Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ IAS,IFS ಆಫೀಸರ್‌ಗಳ ಕ್ಯೂಟ್ ಲವ್ ಸ್ಟೋರಿ ತುಂಬಾನೇ ಗಮನ ಸೆಳೆಯುತ್ತಿದೆ
ಇತ್ತೀಚಿನ ದಿನಗಳಲ್ಲಿ ಲವ್ ಸ್ಟೋರಿ ತುಂಬಾನೇ ವೈರಲ್ ಆಗುತ್ತಿದೆ, ಬಹುಶಃ ನೆಟ್ಟಿಗರು ಈ ಬಗೆಯ ಸ್ಟೋರಿ ತಿಳಿಯಲು ಹೆಚ್ಚು ಆಸಕ್ತಿವಹಿಸುವಂತಿದೆ. ಎಲ್ಲಾ ಲವ್ ಸ್ಟೋರಿ ಚೆನ್ನಾಗಿರುತ್ತದೆ, ಆದರೆ ಕೆಲವೊಂದು ಸ್ಟೋರಿಗಳು ತುಂಬಾನೇ ಭಿನ್ನವಾಗಿರುವ ಕಾರಣ ಬೇಗನೆ ಗಮನ ಸೆಳೆಯುತ್ತಿದೆ. ಇದೀಗ ಐಎಎಸ್ ಅನ್ಮೋಲ್ ಸಾಗರ್ ಹಾಗೂ ಐಎಫ್‌ಎಸ್ ಕನಿಷ್ಕಾ ಸಿಂಗ್ ಜೋಡಿಯ ಲವ್‌ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಗಮನ ಸೆಳೆದಿದೆ.

ಅನ್ಮೋಲ್ ಹಾಗೂ ಕನಿಷ್ಕಾ ಇಬ್ಬರೂ 2018ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು, ನಂತರ ಇವರು ಲಾಲ್ ಬಹುದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನ್‌ಸ್ಟ್ರೇಷನ್ (LBSNAA)ದಲ್ಲಿ ಮೊದಲ ಬಾರಿಗೆ ಭೇಟಿಯಾಗುತ್ತಾರೆ.
ಟ್ರೈನಿಂಗ್‌ನಲ್ಲಿ ಇಬ್ಬರು ಸ್ನೇಹಿತರಾಗುತ್ತಾರೆ, ಆ ಸ್ನೇಹ ಪ್ರೀತಿಯಾಗಿ ಅರಳುತ್ತದೆ. ಇವರಿಬ್ಬರೂ UPSC ಪರೀಕ್ಷೆಯನ್ನು ಮೊದಲ ಬಾರಿ ಕ್ಲಿಯರ್ ಮಾಡಿರಲಿಲ್ಲ. ಮೊದಲಿಗೆ 2017ರಲ್ಲಿ UPSC ಬರೆದಿದ್ದರು, ಅದರಲ್ಲಿ ಕನಿಷ್ಕಾ ಪ್ರಿಲಿಮಿನರಿ ಕೂಡ ಮುಗಿಸಿರಲಿಲ್ಲ. ನಂತರ ಶ್ರಮವಹಿಸಿ ತಮ್ಮ ಕನಸು ನನಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಅಬ್ಮೋಲ್ ಮಹಾರಾಷ್ಟ್ರದ ದಿಯೋರಿಯ ಎಸ್‌ಡಿಎಂನಲ್ಲಿ ಪೋಸ್ಟಿಂಗ್‌ನಲ್ಲಿದ್ದಾರೆ, ಕನಿಷ್ಕಾ ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬಾತ್‌ನ ರಾಯಭಾರ ಕಚೇರಿಯಲ್ಲಿ ನೇಮಕವಾಗಿದ್ದಾರೆ. ಇವರು ಮೈಲುಗಳ ದೂರದಲ್ಲಿ ಇದ್ದರು, ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಈ ಇಬ್ಬರು ಆಫೀಸರ್‌ಗಳ ಲವ್ ಸ್ಟೋರಿ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದ್ದು, ಸಾಕಷ್ಟು ಜನರು ಇವರ ಫಾಲೋವರ್ಸ್ ಆಗಿದ್ದಾರೆ.
ಇವರಿಬ್ಬರ ಲವ್ ಸ್ಟೋರಿ ಅನೇಕರಿಗೆ ಸ್ಪೂರ್ತಿಯಾಗುವಂತಿದೆ, ಏಕೆಂದರೆ ಇಬ್ಬರು ತಮ್ಮ ಗುರಿಗಳನ್ನು ನನಸು ಮಾಡಿಕೊಂಡವರು....ಕನಸುಗಳ ಬೆನ್ನೇರಿ ಹೊರಟವರು...



Click it and Unblock the Notifications


