Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೀತಿಸಿದವರು ನಿಮ್ಮ ಜೊತೆ ಕೊನೆಯವರೆಗೂ ಇರಬೇಕಾ? ಈ ಏಳು ಗುಣಗಳು ಅಗತ್ಯ
ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತು ಕಾಣೊದಿಲ್ವಂತೆ. ಪ್ರೀತಿಯೆಂಬ ಅಮಲಿನಲ್ಲಿ ಪ್ರೇಮಿಗಳು ಎಲ್ಲವನ್ನೂ ಮರೆತು ಬಿಡ್ತಾರೆ. ಹೊಸತರಲ್ಲಿ ಎಲ್ಲವೂ ಚೆನ್ನಾಗಿದ್ದಂತೆ ಕಂಡರೂ ನಂತರ ಸಮಯ ಕಳೆದಂತೆ ಜಗಳ, ಮನಸ್ತಾಪ ಎಲ್ಲವೂ ಹೆಚ್ಚಾಗುತ್ತದೆ.

ಗಂಡು-ಹೆಣ್ಣಿನ ನಡುವೆ ಪ್ರೀತಿಯೊಂದಿದ್ದರೆ ಮಾತ್ರ ಸಂಬಂಧ ಗಟ್ಟಿಯಾಗಿ ಉಳಿಯೋದಕ್ಕೆ ಸಾಧ್ಯವಿಲ್ಲ. ಪ್ರೀತಿಯ ಜೊತೆಗೆ ಈ ಏಳು ಗುಣಗಳು ಇಬ್ಬರಲ್ಲಿ ಇದ್ದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಅಷ್ಟಕ್ಕು ಆ ಏಳು ಗುಣಗಳು ಯಾವುದು ಅನ್ನೋದನ್ನ ಹೇಳ್ತೀವಿ.

1. ಒಬ್ಬರಿಗೊಬ್ಬರು ಪರಸ್ಪರ ಗೌರವ ನೀಡಿ
ಸಂಬಂಧದಲ್ಲಿ ಮೇಲೂ, ಕೀಳೂ ಎಂಬುವುದಿಲ್ಲ. ಇಬ್ಬರೂ ಕೂಡ ಸಂಗಾತಿಯ ಮಾತನ್ನ ಕೇಳಬೇಕು, ಅವರ ಅಭಿಪ್ರಾಯವನ್ನ ಗಣನೆಗೆ ತೆಗೆದುಕೊಳ್ಳಬೇಕು. ಕಿರುಚಾಡಿ ಮಾತಾನಾಡೋದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಂಗಾತಿ ಭಾವುಕರಾದಾಗ ಸಮಾಧಾನಪಡಿಸಿ. ಯಾವಾಗ ಸಂಬಂಧದಲ್ಲಿ ಗೌರವ ಹೆಚ್ಚಾಗುತ್ತದೋ ಆಗ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.

2. ಪ್ರಾಮಾಣಿಕ ಮತ್ತು ನಂಬಿಕಸ್ಥರಾಗಿರಿ
ಸಂಬಂಧದಲ್ಲಿ ನಂಬಿಕೆ ಹಾಗೂ ಪ್ರಾಮಾಣಿಕತೆ ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಸಂಗಾತಿಯನ್ನು ಬಿಟ್ಟು ಬೇರೊಂದು ಸಂಬಂಧ ಇಟ್ಟು ಕೊಳ್ಳುವುದು ಸರಿಯಲ್ಲ. ಒಂದೇ ಸಂಬಂಧಕ್ಕೆ ಸೀಮಿತವಾಗಿರಿ ಆಗ ನಂಬಿಕಸ್ಥ ಅನ್ನಿಸಿಕೊಳ್ಳುತ್ತೀರಿ. ಇದರ ಜೊತೆಗೆ ನಿಮ್ಮ ಅಭಿಪ್ರಾಯಗಳು ಏನೇ ಇದ್ದರೂ ಪ್ರಾಮಾಣಿಕವಾಗಿ ನಿಮ್ಮ ಸಂಗಾತಿಯ ಮುಂದೆ ಮುಕ್ತವಾಗಿ ಹಂಚಿಕೊಳ್ಳಿ.

3. ಸಂವಹನ
ನಿಮ್ಮ ಆಸೆ-ಆಕಾಂಕ್ಷೆಗಳು, ಸಂತೋಷ-ದುಃಖ, ನೋವು ನಲಿವನ್ನು ನಿಮ್ಮ ಸಂಗಾತಿಯ ಮುಂದೆ ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮಿಬ್ಬರ ಮಧ್ಯೆ ಸಂವಹನ ಚೆನ್ನಾಗಿದ್ದಾಗ ಮಾತ್ರ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯ. ಒಬ್ಬರನ್ನೊಬ್ಬರು ಅರಿತಿದ್ದಾಗ ಎಂತಹ ಪರಿಸ್ಥಿತಿಯನ್ನಾದರೂ ದೈರ್ಯದಿಂದ ಎದುರಿಸಬಹುದು.

4. ಸಂಗಾತಿಯೊಂದಿಗೆ ಯಾವ ವಿಚಾರವನ್ನು ಮುಚ್ಚಿಡಬೇಡಿ
ನಿಮ್ಮ ಬಾಳಿನಲ್ಲಿ ಸಂಗಾತಿ ಬರುವ ಮೊದಲು ಯಾವುದಾದರೂ ಕೆಟ್ಟ ಘಟನೆಗಳು ಅಥವಾ ಒಳ್ಳೆಯ ಘಟನೆಗಳು ನಡೆದಿರಬಹುದು. ಸಾಮಾನ್ಯವಾಗಿ ಖುಷಿಯ ವಿಚಾರವನ್ನು ಹಂಚಿಕೊಳ್ಳುತ್ತೇವೆ. ಆದರೆ ದು:ಖದ ವಿಚಾರವನ್ನು ಹೇಳಲು ಹಿಂಜರಿಯುತ್ತೇವೆ. ಅಂತಹ ಯಾವುದೇ ವಿಚಾರವಿದ್ದರೂ ನಿಮ್ಮ ಸಂಗಾತಿಯ ಜೊತೆಗೆ ಮುಕ್ತವಾಗಿ ಮಾತನಾಡಿ. ಯಾಕೆಂದರೆ ನೀವು ನಿಮ್ಮ ಸಂಗಾತಿಯಿಂದ ಮುಚ್ಚಿಟ್ಟ ವಿಚಾರಗಳು ಒಂದಲ್ಲ ಒಂದು ದಿನ ನಿಮಗೆ ಆಪತ್ತು ತಂದೊಡ್ಡಬಹುದು.

5. ಲೈಂಗಿಕ ಸಂಬಂಧ ಉತ್ತಮವಾಗಿರಲಿ
ಪ್ರೀತಿಯಲ್ಲಿ ಲೈಂಗಿಕ ಸಂಬಂಧ ತುಂಬಾನೇ ಮುಖ್ಯವಾಗುತ್ತದೆ. ಲೈಂಗಿಕ ಸಂಬಂಧ ಚೆನ್ನಾಗಿರದೇ ಹೋದರೆ ಅಂತಹ ಸಂಬಂಧ ಉತ್ತಮವಾಗಿರುವುದಿಲ್ಲ. ನಿಮ್ಮ ಸಂಗಾತಿಯ ಲೈಂಗಿಕ ಬಯಕೆಗಳನ್ನು ಈಡೇರಿಸಿ. ಇಲ್ಲವಾದರೆ ಅವರು ಬೇರೆ ಕಡೆ ಆಕರ್ಷಿತರಾಗಬಹುದು.

6. ಆರ್ಥಿಕವಾಗಿ ಸ್ಥಿರವಾಗಿರಿ
ಜೀವನ ನಡೆಸಲು ಪ್ರೀತಿಯೊಂದಿದ್ದರೆ ಸಾಲದು. ಬದುಕಲು ದುಡ್ಡಿನ ಅವಶ್ಯಕತೆ ತುಂಬಾನೇ ಇದೆ. ಈಗಿನ ಕಾಲದ ದುಬಾರಿ ಜಗತ್ತಿನಲ್ಲಿ ಒಬ್ಬರು ದುಡಿದರೆ ಸಾಕಾಗುವುದಿಲ್ಲ. ಇಬ್ಬರು ದುಡಿದರಷ್ಟೇ ಬದುಕಿನ ಬಂಡಿ ಸಾಗಲು ಸಾಧ್ಯ. ಹಾಗಂತ ಗಂಡನ ಬಳಿ ಅಥವಾ ಹೆಂಡತಿಯ ಬಳಿ ಸಿಕ್ಕಾಪಟ್ಟೆ ದುಡ್ಡಿದ್ದರೆ ನಾನು ದುಡಿಯುವ ಅಗತ್ಯ ಇಲ್ಲ ಅಂದುಕೊಳ್ಳಬೇಡಿ. ಆದಷ್ಟು ನಿಮ್ಮದೇ ಆದ ಐಡೆಂಟಿ ಸೃಷ್ಟಿಸಿಕೊಳ್ಳಲು ಪ್ರಯತ್ನಿಸಿ.

7. ಜಗಳ, ಮನಸ್ತಾಪಗಳಾದಾಗ ಪರಿಹರಿಸಿಕೊಳ್ಳಿ
ಸಂಬಂಧ ಅಂದ ಮೇಲೆ ಅಲ್ಲಿ ಜಗಳ, ಮನಸ್ತಾಪ ಕಾಮನ್. ಹಾಗಂತ ಅದನ್ನ ಮುಂದುವರಿಸಿಕೊಂಡು ಹೋಗಬಾರದು. ಮಾತನಾಡಿ ಎಲ್ಲವನ್ನೂ ಬಗೆಹರಿಸಿಕೊಳ್ಳಬೇಕು. ಅಥವಾ ಜಗಳ ನಡೆಯುವ ಸಮಯದಲ್ಲಿ ಒಬ್ಬರು ಸುಮ್ಮನಿರಬೇಕು. ಇಬ್ಬರೂ ಮಾತಿಗೆ ಮಾತು ಬೆಳೆಸಿಕೊಂಡು ಹೋದರೆ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ.
ಪ್ರೀತಿ ಹುಟ್ಟೋದು ಸುಲಭ ಆದರೆ ಅದನ್ನು ಕೊನೆವರೆಗೆ ಉಳಿಸಿಕೊಳ್ಳೋದೇ ಕಷ್ಟ. ಏನೇ ಆದರೂ ಮಧ್ಯದಲ್ಲೇ ಸಂಬಂಧಕ್ಕೆ ಎಳ್ಳು, ನೀರು ಬಿಡಬೇಡಿ. ಈ ಎಂಟು ಗುಣಗಳಿದ್ದರೆ ಎಂದೆದಿಗೂ ಶಾಶ್ವತವಾಗಿರಲಿದೆ ನಿಮ್ಮ ಪ್ರೀತಿ.



Click it and Unblock the Notifications