Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುತ್ತಿಕ್ಕುವಾಗ ತಲೆ ಬಲಕ್ಕೆ ಬಾಗುವುದು ಯಾಕೆ?
ಪ್ರೀತಿಯ ಸಲುಗೆಯಲ್ಲಿ ನೀಡುವಂತಹ ಮುತ್ತಿನಲ್ಲೂ ಕೆಲವೊಂದು ವೈಜ್ಞಾನಿಕ ಅಂಶಗಳು ಅಡಗಿವೆ ಎಂದು ಹೇಳಿದರೂ ಅದನ್ನು ಕೇಳಿ ನಮಗೂ ನಗು ಬರಬಹುದು. ಆದರೆ ಇದು ತಮಾಷೆಯಲ್ಲ, ಯಾಕೆಂದರೆ ನಾವು ಪ್ರತೀ ಸಲ ಪ್ರೀತಿ ಪಾತ್ರರಿಗೆ ಮುತ್ತು ನೀಡಲು ಮುಂದಾದಾಗ ತಲೆಯನ್ನು ಬಲ ಭಾಗಕ್ಕೆ ತಿರುಗಿಸುತ್ತೇವೆ. ಹೀಗೆ ತಿರುಗಿಸುವ ಹಿಂದೆಯೇ ವೈಜ್ಞಾನಿಕ ಅಂಶಗಳು ಅಡಗಿವೆ ಎನ್ನಲಾಗಿದೆ.
ಇದನ್ನು ಪತ್ತೆ ಹಚ್ಚಿರುವಂತಹ ಕೆಲವು ಸಂಶೋಧನೆಗಳು ಇಂತಹ ಸರಳ ನೈಸರ್ಗಿಕ ಪ್ರತಿಕ್ರಿಯೆಯ ಹಿಂದೆ ಅರಿವು ಹಾಗೂ ನರವಿಜ್ಞಾನವಿದೆ ಎಂದು ತಿಳಿದುಬಂದಿದೆ. ನೀವು ಮುತ್ತು ನೀಡಲು ಬಲ ಬದಿಗೆ ತಿರುಗುವಂತೆ ನಿಮ್ಮ ಸಂಗಾತಿ ಕೂಡ ಅದೇ ರೀತಿ ಮಾಡುತ್ತಾರೆ. ಇದು ಪ್ರೀತಿಪಾತ್ರರಿಗೆ ಮುತ್ತು ನೀಡಲು ಮುಂದಾದಾಗ ಆಗುವ ಪ್ರತಿಕ್ರಿಯೆಗಳು. ಇದರ ಬಗ್ಗೆ ಮತ್ತಷ್ಟು ತಿಳಿಯಲು ಮುಂದೆ ಓದಿ...

ಅಧ್ಯಯನಗಳು ಏನು ಹೇಳುತ್ತವೆ?
ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ಮುತ್ತು ನೀಡಲು ಮುಂದಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಹೀಗೆ ಮಾಡುವಾಗ ಅವರು ತಲೆಯನ್ನು ಬಲಕ್ಕೆ ಬಾಗಿಸುತ್ತಾರೆ. ಇದು ನಮಗೆ ಅರಿವಿಲ್ಲದಂತೆ ನಡೆಯುತ್ತಾ ಇರುತ್ತದೆ.

ಆರಂಭದಿಂದಲೇ
ಮನುಷ್ಯರು ಹೆಚ್ಚಾಗಿ ಬಲದ ಬದಿಗೆ ತಿರುಗುವಂತಹ ಮನೋವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಗರ್ಭದಲ್ಲಿ ಇರುವ ಮಗು ಕೂಡ ತನ್ನ ತಲೆಯನ್ನು ಬಲದ ಬದಿಗೆ ತಿರುಗಿಸುತ್ತದೆ. ದೊಡ್ಡವರಾದ ಮೇಲೆ ಬಲಗೈ ಮತ್ತು ಬಲಗಾಲನ್ನು ಮೊದಲು ಇಡುತ್ತೇವೆ.

ಆಳವಾಗಿ ಬೇರೂರಿದ ಮನೋಭಾವ
ಕೆಲವೊಂದು ನಡವಳಿಕೆಗಳು ಮನುಷ್ಯರಲ್ಲಿ ಆಳವಾಗಿ ಬೇರೂರಿದೆ. ಇಂತಹ ಕೆಲವೊಂದು ಪ್ರತಿಕ್ರಿಯೆಗಳನ್ನು ನಾವು ಜೀವಮಾನವಿಡಿ ಮುಂದುವರಿಸಿಕೊಂಡು ಹೋಗುತ್ತೇವೆ. ಇಂತಹ ನೈಸರ್ಗಿಕ ಕ್ರಿಯೆಗಳ ಬಗ್ಗೆ ನಾವು ಯಾವುದೇ ಪ್ರಶ್ನೆ ಮಾಡಲು ಹೋಗುವುದಿಲ್ಲ. ಯಾಕೆಂದರೆ ಯಾವುದೇ ತಡೆಯಿಲ್ಲದೆ ಇದು ನಡೆಯುತ್ತಾ ಇರುತ್ತದೆ.

ಸಂಶೋಧನೆ
ಸಂಶೋಧನೆಗಾಗಿ ದಂಪತಿಗೆ ಖಾಸಗಿ ಸ್ಥಳದಲ್ಲಿ ಕಿಸ್ ಮಾಡಲು ಹೇಳಲಾಯಿತು. ಎಲ್ಲಾ ದಂಪತಿಗಳು ಬಲದ ಬದಿಗೆ ತಲೆ ತಿರುಗಿಸುವ ಮೂಲಕ ಕಿಸ್ ಆರಂಭಿಸಿದರು. ಕಿಸ್ ಮಾಡುವಾತ ಮತ್ತು ಅದನ್ನು ಪಡೆಯುವಾತ ಕೂಡ ತಲೆಯನ್ನು ಬಲದ ಬದಿಗೆ ತಿರುಗಿಸುತ್ತಿದ್ದ.

ಆರಂಭಿಕ ಕ್ರಿಯೆ
ಕಿಸ್ ಮಾಡಲು ತಲೆ ಬಲದ ಬದಿಗೆ ತಿರುಗಿಸಿದರೆ ಅದೇ ಕಿಸ್ ಪಡೆಯುವಾತ ಕೂಡ ತನ್ನ ತಲೆಯನ್ನು ಬಲದ ಬದಿಗೆ ತಿರುಗಿಸುತ್ತಾನೆ. ಇದರಿಂದ ಕಿಸ್ ನೀಡುವುದು ಕೂಡ ಸುಲಭವಾಗುತ್ತದೆ.

ಮೆದುಳಿನ ಚಟುವಟಿಕೆ
ಇದು ತುಂಬಾ ಸರಳ ಮತ್ತು ಸಮಸ್ಯೆಯಿಲ್ಲದ ಕ್ರಿಯೆಯೆಂದು ನಮಗನಿಸುತ್ತದೆ. ಆದರೆ ಮೆದುಳಿನ ಹಲವಾರು ಚಟುವಟಿಕೆಗಳಿಂದಾಗಿ ತಲೆಯು ಬಲದ ಬದಿಗೆ ಬಾಗುತ್ತದೆ ಎಂದು ಅಧ್ಯಯನಗಳ ಹೇಳಿವೆ.

ಹಾರ್ಮೋನುಗಳು
ಟೆಸ್ಟೋಸ್ಟೆರಾನ್ ನಂತಹ ಹಾರ್ಮೋನುಗಳು ಮತ್ತು ಡೋಪಮೈನ್ ನಂತಹ ನರಪ್ರೇಕ್ಷಗಳಿಂದಾಗಿ ಇಂತಹ ಚಟುವಟಿಕೆ ಆಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಎಡಗೈಯನ್ನು ಬಳಸುವಂತಹ ವ್ಯಕ್ತಿಗಳು ತಮ್ಮ ತಲೆಯನ್ನು ಎಡ ಬದಿಗೆ ತಿರುಗಿಸುತ್ತಾರೆ.



Click it and Unblock the Notifications
