕಳೆಯಿರಿ
ಸಂಜೆ ಹೊತ್ತು ಒಂದು ರೊಮ್ಯಾಂಟಿಕ್ ರೈಡ್ ಅಥವಾ ವಾಕ್ ಹೋಗಿ ಬಂದು ತಮ್ಮ ಇಷ್ಟದ ಅಡುಗೆಯನ್ನು ಮನೆಯಲ್ಲೇ ತಯಾರಿಸಿ, ಆ ಅಡುಗೆಯನ್ನು ಮಾಡಿ ಕ್ರಿಯೇಟಿವ್ ಆಗಿ ಡೆಕೋರೇಟ್ ಮಾಡಿ, ಒಳ್ಳೆಯ ಅಟ್ಮೋಸ್ಪಿಯರ್ ನಿರ್ಮಿಸಿ ಜೊತೆಯಾಗಿ ಸವಿಯಿರಿ, ಇಲ್ಲದಿದ್ದರೆ ರೆಸ್ಟೋರೆಂಟ್‌ಗೆ ಹೋಗಿ ಡಿನ್ನರ್ ಸವಿಯಬಹುದು. ರೆಸ್ಟೋರೆಂಟ್‌ಗಿಂತ ನೀವೇ ಕೈಯಾರೆ ಮಾಡಿ ಸವಿದರೆ ತುಂಬಾನೇ ಸ್ಪೆಷಲ್ ಅನಿಸಬಹುದು ನೋಡಿ.

2. ಮಿಡ್‌ನೈಟ್‌ನಲ್ಲಿ ಸುತ್ತಾಡಿ
ಹೊಸ ವರ್ಷದಂದು ಇಬ್ಬರು ಕೈ-ಕೈ ಹಿಡಿಯುತ್ತಾ ಪಿಸು ಮಾತುಗಳನ್ನಾಡುತ್ತಾ ಸುತ್ತಾಡಿ, ಆದರೆ ಸೇಫ್ ಆದ ಜಾಗದಲ್ಲಿ ಸುತ್ತಾಡಿ. ತುಂಬಾ ನಿರ್ಜನ ಪ್ರದೇಶಗಳಿಗೆ ಹೋಗಬೇಡಿ, ದೀಪ ಅಲಂಕಾರ ಮಾಡಿರುವ ದಾರಿಯಲ್ಲಿ ವಾಕ್ ಮಾಡುವುದು, ಸಾಧ್ಯವಾದರೆ ಮಿಡ್‌ನೈಟ್ ಶಾಪಿಂಗ್ ಇವೆಲ್ಲಾ ಮಾಡಿ.

3. ಇಬ್ಬರು ಜೊತೆಯಾಗಿ ಏನು ಮಾಡಬೇಕು ಎಂಬುವುದನ್ನು ತೀರ್ಮಾನಿಸಿ
ಈ ವರ್ಷ ನಮ್ಮ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬೇಕು, ಅದಕ್ಕೆ ನಾವು ಯಾವ ರೀತಿ ಪ್ರಯತ್ನಿಸಬೇಕು ಎಂಬುವುದೆಲ್ಲಾ ಚರ್ಚಿಸಿ. ಸೋತರೆ ಗೆಲ್ಲುವವರಿಗೆ ಜೊತೆಯಾಗಿ ಪ್ರಯತ್ನಿಸೋಣ ಎಂದು ಪ್ರಾಮಿಸ್ ಮಾಡಿ.

4. ಈಗೋ ಸಟ್ಟುಹಾಕಿ
ನಿಮ್ಮಿಬ್ಬರ ನಡುವೆ ಏನಾದರೂ ತಪ್ಪು ತಿಳುವಳಿಕೆ ಇದ್ದರೆ ಅದರ ಬಗ್ಗೆ ಓಪನ್ ಆಗಿ ಮಾತನಾಡಿ ನಿಮ್ಮ ಈಗೋವನ್ನು ಸುಟ್ಟು ಹಾಕಿ. Ego...ಒಂದೇ ಸಾಕು ಸಂಬಂಧ ಮುರಿಯಲು. ಅದೇ ಮನಸ್ಸು ಬಿಚ್ಚಿ ಮಾತನಾಡುವುದರಿಂದ ಅದೆಲ್ಲಾ ದೂರಾಗುವುದು, ಇಬ್ಬರ ಮನಸ್ಸು ನಿರ್ಮಲವಾಗುವುದು.

ಒಬ್ಬರನ್ನೊಬ್ಬರು ಮುದ್ದಾಡಿ, ರೊಮ್ಯಾಂಟಿಕ್ ಕ್ಷಣ ಕಳೆಯಿರಿ
ನಿಮ್ಮ ಸಂಗಾತಿಯ ಒಳ್ಳೆಯ ಗುಣಗಳನ್ನು ಮನಸಸ್ಸು ಬಿಚ್ಚಿ ಹೊಗಳಿ, ಅವರ ಜೊತೆ ರೊಮ್ಯಾಂಟಿಕ್ ಕ್ಷಣವನ್ನು ಕಳೆಯಿರಿ, ಇವೆಲ್ಲಾ ನಿಮ್ಮ ಬಂಧ ಮತ್ತಷ್ಟು ಗಟ್ಟಿಯಾಗಲು ಸಹಕಾರಿಯಾಗುವುದು.

ಇತರ ಟಿಪ್ಸ್
* ರೊಮ್ಯಾಂಟಿಕ್ ಮೂವಿ ನೋಡಿ: ಇಬ್ಬರಿಗೂ ಮೂವಿ ನೋಡುವುದು ಇಷ್ಟವಾದರೆ ರೊಮ್ಯಾಂಟಿಕ್ ಮೂವಿ ಜೊತೆಯಾಗಿ ನೋಡಿ.
* ಗೇಮ್: ಜೊತೆಯಾಗಿ ಕೂತು ಆಟಗಳನ್ನು ಆಡಿ ಇವೆಲ್ಲಾ ಮನಸ್ಸಿಗೆ ಖುಷಿ ನೀಡುವುದು. ಬೆಡ್‌ನಲ್ಲೂ ರೊಮ್ಯಾಂಟಿಕ್ ಆಟಗಳನ್ನಾಡುವುದು ಇವೆಲ್ಲಾ ಹೊಸ ವರ್ಷದ ಆಚರನೆಯನ್ನು ಮತ್ತಷ್ಟು ಸ್ಪೆಷಲ್ ಆಗಿಸುವುದು.



Click it and Unblock the Notifications
