Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೀತಿ ಈಗಷ್ಟೇ ಶುರುವಾಗಿದೆಯೇ? ಆದರೆ ಈ ರೀತಿಯೆಲ್ಲಾ ಮಾಡಲೇಬೇಡಿ
ವ್ಯಾಲೆಂಟೈನ್ಸ್ ವೀಕ್ ಅಂದ್ರೆ ಪ್ರೇಮಿಗಳ ವಾರ ಶುರುವಾಗಿದೆ. ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನ, ಮನಸ್ಸಿನಲ್ಲಿ ಯಾರ ಮೇಲಾದರು ಇಷ್ಟವಿದ್ದರೆ ಅದನ್ನು ಮನಸ್ಸು ಬಿಚ್ಚಿ ಅವರ ಬಳಿ ಹೇಳಿಕೊಳ್ಳಲು ಮನಸ್ಸು ತವಕಿಸುತ್ತಿರುತ್ತದೆ. ಈ ವ್ಯಾಲೆಂಟೈನ್ಸ್ ವೀಕ್ ಅನ್ನು ಅತೀ ಹೆಚ್ಚು ಸಂಭ್ರಮಿಸುವುದು ಹದಿಹರೆಯದವರು.
ಹದಿ ಹರೆಯ-ಯೌವನ ಪ್ರಾಯದಲ್ಲಿ ಪ್ರೀತಿ ಬಗ್ಗೆ ನೂರೆಂಟು ಕನಸುಗಳು, ಯಾರ ಮೇಲಾದರೂ ಕ್ರಷ್ ಆದರೆ ಅದುವೇ ಪ್ರೀತಿ ಎಂದು ಭಾವಿಸುವ ವಯಸ್ಸು. ಹೀಗಾಗಿ ಕೆಲವರು ಪ್ರೀತಿ ಬಗ್ಗೆ ದುಡುಕಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಂತರ ನಾನು ತಪ್ಪು ಮಾಡಿ ಬಿಟ್ಟೆ ಎಂದು ಪಶ್ಚಾತಾಪ ಪಡುತ್ತಾರೆ.
ಆದ್ದರಿಂದ ಒಬ್ಬರಿಗೆ ಒಕೆ ಎಂದು ಒಪ್ಪಿಗೆ ಸೂಚಿಸುವ ಮುನ್ನ ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂಬುವುದೇ ನಮ್ಮ ಸಲಹೆ, ಒಮ್ಮೆ ಒಕೆ ಅಂದ ಸಂಬಂಧ ಹೊಸತಾಗಿರುವಾ ಏನು ಮಾಡಬೇಕು, ಏನು ಮಾಡಬಾರದು ಎಂಬ ಸಲಹೆ ನೀಡಿದ್ದೇವೆ.
ಈ ಸಲಹೆ ಪ್ರೀತಿಯಲ್ಲಿ ಮೋಸ ಹೋಗದಿರಲು, ನಿಮ್ಮ ಪ್ರೀತಿಯನ್ನು ಮತ್ತಷ್ಟು ಬಲವಾಗಿಸಲು ಸಹಾಯವಾಗುವುದು ನೋಡಿ:

ಅವರೇ ಮೊದಲು ಫೋನ್ ಮಾಡಲಿ, ಟೆಕ್ಸ್ಟ್ ಮಾಡಲಿ ಎಂಬ ಯೋಚನೆ ತಪ್ಪು
ಒಬ್ಬರಿಗೊಬ್ಬರು ಇಷ್ಟವಾದ ಮೇಲೆ ತುಂಬಾ ಮಾತನಾಡಬೇಕು, ಸದಾ ಒಟ್ಟಿಗಿರಬೇಕೆಂದು ಬಯಸುವುದು ಸಹಜ. ಅದರೆ ನಿಮ್ಮ ಸಂಗಾತಿಯೇ ನಿಮಗೆ ದಿನಾ ಫೋನ್ ಮಾಡಬೇಕು, ಮೆಸೇಜ್ ಮಾಡಬೇಕು, ನಿಮ್ಮ ಸಂಬಂಧದಲ್ಲಿ ಈ ರೀತಿ ಇದ್ದರೆ ಕೂಡಲೇ ಎಚ್ಚೆತ್ತು ಕೊಳ್ಳಿ. ಒಂದು ಸಂಬಂಧ ಗಟ್ಟಿಯಾಗಲು, ಬೆಳೆಲು ಎಫರ್ಟ್ ಇಬ್ಬರಿಂದಲೂ ಇರಬೇಕು.

ಪ್ರೀತಿಯ ಹೆಸರಿನಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು
ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸಬೇಕು. ಪ್ರೀತಿಸುತ್ತಿರುವ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು, ಅದೇ ಅವರಿಂದ ನಮ್ಮ ಸ್ವಾತಂತ್ರ್ಯಕ್ಕೂ ತೊಂದರೆಯಾಗಬಾರದು. ಅವರು ಸ್ನೇಹಿತರ ಜೊತೆ ಬೆರೆಯಲು ಬಿಡಿದಿರುವುದು, ಅವರ ಮೇಲೆ ಸಂಶಯ, ಅವರು ಹೇಗೆ ಇರಬೇಕು, ಏನು ಮಾಡಬೇಕು ಎಂಬುವುದೆಲ್ಲಾ ನನ್ನ ಇಚ್ಛೆಯಂತೆಯೇ ಇರಬೇಕು ಎಂದು ಬಯಸಿದರೆ ಆ ಸಂಬಂಧದಲ್ಲಿ ಸಮಸ್ಯೆ ಬಂದೇ ಬರುತ್ತದೆ. ಅದರ ಬದಲಿಗೆ ಅವರು ಹೇಗೆ ಇದ್ದಾರೋ ಹಾಗೇ ಸ್ವೀಕರಿಸಬೇಕು, ಅವರನ್ನು ಹೊಂದಿಕೊಂಡು ಹೋಗಲು ಪ್ರಯತ್ನಿಸಿದರೆ ಆ ಸಂಬಂಧ ಚೆನ್ನಾಗಿರುತ್ತದೆ.

ಲೈಂಗಿಕ ಆರೋಗ್ಯದ ಬಗ್ಗೆ ಚರ್ಚಿಸದಿರಬೇಡಿ
ಮದುವೆಗೆ ಮುನ್ನ ಲೈಂಗಿಕ ಆರೋಗ್ಯದ ಬಗ್ಗೆ ಚರ್ಚಿಸುವುದರಿಂದ ಇಬ್ಬರ ನಡುವೆ ಅಂಡರ್‌ಸ್ಟ್ಯಾಂಡಿಂಗ್ ಹೆಚ್ಚುವುದು. ಸೆಕ್ಸ್ ಬಗ್ಗೆ ಮಾತನಾಡಲು ಹಿಂಜರಿಕೆ ಬೇಡ. ನಿಮಗೆ ಏನು ಇಷ್ಟ, ಏನು ಇಷ್ಟವಿಲ್ಲ ಎಂಬುವುದನ್ನು ಹೇಳಿ. ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದನ್ನು ಮೊದಲೇ ಹೇಳಿಕೊಳ್ಳಿ, ಇಲ್ಲದಿದ್ದರೆ ಮುಂದೇ ಲೈಂಗಿಕ ಅತೃಪ್ತಿ ಸಂಸಾರವನ್ನೇ ಒಡೆದು ಹಾಕಬಹುದು.

ರೆಡ್ ಫ್ಲ್ಯಾಗ್ಸ್ ಗಮನಿಸದಿರಬೇಡಿ ಅಥವಾ ಮುಂದೆ ಸರಿ ಹೋಗುತ್ತೆ ಎಂದು ನಿರ್ಲಕ್ಷ್ಯ ಮಾಡ ಬೇಡಿ
ಕೆಲವರ ಗುಣ ಮೊದಲಿಗೆ ಗೊತ್ತಾಗುವುದೇ ಇಲ್ಲ, ಅವರಿಗೆ ತುಂಬಾ ಹತ್ತಿರವಾಗುತ್ತಿದ್ದಂತೆ ಅವರ ನಿಜ ಬಣ್ಣಗಳು ಹೊರಬರುವುದು, ಇವುಗಳನ್ನು ಗಮನಿಸಿಯೂ ಗಮನಿಸದಂತೆ ಇರಬೇಡಿ, ಅಲ್ಲದೆ ಮುಂದೆ ಸರಿ ಹೋಗಬಹುದು ಎಂಬ ಸುಳ್ಳು ನಿರೀಕ್ಷೆಯೂ ಬೇಡ. ನಿಮಗೆ ಏನೂ ಸರಿ ಕಾಣಲ್ಲ ಎಂದನಿಸಿದರೆ ಓಪನ್ ಆಗಿ ಅವರ ಜೊತೆ ಮಾತನಾಡಿ.

ಬೇಗನೆ ದೈಹಿಕವಾಗಿ ಒಂದಾಗಬೇಡಿ
ನೀವು ಪ್ರೀತಿಸುತ್ತಿದ್ದರೆ ಮದುವೆಯಾಗುವವರೆಗೆ ಕಾಯಿರಿ, ಕೆಲವರು ದೈಹಿಕವಾಗಿ ಬಳಸಿಕೊಂಡು ಮೋಸ ಮಾಡುವ ಸಾಧ್ಯತೆ ಇರುತ್ತದೆ, ಅಲ್ಲದೆ ದೈಹಿಕವಾಗಿ ಒಂದಾದರೆ ಮುಂದೆ ಅವರು ನಮ್ಮನ್ನು ನಿರ್ಲಕ್ಷ್ಯ ಮಾಡಬಹುದು ಎಂಬ ಭಯವಿದ್ದರೆ ಮದುವೆಯಾಗುವವರೆಗೂ ದೈಹಿಕವಾಗಿ ಒಂದಾಗಬೇಡಿ.

ಸಂವಹನಕ್ಕೆ ಅಂತರ ಬೇಡ
ಇಬ್ಬರ ನಡುವೆ ಸಂವಹನ ಚೆನ್ನಾಗಿರಬೇಕು, ಯಾವುದೇ ವಿಷಯಗಳನ್ನು ಮರೆ ಮಾಚಬೇಡಿ. ನಿಮಗೆ ಅವರಲ್ಲಿ ಇಷ್ಟವಾಗಿದ್ದು, ಇಷ್ಟವಾಗದಿರುವುದು ಎಲ್ಲವನ್ನೂ ಹೇಳಿಕೊಳ್ಳಿ. ಇದರಿಂದ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುವುದು. ಯಾವ ಜೋಡಿ ಮಧ್ಯ ಒಳ್ಳೆಯ ಸಂವಹನ ಇರುತ್ತದೆಯೋ ಅವರಿಬ್ಬರ ನಡುವೆ ಸಂಶಯ ಎಂಬುವುದು ಬರುವುದೇ ಇಲ್ಲ. ಕಷ್ಟ-ಸುಖ ಎಲ್ಲವನ್ನೂ ನಿಮ್ಮವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡುವುದರಿಂದ ನಿಮ್ಮಿಬ್ಬರ ಬಾವ, ಬಂಧ ಮತ್ತಷ್ಟು ಹತ್ತಿರವಾಗುವುದು.



Click it and Unblock the Notifications