Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
Happy Hug Day 2023 : ಒಂದು ಪ್ರೀತಿಯ ಅಪ್ಪುಗೆ ಸಾವಿರ ನೋವುಗಳಿಗೆ ಮದ್ದು
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಫೆಬ್ರವರಿ 12ನ್ನು ಹಗ್ ಡೇ ಅಂದರೆ ಅಪ್ಪುಗೆಯ ದಿನವೆಂದು ಆಚರಿಸಲಾಗುವುದು. ನಮ್ಮ ಸಂಗಾತಿ ನೀಡುವ ಪ್ರೀತಿಯ ಅಪ್ಪುಗೆ ನಮ್ಮೆಲ್ಲಾ ನೋವಗಳನ್ನು ಮರೆಸುತ್ತೆ, ಅಂಥ ಶಕ್ತಿ ಅಪ್ಪುಗೆಯಲ್ಲಿದೆ. ಪ್ರೀತಿಯ ಒಂದು ಅಪ್ಪುಗೆ ನಾನು ನಿನ್ನೊಂದಿಗೆ ಇರುವೆ ಎಂಬ ಧೈರ್ಯವನ್ನು ನೀಡುವಂತಿರುತ್ತದೆ, ಆ ಅಪ್ಪುಗೆಯಲ್ಲಿ ಒಂದು ಕ್ಷಣ ಎಲ್ಲವನ್ನೂ ಮರೆತು ಅದರಲ್ಲಿ ತಲ್ಲೀನರಾಗುತ್ತೇವೆ.

ಅಪ್ಪುಗೆ ಎಂಬುವುದು ತಾಯಿ ಮಕ್ಕಳಿಗೆ ನೀಡಬಹುದು, ಸ್ನೇಹಿತರು ನೀಡಬಹುದು ಆ ಅಪ್ಪುಗೆ ಭಿನ್ನವಾದರೆ ಪ್ರೇಮಿ ನೀಡುವ ಅಪ್ಪುಗೆಯೇ ಭಿನ್ನ ಅನುಭವ ನೀಡುವುದು, ಪ್ರೇಮಿ ಬಿಗಿಯಾಗಿ ಅಪ್ಪಿಕೊಂಡಾಗ ಒಡುತ್ತಿರುವ ಗಡಿಯಾರ, ಚಲಿಸುತ್ತಿರುವ ಭೂಮಿ ಎಲ್ಲವೂ ಸ್ತಬ್ಧವಾಗಲಿ, ನಾನು ಈ ಅಪ್ಪುಗೆಯಲ್ಲೇ ಕಳೆದು ಹೋಗಬಹುದು ಎಂದು ಅನಿಸಿದಿರಲ್ಲ, ಅಂಥ ಹಿತ ಅನುಭವವೇ ಅಪ್ಪುಗೆ.
ನಿಮ್ಮ ಪ್ರೇಮಿಗೆ ಕಳುಹಿಸಲು ಇಲ್ಲಿದೆ ಅಪ್ಪುಗೆಯ ಹಿತ ಹೇಳುವ ಶುಭಾಶಯಗಳು

ಹಗ್ ಡೇ ಮೆಸೇಜ್ 1
ನೀನು ದೂರವಿದ್ದರೂ ನಿನ್ನ ಬೆಚ್ಚಗಿನ ಅಪ್ಪುಗೆಯ ನೆನಪಿನಲ್ಲಿಯೇ ದಿನ ಕಳೆಯುತ್ತಿರುವೆ,
ಪ್ರತಿ ಕ್ಷಣ ನಿನ್ನ ಬರುವಿಕೆಗಾಗಿ ಎದುರು ನೋಡುತ್ತಿರುವೆ
ನಿನ್ನ ಬೆಚ್ಚಗಿನ ಅಪ್ಪುಗೆಯಲ್ಲಿ ಕಳೆದು ಹೋಗುವ ಆಸೆಯಾಗಿದೆ ಬೇಗ ಬಾ...
ಹ್ಯಾಪಿ ಹಗ್ ಡೇ ಮೈ ಲವ್

ಹಗ್ ಡೇ ಮೆಸೇಜ್ 2
ನಿನ್ನ ಪ್ರೀತಿಯ ಅಪ್ಪುಗೆಗೆ ಯಾವ ಗಿಫ್ಟ್ ಸಮವಲ್ಲ
ನಿನ್ನ ಪ್ರೀತಿಯ ಅಪ್ಪುಗೆಯಲ್ಲಿ ಎಂದೆಂದೂ ಕಳೆದು ಹೋಗುವ ಆಸೆ
ಹ್ಯಾಪಿ ಹಗ್ ಡೇ ಸ್ವೀಟ್ ಹಾರ್ಟ್

ಹಗ್ ಡೇ ಮೆಸೇಜ್ 3
ನಿನಗೆ ತುಂಬಾ ಪ್ರೀತಿಯಿಂದ ನನ್ನೊಂದು ಬಿಗಿಯಾದ ಅಪ್ಪುಗೆ,
ನಿನ್ನ ಸೇರುವ ಕ್ಷಣಕ್ಕಾಗಿ ತವಕಿಸುತ್ತಿರುವೆ, ನಿನ್ನ ಅಪ್ಪುಗೆ ನನಗಾಗಿ ಎಂದೆಂದೂ ನೀನಿರುವೆ ಎಂಬ ಸುರಕ್ಷತೆಯ ಅನುಭವ ನೀಡುತ್ತಿದೆ.
Happy hug Day my dear

ಹಗ್ ಡೇ ಮೆಸೇಜ್ 4
ಪ್ರತಿ ಕ್ಷಣವೂ ನಿನ್ನ ಅಪ್ಪುಗೆಯಲ್ಲಿ ಕಳೆಯುವಾಸೆ
ನೀನೇ ನನ್ನ ವಾಸ್ತವ, ನೀನೇ ನನ್ನ ಭವಿಷ್ಯ
ಎಂದೆಂದೂ ನಿನ್ನ ಕಳೆದುಕೊಳ್ಳಲಾರೆ
ಹ್ಯಾಪಿ ಹಗ್ ಡೇ ಮೈ ಲವ್

ಹಗ್ ಡೇ ಮೆಸೇಜ್ 5
ಹ್ಯಾಪಿ ಹಗ್ ಡೇ ಮೈ ಲವ್

ಹಗ್ ಡೇ ಮೆಸೇಜ್ 6
ನಿನ್ನ ಬಿಗಿ ಅಪ್ಪುಗೆಯಲ್ಲಿ ಬಂದಿಯಾಗುವುದೆಂದರೆ ನನಗೆ ತುಂಬಾನೇ ಇಷ್ಟ
ನಿನ್ನ ಅಪ್ಪುಗೆ, ನಿನ್ನ ಪ್ರೀತಿ ಇದುವೇ ನನ್ನ ಬದುಕಿನ ಸಂಜೀವಿನಿ
ಹ್ಯಾಪಿ ಹಗ್ ಡೇ ಮೈ ಲವ್

ಹಗ್ ಡೇ ಮೆಸೇಜ್ 7
ನನ್ನ ಕಂಡಾಗ ಮನಸ್ಸು ತುಂಬಾ ಪ್ರೀತಿ, ಆರೈಕೆ, ತುಟಿ ತುಂಬಾ ನಗುವಿನೊಂದಿಗೆ
ಓಡಿ ಬಂದು ನೀಡುವ ನೀಡುವ ಅಪ್ಪುಗೆ ಇದೆಯೆಲ್ಲಾ ಅದಕ್ಕೆ ಅಡಿಕ್ಟ್ ಆಗಿದ್ದೇನೆ
ಆ ಅಪ್ಪುಗೆಯೇ ಒಂಥರಾ ಹಿತ
ಇವತ್ತು ಅಪ್ಪುಗೆಯ ದಿನ, ಸೆಲೆಬ್ರೇಟ್ ಮಾಡೋಣ್ವಾ?

ಹಗ್ ಡೇ ಮೆಸೇಜ್ 8
ನಿನ್ನ ಅಪ್ಪುಗೆ ನನ್ನನ್ನುಎಷ್ಟೊಂದು ಮಿಸ್ ಮಾಡಿದೆ ಎಂಬುವುದನ್ನು ಹೇಳಿದೆ
ನಿನ್ನ ಅಪ್ಪುಗೆ ನನ್ನ ಮೇಲಿಟ್ಟ ಪ್ರೀತಿಯ ಹೇಳಿದೆ
ನಿನ್ನ ಅಪ್ಪುಗೆ ನನ್ನ ಮನಸ್ಸು ಶಾಂತವಾಗಿಸಿ, ಗೆಲುವಾಗುವಂತೆ ಮಾಡಿದೆ

ಹಗ್ ಡೇ ಮೆಸೇಜ್ 9
ನಿನ್ನ ಅಪ್ಪುಗೆ ನನ್ನೆಲ್ಲಾ ಸಮಸ್ಯೆ ಮರೆಸುವ ಮ್ಯಾಜಿಕ್ ಪಿಲ್ಸ್ ಆಗಿದೆ
ನಿನ್ನ ಅಪ್ಪುಗೆಯಲ್ಲಿ ಕರಗುವ ಮನಸ್ಸಾಗಿದೆ
ನಿನ್ನನ್ನು ಅಪ್ಪಿಕೊಂಡು ಹೇಳುತ್ತಿರುವೆ ಹ್ಯಾಪಿ ಹಗ್ ಡೇ

ಹಗ್ ಡೇ ಮೆಸೇಜ್ 10
ಹಗ್ ಡೇಗೆ ಗಿಫ್ಟ್ ಐಡಿಯಾ
ಹಗ್ ಡೇ ನಿಮ್ಮ ಸಂಗಾತಿಗೆ ನೀವು ನೀಡುವ ಬಿಸಿ ಅಪ್ಪುಗೆಯೇ ಬಹು ಅಮೂಲ್ಯವಾದ ಗಿಫ್ಟ್. ಅವರಿಗೆ ನಿಮಗನಿಸಿದ ಗಿಫ್ಟ್ ಒಂದು ಖರೀದಿಸಿ, ಪ್ರೀತಿಯ ಅಪ್ಪುಗೆ ನೀಡಿ ಅನ್ನು ಅವರಿಗೆ ನೀಡಿ, ತುಂಬಾ ಖುಷಿಯಾಗುತ್ತಾರೆ.



Click it and Unblock the Notifications