Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
BMW ಕಾರು, ಮನೆ ನೀಡಿ ಬಾಯ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ ಯುವತಿ
ಪ್ರೇಮಿಗಳಿಗೆ, ಪ್ರೀತಿಸಿ ಮದುವೆಯಾದವರಿಗೆ ತಮ್ಮ ಲವ್ ಪ್ರಪೋಸ್ ಮಾಡಿದ ದಿನ ಯಾವತ್ತಿಗೂ ಒಂದು ಸ್ಪೆಷಲ್ ದಿನವಾಗಿರುತ್ತದೆ. ಪ್ರತಿಯೊಬ್ಬ ಪ್ರೇಮಿಯ ಬಳಿ ಕೇಳಿದರೆ ತಮ್ಮ ಲವ್ ಪ್ರಪೋಸ್ ಬಗ್ಗೆ ಹೇಳಲು ಒಂದು ಸುಂದರವಾದ ಕತೆ ಹೇಳುತ್ತಾರೆ.
ಇನ್ನು ಕೆಲವರು ಇದ್ದಾರೆ, ನಾನು ಬೇರೆಯವರಿಗಿಂತ ಸ್ವಲ್ಪ ವಿಭಿನ್ನವಾಗಿ ಪ್ರಪೋಸ್ ಮಾಡಬೇಕೆಂದು ಬಯಸಿ ತುಂಬಾ ಕ್ರಿಯೇಟಿವ್ ಆಗಿ ಯೋಚಿಸಿ ಲವ್ ಪ್ರಪೋಸ್ ಮಾಡುತ್ತಾರೆ. ವಿಮಾನದಲ್ಲಿ ಪ್ರಪೋಸ್ ಮಾಡುವುದು, ಯಾವುದಾದರೂ ಸಭೆ, ಸಮಾರಂಭಗಳಲ್ಲಿ ಪ್ರಪೋಸ್ ಮಾಡುವುದು ಮಾಡುತ್ತಾರೆ.

ಆದರೆ ಚೀನಾದಲ್ಲಿ ಹುಡುಗಿಯೊಬ್ಬಳು ತನ್ನ ಹುಡುಗನಿಗೆ ದುಬಾರಿ ಉಡುಗೊರೆ ನೀಡಿ ಪ್ರಪೋಸ್ ಮಾಡಿರುವ ರೀತಿ ನೋಡಿ, ಆ ಹುಡುಗ ನಿಜಕ್ಕೂ ಅದೃಷ್ಟವಂತ ಅಂದುಕೊಳ್ಳುತ್ತಿದ್ದಾರೆ. ಆಕೆ ನೀಡಿರುವ ದುಬಾರಿ ಉಡುಗೊರೆಗಿಂತ ಆಕೆಯ ಮನಸ್ಸು ನೋಡಿ, ಆಕೆಯನ್ನು ಪಡೆಯಲು ಆತ ಅದೃಷ್ಟ ಮಾಡಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
24 ವರ್ಷದ ಕ್ಸಿಯೋಜಿಂಗ್ ತಮ್ಮ ಪ್ರೇಮದ ಮೊದಲ ವಾರ್ಷಿಕೋತ್ಸವ ದಿನ ಬಾಯ್‌ಫ್ರೆಂಡ್ ಕ್ಸಿಯೋಕೆಗೆ ಸರ್‌ಪ್ರೈಸ್ ಪಾರ್ಟಿ ಅರೇಂಜ್ ಮಾಡಿ ಮದುವೆಗೆ ಪ್ರಪೋಸ್ ಮಾಡಲು ಯೋಚಿಸುತ್ತಾರೆ. ವೃತ್ತಿಯಲ್ಲಿ ಡಿಸೈನರ್ ಆಗಿರುವ ಕ್ಸಿಯೋಜಿಂಗ್ ಇದಕ್ಕಾಗಿ ತನ್ನ ಸ್ನೇಹಿತರ ಜತೆ ಸಿದ್ಧತೆ ನಡೆಸುತ್ತಾರೆ.
ಡಿಸೆಂಬರ್ 11, 2019ಕ್ಕೆ ಅವರಿಬ್ಬರು ಪ್ರೇಮಿಗಳಾಗಿ ಒಂದು ವರ್ಷ ತುಂಬಿತ್ತು, ಅದರ ಆಚರಣೆಗಾಗಿ ಹೆನಾನ್‌ನಲ್ಲಿ ನಡೆಯುತ್ತಿರುವ ಪ್ರದರ್ಶನ ಮೇಳದಿಂದ ನನಗಾಗಿ ಏನೋ ಒಂದು ವಸ್ತುವಿದೆ, ಅದನ್ನು ತೆಗೆದುಕೊಂಡು ಬರುವಂತೆ ಹೇಳುತ್ತಾಳೆ. ಕ್ಸಿಯೋಕೆ ಅಲ್ಲಿಗೆ ತಲುಪಿದಾಗ ಅಚ್ಚರಿಗೊಳಗಾಗುತ್ತೇನೆ, ಏಕೆಂದರೆ ಅಲ್ಲಿ ಅವನ ಹುಡುಗಿ ಮದುಮಗಳ ಡ್ರೆಸ್ಸ್‌ನಲ್ಲಿ ಕಾಯುತ್ತಿರುತ್ತಾಳೆ. ಆ ಸ್ಥಳವನ್ನು ಆಕರ್ಷಕವಾಗಿ ಅಲಂಕರಿಸಲಾಗಿರುತ್ತದೆ.
ಆತ ಅಲ್ಲಿಗೆ ಬಂದಾಗ ಹೂವಿನ ಬೊಕ್ಕೆಯಲ್ಲಿ ಬಿಎಂಡಬ್ಲ್ಯೂ ಕಾರು ಹಾಗೂ ಮನೆಯನ್ನು ಆತನಿಗೆ ಉಡುಗೊರೆಯಾಗಿ ನೀಡುತ್ತಾ ' ಇದನ್ನು ನೀನು ಸ್ವೀಕರಿಸು, ಸ್ವೀಕರಿಸದಿರು, ನಾನು ಮಾತ್ರ ನಿನ್ನ ಜತೆ ಇರಲು ಬಯಸುತ್ತಿದ್ದೇನೆ, ನನ್ನನ್ನು ಮದುವೆಯಾಗುತ್ತೀಯಾ? ಎಂದು ಪ್ರಪೋಸ್ ಮಾಡಿದರು.
ತನ್ನ ಗರ್ಲ್‌ಫ್ರೆಂಡ್ ಅಷ್ಟೊಂದು ಪ್ರೀತಿಯಿಂದ ಕೇಳಿದ್ದನ್ನು ನೋಡಿದ ಕ್ಸಿಯೋಂಗ್ 'ಇದನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ, ಯಸ್, ನನಗೆ ಒಪ್ಪಿಗೆಯಿದೆ' ಎಂದು ಹೇಳುತ್ತಾನೆ.
ಕ್ಸಿಯೋಜಿಂಗ್ ಚೀನಾದ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ' ದುಬಾರಿ ವಸ್ತುಗಳಿಗಿಂತ ಮಿಗಿಲಾದದ್ದು ಪ್ರೀತಿ, ಇವರು ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ, ನನಗಾಗಿ ಕೆಲವೊಂದು ತ್ಯಾಗವನ್ನೂ ಮಾಡಿದ್ದಾರೆ. ಅವರಿಗಾಗಿ ಏನಾದರೂ ಮಾಡಬೇಕೆಂದು ಬಯಸಿದೆ. ಸಂಬಂಧದಲ್ಲಿ ಪುರುಷರೇ ಕಾರು, ಮನೆ ಕೊಡಿಸಬೇಕೆಂದು ಇಲ್ವಲ್ಲ' ಎಂದಿದ್ದಾರೆ.
ದುಬಾರಿ ವಸ್ತುಗಳಿಗಿಂತ ಪ್ರೀತಿಯೇ ದೊಡ್ಡದು ಎಂದು ಆಕೆ ಹೇಳಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆ ಅಲ್ವಾ?



Click it and Unblock the Notifications
