Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ತನ್ನ ತುಟಿಗಳನ್ನು ಕಚ್ಚಿಕೊಳ್ಳುವ ಮಹಿಳೆ ಅತ್ಯಾಕರ್ಷಕಳಾಗಿ ಕಾಣುತ್ತಾಳಂತೆ! ಏಕೆ?
ತನ್ನ ತುಟಿಗಳನ್ನು ಕಚ್ಚಿಕೊಳ್ಳುವ ಮಹಿಳೆ ಇತರರಿಗಿಂತ ಹೆಚ್ಚೇ ಪುರುಷನ ಗಮನವನ್ನು ಸೆಳೆಯಲು ಸಫಲಳಾಗುತ್ತಾಳಂತೆ. ತುಟಿ ಕಚ್ಚಿಕೊಂಡರೆ ಏಕಾಗಿ ಆಕೆ ಇಷ್ಟೊಂದು ಆಕರ್ಷಕಳಾಗಿ ಕಾಣಬೇಕು? ಈ ವಿದ್ಯಮಾನಕ್ಕೆ ಕೆಲವು ಕಾರಣಗಳಿವೆ.
ಒಂದು ವೇಳೆ ಆಕೆ ತನ್ನ ತುಟಿಗಳನ್ನು ಕಚ್ಚಿಕೊಂಡರೆ ಆಕೆಯನ್ನು ಗಮನಿಸುವ ಯಾವುದೇ ಪುರುಷನಲ್ಲಿ ಕಾಮವಾಂಛೆಯುಂಟಾಗುತ್ತದೆ. ಅದರಲ್ಲೂ ಕೆಳತುಟಿಯನ್ನು ಕಚ್ಚಿಕೊಂಡರೆ ಏಕಾಗಿ ಪುರುಷರು ಆಕೆಯ ಪ್ರತಿ ಅತಿ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ? ಏನಿದರ ರಹಸ್ಯ? ಮುಂದೆ ಓದಿ..

ಅಷ್ಟಕ್ಕೂ ಯುವಕರು ಯುವತಿಯ ತುಟಿಯನ್ನೇಕೆ ಗಮನಿಸುತ್ತಾರೆ?
ಪಬ್ ಮೊದಲಾದ ಸ್ಥಳಗಳಲ್ಲಿ ಯುವಕ ಯುವತಿಯರ ನಡುವೆ ನಡೆಯುವ ಕೆಲಸಕ್ಕೆ ಬಾರದ ಅಸಂಬದ್ದ ಸಂವಾದದಲ್ಲಿ ಯುವಕರು ಯುವತಿಯರನ್ನೇ ಗಮನಿಸುವಾಗ ಆಕೆ ಆಗಾಗ ಕೆಳತುಟಿಗಳನ್ನು ಕಚ್ಚಿಕೊಂಡರೆ ಯುವಕರಿಗೆ ಒಂದು ಬಗೆಯ ಉತ್ತೇಜನ ಸಿಕ್ಕಂತಾಗುತ್ತದೆ. ಏಕೆಂದು ನೋಡೋಣ...

ಭಾವಭಂಗಿಗಳು ಅತ್ಯಂತ ಪ್ರಬಲ ಮಾಧ್ಯಮವಾಗಿದೆ
ಎದುರಿನವರ ಗಮನವನ್ನು ಸೆಳೆಯಲು ನಮ್ಮ ಮಾತುಗಳಲ್ಲಿ ಬಳಸಲಾಗುವ ಪದಗಳು ಭಾರಿಯಾಗಿರಬೇಕೆಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಕೇವಲ ಪದಗಳು ಮಾತ್ರ ಸಾಲದು, ಮಾತನಾಡುವವರು ಬಳಸುವ ಕೈಸನ್ನೆ, ಮುಖಾಭಾವ ಮೊದಲಾದ ಭಾವಭಂಗಿಗಳು ಎದುರಿನವರ ಗಮನ ಸೆಳೆಯಲು ಅಗತ್ಯವಾಗಿವೆ. ಹೆಚ್ಚಿನ ಸಮಯದಲ್ಲಿ ಭಾವಭಂಗಿಯೇ ಪದಗಳಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಒಂದು ಸನ್ನಿವೇಶವನ್ನು ಊಹಿಸಿಕೊಳ್ಳಿ: ನೀವೊಬ್ಬ ಪುರುಷನಾಗಿದ್ದು ಮಹಿಳೆಯೋರ್ವಳೊಂದಿಗೆ ಮಾತನಾಡುತ್ತಿದ್ದರೆ ಆಕೆ ನಿಮ್ಮ ಗಮನ ಸೆಳೆಯಲು ತನ್ನ ಮುಂಗುರಳನ್ನು ಹಿಂದೆ ಸರಿಸುವುದು, ಆಕರ್ಷಕ ನಗೆ ಬೀರುವುದು ಮೊದಲಾದವುಗಳನ್ನು ಮಾಡುತ್ತಿದ್ದಿರಬಹುದು. ಆಕೆಯ ಪದಗಳಿಗಿಂತಲೂ ಆಕೆಯ ಈ ಚರ್ಯೆಗಳನ್ನೇ ನೀವು ಹೆಚ್ಚು ಗಮನಿಸುತ್ತಿದ್ದೀರಲ್ಲವೇ?

ಆಕರ್ಷಣೆ ನಮ್ಮ ಸುಪ್ತ ಮನಸ್ಸಿನ ಜಗತ್ತಿನಲ್ಲಿದೆ
ನಮ್ಮ ಭಾವಭಂಗಿಗಳೆಲ್ಲವೂ ನಾವು ಉದ್ದೇಶಪೂರ್ವಕವಾಗಿ ನಡೆಸುವುದಿಲ್ಲ. ಬದಲಿಗೆ ನಮ್ಮ ಸುಪ್ತಾವಸ್ಥೆಯ ಮನಸ್ಸು ಕೆಲವು ಸಂದರ್ಭಗಳಲ್ಲಿ ಹೀಗೇ ಮಾಡಬೇಕೆಂದು ನಿರ್ದೇಶನ ನೀಡುತ್ತದೆ. ಅದರಲ್ಲೂ ಇಬ್ಬರು ವ್ಯಕ್ತಿಗಳ ನಡುವೆ ಪ್ರಬಲ ಆಕರ್ಷಣೆಯಿದ್ದಾಗ ಈ ಚರ್ಯೆಗಳು ಭಿನ್ನವಾಗಿರುತ್ತವೆ.

ಮಹಿಳೆ ತನ್ನ ಕೆಳತುಟಿ ಕಚ್ಚಿಕೊಂಡರೆ?
ಮಹಿಳೆಯ ತುಟಿಗಳು ಪುರುಷರ ಆಕರ್ಷಣೆಯ ಕೇಂದ್ರವಾಗಿದೆ. ಇದೇ ಕಾರಣಕ್ಕೆ ಮಹಿಳೆಯರು ತಮ್ಮ ತುಟಿಗಳಿಗೆ ಕೆಂಪುಬಣ್ಣವನ್ನು ಹಚ್ಚಿಕೊಳ್ಳುತ್ತಾರೆ. ಅದರಲ್ಲೂ ಕೆಳತುಟಿಯನ್ನು ಕಚ್ಚಿಕೊಂಡರೆ ಆಕೆಯತ್ತ ಪುರುಷ ಅತಿ ಹೆಚ್ಚು ಆಕರ್ಷಿತನಾಗುತ್ತಾನೆ. ಆದರೆ ಈಕೆಯ ಉದ್ದೇಶವೇನಿರಬಹುದು ಎಂಬುದನ್ನು ಕಂಡುಕೊಳ್ಳುವುದು ಮಾತ್ರ ಪುರುಷನಿಗೆ ಕಷ್ಟವಾಗುತ್ತದೆ. ಆಕೆ ಎದುರಿನ ಪುರುಷನ ಆಕರ್ಷಣೆ ಪಡೆಯಲೆಂದೇ ತುಟಿ ಕಚ್ಚುತ್ತಿದ್ದಾಳೆಯೋ ಅಥವಾ ಈತನಿಂದ ದೂರಾಗಲು ಸಾಧ್ಯವಾಗದ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾಳೋ ಎಂದು ನಿರ್ಧರಿಸುವುದು ಕಷ್ಟವಾಗಿದೆ. ಆದರೂ, ತುಟಿ ಕಚ್ಚುವುದು ಪುರುಷರ ಗರಿಷ್ಟ ಗಮನ ಸೆಳೆಯುವುದಂತೂ ಸುಳ್ಳಲ್ಲ.

ನಿಮ್ಮ ಗಮನ ಅತ್ತ ಸೆಳೆಯುತ್ತದೆ
ಪುರುಷ ಮಹಿಳೆಯೊಬ್ಬಳೊಂದಿಗೆ ಕೆಲಸಕ್ಕೆ ಬಾರದ ಸಂವಾದವನ್ನು ಪ್ರಾರಂಭಿಸಿದ ಸಮಯದಲ್ಲಿ ಆಕೆ ಕೆಳತುಟಿಗಳನ್ನು ಕಚ್ಚಿಕೊಂಡರೆ ಪುರುಷನ ಗಮನ ಕಡ್ಡಾಯವಾಗಿ ಅತ್ತ ಸೆಳೆಯುತ್ತದೆ. ಆ ಸಮಯದಲ್ಲಿ ಪುರುಷ ಆ ಮಹಿಳೆಯನ್ನು ಚುಂಬಿಸುತ್ತಿರುವಂತೆ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಾನೆ. ಹೀಗೆ, ಆತನ ಗಮನ ಸೆಳೆಯಬೇಕೆಂದೇ ಆಕೆ ಉದ್ದೇಶಪೂರ್ವಕವಾಗಿ ತುಟಿಕಚ್ಚುತ್ತಾಳೆ.

ನಿಮ್ಮ ಕುತೂಹಲವನ್ನು ಕೆರಳಿಸುತ್ತಾಳೆ
ಒಂದು ವೇಳೆ ಪುರುಷ ಕೆಲಸಕ್ಕೆ ಬಾರದ ಸಂವಾದವನ್ನು ಪ್ರಾಂಭಿಸಿದಾಗ ಎದುರಿನ ವ್ಯಕ್ತಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸುತ್ತಾನೆ. ಒಂದು ವೇಳೆ ಎದುರಿನ ವ್ಯಕ್ತಿ ಮಹಿಳೆಯಾಗಿದ್ದು ತನ್ನ ಕೆಳತುಟಿಗಳನ್ನು ಕಚ್ಚಿಕೊಳ್ಳುತ್ತಿದ್ದರೆ ಪುರುಷ ಆಕೆಯ ಬಗ್ಗೆ ಹೆಚ್ಚಿನ ಕುತೂಹಲ ಪಡೆಯುತ್ತಾನೆ ಹಾಗೂ ಪುರುಷ ಆಕೆಯಲ್ಲಿ ಆಸಕ್ತನಾಗುತ್ತಾನೆ.

ನೀವು ಈ ವಿದ್ಯಮಾನವನ್ನು ಚಲನಚಿತ್ರಗಳಲ್ಲಿ ನೋಡಿಯೇ ಇರುತ್ತೀರಿ
ಚಲನಚಿತ್ರಗಳಲ್ಲಿ ಪ್ರೇಕ್ಷಕನ ಸಂಪೂರ್ಣ ಗಮನವನ್ನು ಸೆಳೆಯಲೆಂದೇ ಪ್ರತಿ ದೃಶ್ಯವನ್ನೂ ಅಚ್ಚುಕಟ್ಟಾಗಿ ಚಿತ್ರೀಕರಿಸಿರಲಾಗಿರುತ್ತದೆ. ಅಂತೆಯೇ ನಾವು ನೋಡಿದ ಪ್ರೇಮ ಕಥಾವಸ್ತುವಿರುವ ಚಲನಚಿತ್ರಗಳಲ್ಲಿ ನಾಯಕಿ ತನ್ನ ಪ್ರಿಯಕರನ ಗಮನ ಸೆಳೆಯಲು ಹಾಗೂ ಪ್ರಥಮ ಚುಂಬನಕ್ಕೂ ಮುನ್ನ ಆಕೆ ತೋರುವ ನಾಚಿಕೆಯನ್ನು ತೋರಿಸಲು ಕಡ್ಡಾಯವಾಗಿ ನಿರ್ದೇಶಕರು ಆಕೆಯ ಕೆಳತುಟಿ ಕಚ್ಚಿಸುತ್ತಾರೆ. ಈ ಮೂಲಕ ನಾಯಕಿಯತ್ತ ಕೇವಲ ನಾಯಕನ ಮಾತ್ರವಲ್ಲ, ಅಷ್ಟೂ ಪ್ರೇಕ್ಷಕರ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ. ಈ ವಿದ್ಯಮಾನವನ್ನು ಗಮನಿಸಿದ ಮಹಿಳೆಯರೂ ಎದುರಿನವರ ಗಮನ ಸೆಳೆಯಲು ತುಟಿಕಚ್ಚುತ್ತಾರೆ.



Click it and Unblock the Notifications