Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
Propose Day 2023: ಹಿಂಗೆ ಪ್ರಪೋಸ್ ಮಾಡಿದರೆ ನೋ ಹೇಳಲು ಸಾಧ್ಯವೇ?
ಫೆಬ್ರವರಿ 14, ಪ್ರೇಮಿಗಳಿಗೆ ತುಂಬಾ ವಿಶೇಷವಾದ ದಿನ. ಪ್ರೇಮ ಜ್ವರ ವಾರಕ್ಕೆ ಮುಂಚೆಯೇ ಶುರುವಾಗುವುದು, ಅಂದ್ರೆ ಈ ಪ್ರೇಮಿಗಳ ದಿನದ ಆಚರಣೆ ಫೆಬ್ರವರಿ 7ರಿಂದಲೇ ಶುರುವಾಗುವುದು. ಮೊದಲ ದಿನ ರೋಸ್ ಡೇಯಿಂದ ಶುರುವಾಗುವುದು.
ಫೆಬ್ರವರಿ 8 ಪ್ರಪೋಸ್ ಡೇ. ಕೆಲವರಿಗೆ ಇದು ತುಂಬಾ ವಿಶೇಷವಾದ ದಿನವಾಗಿದೆ. ಏಕೆಂದರೆ ತಾವು ಇಷ್ಟಪಡುವ ವ್ಯಕ್ತಿಗೆ ಪ್ರಪೋಸ್ ಮಾಡಬೇಕೆಂದು ಅನೇಕ ಬಾರಿ ಅನಿಸಿದರೂ ಸಾಧ್ಯವಾಗಿರುವುದಿಲ್ಲ, ಹೇಳಿದರೆ ಅವರು ಒಪ್ಪುತ್ತಾರೋ, ಇಲ್ಲೋ ಎಂಬ ಭಯ ಇರುತ್ತದೆ. ಆದರೆ ಈ ದಿನ ಇದೆಯೆಲ್ಲಾ ಆ ಭಯ ದೂರವಾಗಿ ಪ್ರಪೋಸ್ ಮಾಡುವ ಧೈರ್ಯ ಬರುವುದು, ಅದೇ ಈ ದಿನದ ವಿಶೇಷ.

ನಮಗೆ ಯಾರಾದರೂ ಇಷ್ಟವಾದರೆ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವುದಕ್ಕಿಂತ ಹೇಳಿ ಬಿಡುವುದೇ ಜಾಣತನ, ಅವರಿಗೂ ನಿಮನ್ನು ಇಷ್ಟವಾದರೆ ಸಂಬಂಧ ಮುಂದುವರಿಯುತ್ತೆ, ಇಲ್ಲಾ ಅಂದ್ರೆ ಮನಸ್ಸಿಗೆ ಖಂಡಿತ ಬೇಜಾರುಗುತ್ತೆ, ಹಾಗಂತ ನಮ್ಮನ್ನು ಬೇಡದವರಿಗೆ ನಾವ್ಯಾಕೆ ಕನವರಿಸಬೇಕು ಅಲ್ವಾ?
ನೀವು ಈ ದಿನ ಪ್ರಪೋಸ್ ಮಾಡಬಯಸುವುದಾದರೆ ನಿಮ್ಮ ಲವ್ ಸಕ್ಸಸ್ ಆಗಲಿ ಎಂಬುವುದೇ ಆರೈಕೆ. ನಾವಿಲ್ಲಿ ನಿಮ್ಮ ಇಷ್ಟದ ವ್ಯಕ್ತಿಗೆ ಕಳುಹಿಸಲು ಹಾರ್ಟ್ ಟಚ್ಚಿಂಗ್ ಪ್ರಪೋಸ್ ಸಂದೇಶ ನೀಡಿದ್ದೇವೆ, ನೀವು ಈ ರೀತಿ ಪ್ರಪೋಸ್ ಮಾಡಿದರೆ ಅವರು ತಾನೆ ಹೇಗೆ ನೋ... ಹೇಳಲು ಸಾಧ್ಯ?

ಪ್ರಪೋಸ್ ಡೇ
1. ನನ್ನ ಪ್ರೇಮಿಯಾಗುತ್ತೀಯಾ?
ನನ್ನ ಉಸಿರು ಇರುವವರೆಗೆ ಜೋಪಾನ ಮಾಡುವೆ

ಪ್ರಪೋಸ್ ಡೇ
ನಿನ್ನ ಭೇಟಿಯಾದ ಕ್ಷಣದಿಂದ ನನ್ನ ಜಗತ್ತಿನಲ್ಲಿ ನೀನೇ ಆವರಿಸಿರುವೆ, ಎಂದೆಂದೂ ನಿನ್ನ ಜೊತೆಯಲ್ಲಿ ಹೆಜ್ಜೆ ಹಾಕುವಾಸೆ, ನೀನು ನನ್ನವಳಾಗುವೆಯಾ?

ಪ್ರಪೋಸ್ ಡೇ
ಲವ್ ಎನ್ನುವುದು ಮ್ಯಾಜಿಕ್ ಎಂಬುವುದು ನಿನ್ನ ನೋಡಿದ ಬಳಿಕ ತಿಳಿದಿದೆ, ಈ ಬದುಕಿನಲ್ಲಿ ಮದುವೆಯೆಂಬುವುದು ಇದ್ದರೆ ಅದು ನಿನ್ನ ಜೊತೆ ಎಂದು ಭಾವಿಸಿದ್ದೇನೆ, ಈ ನನ್ನ ಮನದ ಅರಮನೆಯಲ್ಲಿ ರಾಣಿಯಾಗಲು ಬರುವೆಯಾ ಗೆಳತಿ?

ಪ್ರಪೋಸ್ ಡೇ
ನಾನು ಎಂಥ ಗುಣದ ಪುರುಷನನ್ನು ಬಯಸಿದ್ದೆನೋ ಆ ಗುಣಗಳ ಪ್ರತಿರೂಪವೇ ನೀನಾಗಿರುವೆ, ನೀನು ನನ್ನ ಬಾಳಲ್ಲಿ ಬಂದರೆ ನಾನು ತುಂಬಾ ಅದೃಷ್ಟವಂತೆ, ನನ್ನನು ನಿನ್ನವಳಾಗಿಸಲು ಸಮ್ಮತಿಯೇ?

ಪ್ರಪೋಸ್ ಡೇ
ನೀನೆಂದರೆ ನನಗೆ ತುಂಬಾ ಇಷ್ಟ, ನಿನಗೆ ನಾನು ಇಷ್ಟವಾದನೇ?
ಹ್ಯಾಪಿ ಪ್ರಪೋಸ್ ಡೇ



Click it and Unblock the Notifications
