Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಮಗಳ ದಿನಾಚರಣೆ : ತಮ್ಮ ಮುದ್ದಿನ ಮಗಳಿಗೆ ಕಳುಹಿಸಬಹುದಾದ ಹೃದಯ ತುಂಬಿದ ಸಂದೇಶಗಳು
ತಾಯಿಯ ಪ್ರತಿರೂಪ ಮಗಳು, ತಂದೆಯ ಪ್ರತಿ ಕನಸು ಮಗಳು!
ಹೆಣ್ಣೆಂದರೆ ದೂರುವ, ಹೆಣ್ಣೆಂದರೆ ಭಾರವೆನಿಸುವ ಕಾಲವಿಂದು ಮುಗಿದಿದೆ. ಇಂದು ತಂದೆ ತಾಯಿಯ ಸರ್ವಸ್ವವೂ ಮಗಳೆ. ಕುಟುಂಬದಲ್ಲಿ ಹೆಣ್ಣು ಮಗುವೊಂದು ಜನಿಸಿದರೆ, ಲಕ್ಷ್ಮೀಯ ಪ್ರತಿರೂಪವೆ ಆಕೆ ಎನ್ನುವಷ್ಟರ ಮಟ್ಟಿಗೆ ಜನರ ಯೋಚನೆಗಳು, ಭಾವನೆಗಳು ಬದಲಾಗಿವೆ.
ಮನೆಯಲ್ಲಿ ಮಗಳ ಜನನ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸುತ್ತದೆ. ತಂದೆ ತಾಯಿಯರ ಸಕಲವೂ ಆಗಿರುವ ಮಗಳ ದಿನ ಇಂದು. 2020ನೇ ಸಾಲಿನಲ್ಲಿ 27ರಂದು ಭಾನುವಾರ ಮಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆಕಾಶದವರೆಗೂ ಹಾರಿ ಭೂಮಿಯ ಅಡಿಯವರೆಗೂ ಹೋಗಿ ಅಪ್ಪ ಅಮ್ಮನ ಗೌರವವನ್ನು ಹೆಚ್ಚಿಸುತ್ತಿರುವ ಎಲ್ಲಾ ಹೆಮ್ಮೆಯ ಮಗಳಿಗೆ ಈ ದಿನ ಅರ್ಪಣೆ!
ಮಗಳ ಬಗೆಗಿನ ಕೆಲವು ಹಿತ ನುಡಿಗಳು:

1. ಈ ಜಗತ್ತಿನಲ್ಲಿ ನಮಗೆ ಸಿಕ್ಕಿರುವ ಏಕೈಕ ಉಡುಗೊರೆ ಎಂದರೆ ಅದು ಮಗಳು
ಮಗಳ ದಿನಾಚರಣೆಯ ಶುಭಾಶಯಗಳು
2. ಅಪ್ಪನ ಕನಸು ಮಗಳು, ಅಮ್ಮನ ಹೆಮ್ಮೆ ಮಗಳು.. ಮಗಳೇ ಮನೆಯ ದೀಪ
ಮಗಳ ದಿನಾಚರಣೆಯ ಶುಭಾಶಯಗಳು
3. ಬಾಲ್ಯದಲ್ಲಿ ಅಪ್ಪನ ಹೆಗಲಲ್ಲಿ ಭಾರವೆನಿಸಿದ ಮಗಳು ಯೌವ್ವನದಲ್ಲಿ ಅಪ್ಪನ ಹೆಗಲಿಗೇ ಹೆಗಲಾಗುವಳು
ಮಗಳ ದಿನಾಚರಣೆಯ ಶುಭಾಶಯಗಳು
4. ತಂದೆಗೆ ವಯಸ್ಸಾಗುತ್ತಾ ಹೋದಂತೆ ಮಗಳ ಹೊರತು ಬೇರೆನೂ ಪ್ರಿಯವೆನಿಸುವುದಿಲ್ಲ
ಮಗಳ ದಿನಾಚರಣೆಯ ಶುಭಾಶಯಗಳು
5. ಮಗಳು ಎಂದರೆ ಹಿಂದಿನ ದಿನದ ಸಂತೋಷದ ನೆನಪು, ಇಂದಿನ ನಗು, ಮುಂದಿನ ಭರವಸೆ
ಮಗಳ ದಿನಾಚರಣೆಯ ಶುಭಾಶಯಗಳು
6. ಹುಟ್ಟಿದ ಮನೆಗೂ ಹೋದ ಮನೆಗೂ ಒಳಿತನ್ನು ಮಾಡುವವಳು ಮಗಳು
ಮಗಳ ದಿನಾಚರಣೆಯ ಶುಭಾಶಯಗಳು
7. ಮಗಳಾಗಿ, ತಂಗಿಯಾಗಿ, ಹೆಂಡತಿಯಾಗಿ, ಅಮ್ಮನಾಗಿ ಮತ್ತೆ ಮಗಳಾಗಿ ಕರ್ತವ್ಯ ನಿಭಾಯಿಸುವವಳು ಮಗಳು
ಮಗಳ ದಿನಾಚರಣೆಯ ಶುಭಾಶಯಗಳು
8. ಅಮ್ಮನ ಪ್ರಬುದ್ಧತೆ ಅಪ್ಪನ ಜವಾಬ್ದಾರಿಯ ಕ್ರೋಢೀಕರಣವೇ ಮಗಳು
ಮಗಳ ದಿನಾಚರಣೆಯ ಶುಭಾಶಯಗಳು
9. ಹೆಣ್ಣು ಮಗುವೆಂದು ಜರೆಯದಿರಿ, ಜೀವನದ ಭಾಷ್ಯ ಅರಿತವಳು ಅವಳೆ, ನೆರಳಾಗುವವಳೂ ಅವಳೆ!
ಮಗಳ ದಿನಾಚರಣೆಯ ಶುಭಾಶಯಗಳು
10. ಮಗಳು ತಾಯಿಯಂತೆ. ತಾಯಿಯ ಜೀವನದ ಬಗ್ಗೆ ಅರಿವಿರುವುದು ಅವಳಿಗೆ ಮಾತ್ರ. ಹಾಗಾಗಿ ಅಮ್ಮನ ಜವಾಬ್ದಾರಿಯನ್ನು ಹೊರುವ ಮಗಳು ಎಂದಿಗೂ ಯಾರಿಗೂ ಭಾರವೆನಿಸುವುದಿಲ್ಲ!
ಮಗಳ ದಿನಾಚರಣೆಯ ಶುಭಾಶಯಗಳು



Click it and Unblock the Notifications








