Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಂಬಂಧ - ಡೇಟಿಂಗ್ ವ್ಯತ್ಯಾಸ: ನಿಮಗೆ ಸಂಬಂಧ ಬೇಕೋ ಡೇಟಿಂಗ್ ಬೇಕೋ?
ಭಾರತದಲ್ಲಿ ಸಂಬಂಧಗಳಿಗೆ ಬಹಳ ಮಹತ್ವವಿದೆ, ಇತರೆ ದೇಶಗಳಿಗೆ ಹೋಲಿಸಿದರೆ ಭಾರತದವರು ಸ್ವಲ್ಪ ಹೆಚ್ಚೆ ಭಾವನಾತ್ಮಕ ಜೀವಿಗಳು ಎನ್ನಬಹುದು. ಆದರೆ ಇತ್ತೀಚಿನ ಯುವಪೀಳಿಗೆ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಅಲ್ಲಿನಂತೆ ಭಾರತದಲ್ಲೂ ಸಂಬಂಧಗಳನ್ನು ಬೆಸೆಯಲು ಇಷ್ಟಪಡುತ್ತಾರೆ. ಇಂಥಾ ಒಂದು ಸಂಬಂಧದ ಪರಿಕಲ್ಪನೆಯೇ "ಡೇಟಿಂಗ್ ಸಂಸ್ಕೃತಿ", ಇದು ಭಾರತದಲ್ಲೂ ಇತ್ತೀಚೆಗೆ ತೀರಾ ಸಾಮಾನ್ಯವಾಗಿಬಿಟ್ಟಿದೆ.
ನಾವು ಯಾರಾದರೂ ಒಬ್ಬ ವ್ಯಕ್ತಿಯ ಸಂಬಂಧದಲ್ಲಿ ನಮ್ಮ ಜೀವನಪೂರ್ತಿ ಕಳೆಯಬೇಕು ಎಂದು ಬಯಸಿ ಇರುವುದು ಸಂಬಂಧ. ಈ ಸಂಬಂಧದಲ್ಲಿ ನಾವು ಯಾರಿಗಾದರೂ ಪರಿಚಯಿಸಬೇಕಾದರೆ ನಮ್ಮ ಗೆಳೆಯ/ಗೆಳತಿ ಅಥವಾ ಪ್ರೇಯಸಿ/ಪ್ರಿಯಕರ ಎಂದು ಪರಿಚಯಿಸುತ್ತೇವೆ/, ಆದರೆ ಅದೇ ಡೇಟಿಂಗ್ ಇರುವ ಸಂಬಂಧವನ್ನು ಇಷ್ಟು ಸುಲಭವಾಗಿ ಹೀಗೆ ಪರಿಚಯಿಸಲು ಸಾಧ್ಯವಿಲ್ಲ. ಈ ಎರಡು ವಿಭಿನ್ನ ಅಂಶಗಳನ್ನು ಸಂಬಂಧದ ನಡುವೆ ಸೂಕ್ಷ್ಮ ಚಿಹ್ನೆಗಳನ್ನು ಹೊಂದಿದೆ.
ಏನಿದು ಸಂಬಂಧ ಹಾಗು ಡೇಟಿಂಗ್, ಈ ಎರಡರ ನಡುವಿನ ವ್ಯತ್ಯಾಸವೇನು ಮುಂದೆ ನೋಡೋಣ:

ಪರಸ್ಪರತೆ
ಡೇಟಿಂಗ್ ಮತ್ತು ಸಂಬಂಧದ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಇವೆರಡರ ಬಗ್ಗೆ ನಿಮ್ಮ ಸ್ವಂತ ಕಲ್ಪನೆಯನ್ನು ವಿಭಿನ್ನವಾಗಿ ಹೊಂದಿರುವುದು. ಸಂಬಂಧಗಳು ಪರಸ್ಪರ ಒಪ್ಪಂದ ಮತ್ತು ನಂಬಿಕೆಯ ಮೇಲೆ ಆಧಾರಿತವಾಗಿದ್ದದೆ. ನೋವು, ನಲಿವು ಎಲ್ಲವನ್ನು ಹಂಚಿಕೊಳ್ಳುವ ಗುಣ ಇಬ್ಬರಲ್ಲು ಇರುತ್ತದೆ.
ಡೇಟಿಂಗ್ ಖಂಡಿತ ಹಾಗೆ ಆಗಿರುವುದಿಲ್ಲ. ಇಲ್ಲಿ ನಂಬಿಕೆ, ಒಪ್ಪಂದಕ್ಕೆ ಬೆಲೆ ಇಲ್ಲ, ಯಾರೂ ಯಾವಾಗ ತ್ಯಜಿಸುತ್ತಾರೆ ಗೊತ್ತಿಲ್ಲ. ಇಲ್ಲಿ ಕೇವಲ ಸುಖ, ಸಂತೋಷ, ಪ್ರೀತಿಗೆ ಮಾತ್ರ ಸ್ಥಾನ, ನೋವು, ಕಷ್ಟ, ದುಃಖಗಳಿಗೆ ಯಾರೂ ಬೆಲೆ ಕೊಡುವುದಿಲ್ಲ.

ಬದ್ಧತೆ
ಸಂಬಂಧದಲ್ಲಿ ಬದ್ಧತೆ ಮುಖ್ಯ, ಅದಕ್ಕಾಗಿಯೇ ಅದು ಸಂಬಂಧವಾಗಿರುತ್ತದೆ. ಇಲ್ಲಿ ಒಬ್ಬರಿಗೊಬ್ಬರು ಮಾನಸಿಕವಾಗಿ, ದೈಹಿಕವಾಗಿ ಬದ್ಧರಾಗಿರುತ್ತಾರೆ, ಈ ಬದ್ಧತೆ ದೂರಾದರೆ ಜೀವನವೇ ನಶಿಸಿಹೋದಂತೆ ಎಂದು ಭಾವಿಸುತ್ತಾರೆ.
ಡೇಟಿಂಗ್ ಮಾಡುವಾಗ ಯಾವುದೇ ರೀತಿಯ ಬದ್ಧತೆ ಇರುವುದೇ ಇಲ್ಲ. ಡೇಟಿಂಗ್ ಅಲ್ಲಿ ಸಂಬಂಧಗಳಿಗೆ ಬದ್ಧತೆಯೇ ಇರುವುದಿಲ್ಲ, ಯಾರೂ ಕೇವಲ ಒಬ್ಬ ವ್ಯಕ್ತಿಗೆ ಬದ್ಧರಾಗಿರಲು ಬಯಸುವುದಿಲ್ಲ. ಇಲ್ಲಿ ಒಬ್ಬರಿಗೊಬ್ಬರು ಯಾವುದೇ ಕ್ಷಣದಲ್ಲಿ ಇಷ್ಟವಾಗದೇ ಇದ್ದರೆ ಇಬ್ಬರೂ ದೂರಾಗಿ ಮತ್ತೊಬ್ಬ ಡೇಟಿಂಗ್ ಸಂಗಾತಿಯನ್ನು ಸೇರುತ್ತಾರೆ, ಯಾವುದಕ್ಕೂ ಚಿಂತಿಸುವುದೇ ಇಲ್ಲ.

ಸಂವಹನ
ಡೇಟಿಂಗ್ ಹಾಗೂ ಸಂಬಂಧ ಎರಡರಲ್ಲೂ ಸಂವಹನವು ಬಹಳ ಭಿನ್ನವಾಗಿರುತ್ತದೆ. ನೀವು ಸಂಬಂಧದಲ್ಲಿರುವಾಗ ನಿಮ್ಮ ಸಂಗಾತಿಯೊಂದಿಗೆ ಆಗಾಗ್ಗೆ ಸಂವಹನ ನಡೆಸುತ್ತೀರಿ, ಪ್ರತಿಯೊಂದು ಸಣ್ಣ ವಿಷಯದ ಬಗ್ಗೆ ಇಬ್ಬರೂ ಕುಳಿತು ಚರ್ಚಿಸುತ್ತೀರಿ. ನಿಮ್ಮ ಜೀವನದ ಪ್ರತಯೊಂದು ಆಗುಹೋಗುಗಳ ಬಗ್ಗೆ ಇಬ್ಬರಿಗೂ ಪರಸ್ಪರ ತಿಳಿದಿರುತ್ತದೆ. ನಿಮ್ಮ ಹಿಂದಿನ ಸಣ್ಣ ಸಣ್ಣ ವಿವರಗಳ ಬಗ್ಗೆ ಅವರಿಗೆ ಹೇಳುವುದು ಅಥವಾ ಅವರು ಮಲಗಿರುವಾಗ ಸ್ವಲ್ಪ ಕಡಿಮೆ ಗೊರಕೆ ಹೊಡೆಯುವಂತೆ ಕೇಳುವುದು ಹೀಗೆ ಎಲ್ಲವೂ ಮುಕ್ತವಾಗಿರುತ್ತದೆ.
ಡೇಟಿಂಗ್ ಹಾಗಲ್ಲ ವಿಭಿನ್ನವಾಗಿದೆ. ಸಂವಹನವು ಸೀಮಿತವಾಗಿದೆ, ಮೂಲಭೂತವಾಗಿದೆ ಮತ್ತು ತುಂಬಾ ಆಂತರಿಕವಾಗಿಲ್ಲ. ಇಬ್ಬರ ಭೂತಕಾಲ ಹಾಗೂ ಭವಿಷ್ಯದ ಬಗ್ಗೆ ಇಬ್ಬರಿಗೂ ಬೇಕಿಲ್ಲ, ತಿಳಿಯುವುದು ಇಲ್ಲ. ಇವರು ವರ್ತಮಾನದಲ್ಲಿ ಮಾತ್ರ ಬದುಕುತ್ತಾರೆ. ಇಬ್ಬರ ನಡುವೆ ಹೆಚ್ಚಿನ ಸಂವಹನ ಇರುವುದಿಲ್ಲ, ಚರ್ಚೆ ಸಹ ಮುಕ್ತವಾಗಿರುವುದಿಲ್ಲ.

ನಿರೀಕ್ಷೆಗಳು
ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುವಾಗ ಅಥವಾ ನೀವು ಸಂಬಂಧದಲ್ಲಿರುವಾಗ ಸಹಜವಾಗಿ ನಿರೀಕ್ಷೆಗಳು ಬದಲಾಗುತ್ತವೆ.
ಸಂಬಂಧವು ನಿರೀಕ್ಷೆಗಳ ಮೇಲೆ ನಿರ್ಮಿಸಲ್ಪಟ್ಟಿದೆ. ನಿಮ್ಮ ಸಂಗಾತಿಯಿಂದ ನೀವು ಪ್ರತಿಯೊಂದು ಸಣ್ಣ ವಿಷಯವನ್ನು ನಿರೀಕ್ಷಿಸುತ್ತೀರಿ. ತಾಳ್ಮೆಯಿಂದ ಉಜ್ವಲವಾದ ಭವಿಷ್ಯದವರೆಗೆ ಇಬ್ಬರಲ್ಲೂ ಸಹಜವಾಗಿಯೇ ಅತಿಯಾದ ನಿರೀಕ್ಷೆ ಇರುತ್ತದೆ.
ನೀವು ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ ಅವರಿಂದ ಕಡಿಮೆ ನಿರೀಕ್ಷಿಸಬಹುದು. ಡೇಟಿಂಗ್ನಲ್ಲಿ ಒಬ್ಬ ವ್ಯಕ್ತಿಯು ಇತರ ವ್ಯಕ್ತಿಗಿಂತ ಹೆಚ್ಚು ಕ್ರಿಯಾತ್ಮಕವಾಗಿರುವುದು ಸಹಜ ಆದರೆ ಅದು ಪ್ರಾಸಂಗಿಕವೆಂದು ನಿಮ್ಮಿಬ್ಬರಿಗೂ ತಿಳಿದಿರುವ ಕಾರಣ, ಅವರೊಂದಿಗೆ ಭವಿಷ್ಯದ ನಿರೀಕ್ಷೆಗಳು ಇತ್ಯಾದಿಗಳಿಲ್ಲ.

ಆದ್ಯತೆಗಳು
ಡೇಟಿಂಗ್ ಮತ್ತು ಸಂಬಂಧಗಳೆರಡೂ ಅರ್ಥಪೂರ್ಣವಾಗಿದ್ದರೂ, ಒಂದು ಇನ್ನೊಂದಕ್ಕಿಂತ ಕಡಿಮೆ ಆದ್ಯತೆ ನೀಡುತ್ತದೆ. ನೀವು ಸಂಬಂಧದಲ್ಲಿರುವಾಗ, ಇತರ ಜನರೊಂದಿಗಿನ ನಿಮ್ಮ ಕ್ರಿಯಾತ್ಮಕತೆಯು ಸಂಪೂರ್ಣವಾಗಿ ಬದಲಾಗಬಹುದು, ಏಕೆಂದರೆ ನೀವು ನಿಮ್ಮ ಜೀವನದಲ್ಲಿ ಪ್ರಮುಖ ಪ್ರಾಮುಖ್ಯತೆಯನ್ನು ಸಂಬಂಧ ತೆಗೆದುಕೊಳ್ಳುತ್ತದೆ. ಸಂಬಂಧದ ಮುಂದೆ ಅವರಿಗೆ ಸ್ನೇಹಿತರು, ಇತರೆ ಅಕಕ್ತಿಗಳು ಮತ್ತು ಕೆಲಸ ಅಷ್ಟೇನೂ ಮುಖ್ಯವೆಂದು ಪರಿಗಣಿಸುವಂತಿಲ್ಲ.
ಆದರೆ ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುವಾಗ ನೀವು ಅವರ ಬಗ್ಗೆ ಗಂಭೀರವಾಗಿರಬೇಕಾಗಿಲ್ಲ ಆದ್ದರಿಂದ ನೀವು ಕೆಲಸ, ಸ್ನೇಹಿತರು, ಚಟುವಟಿಕೆಗಳು ಇತ್ಯಾದಿಗಳಂತಹ ಇತರ ವಿಷಯಗಳಿಗೆ ಆದ್ಯತೆ ನೀಡುತ್ತೀರಿ.
ಇವುಗಳು ಡೇಟಿಂಗ್ ಮತ್ತು ಸಂಬಂಧಗಳ ನಡುವಿನ ವ್ಯತ್ಯಾಸಗಳು ಹೀಗೆ ಸಾಕಷ್ಟಿದ್ದರೂ, ಅವುಗಳನ್ನು ತಮ್ಮದೇ ಆದ ರೀತಿಯಲ್ಲಿ ಅನನ್ಯವಾಗಿಸುವ ಇತರ ಸಣ್ಣ ಸಣ್ಣ ವಿಷಯಗಳಿವೆ. ಕೆಲವೊಮ್ಮೆ ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿ ನಿಮ್ಮ ಸಂಬಂಧದಲ್ಲಿ ಪಾಲುದಾರರಾಗಬಹುದು!



Click it and Unblock the Notifications











