Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬಾನಲ್ಲೊಂದು ಲವ್ ಪ್ರಪೋಸ್: ರೊಮ್ಯಾಂಟಿಕ್ ವೀಡಿಯೋ ಆಯ್ತು ವೈರಲ್

ಫ್ಯಾಂಟಸಿ ಲವ್ ಪ್ರಪೋಸ್ ಯಾರು ತಾನೆ ಇಷ್ಟಪಡಲ್ಲ, ಅಂಥ ಲವ್ ಸ್ಟೋರಿ ಸಿನಿಮಾದಲ್ಲಿ ನೋಡುವಾಗ ಮಾತ್ರವಲ್ಲ ನಿಜ ಜೀವನದಲ್ಲೂ ಆದರೂ ತುಂಬಾನೇ ಇಷ್ಟವಾಗುವುದು ಅಲ್ವಾ? ಅಂಥದ್ದೊಂದು ಕ್ಯೂಟ್ ಲವ್ ಸ್ಟೋರಿ ತುಂಬಾನೇ ವೈರಲ್ ಆಗಿದೆ.
ಟ್ವಿಟರ್ ಶೇರ್ ಮಾಡಲಾಗಿರುವ ಆ ಲವ್ ಪ್ರಪೋಸ್ ವೀಡಿಯೋ ನೋಡಿದ ನೆಟ್ಟಿಗರು ತುಂಬಾನೇ ಇಷ್ಟಪಟ್ಟಿದ್ದಾರೆ. ಏರ್ ಇಂಡಿಯಾ ಫ್ಲೈಟ್ ಇಂಥದ್ದೊಂದು ಕ್ಯೂಟ್ ಲವ್ ಸ್ಟೋರಿಗೆ ಸಾಕ್ಷಿಯಾಗಿದೆ.
ವಿಮಾನ ಇನ್ನೇನು ಹೊರಡುವುದರಲ್ಲಿತ್ತು, ಎಲ್ಲರೂ ತಮ್ಮ-ತಮ್ಮ ಸೀಟ್‌ನಲ್ಲಿ ಆಸೀನರಾಗಿದ್ದರು, ಆಗ ಒಬ್ಬ ಯುವಕ ಕೈಯಲ್ಲಿ ಪಿಂಕ್ ಬಣ್ಣದ ಶೀಟ್ ಹಿಡಿದು ಬರುತ್ತಾನೆ. ಅದರಲ್ಲಿ ಕೆಲವು ಫೋಟೋಗಳನ್ನು ಅಂಟಿಸಿರುತ್ತದೆ, ಜೊತೆಗೆ ಏನೋ ಬರೆದಿದ್ದಾನೆ, ಏನು ಬರೆದಿದ್ದಾನೆ ಎಂಬುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ, ಬಹುಶಃ ತನ್ನ ಪ್ರೇಮಿಗೆ ಪ್ರೇಮ ಭಾಷೆಯಾಗಿರಬಹುದು.
ಅವನು ತನ್ನ ಪ್ರೇಮಿ ಇರುವ ಕಡೆ ಬಂದು ಎಕ್ಸ್‌ಕ್ಯೂಸ್‌ಮಿ ಮ್ಯಾಮ್ ಅಂತ ಶೀಟ್ ತೋರಿಸುತ್ತಾನೆ, ಅವಳಿಗೂ ಇದ್ಯಾರಪ್ಪಾ ಎಂಬ ಅಚ್ಚರಿ, ಆತ ಮಾಸ್ಕ್ ತೆಗೆದಾಗ ಅವಳಿಗೆ ಬಂದಿರುವುದು ತನ್ನ ಇನಿಯ ಎಂದು ಗೊತ್ತಾಗುತ್ತದೆ. ಖುಷಿಯಿಂದ ಸೀಟ್‌ನಿಂದ ಎದ್ದು ಅವನ ಬಳಿ ಹೋಗುತ್ತಾಳೆ, ಆಗ ಆತ ಥೇಟ್ ಸಿನಿಮಾ ಸ್ಟೈಲ್‌ನಲ್ಲಿಯೇ ಮಂಡಿಯೂರಿ ಉಂಗುರ ನೀಡುತ್ತಾ ಪ್ರಪೋಸ್ ಮಾಡುತ್ತಾನೆ, ಫ್ಲೈಟ್‌ನಲ್ಲಿದ್ದವರೂ ಚಪ್ಪಾಳೆ ತಟ್ಟುತ್ತಾರೆ.
ಇದೀಗ ಈ ಕ್ಯೂಟ್ ಲವ್ ಸ್ಟೋರಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಕೆಲವರು ಇದನ್ನು ಬೆಸ್ಟ್ ಪ್ರಪೋಸಲ್ ಅಂದರೆ ಇನ್ನು ಕೆಲವರು ಮದುವೆ ಗೊತ್ತಾದ ಮೇಲೆ ಇದೆಂಥ ಪ್ರಪೋಸಲ್, ಇನ್ನು ಕೆಲವರು ವಿದೇಶಿಯರ ಸ್ಟೈಲ್ ಅನುಕರಣೆ ಎಂದೆಲ್ಲಾ ತಮಗೆ ತೋಚಿದ ಕಮೆಂಟ್ ಹಾಕುತ್ತಿದ್ದಾರೆ.
ಈ ರೀತಿಯ ಕ್ಯೂಟ್ ಪ್ರಪೋಸಲ್‌ಗಳು ಆಗಾಗ ಸದ್ದು ಮಾಡುತ್ತದೆ. ನೀವು ನಿಮ್ಮ ಪ್ರೇಮಿಗೆ ಸರ್‌ಪ್ರೈಸ್ ಪ್ರಪೋಸ್ ನೀಡಬೇಕೆಂದಿದ್ದೀರಾ? ಈ ರೀತಿ ಸಾರ್ವಜನಿಕವಾಗಿ ಮೊದಲ 'ಬಾರಿ ಪ್ರಪೋಸ್ ಮಾಡುವಾಗ ತುಂಬಾನೇ ಜಾಗ್ರತೆ , ಏಕೆಂದರೆ ನಿಮಗೆ ಅವರ ಮೇಲೆ ಇಷ್ಟ ಇರುವಂತೆ ಅವರಿಗೂ ನಿಮ್ಮ ಇಷ್ಟವಿದ್ದರೆ ಸರಿ, ಇಲ್ಲದಿದ್ದರೆ ಅವರು ನೋ ಅಂದಾಗ ಎಲ್ಲರ ಮುಂದೆ ಅವಮಾನ ಪಡಬೇಕಾದೀತು.
ಸಿನಿಮಾ ಸ್ಟೈಲ್ ಒಕೆ, ಆದರೆ ನಿಮಗೂ ನೋವು, ಅವಮಾನವಾಗಬಾರದು, ಏನಂತೀರಿ?



Click it and Unblock the Notifications



