Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವ ಪುರುಷರ ವರ್ತನೆಗಳು
ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇದ್ದೇ ಇರುತ್ತದೆ. ಇದಕ್ಕೆ ಹೊರತಾದವರು ಕೂಡ ಇರಬಹುದು. ಆದರೆ ಅದು ವಿರಳ. ಅದರಲ್ಲೂ ಪುರುಷರು ಕೆಲವೊಂದು ವಿಚಿತ್ರವಾದ ವರ್ತನೆ ತೋರಿಸುವುದು ಸಾಮಾನ್ಯ. ಇವರು ಎಲ್ಲೇ ಇದ್ದರೂ ಇಂತಹ ವರ್ತನೆ ತೋರಿಸುವರು.
ಇದರಿಂದ ಸುತ್ತಲು ಇರುವ ಜನರಿಗೆ ತುಂಬಾ ಮುಜುಗರವಾಗುವುದು. ಕೆಲವು ಪುರುಷರು ಮಹಿಳೆಯರ ಸಮ್ಮುಖದಲ್ಲಿ ಪ್ರದರ್ಶಿಸುವಂತಹ ವರ್ತನೆಗಳು ತೀರ ಕಿರಿಕಿರಿ ಉಂಟು ಮಾಡುವುದು. ಮಹಿಳೆಯರು ಅಗತ್ಯಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವರು.
ಆದರೆ ಪುರುಷರು ಸಾಮಾನ್ಯವಾಗಿ ಯಾವುದೇ ಆಲೋಚನೆ ಮಾಡದೆ ಕೆಲವು ನಿರ್ಧಾರ ಮಾಡುವರು. ಇದು ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವುದು. ಮಹಿಳೆಯರಿಗೆ ಅಚ್ಚರಿಯ ಪ್ರವಾಸಕ್ಕೆ ಹೋಗುವುದು ತುಂಬಾ ಕಿರಿಕಿರಿ ಉಂಟು ಮಾಡುವುದು. ಯಾಕೆಂದರೆ ಅವರು ಮೊದಲೇ ಯೋಜನೆ ಮಾಡಿ ಎಲ್ಲವನ್ನು ತಯಾರಾಗಿಟ್ಟುಕೊಳ್ಳಲು ಬಯಸುವರು. ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವ ಪುರುಷರ ವರ್ತನೆಗಳು ಯಾವುದು ಎಂದು ನೀವು ಈ ಲೇಖನ ಓದಿಕೊಂಡು ತಿಳಿಯಿರಿ ಮತ್ತು ನಿಮ್ಮನ್ನು ನೀವು ತಿದ್ದಿಕೊಳ್ಳಿ.

ಖಾಲಿ ಕ್ಯಾನ್‌ಗಳು
ಹೆಚ್ಚಾಗಿ ಪುರುಷರು ಮನೆಯಲ್ಲಿ ಇದ್ದರೆ ಆಗ ತಂಪು ಪಾನೀಯದ ಕ್ಯಾನ್ ಗಳು ಅಥವಾ ಬಿಯರ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಕಿಡುವರು. ಆದರೆ ಇದು ಪುರುಷರಿಗೆ ಕಾಲೇಜು ದಿನಗಳಲ್ಲಿ ಬಂದಿರುವಂತಹ ಅಭ್ಯಾಸವಾಗಿರುವುದು. ಹಾಸ್ಟೆಲ್ ನಲ್ಲಿರುವಂತಹ ಹೆಚ್ಚಿನ ಪುರುಷರು ಈ ರೀತಿಯ ಅಭ್ಯಾಸ ಬೆಳೆಸಿಕೊಳ್ಳುವರು. ಇದನ್ನು ಅವರು ಮುಂದಿನ ಜೀವನದಲ್ಲೂ ಮುಂದುವರಿಸಿಕೊಂಡು ಹೋಗುವರು.

ಬೇರೆಯವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು
ಅಪರಿಚಿತರು ಅದರಲ್ಲೂ ತುಂಬಾ ಬಡತನದಲ್ಲಿ ಇರುವಂತಹ ಜನರ ಬಗ್ಗೆ ಅಗೌರವ ತೋರಿಸುವುದನ್ನು ಮಹಿಳೆಯರು ಯಾವತ್ತೂ ಇಷ್ಟ ಪಡುವುದಿಲ್ಲ. ವೈಟರ್ ಹಾಗೂ ಸರ್ವರ್ ಗಳನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುವಂತಹ ವ್ಯಕ್ತಿಗಳು ಮಹಿಳೆಯರಿಗೆ ತುಂಬಾ ಕಿರಿಕಿರಿ ಉಂಟು ಮಾಡುವರು. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರಿಗೆ ಇಂತಹ ಘಟನೆಗಳು ಸಾಮಾನ್ಯವಾಗಿ ಕಾಣಸಿಗುವುದು.

ಸೆಕ್ಸ್ ಬಳಿಕ ನೇರವಾಗಿ ನಿದ್ರೆಗೆ ಜಾರುವುದು
ಮಹಿಳೆಯರು ಸೆಕ್ಸ್ ನ್ನು ಇಷ್ಟಪಡುವಂತಹ ಸೆಕ್ಸ್ ಬಳಿಕ ಅವರೊಂದಿಗೆ ಮಾತನಾಡುವುದು ಮತ್ತು ಅಪ್ಪುವುದನ್ನು ಇಷ್ಟಪಡುವರು ಎಂದು ಯೂನಿವರ್ಸಿಟಿ ಆಪ್ ಮಿಚಗಿನ್ ನಡೆಸಿರುವಂತಹ ಸಮೀಕ್ಷೆಯು ಹೇಳಿದೆ. ಅದಾಗ್ಯೂ, ಹೆಚ್ಚಾಗಿ ಪುರುಷರು ಸೆಕ್ಸ್ ಬಳಿಕ ನಿದ್ರೆಗೆ ಜಾರುವುದು ಸಹಜ. ಇದರಿಂದಾಗಿ ಸಂಗಾತಿಯು ತುಂಬಾ ನಿರಾಶೆಗೆ ಒಳಗಾಗುವರು.

ಮಾತು ಕೇಳದೆ ಇರುವುದು
ಇದು ಜಗತ್ತಿನ ಬಹುದೊಡ್ಡ ಸತ್ಯವೆಂದು ನಂಬಲಾಗಿದೆ. ಪುರುಷರು ತಾವು ಇಷ್ಟಪಟ್ಟು ಮಾಡುತ್ತಿರುವಂತಹ ಕೆಲಸದ ಮಧ್ಯೆ ಬೇರೆಯವರ ಮಾತನ್ನು ಕೇಳುವುದು ತುಂಬಾ ಕಡಿಮೆ. ಪುರುಷರ ಈ ವರ್ತನೆಯು ಮಹಿಳೆಯರಿಗೆ ತುಂಬಾ ಕಿರಿಕಿರಿ ಉಂಟು ಮಾಡುವುದು. ಯಾಕೆಂದರೆ ಅವರು ಪದೇ ಪದೇ ಅದೇ ಮಾತನ್ನು ಹೇಳುತ್ತಲಿರುತ್ತಾರೆ ಮತ್ತು ಇದಕ್ಕೆ ನೀರಸ ಪ್ರತಿಕ್ರಿಯೆಯು ಬರುವುದು. ಹೆಚ್ಚಿನ ಸಂದರ್ಭಗಳಲ್ಲಿ ತುಂಬಾ ಸಮಯ ಕಳೆದ ಬಳಿಕ ಏನು ಹೇಳಿದ್ದು ಎಂದು ಪುರುಷರು ಕೇಳುವರು.

ಮೊಬೈಲ್ ಗೀಳು
ಇಂದಿನ ದಿನಗಳಲ್ಲಿ ಮೊಬೈಲ್ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಅದಾಗ್ಯೂ, ಪುರುಷರುಯಾವಾಗಲೂ ಮೊಬೈಲ್ ನಲ್ಲೇ ಕಾಲ ಕಳೆಯುವುದನ್ನು ಮಹಿಳೆಯರು ಇಷ್ಟ ಪಡುವುದಿಲ್ಲ. ಡೇಟ್ ವೇಳೆ ಪುರುಷರು ಪದೇ ಪದೇ ಮೊಬೈಲ್ ಬಳಸಿದರೆ ಅದರಿಂದ ಮಹಿಳೆಯರಿಗೆ ತುಂಬಾ ಕಿರಿಕಿರಿ ಆಗುವುದು.

ಟಾಯ್ಲೆಟ್ ಸೀಟ್ ಮೇಲೆ ಮಾಡಿರುವುದು
ಪುರುಷರು ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಟಾಯ್ಲೆಟ್ ಸೀಟ್ ಕೆಳಗಡೆ ಇರಬೇಕೆಂದು ಮಹಿಳೆಯರು ಬಯಸುವರು. ಇದು ತುಂಬಾ ಸಣ್ಣ ವಿಚಾರವಾದರೂ ಮಹಿಳೆಯರು ಇದರಿಂದ ತುಂಬಾ ಕಿರಿಕಿರಿ ಅನುಭವಿಸುವರು. ಅದರಲ್ಲೂ ಟಾಯ್ಲೆಟ್ ಸೀಟ್ ಕೆಳಗಡೆ ಇರಬೇಕೆಂದು ಹೇಳಿದ್ದರೂ ಹಾಗೆ ಇರದಿದ್ದರೆ ತುಂಬಾ ಕೋಪಗೊಳ್ಳುವರು. ಇದು ಅಗೌರವ ಸೂಚಿಸುವುದು ಎಂದು ಕೆಲವೊಂದು ಮಹಿಳೆಯರು ಭಾವಿಸುವರು.

ಸ್ನೇಹಪರವಲ್ಲದ ಸ್ನೇಹಿತರು
ಪುರುಷರು ಯಾವಾಗಲೂ ಹೆಚ್ಚು ಸ್ನೇಹಿತರನ್ನು ಸಂಪಾದಿಸಲು ಬಯಸುವರು ಮತ್ತು ಕೆಲವೊಂದು ಸಲ ಸ್ವಲ್ಪ ಕೆಟ್ಟ ಜನರು ಕೂಡ ಸ್ನೇಹಿತರಾಗಿ ಬಿಡುವರು. ಇದರ ಬಗ್ಗೆ ಪುರುಷರು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಮಹಿಳೆಯರು ಇದನ್ನು ಖಂಡಿತವಾಗಿಯೂ ಇಷ್ಟಪಡುವುದಿಲ್ಲ. ಪುರುಷರು ತುಂಬಾ ಒಳ್ಳೆಯ ಹಾಗೂ ಧನಾತ್ಮಕವಾಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಬೇಕೆಂದು ಮಹಿಳೆಯರು ಯಾವಾಗಲೂ ಬಯಸುವರು.

ಕ್ಯಾಶುವಲ್ ಬಟ್ಟೆ
ಇತ್ತೀಚೆಗೆ ನಡೆಸಿರುವ ಅಧ್ಯಯನವೊಂದು ಕಂಡುಕೊಂಡಿರುವ ವಿಚಾರವೆಂದರೆ ಶೇ.60ರಷ್ಟು ಅವಿವಾಹಿತ ಮಹಿಳೆಯರು ಸಾಮಾನ್ಯವಾಗಿ ಕ್ಯಾಶುವಲ್ ಬಟ್ಟೆ ಧರಿಸಿರುವಂತಹ ಪುರುಷರೊಂದಿಗೆ ಡೇಟಿಂಗ್ ಇಷ್ಟಪಡುವರು. ತಮ್ಮ ಬಟ್ಟೆಬರೆ ಬಗ್ಗೆ ಹೆಚ್ಚು ಕಾಳಜಿ ವಹಿಸದೆ ಇರುವಂತಹ ಪುರುಷರ ಬಗ್ಗೆ ಮಹಿಳೆಯರು ತುಂಬಾ ಕೋಪಗೊಳ್ಳುವರು.

ಉಗುರು ಮತ್ತು ಕೂದಲು
ಉಗುರು ತೆಗೆಯದೆ ಇರುವ ಮತ್ತು ಕ್ಷೌರ ಮಾಡಿಸದೆ ಇರುವಂತಹ ಪುರುಷರು ಯಾವಾಗಲೂ ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವರು. ಸ್ವಚ್ಛತೆ ಇಲ್ಲದೆ ಇರುವಂತಹ ಪುರುಷರನ್ನು ಮಹಿಳೆಯರು ದ್ವೇಷಿಸುವರು. ಅದೇ ರೀತಿಯಾಗಿ ಸರಿಯಾಗಿ ಉಗುರು ತೆಗೆಯದೆ ಮತ್ತು ಕ್ಷೌರ ಮಾಡಿಸದೆ ಇದ್ದರೂ ಮಹಿಳೆಯರಿಗೆ ಅದು ಇಷ್ಟವಾಗದು.



Click it and Unblock the Notifications
