Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಆತ ಕ್ಯಾಂಡಲ್ ಲೈಟ್ ರೊಮ್ಯಾಂಟಿಕ್ ಪ್ರಪೋಸ್‌ಗೆ ಸಿದ್ಧತೆ ಮಾಡಿದ್ದ, ಬಂದು ನೋಡಿದರೆ ಫ್ಲ್ಯಾಟ್ ಕರಕಲಾಗಿತ್ತು
ಆತ ತನ್ನ ಗರ್ಲ್‌ಫ್ರೆಂಡ್‌ಗೆ ಸಕತ್ ರೊಮ್ಯಂಟಿಕ್ ಆಗಿ ಪ್ರಪೋಸ್ ಮಾಡಬೇಕು ಎಂದು ಬಯಸಿ ಅದಕ್ಕಾಗಿ ಭರ್ಜರಿ ಪ್ಲ್ಯಾನ್ ಮಾಡಿದ್ದ. ತಾನು ಪ್ರಪೋಸ್ ಮಾಡುವಾಗ ತನ್ನ ಸುತ್ತಲೂ ಬಲೂನ್‌ಗಳು ಹಾರಾಡುತ್ತಾ ಇರಬೇಕು, ಮೇಣದ ದೀಪಗಳು ಉರಿಯುತ್ತಿರಬೇಕಯ, ಆ ಸುಂದರ ಸಂಜೆ ಆಕೆಯ ಮುಂದೆ ಮಂಡಿಯೂರಿ ವಿಲ್ ಯೂ ಮ್ಯಾರಿ ಮಿ ಎಂದು ಕೇಳಬೇಕು ಅಂದಕೊಂಡಿದ್ದ. ಅದಕ್ಕಾಗಿ 'ವಿಲ್ ಯೂ ಮ್ಯಾರಿ ಮಿ' ಎಂಬ ವಿನ್ಯಾಸದಲ್ಲಿ ಕ್ಯಾಂಡಲ್ ಕೂಡ ಉರಿಸಿದ್ದ.

ಆತ ಅಂದುಕೊಂಡಂತೆ ಆಗಿದ್ದರೆ ಅದೊಂದು ರೊಮ್ಯಾಂಟಿಕ್ ಸಂಜೆಯಾಗಿರುತ್ತಿತ್ತು. ಆದರೆ ಆತ ಬಯಸಿದ್ದೇ ಒಂದು ನಡೆದಿದ್ದೇ ಮತ್ತೊಂದು. ಆತ ತನ್ನ ಗರ್ಲ್ ಕರೆದುಕೊಂಡು ಬರುವಷ್ಟರಲ್ಲಿ ಮನೆಯೇ ಭಸ್ಮವಾಗಿತ್ತು!

ರೊಮ್ಯಾಂಟಿಕ್ ಪ್ರಪೋಸ್‌ಗೆ ಸಿದ್ಧತೆ
ಆತನ ಹೆಸರು ಆಲ್ಬರ್ಟ್ ನೆಡ್ರೂ, ವಯಸ್ಸು 26, ತನ್ನ ಗರ್ಲ್ ಫ್ರೆಂಡ್‌ಗೆ ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳುವ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ, ಆ ಸುಂದರ ಕ್ಷಣ ಮರೆಯಬರದು ಎಂದು 100 ಟೀಲೈಟ್ಸ್ ಹಚ್ಚಿದ್ದ. ತನ್ನ ಕೋಣೆಯನ್ನು ಸಿಂಗರಿಸಲು ಬರೋಬರಿ ನಾಲ್ಕು ಗಂಟೆ ತಗೊಂಡಿದ್ದ. ಸುಮಾರು 60 ಬಲೂನ್‌ಗಳಿಮದ ಅಲಂಕರಿಸಿದ್ದ, ಎಲ್ಲಾ ಕ್ಯಾಂಡಲ್ ಹಚ್ಚಿದ್ದ. ತನ್ನ ಗರ್ಲ್‌ಫ್ರೆಂಡ್ ವಲೆರ್ಜಿಯಾಳನ್ನು ಕರೆದುಕೊಂಡು ಬರಲು ಹೊರಡುವ ಮುನ್ನ ಎಲ್ಲಾ ಸರಿಯಾಗಿದೆಯೇ, ಅಲಂಕಾರವೆಲ್ಲಾ ಪರ್ಫೆಕ್ಟ್ ತಾನೆ ಎಂದು ಪರಿಶೀಲಿಸಿ ಹೊರಟಿದ್ದ.

ಮನೆಯೇ ಭಸ್ಮವಾಗಿತ್ತು
ತಾನು ಅಷ್ಟೊಂದು ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡುವಾಗ ಅವಳು ಆತನನ್ನು ಅಪ್ಪಿಕೊಳ್ಳುವ ಆ ಕ್ಷಣ ಎಲ್ಲವನ್ನು ಕನಸ್ಸು ಕಾಣುತ್ತಾ ಗರ್ಲ್‌ಫ್ರೆಂಡ್ ಜೊತೆ ಮನೆಗೆ ಬರುತ್ತಾನೆ, ಮನೆ ಮುಂದೆ ನೋಡಿದರೆ ಅಗ್ನಿ ಶಾಮಕ ದಳ, ತನ್ನ ಮನೆ ಸುಟ್ಟು ಕರಲಾಗಿರುತ್ತದೆ.

ಸುಟ್ಟ ಮನೆಯಲ್ಲಿಯೇ ಪ್ರಪೋಸ್
ಕಲರ್ ಫುಲ್ ಬಲೂನ್, ಕ್ಯಾಂಡಲ್ ಲೈಟ್, ವೈನ್ ಇಂತಹ ಸುಂದರ ಸಂಜೆಯಲ್ಲಿ ಗರ್ಲ್ ಫ್ರೆಂಡ್‌ಗೆ ಪ್ರಪೋಸ್ ಮಾಡಬೇಕು ಅಂದುಕೊಂಡಿದ್ದರೂ, ಅದು ಸಾಧ್ಯವಾಗಲಿಲ್ಲ, ಆದರೂ ಆತನ ಸುಟ್ಟ ಮನೆಯಲ್ಲಿಯೇ ಪ್ರಪೋಸ್ ಮಾಡಿದ್ದಾಳೆ, ಅದನ್ನವಳು ಪ್ರೀತಿಯಿಮದ ಒಪ್ಪಿಕೊಂಡಿದ್ದಾಳೆ.

ನನ್ನ ಮಕ್ಕಳಿಗೆ ಹೇಳಬಹುದಾದ ಸುಂದರ ಕತೆ ಎಂದ ಆಲ್ಬರ್ಟ್
'ನಾನು ಬಲೂನ್ ಹಾಗೂ ಕ್ಯಾಂಡಲ್ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಇಟ್ಟಿದ್ದೆ, ಒಟ್ಟಿನಲ್ಲಿ ಮನೆ ತುಂಬಾ ಸುಂದರವಾಗಿ ಕಾಣಬೇಕೆಂದಷ್ಟೇ ಬಯಸಿದ್ದೆ, ಆದರೆ ಹೀಗಾಗುತ್ತೆ ಅಂತಹ ಊಹಿಸಿರಲಿಲ್ಲ, ಮುಂದೆ ನಮ್ಮ ಮಕ್ಕಳಿಗೆ ಹೇಳಲು ಇದೊಂದು ಸುಂದರವಾದ ಕತೆ' ಎಂದಿದ್ದಾರೆ ಆಲ್ಬರ್ಟ್.
ಆಲ್ಬರ್ಟ್ ಹಾಗೂ ವೆಲೆರ್ಜಿಯಾ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ಮದುವೆಯಾಗಲಿ ತೀರ್ಮಾನಿಸಿದ್ದರು.

ಎಲ್ಲರಿಗೂ ಇದೊಂದು ಪಾಠ
ಪ್ರತಿಯೊಬ್ಬ ಪ್ರೇಮಿಗಳಿಗೂ ತಮ್ಮ ಲವ್ ಅಥವಾ ಮದುವೆ ಪ್ರಪೋಸ್ ಭಿನ್ನವಾಗಿ ಹೇಳಬೇಕೆಂಬ ಕನಸ್ಸುಗಳಿರುತ್ತದೆ. ಆದರೆ ಹೊರಗಡೆ ಹೋಗುವಾಗ ಮನೆಯಲ್ಲಿ ದೀಪ ಅಥವಾ ಕ್ಯಾಂಡಲ್ ಹಚ್ಚಿಟ್ಟು ಹೋದರೆ ಇದೊಂದು ಉದಾಹರಣೆ. ಮನೆಯನ್ನು ಬಲೂನ್, ಹೂ, ಕ್ಯಾಂಡಲ್‌ನಿಂದ ಅಲಂಕರಿಸಿ ಗರ್ಲ್‌ಫ್ರೆಂಡ್‌ನ ಆಹ್ವಾನಿಸಲು ನೀವು ಬಯಸುವುದಾದರೆ ಕ್ಯಾಂಡಲ್ ಮಾತ್ರ ಮೊದಲೇ ಹಚ್ಚಿಡಬೇಡಿ, ಆಕೆ ಬಂದ ಮೇಲೆ ಹಚ್ಚುವುದೇ ಸೇಫ್, ಎನಂತೀರಿ?



Click it and Unblock the Notifications
