Latest Updates
-
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ
ಇದೇ ಕಾರಣಕ್ಕೆ ಮಹಿಳೆಯರಿಗೆ ಸೆಕ್ಸ್‌ನಲ್ಲಿ ಆಸಕ್ತಿ ಕಡಿಮೆ ಆಗುವುದಂತೆ!
ಮನೆ, ಪತಿ, ಮಕ್ಕಳು, ಕುಟುಂಬ ಹೀಗೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿರುವ ಮಹಿಳೆಯರು ಇಂದಿನ ದಿನಗಳಲ್ಲಿ ವೃತ್ತಿಯನ್ನು ಮಾಡುತ್ತಾ ಬರುತ್ತಿದ್ದಾರೆ. ಮನೆ ಹಾಗೂ ಕಚೇರಿಯನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುವುದು ಕೂಡ ಈ ಮಹಿಳೆಯರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಇಂತಹ ಮಹಿಳೆಯರಲ್ಲಿ ಸಾಮಾನ್ಯವಾಗಿ ಲೈಂಗಿಕಾಸಕ್ತಿಯು ನಿಧಾನವಾಗಿ ಕುಂದುತ್ತಾ ಬರುವುದು.
ಇದಕ್ಕೆ ಪ್ರಮುಖ ಕಾರಣವೆಂದರೆ ಅದರಿಗೆ ಇರುವಂತಹ ಒತ್ತಡ. ಶೇ.40ರಷ್ಟು ಮಹಿಳೆಯರಿಗೆ ಜೀವನದಲ್ಲಿ ಲೈಂಗಿಕಾಸಕ್ತಿಯು ಕುಂದುವಂತಹ ಸಮಸ್ಯೆಯು ಎದುರಾಗುವುದು. ಮಹಿಳೆಯರಲ್ಲಿ ಲೈಂಗಿಕಾಸಕ್ತಿಯು ಕುಂದಿದರೆ ಆಗ ನಿಮಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು, ಹಸ್ತಮೈಥುನ ಮಾಡಲು ಅಥವಾ ಲೈಂಗಿಕತೆಗೆ ಸಂಬಂಧಿಸಿದ ಯಾವುದೇ ರೀತಿಯ ವಿಚಾರಗಳನ್ನು ಮಾತನಾಡಲು ಇಷ್ಟವಾಗಲ್ಲ. ಇದಕ್ಕೆ ಕಾರಣಗಳು ಏನು ಎಂದು ತಿಳಿಯುವ.

1. ಕೆಟ್ಟ ಸಂಬಂಧ
ಸಂಗಾತಿ ಜತೆಗೆ ನೀವು ಪದೇ ಪದೇ ಜಗಳವಾಡುತ್ತಲಿದ್ದರೆ ಆಗ ನಿಮ್ಮ ಲೈಂಗಿಕಾಸಕ್ತಿಯು ಕುಂದುವುದು. ನಿಮಗೆ ಕೋಪ ಅಥವಾ ನೋವಾಗಿದ್ದರೆ ಆಗ ಸೆಕ್ಸ್ ಎನ್ನುವುದು ನಿಮ್ಮ ತಲೆಯಲ್ಲಿ ಸುಳಿದಾಡದು. ನಿಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಿ. ಸಲಹೆಗಾರರ ಬಳಿಗೆ ಹೋಗಿ ಇದನ್ನು ಸರಿ ಮಾಡಬಹುದು.

2. ಒತ್ತಡ
ಒತ್ತಡವು ಎಲ್ಲಿಂದ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದರಿಂದ ಕಾಮಾಸಕ್ತಿಯು ಕುಂದುವುರು ಖಚಿತ. ಆರ್ಥಿಕ ಸಮಸ್ಯೆ, ಗರ್ಭಧರಿಸದೆ ಇರುವುದು ಅಥವಾ ಉದ್ಯೋಗದ ಬಗ್ಗೆ ಯೋಚನೆ ಮಾಡುವುದು ಕೂಡ ನಿಮ್ಮ ಲೈಂಗಿಕಾಸಕ್ತಿ ಮೇಲೆ ಪರಿಣಾಮ ಬೀರುವುದು. ಒತ್ತಡದಿಂದಾಗಿ ನಿಶ್ಯಕ್ತಿಯು ಕಾಡಬಹುದು ಮತ್ತು ಇದು ಸಮಸ್ಯೆಯನ್ನು ಮತ್ತಷ್ಟು ಕೆಡಿಸುವುದು. ನಿಮಗೆ ಗರ್ಭಧರಿಸಬೇಕೆಂದಿದ್ದರೆ ಆಗ ಒತ್ತಡವು ಪರಿಣಾಮ ಬೀರುವುದು. ಇದರಿಂದ ನೀವು ಶಾಂತವಾಗಿರಿ ಮತ್ತು ದಿನಾಲೂ ಧಾನ್ಯ ಮಾಡುವುದರಿಂದ ಒತ್ತಡ ನಿವಾರಣೆಯಾಗುವುದು.

3. ಮದ್ಯಪಾನ ಮತ್ತು ಧೂಮಪಾನ
ಇವೆರಡು ಕೂಡ ನಿಮ್ಮಲ್ಲಿ ಲೈಂಗಿಕಾಸಕ್ತಿ ಮತ್ತು ತೃಪ್ತಿಯನ್ನು ಕಡಿಮೆ ಮಾಡುವುದು.ಮಿತವಾಗಿ ಮದ್ಯಪಾನ ಮಾಡಿದರೆ ಚಿಂತಿಲ್ಲ. ಆದರೆ ಅತಿಯಾದರೆ ಅದರಿಂದ ಲೈಂಗಿಕಾಸಕ್ತಿಯು ಕುಂದುವುದು ಖಚಿತ. ಯಾವುದೇ ರೀತಿಯ ಧೂಮಪಾನವು ಹಾನಿಕಾರಕ. ಇದರಿಂದ ಇದನ್ನು ಬಿಟ್ಟುಬಿಡಿ. ಆದರೆ ಧೂಮಪಾನ ತ್ಯಜಿಸುವುದು ಅಷ್ಟು ಸುಲಭವಲ್ಲ. ನೀವು ಬೋರ್ ಆಗುವ ಕಾರಣದಿಂದ ಧೂಮಪಾನ ಮಾಡುತ್ತಲಿದ್ದರೆ ಆಗ ನೀವು ಸಮಯ ಕಳೆಯಲು ಜಿಮ್ ಗೆ ಹೋಗಬಹುದು.

4. ಮಾನಸಿಕ ಕಾಯಿಲೆ
ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಕಾಯಿಲೆಗಳು ಕೂಡ ಲೈಂಗಿಕಾಸಕ್ತಿ ಮೇಲೆ ಪರಿಣಾಮ ಬೀರುವುದು. ಇದರ ಬಗ್ಗೆ ವೈದ್ಯರೊಂದಿಗೆ ಮಾತನಾಡಿ ಚಿಕಿತ್ಸೆ ಪಡೆಯಿರಿ. ಇದನ್ನು ನಿವಾರಿಸಲು ಮಾಡುವಂತಹ ಕೆಲವೊಂದು ಧಾನ್ಯಗಳು ಕೂಡ ಕಾಮಾಸಕ್ತಿ ಮೇಲೆ ಪರಿಣಾಮ ಬೀರಬಹುದು. ಆದರೆ ಪ್ರತಿಯೊಂದು ಧಾನ್ಯವೂ ಅಲ್ಲ, ಇದರ ಬಗ್ಗೆ ವೈದ್ಯರೊಂದಿಗೆ ಮಾತನಾಡಿ.

5. ಗರ್ಭ ನಿರೋಧಕ
ದೇಹದಲ್ಲಿ ಟೆಸ್ಟೋಸ್ಟೆರಾನ್ ಕಡಿಮೆ ಮಾಡುವಂತಹ ಹಾರ್ಮೋನುಗಳ ಜನ್ಮದಿಂದಾಗಿ ನಿಮ್ಮ ಲೈಂಗಿಕಾಸಕ್ತಿಯು ಕುಗ್ಗಬಹುದು. ಯಾಕೆಂದರೆ ಟೆಸ್ಟೊಸ್ಟೆರಾನ್ ನಿಂದಾಗಿಯೇ ನಿಮ್ಮಲ್ಲಿ ಕಾಮನೆಗಳು ಹೆಚ್ಚುವುದು. ಖಿನ್ನತೆಗೆ ತೆಗೆದುಕೊಳ್ಳುವ ಮಾತ್ರೆಗಳು, ಆಂಟಿಸ್ಟಾಮೈನ್ ಗಳು. ವೈದ್ಯಕೀಯ ಗಾಂಜಾ, ಒಪಿಯಾಡ್ಸ್, ಅಧಿಕರಕ್ತದೊತ್ತಡ ಇತ್ಯಾದಿಗಳಿಗೆ ತೆಗೆದುಕೊಳ್ಳುವಂತಹ ಔಷಧಿಗಳು ಲೈಂಗಿಕಾಸಕ್ತಿ ಕುಂದಿಸುವುದು. ನಿಮಗೆ ಸಮಸ್ಯೆ ನೀಡುತ್ತಲಿದ್ದರೆ ಆಗ ನೀವು ವೈದ್ಯರ ಜತೆಗೆ ಮಾತನಾಡಿ ಔಷಧಿ ಬದಲಾಯಿಸಿಕೊಳ್ಳಬಹುದು. ಹಾರ್ಮೋನು ರಹಿತ ಗರ್ಭನಿರೋಧಕವಾಗಿರುವಂತಹ ಔಷಧಿಯನ್ನು ತೆಗೆದುಕೊಳ್ಳಬಹುದು.

6. ಹಿಂದೆ ಆಗಿರುವ ಆಘಾತ
ಹಿಂದೆ ಯಾವುದೇ ರೀತಿಯ ಲೈಂಗಿಕ ಆಘಾತಗಳು ಆಗಿದ್ದರೆ ಆಗ ನಿಮಗೆ ಲೈಂಗಿಕಾಸಕ್ತಿಯು ಕಡಿಮೆಯಾಗಬಹುದು. ಅತ್ಯಾಚಾರಕ್ಕೆ ಒಳಗಾಗಿರುವ ಅಥವಾ ಮನೆಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವಂತಹ ಮಹಿಳೆಯರಲ್ಲಿ ಇದು ಸಾಮಾನ್ಯ. ಇದಕ್ಕೆ ಥೆರಪಿ ಮಾಡಿಕೊಂಡರೆ ಸರಿಹೋಗುವುದು.

7. ದೇಹರಚನೆ ಕೆಟ್ಟದಾಗಿರುವುದು
ಇಂದಿನ ದಿನಗಳಲ್ಲಿ ದೇಹರಚನೆ ಬಗ್ಗೆ ತುಂಬಾ ಕಲ್ಪನೆಗಳು ಇವೆ. ಇದರಿಂದಾಗಿ ಮಹಿಳೆಯರು ತುಂಬಾ ಸಂಕಷ್ಟ ಪಡುವಂತಾಗಿದೆ. ನೀವು ಹೆಚ್ಚು ಸೆಕ್ಸಿಯಾಗಿಲ್ಲವೆನ್ನುವುದು ಕೂಡ ಲೈಂಗಿಕಾಸಕ್ತಿ ಕುಂದಿಸುವುದು. ನಿಮ್ಮ ದೇಹ ರಚನೆ ಸರಿಯಾಗಿಲ್ಲವೆನ್ನುವ ಕೊರಗು ಇದ್ದರೆ ಆಗ ನೀವು ಇದನ್ನು ಆರೋಗ್ಯಕರ ರೀತಿಯಿಂದ ಬದಲಾಯಿಸಿಕೊಳ್ಳಿ. ಆರೋಗ್ಯಕರವಾಗಿ ತಿನ್ನಿ, ನೀರು ಕುಡಿಯಿರಿ ಮತ್ತು ವ್ಯಾಯಾಮ ಮಾಡಿ. ಥೆರಪಿಯಲ್ಲಿ ನೀವು ಇದನ್ನು ಮಾಡಬಹುದು.

8. ವೈದ್ಯಕೀಯ ಸ್ಥಿತಿ
ಕೆಲವೊಂದು ಕಾಯಿಲೆಗಳಾಗಿರುವಂತಹ ಮಧುಮೇಹ, ಥೈರಾಯ್ಡ್ ರೋಗ, ಹೃದಯಾಘಾತ ಅಥವಾ ಕ್ಯಾನ್ಸರ್ ನಿಂದಲೂ ಲೈಂಗಿಕಾಸಕ್ತಿಯು ಕುಂದಬಹುದು. ಇದು ಹಾರ್ಮೋನುಗಳ ಮೇಲೆ ಪರಿಣಾಮ ಬೀರಿ ಲೈಂಗಿಕಾಸಕ್ತಿ ಮೇಲೆ ಪರಿಣಾಮ ಉಂಟು ಮಾಡಬಹುದು. ಇದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ ಅದರಿಂದ ಲೈಂಗಿಕಾಸಕ್ತಿ ಹೆಚ್ಚಾಗುವುದು.

9. ಗರ್ಭಧಾರಣೆ ಮತ್ತು ಸ್ತನ್ಯಪಾನ
ಗರ್ಭಧಾರಣೆ ಮತ್ತು ಸ್ತನ್ಯಪಾನದ ವೇಳೆ ಆಗುವಂತಹ ಹಾರ್ಮೋನು ಬದಲಾವಣೆಗಳಿಂದಾಗಿ ಲೈಂಗಿಕಾಸಕ್ತಿಯು ಕಡಿಮೆಯಾಗಬಹುದು. ಗರ್ಭಿಣಿಯಾಗಿರುವ ಕಾರಣದಿಂದ ತುಂಬಾ ಬಳಲಿದಂತೆ ಆಗಬಹುದು ಮತ್ತು ಲೈಂಗಿಕಾಸಕ್ತಿ ಕಡಿಮೆಯಾಗಬಹುದು.

10. ವಯಸ್ಸು
ಋತುಬಂಧವಾದ ವೇಳೆ ಗರ್ಭಾಶಯವು ಕೆಲಸ ಮಾಡದ ಕಾರಣ ಮಹಿಳೆಯರಲ್ಲಿ ಈಸ್ಟ್ರೋಜನ್ ಮಟ್ಟವು ತುಂಬಾ ಕೆಳಮಟ್ಟಕ್ಕೆ ತಲುಪುವುದು. ಈಸ್ಟ್ರೋಜನ್ ಕಡಿಮೆಯಾಗುವ ಕಾರಣದಿಂದಾಗಿ ಯೋನಿಯು ಒಣಗಬಹುದು, ಇದು ಲೈಂಗಿಕ ಕ್ರಿಯೆ ವೇಳೆ ನೋವುಂಟು ಮಾಡಬಹುದು. ಇದರಿಂದಾಗಿ ಲೈಂಗಿಕಾಸಕ್ತಿ ಕಡಿಮೆಯಾಗುವುದು. ಸಂಧಿವಾತದಿಂದಾಗಿಯೂ ಲೈಂಗಿಕಾಸಕ್ತಿಯು ಕುಂದುವುದು. ಯೋನಿಯು ಒಣಗಿದ್ದರೆ ಆಗ ಲೈಂಗಿಕ ಕ್ರಿಯೆ ವೇಳೆ ನೀವು ಲ್ಯೂಬ್ರಿಕೆಂಟ್ ಬಳಸಿಕೊಳ್ಳಿ.



Click it and Unblock the Notifications











