Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಕೆ ನಿಮ್ಮೊಟ್ಟಿಗೆ ಹೀಗೆಲ್ಲಾ ಮಾಡುತ್ತಿದ್ದರೆ, ಆಕೆಗೆ ಸೆಕ್ಸ್ ಬೇಕೆ೦ದರ್ಥ!
ಒಂದು ವೇಳೆ ಪುರುಷ ಈ ಸೂಕ್ಷ್ಮ ಕಲೆಯನ್ನು ಕಲಿತುಕೊಂಡರೆ ತನ್ನ ಸಂಗಾತಿ ಮಿಲನಕ್ರಿಯೆಗೆ ತಾನಾಗಿಯೇ ಮುಂದಾಗುವುದಿಲ್ಲ ಎಂಬ ದೂರನ್ನು ನೀಡುವುದನ್ನು ನಿಲ್ಲಿಸಬಹುದು. ಸಾಮಾನ್ಯವಾಗಿ ಕೆಲಕಾಲದಿಂದ ಜೊತೆಯಾಗಿರುವ ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡಿರುತ್ತಾರೆ ಎಂದೇ ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ ಹೆಚ್ಚಿನ ದಂಪತಿಗಳಲ್ಲಿ, ಅದರಲ್ಲೂ ನವದಂಪತಿಗಳಲ್ಲಿ ತಮ್ಮ ಸಂಗಾತಿಗೆ ಯಾವಾಗ ಲೈಂಗಿಕ ಕ್ರಿಯೆ ಬೇಕಾಗುತ್ತದೆ ಎಂಬ ಬಗ್ಗೆ ಇನ್ನೊಬ್ಬರಿಗೆ ಅರಿವಿಲ್ಲದೇ ಹೋಗುತ್ತದೆ....
ಸಾಮಾನ್ಯವಾಗಿ ಲೈಂಗಿಕ ಕ್ರಿಯೆಗೆ ಪುರುಷರು ಥಟ್ಟನೇ ಸಿದ್ದರಾದರೆ ಮಹಿಳೆಯರು ನಿಧಾನವಾಗಿ ತಯಾರಾಗುತ್ತಾರೆ. ಆದರೆ ಒಂದು ವೇಳೆ ತಾವು ಮೊದಲೇ ತಯಾರಾದರೆ ಈ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತಾರೆ. ಒಂದು ವೇಳೆ ಪುರುಷ ಈ ಸೂಕ್ಷ್ಮ ಚಿಹ್ನೆಗಳನ್ನು ಗಮನಿಸಿ ಇದರ ಅರ್ಥವೇನು ಎಂದು ಕಲಿತುಕೊಂಡರೆ ಜೀವನದಲ್ಲಿ ಮುಂದೆಂದೂ ತನ್ನ ಸಂಗಾತಿ ಲೈಂಗಿಕ ಕ್ರಿಯೆಗೆ ತಾನಾಗಿಯೇ ಮುಂದಾಗುತ್ತಿಲ್ಲ ಎಂಬ ದೂರನ್ನು ನೀಡುವ ಅಗತ್ಯವೇ ಬೀಳುವುದಿಲ್ಲ. ಆಕೆ ಸಿದ್ಧಳಾಗಿದ್ದಾಳೆ ಎಂದು ತನ್ನ ಸಂಗಾತಿಗೆ ಸೂಚಿಸುವ ಐದು ಪ್ರಮುಖ ಸೂಚನೆಗಳು ಇಲ್ಲಿವೆ...

ಆಕೆ ವಿಶೇಷವಾದ ಉಡುಪು ಧರಿಸುತ್ತಾಳೆ
ಒಂದು ವೇಳೆ ನಿಮ್ಮ ಸಂಗಾತಿ, ಮನೆಯಲ್ಲಿದ್ದಾಗ ಸಾಮಾನ್ಯವಾಗಿ ತೊಡುವ ಉಡುಪಿನ ಬದಲು ಏಕಾಏಕಿ, ವಿಶೇಷ ಸಂದರ್ಭವಿಲ್ಲದಿದ್ದರೂ ವಿಶೇಷವಾದ ಉಡುಪು ಧರಿಸಿ ಬಂದಿದ್ದರೆ ಇದೊಂದು ಸೂಕ್ಷ್ಮ ಸೂಚನೆಯಾಗಿದೆ. ಮಹಿಳೆಯರು ಆಗಾಗ ಹೊಸ ಉಡುಪುಗಳನ್ನು ತೊಟ್ಟು ಹೊರಹೋಗುವುದು, ಖಾಸಗಿ ಕೋಣೆಯಲ್ಲಿ ಕೇವಲ ಒಳ ಉಡುಪುಗಳಲ್ಲಿರುವುದು ಸಾಮಾನ್ಯವಾದರೂ, ಲೈಂಗಿಕ ಬಯಕೆಯ ಇರಾದೆಯಿಂದ ನೀಡುವ ಈ ಸೂಚನೆಯಲ್ಲಿ ಕೂದಲನ್ನು ಸಡಿಲವಾಗಿ ಬಿಟ್ಟು ಗಾಳಿಗೆ ಹಾರುವಂತೆ ಬಿಡಿಸಿಕೊಂಡಿರುವುದು, ನಿತ್ಯದ ಪೈಜಾಮದ ಬದಲು ಸಡಿಲವಾದ ಬೇರೊಂದು ಸರಳ ಉಡುಪು ಧರಿಸುವುದು, ಕೊಂಚ ಮೇಕಪ್ ಮೂಲಕ ತನ್ನನ್ನು ಅಲಂಕರಿಸಿಕೊಂಡಿರುವುದು ಹಾಗೂ ಕೆಲವೊಮ್ಮೆ ಸುಗಂಧ ಸಿಂಪಡಿಸಿಕೊಂಡಿರುವುದು ಮೊದಲಾದವುಗಳ ಮೂಲಕ ತನ್ನ ಸಂಗಾತಿಯ ಆಕರ್ಷಣೆ ಸೆಳೆಯಲು ಯತ್ನಿಸುತ್ತಳೆ. ಈ ಮೂಲಕ ಸಂಗಾತಿಯಿಂದ ತನ್ನ ಬಗ್ಗೆ ಕಾಳಜಿ ಹಾಗೂ ತಾನು ಈಗ ಸಿದ್ದಳಾಗಿದ್ದೇನೆ ಎಂದು ಸೂಚಿಸುವ ಸ್ಪಷ್ಟ ಚಿಹ್ನೆಯಾಗಿದೆ. ಇವುಗಳಲ್ಲೊಂದಾದರೂ ನಿಮ್ಮ ಗಮನಕ್ಕೆ ಬಂದರೆ ತಕ್ಷಣವೇ ಆಕೆಯ ಬಳಿ ಧಾವಿಸಿ, ಆಕೆಯ ಬಯಕೆಯನ್ನು ಪೂರ್ಣಗೊಳಿಸಿ.

ಆಕೆ ನಿಮ್ಮನ್ನು ನವಿರಾಗಿ ಸವರುತ್ತಾಳೆ
ಕಾಮಾತುರಳಾಗಿದ್ದರೆ ಇದನ್ನು ಪ್ರಕಟಿಸಲು ಮಹಿಳೆ ಎಂದಿಗೂ ಏಕಾಏಕಿ ಮುಗಿಬೀಳುವುದಿಲ್ಲ. ಬದಲಿಗೆ ಅತ್ಯಂತ ನವಿರಾಗಿ, ಬೇರೆ ಸಮಯದಲ್ಲಿಲ್ಲದಂತಹ ಪರಿಯ ಮೂಲಕ ಸಂಗಾತಿಯ ಶರೀರವನ್ನು ಸ್ಪರ್ಶಿಸಿ ನೇವರಿಸುತ್ತಾಳೆ. ಈ ಸ್ಪರ್ಶ ಇತರ ಸಮಯಕ್ಕಿಂದ ಕೊಂಚ ಹೆಚ್ಚೇ ಹೊತ್ತು ಮುಂದುವರೆಯಬಹುದು. ಇನ್ನೂ ಸಂಗಾತಿ ಈ ಬಗ್ಗೆ ಅರ್ಥವಾಗದೆ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತಿದ್ದರೆ ಆಕೆ 'ಮಂಕುದಿಣ್ಣೆ' ಎಂದು ಮನದಲ್ಲಿಯೇ ಬೈದು ಸಂಗಾತಿಯ ಕೆನ್ನೆ, ಕುತ್ತಿಗೆ ಎದೆಗಳನ್ನು ಹರವಗಿ ಸವರಬಹುದು. ಸಂಗಾತಿ ಇನ್ನೂ ಮಂಕುದಿಣ್ಣೆಯೇ ಆಗಿ ಉಳಿದಿದ್ದರೆ ಆಕೆ ಅಂತಿಮವಾಗಿ ಆತನ ಒಳತೊಡೆಗಳ ಭಾಗದಲ್ಲಿ ಸವರತೊಡಗಬಹುದು. ಇನ್ನೂ ಅರ್ಥವಾಗದಿದ್ದರೆ ಮಾತ್ರ ನಿಮ್ಮನ್ನು ದೇವರೇ ಕಾಪಾಡಬೇಕು.

ಆಕೆ ಸಾಮಾನ್ಯವಾಗಿ ನಡೆಸದ ಬೇರೆ ಕ್ರಿಯೆಗಳನ್ನು ಪ್ರಕಟಿಸಬಹುದು.
ಸಾಂಗತ್ಯದಲ್ಲಿದ್ದಾಗ ನಿಮ್ಮ ಸಂಗಾತಿ ನಿಮಗಿಷ್ಟವಾದ ಎಲ್ಲಾ ಕಾರ್ಯಗಳನ್ನು ಪ್ರತಿದಿನವೂ, ಪ್ರತಿಕ್ಷಣವೂ ಪೂರೈಸಿಕೊಡಲು ಸಾಧ್ಯವೇ ಇಲ್ಲ, ಇದು ಸಾಧುವೂ ಅಲ್ಲ! ಹಾಗಾಗಿ ಯಾವಾಗ ಆಕೆ ನಿಮಗಿಷ್ಟವಾದ ಕಾರ್ಯಗಳನ್ನು ತಾನಾಗಿಯೇ ಪೂರೈಸಬಯಸುತ್ತಾಳೆಯೋ ಆಗ ಆ ಬಗ್ಗೆ ಸೂಕ್ಷ್ಮವಾಗಿ ಗಮನ ನೀಡಬೇಕು. ನೀವು ಮನೆಗೆ ಬಂದಾಗ ನಿಮ್ಮ ಊಟಕ್ಕಾಗಿ ಆಕೆ ನೀವು ಅತಿಯಾಗಿ ಇಷ್ಟಪಡುವ ಅಡುಗೆಯನ್ನೇ ಮಾಡಿ ಇಟ್ಟಿರುವುದು, ನಿಮ್ಮ ಇಷ್ಟದ ತಿನಿಸು-ಪಾನೀಯಗಳನ್ನು ಸಿದ್ಧಪಡಿಸಿ ಇಟ್ಟಿರುವುದು, ಸ್ನಾನದ ಕೋಣೆಯನ್ನು ಸ್ನಾನಕ್ಕಾಗಿ ಸಿದ್ಧಪಡಿಸಿಟ್ಟಿರುವುದು ಇತ್ಯಾದಿ. ಒಂದು ವೇಳೆ ಇವುಗಳನ್ನು ಆಕೆ ಇತರ ಸಮಯದಲ್ಲಿ ಮಾಡದೇ ಇದ್ದರೆ ಈ ಮೂಲಕ ಇಂದಿನ ರಾತ್ರಿ ಆಕೆ ನಿಮ್ಮಿಂದ ವಿಶೇಷವಾದುದೇನನ್ನೋ ಬಯಸಿದ್ದಾಳೆ ಎಂದೇ ಅರ್ಥವಾಗಿದೆ.

ಎಷ್ಟು ದಿನವಾಯಿತು ಎಂದು ಆಕೆಯೇ ಜ್ಞಾಪಿಸಬಹುದು!
ನಿಮ್ಮ ಸಾಮಾನ್ಯ ಸಂವಾದ ನಡುವೆ ಆಕೆ ಹಿಂದಿನ ಮಿಲನದ ದಿನಾಂಕವನ್ನು ಸೂಚ್ಯವಾಗಿ ತಿಳಿಸುತ್ತಾ ಅಂದಿನಿಂದ ಇಂದಿನವರೆಗೆ ಎಷ್ಟು ದಿನಗಳಾದವು ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾಳೆ. ಸಾಮಾನ್ಯವಾಗಿ ಕಾರಣವಿಲ್ಲದೇ ಮಹಿಳೆಯರು ಈ ಬಗ್ಗೆ ಯಾವುದೇ ಚಕಾರವನ್ನೆತ್ತುವುದಿಲ್ಲ. ಒಂದು ವೇಳೆ ಆಕೆ ಈ ವಿಚಾರವನ್ನು ಮಂಡಿಸಿದ್ದೇ ಆದಲ್ಲಿ ಇದು ಆಕೆ ನಿಮ್ಮಿಂದ ಇಂದು ಮಿಲನವನ್ನು ಬಯಸುತ್ತಿದ್ದಾಳೆಂದೇ ಅರ್ಥವಾಗಿದೆ.

ನಿತಂಬಗಳ ಕುಲುಕಾಟ
ಸಾಮಾನ್ಯವಾಗಿ ಮಹಿಳೆ ತನ್ನ ಪುರುಷರ ಆಕರ್ಷಣೆಯನ್ನು ಪಡೆಯಲು ನಿತಂಬಗಳನ್ನು ಕುಲುಕಿಸುವ ಮೂಲಕ ಸೂಚನೆಯನ್ನು ನೀಡುತ್ತಾಳೆ. ಸಾಮಾನ್ಯವಾಗಿ ಪುರುಷರು ತಮ್ಮ ಸಂಗಾತಿಯನ್ನು ಸದಾ ನೋಡುತ್ತಲೇ ಇರುವ ಕಾರಣ ಈ ಸೂಚನೆಯನ್ನು ಗಮನಿಸದೇ ಹೋಗಬಹುದು. ಆದರೆ ತನ್ನ ಸಂಗಾತಿಯ ಗಮನ ಸೆಳೆಯಲು ಮಹಿಳೆಯರು ತನ್ನ ಸಂಗಾತಿಯ ಎದುರು ವಿರುದ್ದ ದಿಕ್ಕಿನಲ್ಲಿ ನಡೆಯುವಾಗ ಸಾಮಾನ್ಯಕ್ಕಿಂತಲೂ ಹೆಚ್ಚೇ ಕುಲುಕಿಸುವುದು, ಕೊಂಚವೇ ಬಗ್ಗೆ ನಿತಂಬಗಳತ್ತ ನೋಟ ಹರಿಸುವಂತೆ ಪ್ರೇರೇಪಿಸುವುದು ಮೊದಲಾದವು ಅತಿ ಪುರಾತನ ಕಾಲದಿಂದ ನಡೆದು ಬರುತ್ತಿರುವ ವಿಧಾನವೇ ಆಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಗೆ ತನ್ನ ದೇಹದಿಂದ ಈ ಬಗೆಯ ಸೂಚನೆ ಹೊರಡುತ್ತಿದೆ ಎಂಬ ಅರಿವೇ ಇರುವುದಿಲ್ಲ.

ಆಕೆಗೇನು ಬೇಕೋ ಅದನ್ನು ನೀಡುವತ್ತ ಗಮನ ಹರಿಸಬೇಕು!
ಸಂಗಾತಿಯನ್ನು ಕೂಡುವ ಬಯಕೆ ಮನದಲ್ಲಿದ್ದಾಗ ದೇಹ ತನ್ನಿಂತಾನೇ, ಸ್ವಾಭಾವಿಕವಾಗಿ ಈ ತರಹದ ವರ್ತನೆಯನ್ನು ಪ್ರಕಟಿಸುತ್ತದೆ. ಒಂದು ವೇಳೆ ಪುರುಷ ತನ್ನ ಸಂಗಾತಿಯನ್ನು ನೋಡದೇ ಟೀವಿ ಅಥವಾ ಬೇರಾವುದೋ ವಿಷಯದತ್ತ ತನ್ನ ಗಮನ ನೀಡಿದ್ದರೆ ಇದನ್ನು ಬದಲಿಸಲು ಆಕೆ ಕೆಲ ನೆಪಗಳ ಮೂಲಕ ಆತನಿಗೆ ಅಡ್ಡಲಾಗಿ ಅಡ್ಡಾಡುವುದು ತನ್ನ ನಿತಂಬಗಳು ಆತನಿಗೆ ಕಾಣಿಸುವಂತೆ ಕುಲುಕಿಸುವುದು ಮೊದಲಾದವುಗಳನ್ನು ಪ್ರಕಟಿಸತೊಡಗುತ್ತಾಳೆ. ಈಗ ನಿಮ್ಮ ಕೆಲಸವೆಂದರೆ ಟೀವಿ ರಿಮೋಟ್ ಅನ್ನು ಎಸೆದು ಆ ಕೈಗಳಿಂದ ನಿಮ್ಮ ಸಂಗಾತಿಯನ್ನು ಬರಸೆಳೆದು ...ಆಕೆಗೇನು ಬೇಕೋ ಅದನ್ನು ನೀಡುವತ್ತ ಗಮನ ಹರಿಸಬೇಕು.



Click it and Unblock the Notifications