Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ನಿಮ್ಮ ಲೈಫ್ ಪಾರ್ಟ್ನರ್ ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದವರೇ? ಅವರಲ್ಲಿ ಈ ಗುಣಗಳಿರುತ್ತೆ ನೋಡಿ
ಪ್ರತಿಯೊಬ್ಬರ ಗುಣ ಒಬ್ಬರಿಗಿಂತ ತುಂಬಾನೇ ಭಿನ್ನವಾಗಿರುತ್ತದೆ. ಒಂದೇ ತಾಯಿಯ ಅಷ್ಟೇ ಏಕೆ ಒಂದೇ ಹೊಟ್ಟೆ ಹಂಚಿಕೊಂಡ ಅವಳಿ- ಜವಳಿ ಮಕ್ಕಳ ಗುಣಗಳು ಭಿನ್ನವಾಗಿರುತ್ತೆ. ಆದರೆ ಜನಿಸಿದ ತಿಂಗಳ ಪ್ರಕಾರ ಗುಣಗಳಲ್ಲಿ ಕೆಲವೊಂದು ಹೋಲಿಕೆಗಳಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಜನವರಿ ತಿಂಗಳಿನಲ್ಲಿ ಜನಿಸಿದವರ ಗುಣ ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರಿಗಿಂತ ಭಿನ್ನವಾಗಿರುತ್ತದೆಯಂತೆ. ನಾವಿಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದವರು ನಿಮ್ಮ ಜೀವನ ಸಂಗಾತಿಯಾದರೆ ಅವರಲ್ಲಿ ನೀವು ಯಾವೆಲ್ಲಾ ಗುಣಗಳನ್ನು ನಿರೀಕ್ಷಿಸಬಹುದು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

1. ಕಂಫರ್ಟಬಲ್
ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದವರು ತುಂಬಾ ಕಂಫರ್ಟಬಲ್ ಆಗಿರುತ್ತಾರೆ. ಈ ತಿಂಗಳಿನಲ್ಲಿ ಜನಿಸಿದವರು ಲಕ್ಷುರಿ ಜೀವನ ನಡೆಸಲು ಇಷ್ಟ ಪಡುತ್ತಾರೆ, ತುಂಬಾ ತಲೆ ಕೆಡಿಸುವುದಿಲ್ಲ, ಅವರಿಗೆ ಐಶ್ವರ್ಯ ಹೇಗೆ ಗಳಿಸಬೇಕೆನ್ನುವುದು ಗೊತ್ತಿರುತ್ತದೆ.

2. ಸಮಸ್ಯೆಗಳನ್ನು ಬಗೆಹರಿಸುತ್ತಾರೆ
ಜೀವನ ಸಂಗಾತಿಯಲ್ಲಿ ಈ ಗುಣವಿದ್ದರೆ ಹೆಚ್ಚು ಚಿಂತೆನೇ ಇರಲ್ಲ. ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದವರು ಬೇಗನೆ ಸಮಸ್ಯೆಗಳನ್ನು ಬಗೆಹರಿಸುತ್ತಾರೆ, ಅವರು ಸಂಗಾತಿ ಹೇಳುವುದನ್ನು ಕೇಳಿಸಿಕೊಳ್ಳುವ ಗುಣ ಹೊಂದಿರುತ್ತಾರೆ.

3. ಅವರು ಏನು ಮಾಡುತ್ತಾರೆ ಎಂದು ಊಹಿಸುವುದು ಕಷ್ಟ
ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದವರು ಏನಾದರೂ ಹೊಸತನ್ನು ಮಾಡುತ್ತಲೇ ಇರುತ್ತಾರೆ, ಸಾಕಷ್ಟು ಸಮಯದಲ್ಲಿ ಸಂಗಾತಿಗೆ ಅವರು ಏನು ಮಾಡುತ್ತಾರೆ ಎಂದು ಊಹಿಸುವುದು ಕಷ್ಟ.

4 ಬೇಗನೆ ನೊಂದುಕೊಳ್ಳುತ್ತಾರೆ
ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದವರು ಚಿಕ್ಕ ವಿಷಯಕ್ಕೂ ಬೇಗನೆ ನೊಂದುಕೊಳ್ಳುತ್ತಾರೆ. ಅವರೊಂದಿಗೆ ಮಾತನಾಡುವಾಗ ಎಚ್ಚರವಹಿಸಬೇಕು. ಆದರೆ ಇವರು ಯಾವುದನ್ನೂ ತುಂಬಾ ಸಮಯ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಬೇಗನೆ ಎಲ್ಲವನ್ನು ಮರೆತು ತಮ್ಮ ಗುರಿಯ ಕಡೆ ಗಮನ ನೀಡುತ್ತಾರೆ.

6. ಸಂಬಂಧದ ಬಗ್ಗೆ ತುಂಬಾ ಕೇರ್ ಮಾಡುತ್ತಾರೆ
ತಮ್ಮ ಸಂಗಾತಿಯನ್ನು ಖುಷಿಯಾಗಿಡಲು ಬಯಸುತ್ತಾರೆ, ಅದಕ್ಕಾಗಿ ಪ್ರಯತ್ನ ಮಾಡುತ್ತಾರೆ. ತಮ್ಮ ಪ್ರೀತಿಗಾಗಿ ಎಂಥ ರಿಸ್ಕ್ ತೆಗೆದುಕೊಳ್ಳಲೂ ರೆಡಿ. ಅವರ ವ್ಯಕ್ತಿತ್ವ ಸಂಗಾತಿಯನ್ನು ಆಕರ್ಷಿಸುವಂತೆ ಇರುತ್ತದೆ. ಇವರು ತುಂಬಾ ರೊಮ್ಯಾಂಟಿಕ್ ಕೂಡ ಹೌದು.

7. ಈಸಿ ಗೋಯಿಂಗ್ ಪರ್ಸನಾಲಿಟಿ
ಈ ಗುಣ ಒಳ್ಳೆಯದು ಹೌದು ಕೆಲವೊಮ್ಮೆ ಕೋಪವನ್ನು ತರಿಸುತ್ತದೆ. ಯಾವುದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ, ಎಲ್ಲವನ್ನು ಲೈಟ್ ಆಗಿ ತೆಗೆದುಕೊಳ್ಳುತ್ತಾರೆ. ಯಾವುದೇ ವಿಷಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಒಂದು ಲೆಕ್ಕದಲ್ಲಿ ಒಳ್ಳೆಯದು, ಏಕೆಂದರೆ ಕೆಲವರು ಚಿಕ್ಕ ವಿಷಯವನ್ನು ದೊಡ್ಡದು ಮಾಡುತ್ತಾರೆ, ಆ ಗುಣ ಇವರಲ್ಲಿ ಇರಲ್ಲ. ಇನ್ನು ಕೆಲವೊಮ್ಮೆ ಇವರು ಯಾವುದನ್ನು ಸೀರಿಯಸ್ ತೆಗೆದುಕೊಳ್ಳುತ್ತಿಲ್ಲ ಎಂದು ಕೆಲವೊಂದು ವಿಷಯಕ್ಕೆ ಸಂಗಾತಿಗೆ ಬೇಸರ ಕೂಡ ಆಗಬಹುದು.

7.ತುಂಬಾ ಸ್ಟ್ರಾಂಗ್
ಅವರು ಯಾವುದಕ್ಕೂ ಯಾವುದನ್ನು ನೆಚ್ಚಿಕೊಂಡು ಕೂರುವುದಿಲ್ಲ. ತುಂಬಾ ಸ್ವಾಭಿಮಾನಿಗಳು. ತಮ್ಮ ಕಾಲ ಮೇಲೆ ತಾವೇ ನಿಂತುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಎಂಥದ್ದೇ ಸಮಸ್ಯೆ ಇದ್ದರೂ ಒನ್ ಮ್ಯಾನ್ ಆರ್ಮಿಯಂತೆ ಹೋರಾಡುತ್ತಾರೆ.



Click it and Unblock the Notifications
