Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ವ್ಯಾಲೆಂಟೈನ್ಸ್ ಡೇ: ನಿಮ್ಮ ಪ್ರೇಮಿಗೆ ಗ್ಯಾರಂಟಿ ಇಷ್ಟವಾಗುವ ಟಾಪ್ ಗಿಫ್ಟ್ ಐಡಿಯಾಗಳಿವು
ಪ್ರೇಮಿಗಳ ದಿನ ಸಮೀಪಿಸುತ್ತಿದೆ, ಎಲ್ಲಾ ಪ್ರೇಮಿಗಳು ಹಾಗೂ ದಂಪತಿಗಳು ತಮ್ಮ ಸಂಗಾತಿಗೆ ಸೂಪರ್ ಸ್ಪೆಷಲ್ ಉಡುಗೊರೆಯನ್ನು ನೀಡುವ ಆಲೋಚನೆಯಲ್ಲಿ ನಿರತರಾಗಿದ್ದಾರೆ. ಕೆಲವರಿಗೆ ಉಡುಗೊರೆ ನೀಡುವ ಕೆಲಸ ಬಹಳ ಸುಲಭವಾಗಿದ್ದರೂ, ಹೆಚ್ಚಿನವರು ಪರದಾಡುವುದರಲ್ಲಿ ಸಂದೇಹವಿಲ್ಲ. ನಿಮ್ಮ ಸಂಗಾತಿಗಾಗಿ ಉಡುಗೊರೆಯನ್ನು ಖರೀದಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ. ಅವರ ಅಗತ್ಯತೆಗಳು ಮತ್ತು ಆದ್ಯತೆಗಳ ಬಗ್ಗೆ ಯೋಚಿಸಬೇಕು. ಅವರ ಮುಖದಲ್ಲಿ ನಗು ತರುವಂತಹದನ್ನು ನೀಡುವುದು ಉಡುಗೊರೆಯನ್ನು ನೀಡುವ ಅಂತಿಮ ಗುರಿಯಾಗಿದೆ.
ಅದಕ್ಕಾಗಿ ನಾವಿಂದು, ನಿಮ್ಮ ಸಂಗಾತಿಯ ಹೃದಯವನ್ನು ಕರಗಿಸಲು ಖಚಿತವಾದ ಕೆಲವು ಅತ್ಯುತ್ತಮ ಉಡುಗೊರೆ ಕಲ್ಪನೆಗಳನ್ನು ನೀಡಲಿದ್ದೇವೆ. ನಾವು ಅದೇ ಹಳೆಯ ಚಾಕೊಲೇಟ್‌ಗಳು, ಗುಲಾಬಿಗಳು ಮತ್ತು ಕೇಕ್‌ಗಳ ಬಗ್ಗೆ ಮಾತನಾಡುತ್ತಿಲ್ಲ. ಗುಲಾಬಿಗಳು ಮತ್ತು ಚಾಕೊಲೇಟ್‌ಗಳನ್ನು ಮೀರಿದ ಅತ್ಯುತ್ತಮ ವ್ಯಾಲೆಂಟೈನ್ಸ್ ಡೇ ಉಡುಗೊರೆಗಳು ಇಲ್ಲಿವೆ.
ವ್ಯಾಲೆಂಟೈನ್ ಡೇಯಂದು ನಿಮ್ಮ ಸಂಗಾತಿಗೆ ಉಡುಗೊರೆ ನೀಡಲು ಐಡಿಯಾಗಳನ್ನು ಈ ಕೆಳಗೆ ನೀಡಲಾಗಿದೆ:

ಬಿಳಿ ಟೀ ಶರ್ಟ್:
ಬಿಳಿ ಟಿ ಶರ್ಟ್ ಎಲ್ಲಾ ಕಾಲಕ್ಕೂ ಸರಿಹೊಂದುವಂತದ್ದು. ಯಾವುದನ್ನು ಧರಿಸಬೇಕು ಮತ್ತು ಯಾವುದನ್ನು ಧರಿಸಬಾರದು ಎಂಬ ಗೊಂದಲದಲ್ಲಿರುವ ದಿನ ನಿಮಗೆ ಸಹಾಯಕ್ಕೆ ಬರುವುದು ಇದೇ ಬಿಳಿ ಶರ್ಟ್. ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯ ವಾರ್ಡ್‌ರೋಬ್‌ನಲ್ಲಿ ಒಂದು ಬಿಳಿ ಟಿ-ಶರ್ಟ್ ಇರಬೇಕು. ಆದ್ದರಿಂದ ನಿಮ್ಮ ಸಂಗಾತಿಯ ವಾರ್ಡ್‌ರೋಬ್ ನಲ್ಲಿ ಈ ಬಟ್ಟೆ ಇಲ್ಲದಿದ್ದರೆ, ಇದು ಖಂಡಿತವಾಗಿಯೂ ಉತ್ತಮ ಉಡುಗೊರೆ ಆಯ್ಕೆಯಾಗಿದೆ. ಅದನ್ನು ಇನ್ನಷ್ಟು ವಿಶೇಷಗೊಳಿಸಲು ನೀವು ಬಯಸಿದರೆ, ಬಿಳಿ ಟಿ-ಶರ್ಟ್‌ನಲ್ಲಿ ಕಸ್ಟಮೈಸ್ ಮಾಡಿದ ಮುದ್ರಣಗಳನ್ನು ಪಡೆಯಿರಿ. ಇದು ನಿಸ್ಸಂಶಯವಾಗಿ ನಿಮ್ಮಿಬ್ಬರಿಗೂ ವಿಶೇಷ ಸ್ಮರಣೆಯಾಗಲಿದೆ. ವರ್ಷಗಳ ನಂತರ, ನೀವಿಬ್ಬರು ಖಂಡಿತವಾಗಿಯೂ ಈ ವಿಶೇಷ ಉಡುಗೊರೆಯನ್ನು ಬಹಳ ಪ್ರೀತಿಯಿಂದ ನೋಡುತ್ತೀರಿ.

ಸ್ಮಾರ್ಟ್ ವಾಚ್:
ನಿಮ್ಮ ಸಂಗಾತಿಯು ಫಿಟ್‌ನೆಸ್ ಪ್ರೇಮಿಯಾಗಿದ್ದರೆ, ಕ್ಲಾಸಿ ಸ್ಮಾರ್ಟ್ ವಾಚ್ ಅತ್ಯುತ್ತಮ ಕೊಡುಗೆಯಾಗಿದೆ. ನಿಮ್ಮ ಸಂಗಾತಿಯು ಮನೆಯಲ್ಲಿರುವುದಕ್ಕಿಂತ ಅರ್ಧದಷ್ಟು ಸಮಯವನ್ನು ಜಿಮ್‌ನೊಳಗೆ ಕಳೆಯುತ್ತಿದ್ದರೆ, ಜಿಮ್ ಅವರ ಮೊದಲ ಪ್ರೀತಿ ಎಂದು ತಮಾಷೆಯಾಗಿ ಅವನಿಗೆ ದೂರುತ್ತಿದ್ದರೆ; ವಾಚ್ ನೀಡಲು ಉತ್ತಮ ಸಮಯ ಇದು. ಮುಖ್ಯವೆಂದರೆ ಈ ಫಿಟ್‌ನೆಸ್-ಪ್ರಿಯರಿಗೆ ಉಡುಗೊರೆಗಳನ್ನು ಹುಡುಕುವುದು ಕಷ್ಟವೇನಲ್ಲ. ಏಕೆಂದರೆ, ಅವರ ಫಿಟ್ನೆಸ್ ಗುರಿಗಳಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಅವರು ಇಷ್ಟಪಡುತ್ತಾರೆ. ತೂಕದಿಂದ ಹಿಡಿದು ಪ್ರೋಟೀನ್ ಶೇಕ್‌ಗಳಿಗಾಗಿ ವೈಯಕ್ತೀಕರಿಸಿದ ಬಾಟಲಿಗಳವರೆಗೆ, ನೀವು ಏನು ಬೇಕಾದರೂ ನೀಡಬಹುದು. ಸ್ಮಾರ್ಟ್ ವಾಚ್ ಅಥವಾ ಫಿಟ್‌ನೆಸ್ ಬ್ಯಾಂಡ್ ಉತ್ತಮ ಉಡುಗೊರೆ ಆಯ್ಕೆಯಾಗಿದೆ.

ಸ್ಪೀಕರ್:
ಇದು ಬಹುಮುಖ ಉಡುಗೊರೆಯಾಗಿದ್ದು, ಎಲ್ಲರೂ ಮೆಚ್ಚುತ್ತಾರೆ. ಸಂಗೀತ ಪ್ರೇಮಿಗಳಾಗಿರುವವರಿಗೆ ಇದು ಬೆಸ್ಟ್,. ಉತ್ತಮ ಜಲನಿರೋಧಕ ಸ್ಪೀಕರ್ ಉತ್ತಮ ಉಡುಗೊರೆಯಾಗಿದೆ. ನಿಮ್ಮ ಸಂಗಾತಿ ಅದರಲ್ಲಿ ಹಾಡುಗಳನ್ನು ಕೇಳಿದಾಗಲೆಲ್ಲಾ, ಅದು ಖಂಡಿತವಾಗಿಯೂ ನಿಮ್ಮನ್ನು ನೆನಪಿಸುತ್ತದೆ. ಉತ್ತಮ ಪೋರ್ಟಬಲ್ ಸ್ಪೀಕರ್‌ಗಳಿಗೆ ಬಂದಾಗ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳು ಲಭ್ಯವಿದ್ದರೂ, ನಿಮ್ಮ ಪಾಲುದಾರರ ನೆಚ್ಚಿನ ಬ್ರ್ಯಾಂಡ್ ಅನ್ನು ಆಯ್ಕೆ ಮಾಡಿ. ನಿಮ್ಮ ಸಂಗಾತಿಯು ನಿಮ್ಮಿಂದ ಈ ಅತ್ಯಮೂಲ್ಯ ಉಡುಗೊರೆಯನ್ನು ಸ್ವೀಕರಿಸಿ ಸಂತೋಷ ಪಡುತ್ತಾರೆ.

ಪುಸ್ತಕ:
ನಿಮ್ಮ ಸಂಗಾತಿಯು ಪುಸ್ತಕ ಪ್ರೇಮಿಯಾಗಿದ್ದರೆ, ಎರಡನೆಯ ಆಲೋಚನೆಯನ್ನೂ ಮಾಡದೆ ಅವರಿಗೆ ಪುಸ್ತಕವನ್ನು ನೀಡಿ. ಒಬ್ಬ ಪುಸ್ತಕ ಪ್ರೇಮಿ ತನ್ನ ಕೋಣೆಯಲ್ಲಿ ಓದದ ಸಾವಿರ ಪುಸ್ತಕಗಳಿದ್ದರೂ ಸಹ ಮತ್ತಷ್ಟು ಪುಸ್ತಕಗಳನ್ನು ಪಡೆಯಲು ಹಿಂದೆ ಹೋಗುವುದಿಲ್ಲ. ಉತ್ತಮ ಪುಸ್ತಕವನ್ನು ಆಯ್ಕೆಮಾಡುವಾಗ, ಉತ್ತಮ ವಿಮರ್ಶೆಗಳನ್ನು ಹೊಂದಿರುವದನ್ನು ಆರಿಸಿಕೊಳ್ಳಿ. ನಿಮ್ಮ ಸಂಗಾತಿಯು ಸಂಪೂರ್ಣವಾಗಿ ಇಷ್ಟಪಡುವ ಪುಸ್ತಕಗಳ ಪ್ರಕಾರಗಳನ್ನು ಆಯ್ಕೆಮಾಡಿ. ನಿಮ್ಮ ಸಂಗಾತಿ ಥ್ರಿಲ್ಲರ್ ಪುಸ್ತಕಗಳನ್ನು ಓದಲು ಇಷ್ಟ ಪಡುತ್ತಿದ್ದರೆ ಅವರಿಗೆ ಕಾಲ್ಪನಿಕವಲ್ಲದ ಪುಸ್ತಕವನ್ನು ನೀಡುವ ತಪ್ಪನ್ನು ಮಾಡಬೇಡಿ.

ಗಿಡಗಳು:
ಸಸ್ಯಗಳು ಯಾವುದೇ ಮಂದ ಸ್ಥಳಕ್ಕೆ ತಾಜಾತನ ಮತ್ತು ಉತ್ಕೃಷ್ಟತೆಯನ್ನು ತರಬಹುದು. ಈ ಸಸ್ಯಗಳು ಯಾವುದೇ ಮಂಕಾಗಿರುವ ಸ್ಥಳಕ್ಕೆ ಕ್ಷಣಾರ್ಧದಲ್ಲಿ ಹೆಚ್ಚಿನ ಆಕರ್ಷಣೆಯನ್ನು ತರುತ್ತವೆ. ಇದು ನಿಮ್ಮ ಸಂಗಾತಿಗೆ ಅತ್ಯಂತ ಚಿಂತನಶೀಲ ಮತ್ತು ಅರ್ಥಪೂರ್ಣ ಉಡುಗೊರೆಯಾಗಿದೆ. ನೀವು ಈ ಸಸ್ಯವನ್ನು ನಿಮ್ಮ ಪ್ರೀತಿಯ ಸಂಕೇತವೆಂದು ಪರಿಗಣಿಸಬಹುದು ಮತ್ತು ಅದನ್ನು ಒಟ್ಟಿಗೆ ಪೋಷಿಸಬಹುದು. ಇದನ್ನು ಹೆಚ್ಚು ರೋಮ್ಯಾಂಟಿಕ್ ಮಾಡಲು, ನೀವು ಈ ಸಸ್ಯಕ್ಕೆ ವೈಯಕ್ತಿಕ ಹೆಸರನ್ನು ನೀಡಬಹುದು.



Click it and Unblock the Notifications
